ಬೆಳೆಗಳಿಗೆ ಶಕ್ತಿಯ ಸಾರ ಮೊದಲ ಮಳೆ, ಗುಡುಗು, ಸಿಡಿಲು | ನೈಸರ್ಗಿಕವಾಗಿ ಸಿಗುತ್ತದೆ ಭರಪೂರ ಇಂಗಾಲ, ಸಾರಜನಕ

May 22, 2023
11:51 AM

ಇತ್ತೀಚಿನ ಡಿಜಿಟಲ್ ಯುಗದಲ್ಲಿ  ಸಾಮಾಜಿಕ ಜಾಲತಾಣಗಳ ಮೂಲಕ ವಿವಿಧ ಬಗೆಯ ಮಾಹಿತಿಗಳು ರೈತರಿಗೆ ಲಭ್ಯವಾಗುತ್ತದೆ. ಅದರಲ್ಲೂ ವಾಟ್ಸ್ ಅಪ್ ಗಳಲ್ಲಿ ಅನೇಕ ರೈತರ ತಮ್ಮ ಕೃಷಿ ಅನುಭವ, ತಾವು‌ ಮಾಡುವ ಕೃಷಿ, ತಾವು ಬಳಸುವ ಗೊಬ್ಬರ, ಸಾವಯವ ಕೃಷಿ, ವೈಜ್ಞಾನಿಕ ಮಾಹಿತಿಗಳನ್ನು ಹಂಚಿಕೊಳ್ಳುತ್ತಾರೆ. ಹೀಗೆ ವಾಟ್ಸ್ ಆಪ್ ನಲ್ಲಿ ಕೃಷಿಕರೊಬ್ಬರು ಹಂಚಿಕೊಂಡ ಮಾಹಿತಿಯನ್ನು ನೀವು ಓದಿ ನೋಡಿ.

ಇಂದು ನಮ್ಮ ಊರಿನಲ್ಲಿ ಗುಡುಗು ಮಿಂಚು ಸಮೇತ 2 ಗಂಟೆ ಬಾರಿ ಮಳೆ ಬಂದಿದೆ. ಅದರ ಪರಿಣಾಮವಾಗಿ ನಮ್ಮ ಭೂಮಿಗೆ ಪ್ರತಿ ಎಕರೆಗೆ ಸುಮಾರು 30 ಕೆಜಿ ಯೂರಿಯಾ ಗೊಬ್ಬರ ಲಭಿಸಿದಂತಾಗಿದೆ.ಈ ಮಾತು 100 ರಷ್ಟು ಸತ್ಯಾ ಈ ಮಾತನ್ನು ನಾನು ಹೇಳುತ್ತಿಲ್ಲ ನಮ್ಮ ಪರಂಪರೆ ಮತ್ತು ವಿಜ್ಞಾನ ಹೇಳುತ್ತದೆ

ಪಾರಂಪರಿಕವಾಗಿ ನಮ್ಮ ಹಿರಿಯರು ಹೇಳುತ್ತಿದ್ದರು ರೋಣಿ ಮಳೆಯಾದರೆ ಓಣಿ ತುಂಬಾ ಕಾಳು ಎಂದು .
ಈ ಮಾತು ನಿಜ ಇದರಲ್ಲಿ ವಿಜ್ಞಾನವಿದೆ. ವಾತಾವರಣದಲ್ಲಿ ಶೇಕಡಾ 75 ಭಾಗ ಸಾರಜನಕ ಇದೆ 21ಭಾಗ ಆಮ್ಲಜನಕ ಇದೆ ಇವು ಎರೆಡರ ಮದ್ಯೆ ಮಿಂಚು ಬಂದರೆ ಅದು ನೈಟ್ರೇಟ್ ಆಮ್ಲವಾಗಿ ಬದಲಾಗುತ್ತದೆ ಆ ಆಮ್ಲ ಮಳೆ ನೀರಿನಲ್ಲಿ ಬೆರೆತರೆ ಅವುಗಳ ನಡುವೆ ರಾಸಾಯನಿಕ ಕ್ರಿಯೆ ನೆಡೆದು ಆರ್ಗ್ಯಾನಿಕ್ ನೈಟ್ರೋಜನ್ (ಸಾವಯವ ಸಾರಜನಕ) ಅಂದರೆ ನಾವು ಅಂಗಡಿಗಳಿಂದ ತರುವ ಯೂರಿಯಾ ಗೊಬ್ಬರ ಮಳೆ ನೀರಿನಲ್ಲಿ ಬೆರೆತು ಭೂಮಿಗೆ ಒದಗುತ್ತದೆ .

ಯಾರ ಭೂಮಿಯಲ್ಲಿ ಸಾವಯವ ಇಂಗಾಲ ಇದೆಯೋ ಅಥವಾ ನೀರನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಇದೆಯೋ ಅಂಥವರ ಭೂಮಿಗೆ ಮೇಲೆ ಹೇಳಿದ ಹಾಗೆ ಪ್ರತಿ ಎಕರೆಗೆ 30 ಕೆಜಿ ಯೂರಿಯಾ ದೊರಕುತ್ತದೆ.

ಹಾಗಾಗಿ ರೈತ ಮಿತ್ರರಲ್ಲಿ ಒಂದು ವಿನಂತಿ ನಮ್ಮ ಜಮೀನಿನಲ್ಲಿ ಇಂಗಾಲದ ಪ್ರಮಾಣವನ್ನು ಹೆಚ್ಚಿಸಲು ಅಥವಾ ನೀರು ಹಿಡಿದು ಇಟ್ಟುಕೊಳ್ಳುವ ಶಕ್ತಿಯನ್ನು ಹೆಚ್ಚಿಸಲು ಆದಷ್ಟು ರಾಸಾಯನಿಕ ಬಳಕೆ ಕಡಿಮೆ ಮಾಡಿ..

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 27-09-2026 | ಕರ್ನಾಟಕದಲ್ಲಿ ಸದ್ಯ ಒಣಹವೆ ; ಸೆ.28ರಿಂದ ಮತ್ತೆ ಮಳೆ ಸಾಧ್ಯತೆ..!
September 27, 2026
1:53 PM
by: ಸಾಯಿಶೇಖರ್ ಕರಿಕಳ
ಮಲೆನಾಡಿನಲ್ಲಿ ಅಡಿಕೆ ಕಷ್ಟ…!, ಬಯಲುಸೀಮೆಯಲ್ಲಿ ಅಡಿಕೆ ಇಷ್ಟು ಸುಲಭವೇ? ಕಾರಣ ತಿಳಿದರೆ ಅಚ್ಚರಿಯಾಗುತ್ತೆ!
September 27, 2026
10:34 AM
by: ಪ್ರಬಂಧ ಅಂಬುತೀರ್ಥ
ಹಾಲಿನ ದರ ಏರಿಕೆ ಕುರಿತು ಸಂಪುಟ ಸಭೆಯಲ್ಲಿ ಚರ್ಚಿಸಿ ಅಂತಿಮ ತೀರ್ಮಾನ – ಡಿ.ಕೆ.ಶಿವಕುಮಾರ್
September 27, 2026
8:12 AM
by: ದ ರೂರಲ್ ಮಿರರ್.ಕಾಂ
ದೇಶಿ ಗೋವಿನ ಹಾಲು, ತುಪ್ಪದ ಮಹತ್ವದ ಪ್ರತಿಪಾದನೆ – ಪಾರಂಪರಿಕ ಆಹಾರ ಪದ್ಧತಿಗೆ ಒತ್ತು
September 26, 2026
7:36 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror