ಸೌರ ಶಕ್ತಿ ಆಧಾರಿತವಾಗಿ ಮಹಿಳೆಯರಿಗಾಗಿ ಸ್ವಉದ್ಯೋಗ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮ ಸೆಲ್ಕೋ ಫೌಂಡೇಶನ್ ವತಿಯಿಂದ ನಡೆಯುತ್ತಿದೆ. ಬೆಳಗಾವಿಯಲ್ಲಿ ಜಿಲ್ಲಾ ಪಂಚಾಯತ್ ವತಿಯಿಂದ, ಸ್ವ ಸಹಾಯ ಗುಂಪಿನ ಮಹಿಳೆಯರಿಗೆ ಸೌರ ಶಕ್ತಿ ಆಧಾರಿತ ಉದ್ಯೋಗ ಮೇಳ ನಡೆಯಿತು. …..ಮುಂದೆ ಓದಿ….
ಗ್ರಾಮೀಣ ಭಾಗದ ಮಹಿಳೆಯರು ಸ್ವಾವಲಂಬಿಯಾಗಬೇಕು. ಆರ್ಥಿಕವಾಗಿ ಅಭಿವೃದ್ಧಿ ಹೊಂದವುದರ ಜೊತಗೆ ಹೆಚ್ಚಿನ ಮಹಿಳೆಯರು ಸೌರ ವಿದ್ಯುತ್ ಆಧಾರಿತ ಸ್ವ-ಉದ್ಯೋಗ ಕಡೆ ಬರಬೇಕೆಂಬ ಉದ್ದೇಶದಿಂದ ಈ ಸೌರ ಸ್ವ-ಉದ್ಯೋಗ ಮೇಳ ವನ್ನು ಆಯೋಜಿಸಲಾಗಿತ್ತು.
ಕಳೆದ 14 ವರ್ಷಗಳಿಂದ ದೇಶ್ಯಾದ್ಯಂತ ಸುಸ್ಥಿರ ಅಭಿವೃದ್ಧಿ ಹಾಗೂ ಸೌರ ವಿದ್ಯುತ್ ವಿಭಾಗದಲ್ಲಿ ಸೆಲ್ಕೋ ಫೌಂಡೇಶನ್ ಹೊಸ ಆವಿಷ್ಕಾರಗಳನ್ನು ತರುವುದರ ಜೊತೆಗೆ ನಿರುದ್ಯೋಗ ಮಹಿಳೆಯರು ಜೀವನ ರೂಪಿಸಿಕೊಳ್ಳಲು ಸೆಲ್ಕೋ ಫೌಂಡೇಶನ್ ಸಹಕಾರಿಯಾಗಿದೆ. ಈಗಾಗಲೇ ಬೆಳಗಾವಿ ಜಿಲ್ಲೆಯಲ್ಲಿ 50 ಕ್ಕೂ ಹೆಚ್ಚು ಮಹಿಳೆಯರಿಗೆ ಸ್ವ ಉದ್ಯೋಗವನ್ನು ಹಾಗೂ ಸೌರ ವಿದ್ಯುತ್ ಆಧಾರಿತ ಸ್ವ-ಉದ್ಯೋಗದ ಮೂಲಕ ಜೀವನೋಪಾಯ ವ್ಯವಸ್ಥೆಗಳನ್ನು ಕಲ್ಪಿಸುವಲ್ಲಿ ಗಮನಾರ್ಹ ಕೆಲಸಗಳನ್ನು ಮಾಡುತ್ತಿದೆ. ಕಳೆದ ವರ್ಷ ವಿಶೇಷ ಚೇತನರಿಗಾಗಿ ಬೆಳಗಾವಿಯಲ್ಲಿ ಉದ್ಯೋಗ ಮೇಳ ಆಯೋಜಿಸಿ, ಈಗ ಜಿಲ್ಲೆಯಾದ್ಯಂತ 130ಕ್ಕೂ ಅಧಿಕ ವಿಶೇಷಚೇತನರು ಸೌರ ಉದ್ಯಮಿಗಳಾಗಿ ಹೊರಹೊಮ್ಮಿದ್ದಾರೆ.
ಸೌರ ಸ್ವ-ಉದ್ಯೋಗ ಮಹಿಳೆಯರಿಗೆ ಬದುಕಿಗೆ ಆಸರೆಯಾಗಲಿದೆ.ಆರೋಗ್ಯ, ಜೀವನೋಪಾಯ ಮತ್ತು ಮಕ್ಕಳಿಗೆ ಶಿಕ್ಷಣ ಒದಗಿಸಲು ಬಹಳಷ್ಟು ಸಹಕಾರಿಯಾಗಲಿದೆ. ಗ್ರಾಮೀಣ ಭಾಗದಲ್ಲಿ ಮಹಿಳೆಯರಿಗೆ ಸ್ವ ಉದ್ಯೋಗಕ್ಕೆ ಅನುಕೂಲವಾಗುವಂತೆ ಹೈನುಗಾರಿಕೆಯಲ್ಲಿ ಸೌರಚಾಲಿತ ಹಾಲುಕರೆಯುವ ಯಂತ್ರ ಆವಿಷ್ಕರಿಸಲಾಗಿದೆ. ಅಲ್ಲದೆ, ಸ್ವಂತ ದುಡಿಮೆಯಲ್ಲಿ ತೊಡಗಿಸಿಕೊಂಡಿರುವ ಮಹಿಳೆಯರಿಗೆ ಸೋಲಾರ್ ಆಶಾಕಿರಣಗಳಾಗಿವೆ. ಸಣ್ಣ ಸಣ್ಣ ಗೂಡಂಗಂಡಿ ವ್ಯಾಪಾರಿಗಳು, ಹೂವಿನ ವ್ಯಾಪಾರಿಗಳ ತಾತ್ಕಾಲಿಕ ಅಂಗಡಿಗಳಿಗೆ ವಿದ್ಯುತ್ ಸಂಪರ್ಕ ನೀಡುವುದಿಲ್ಲ. ಅಂತಹ ಚಿಕ್ಕ ಘಟಕಗಳಿಗೆ ಸೋಲಾರ್ ಘಟಕಗಳನ್ನು ಅಳವಡಿಸಿ ವ್ಯಾಪಾರ ವ್ಯವಹಾರವನ್ನು ದ್ವಿಗುಣ ಮಾಡಿಕೊಂಡ ಉದಾಹರಣೆಗಳಿವೆ. ಸೌರ ಚಾಲಿತ ಹೊಲಿಗೆ ಯಂತ್ರ ಅಳವಡಿಸಿಕೊಂಡು ಮಹಿಳೆಯರು ಸ್ವಾವಲಂಬನೆಯ ಹಾದಿ ತುಳಿದಿದ್ದಾರೆ.
ಸೆಲ್ಕೋ ತಂತ್ರಜ್ಞಾನದಿಂದಾಗಿ ಸುಲಭದಲ್ಲಿ ಕಮ್ಮಾರಿಕೆ ಮಾಡಲು ಸೌರ ಚಾಲಿತ ಉಲುಮೆ ಯಂತ್ರ, ಕುಂಬಾರಿಕೆ ಮಾಡಲು ತಿಗರಿಗಳನ್ನು ಅಳವಡಿಸಲಾಗುತ್ತದೆ, ಹೀಗೇ ಹಲವು ಉಪಕರಣಗಳು ಸೋಲಾರ್ ನಿಂದ ಚಾಲೂ ಮಾಡಬಹುದಾಗಿದೆ.
ಬೆಳಗಾವಿಯಲ್ಲಿ ನಡೆದ ಈ ಕಾರ್ಯಾಗಾರವನ್ನು ಬೆಳಗಾವಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ್ ಚಾಲನೆ ನೀಡಿದರು. ಸೆಲ್ಕೋ ಫೌಂಡೇಶನ್ ವ್ಯವಸ್ಥಾಪಕ ನಿದೇರ್ಶಕ ವಿನಾಯಕ ಹೆಗಡೆ ಸೇರಿದಂತೆ ಫೌಂಡೇಶನ್ ಪದಾಧಿಕಾರಿಗಳು, ಜಿಲ್ಲಾ ಪಂಚಾಯತ್ ಅಧಿಕಾರಿಗಳು ಮೇಳದಲ್ಲಿ ಪಾಲ್ಗೊಂಡಿದ್ದರು.
25.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
ಅಡಿಕೆ ಬೆಳೆಯಲ್ಲಿ ಪೋಷಕಾಂಶಗಳ ನಿರ್ವಹಣೆಯ ಬಗ್ಗೆ ಡಾ.ಭವಿಷ್ಯ ಅವರು ನೀಡಿರುವ ಮಾಹಿತಿ ಇಲ್ಲಿದೆ..(ಸಂಪೂರ್ಣ…
ಅಡಿಕೆ ಎಲೆಚುಕ್ಕಿ ರೋಗ ನಿರ್ವಹಣೆ ಹೇಗೆ..? ಕೃಷಿ ವಿಚಾರಗೋಷ್ಟಿಯಲ್ಲಿ ಮಾತನಾಡಿರುವ ಆಡಿಯೋ ಇಲ್ಲಿದೆ..
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…