ಇತ್ತೀಚಿನ ಡಿಜಿಟಲ್ ಯುಗದಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ವಿವಿಧ ಬಗೆಯ ಮಾಹಿತಿಗಳು ರೈತರಿಗೆ ಲಭ್ಯವಾಗುತ್ತದೆ. ಅದರಲ್ಲೂ ವಾಟ್ಸ್ ಅಪ್ ಗಳಲ್ಲಿ ಅನೇಕ ರೈತರ ತಮ್ಮ ಕೃಷಿ ಅನುಭವ, ತಾವು ಮಾಡುವ ಕೃಷಿ, ತಾವು ಬಳಸುವ ಗೊಬ್ಬರ, ಸಾವಯವ ಕೃಷಿ, ವೈಜ್ಞಾನಿಕ ಮಾಹಿತಿಗಳನ್ನು ಹಂಚಿಕೊಳ್ಳುತ್ತಾರೆ. ಹೀಗೆ ವಾಟ್ಸ್ ಆಪ್ ನಲ್ಲಿ ಕೃಷಿಕರೊಬ್ಬರು ಹಂಚಿಕೊಂಡ ಮಾಹಿತಿಯನ್ನು ನೀವು ಓದಿ ನೋಡಿ.
ಇಂದು ನಮ್ಮ ಊರಿನಲ್ಲಿ ಗುಡುಗು ಮಿಂಚು ಸಮೇತ 2 ಗಂಟೆ ಬಾರಿ ಮಳೆ ಬಂದಿದೆ. ಅದರ ಪರಿಣಾಮವಾಗಿ ನಮ್ಮ ಭೂಮಿಗೆ ಪ್ರತಿ ಎಕರೆಗೆ ಸುಮಾರು 30 ಕೆಜಿ ಯೂರಿಯಾ ಗೊಬ್ಬರ ಲಭಿಸಿದಂತಾಗಿದೆ.ಈ ಮಾತು 100 ರಷ್ಟು ಸತ್ಯಾ ಈ ಮಾತನ್ನು ನಾನು ಹೇಳುತ್ತಿಲ್ಲ ನಮ್ಮ ಪರಂಪರೆ ಮತ್ತು ವಿಜ್ಞಾನ ಹೇಳುತ್ತದೆ
ಪಾರಂಪರಿಕವಾಗಿ ನಮ್ಮ ಹಿರಿಯರು ಹೇಳುತ್ತಿದ್ದರು ರೋಣಿ ಮಳೆಯಾದರೆ ಓಣಿ ತುಂಬಾ ಕಾಳು ಎಂದು .
ಈ ಮಾತು ನಿಜ ಇದರಲ್ಲಿ ವಿಜ್ಞಾನವಿದೆ. ವಾತಾವರಣದಲ್ಲಿ ಶೇಕಡಾ 75 ಭಾಗ ಸಾರಜನಕ ಇದೆ 21ಭಾಗ ಆಮ್ಲಜನಕ ಇದೆ ಇವು ಎರೆಡರ ಮದ್ಯೆ ಮಿಂಚು ಬಂದರೆ ಅದು ನೈಟ್ರೇಟ್ ಆಮ್ಲವಾಗಿ ಬದಲಾಗುತ್ತದೆ ಆ ಆಮ್ಲ ಮಳೆ ನೀರಿನಲ್ಲಿ ಬೆರೆತರೆ ಅವುಗಳ ನಡುವೆ ರಾಸಾಯನಿಕ ಕ್ರಿಯೆ ನೆಡೆದು ಆರ್ಗ್ಯಾನಿಕ್ ನೈಟ್ರೋಜನ್ (ಸಾವಯವ ಸಾರಜನಕ) ಅಂದರೆ ನಾವು ಅಂಗಡಿಗಳಿಂದ ತರುವ ಯೂರಿಯಾ ಗೊಬ್ಬರ ಮಳೆ ನೀರಿನಲ್ಲಿ ಬೆರೆತು ಭೂಮಿಗೆ ಒದಗುತ್ತದೆ .
ಯಾರ ಭೂಮಿಯಲ್ಲಿ ಸಾವಯವ ಇಂಗಾಲ ಇದೆಯೋ ಅಥವಾ ನೀರನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಇದೆಯೋ ಅಂಥವರ ಭೂಮಿಗೆ ಮೇಲೆ ಹೇಳಿದ ಹಾಗೆ ಪ್ರತಿ ಎಕರೆಗೆ 30 ಕೆಜಿ ಯೂರಿಯಾ ದೊರಕುತ್ತದೆ.
ಹಾಗಾಗಿ ರೈತ ಮಿತ್ರರಲ್ಲಿ ಒಂದು ವಿನಂತಿ ನಮ್ಮ ಜಮೀನಿನಲ್ಲಿ ಇಂಗಾಲದ ಪ್ರಮಾಣವನ್ನು ಹೆಚ್ಚಿಸಲು ಅಥವಾ ನೀರು ಹಿಡಿದು ಇಟ್ಟುಕೊಳ್ಳುವ ಶಕ್ತಿಯನ್ನು ಹೆಚ್ಚಿಸಲು ಆದಷ್ಟು ರಾಸಾಯನಿಕ ಬಳಕೆ ಕಡಿಮೆ ಮಾಡಿ..
ಕೇರಳದಲ್ಲಿ ಇನ್ನೂ ಎರಡು ದಿನಗಳ ಕಾಲ ತಾಪಮಾನ ಏರಿಕೆಯ ಬಗ್ಗೆ ಹವಾಮಾನ ಇಲಾಖೆ…
ಕೇಂದ್ರ ಸರ್ಕಾರದ ಯೋಜನೆಯಡಿ ಕರ್ನಾಟಕದ ರೈತರೂ ಬೆಳೆದ ಮೆಣಸಿನಕಾಯಿಯನ್ನೂ ಖರೀದಿಸಬೇಕು ಎಂದು ಸಂಸದ…
ಬೆಂಗಳೂರಿನಲ್ಲಿ ನೀರಿನ ದರ ಒಂದು ಲೀಟರ್ಗೆ ಒಂದು ಪೈಸೆಯಷ್ಟು ಏರಿಕೆ ಮಾಡಲು ಚಿಂತನೆ…
ಮನೆ ಛಾವಣಿಗಳ ಮೇಲೆ ಸೌರ ಫಲಕಗಳನ್ನು ಅಳವಡಿಸುವ ಮೂಲಕ ವಿದ್ಯುತ್ ಉತ್ಪಾದಿಸಿ ಮನೆಗಳಿಗೆ…
ನಂದಿನ ಹಾಲಿನ ದರ ಏರಿಕೆಗೆ ಕರ್ನಾಟಕ ರಾಜ್ಯ ಹೋಟೆಲ್ಗಳ ಸಂಘ ವಿರೋಧ ವ್ಯಕ್ತಪಡಿಸಿದೆ. …