ಅನುಕ್ರಮ

ಇಂಜಿನಿಯರ್ಸ್‌ ಡೇ ನೆನಪು | ಯುವಕರಿಗೆ ಮಾದರಿ ಸರ್‌ ಎಂ ವಿಶ್ವೇಶ್ವರಯ್ಯ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

“ಒಂದು ಕೆಲಸದಲ್ಲಿ ಯಶಸ್ಸು ಗಳಿಸ ಬೇಕಾದರೆ ಮಾಡುವ ಕೆಲಸವನ್ನು ಪ್ರೀತಿಸ ಬೇಕು. ನೆನಪಿಡು , ಒಂದು ರೈಲ್ವೆ ಕ್ರಾಸಿಂಗನ್ನು ಗುಡಿಸುವುದಷ್ಟೇ ನಿನ್ನ ಕೆಲಸವಾದರೂ , ಪ್ರಪಂಚದಲ್ಲೇ ಇಷ್ಟು ಸ್ವಚ್ಛವಾದ ಕ್ರಾಸಿಂಗ್ ಇಲ್ಲ ಎನ್ನುವ ಹಾಗೆ ಅವನ್ನು ಇಟ್ಟುಕೊಳ್ಳುವುದು ನಿನ್ನ ಕರ್ತವ್ಯ. ”
ಈ ಮಾತು ಹೇಳಿದವರು ಒಣಮಾತಿನ ಭಾಷಣಗಾರರಲ್ಲ. ಅಥವಾ ಕೇವಲ ಬುದ್ಧಿ ಮಾತು ಹೇಳುತ್ತಾ ಹೊತ್ತು ಕಳೆಯಲು ಹೇಳಿದ್ದೂ ಅಲ್ಲ.. ನಿಜವಾದ ದೇಶಪ್ರೇಮಿ, ತನ್ನ ಜೀವಿತಾವಧಿಯಲ್ಲಿ ದೇಶದ ಒಳಿತಿನ ಬಗ್ಗೆಯೇ ಯೋಚಿಸಿದ , ಯೋಜಿಸಿದ, ಯಶಸ್ವಿ ನ ಕುರಿತೇ ರಾತ್ರಿ ಹಗಲೆನ್ನದೆ ಚಿಂತಿಸಿ ಕಾರ್ಯೋನ್ಮುಖರಾದ ವ್ಯಕ್ತಿ, ಅಲ್ಲ ಶಕ್ತಿ ಅವರು ಹೇಳಿದ ಮಾತಿದು. ಸರ್. ಎಂ. ವಿಶ್ವೇಶ್ವರಯ್ಯ ಪೂರ್ಣ ಹೆಸರು ಮೋಕ್ಷ ಗುಂಡಂ ವಿಶ್ವೇಶ್ವರಯ್ಯ.

Advertisement

1891 ಸೆಪ್ಟೆಂಬರ್ 15 ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿ ಜನಿಸಿದರು. ಇವರ ತಂದೆ ಶ್ರೀ ನಿವಾಸ ಶಾಸ್ತ್ರಿ ಗಳು, ತಾಯಿ ವೆಂಕಾಚಮ್ಮ.
ಸರ್ , ಎಮ್ ವಿ ಯವರು ಕನಸು ಕಾಣುವುದನ್ನು ಯುವಜನತೆಗೆ ಹೇಳಿಕೊಟ್ಟರು. ಅದೂ ಎಷ್ಟು ಅದ್ವೈತ ವಾದ ದೊಡ್ಡ ದೊಡ್ಡ ಯೋಜನೆಗಳ ಕನಸು. ದೇಶದ ಅಭಿವೃದ್ಧಿ ಯೋಜನೆಗಳ ಕನಸು. ನೀರಿನ ವ್ಯವಸ್ಥೆಯೇ ಇರಲಿ , ಬೆಳಕಿನ ಯೋಜನೆಗಳೇ ಇರಲಿ, ದೇಶದ ಕೃಷಿ ಕ್ಷೇತ್ರದಲ್ಲೇ ಆಗಿರಲಿ ನಮ್ಮ ದೇಶ ಕಂಡರಿಯದಂತಹ ಬದಲಾವಣೆಯ ಹರಿಕಾರ ಸರ್ ಎಂ ವಿಶ್ವೇಶ್ವರಯ್ಯ ರವರು.

ದೇಶದ ಅಭಿವೃದ್ಧಿ ಯಾಗ ಬೇಕಾದರೆ ಶಿಕ್ಣಣ ಕ್ಷೇತ್ರ ಪ್ರಾಮುಖ್ಯತೆಯನ್ನು ಮನಗಂಡು ಸಾವಿರಾರು ಶಾಲೆಗಳನ್ನು ಆರಂಭಿಸು ಅಗತ್ಯವನ್ನು ಸರಕಾರದ ಗಮನಕ್ಕೆ ತಂದು ಕಾರ್ಯರೂಪಕ್ಕೆ  ಬರುವಂತೆ ಮಾಡಿದವರು. ಕಾಲೇಜುಗಳ, ವಿಶ್ವವಿದ್ಯಾಲಯಗಳು, ತಾಂತ್ರಿಕ, ಕೃಷಿ ಮಹಾವಿದ್ಯಾಲಯಗಳ ಸ್ಥಾಪನರಯಲ್ಲೂ ಅಪಾರ ಶ್ರಮ ವಹಿಸಿವರು. ಸಾಮಾನ್ಯ ಮನುಷ್ಯನಿಗೆ ಊಹಿಸಲೂ ಸಾದ್ಯವಿಲ್ಲ ದಷ್ಟು ಕೊಡುಗೆಗಳನ್ನು ಸಮಾಜಕ್ಕೆ ಕೊಟ್ಟ ಧೀಮಂತ ನಾಯಕ ಸರ್. ಎಂ. ವಿಶ್ವೇಶ್ವರಯ್ಯರವರು.

ತಮ್ಮ ಕೆಲಸ ಕಾರ್ಯಗಳಲ್ಲಿ ಅವರು ಎಷ್ಟು ಶಿಸ್ತು ಬಧ್ದರಾಗಿದ್ದರೋ ಅಷ್ಟೇ ಶಿಸ್ತು ಅವರ ನಡೆ, ನುಡಿ, ಧಿರಿಸುಗಳಲ್ಲೂ ಕಾಣಬಹುದಿತ್ತು. ಸಮಯಪಾಲನೆಯಲ್ಲೂ ಎತ್ತಿದ ಕೈ. ಯಾವುದೇ ಕೆಲಸಗಳಾದರೂ ಪೂರ್ವ ತಯಾರಿ ಇಲ್ಲದೆ ಮಾಡಲಾರರು. ಪ್ರತಿಯೊಂದು ವಿಷಯಗಳ ಸಾಧಕಬಾಧಕಗಳ ಲೆಕ್ಕಾಚಾರದ ಮೇಲೆಯೇ ಮುಂದಡಿಯಿಡುವುದು ಅವರ ಗುಣವಾಗಿತ್ತು. ದೇಶಸೇವೆಯನ್ನೇ ತಪಸ್ಸಾಗಿ ಮಾಡಿಕೊಂಡಿದ್ದ ಈ ಮಹಾನುಭಾವ ನ ಹುಟ್ಟಿದ ದಿನ ಸೆಪ್ಟೆಂಬರ್ 15 ನ್ನು ಎಂಜಿನಿಯರ್ಸ್ ಡೇ ಎಂದು ದೇಶದೆಲ್ಲೆಡೆ ಆಚರಿಸಲಾಗುತ್ತದೆ.

ಕೈಗಾರಿಕೀಕರಣ ಹೊಂದಿ ಇಲ್ಲವೇ ನಾಶವಾಗಿ ಎಂದು ದೇಶಕ್ಕೆ ಕರೆಕೊಟ್ಟ ಸರ್.ಎಂ ವಿ, ಭಾರತ ಕಂಡ ಶ್ರೇಷ್ಠ ಸಿವಿಲ್ ಇಂಜಿನಿಯರ್, ಅಣೆಕಟ್ಟು ನಿರ್ಮಾತೃ, ಅರ್ಥಶಾಸ್ತ್ರಜ್ಞ, ದಿವಾನರಾಗಿ ಗುರುತಿಸಿಕೊಂಡಿದ್ದರು, ಮಾತ್ರವಲ್ಲದೇ ದೇಶ ಕಟ್ಟುವ ನಿಟ್ಟಿನಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದರು
ಅರ್ಹವಾಗಿಯೇ ಭಾರತರತ್ನ ಪ್ರಶಸ್ತಿಯನ್ನು 1955 ರಲ್ಲಿ ಭಾರತ ಸರ್ಕಾರ ಕೊಟ್ಟು ಗೌರವಿಸಿದೆ.

ಮ್ಮ ದೇಶದ ಶಾಪ ಎಂದರೆ ಸೋಮಾರಿತನ. ಅದನ್ನು ಓಡಿಸದೆ ದೇಶ ಅಭಿವೃದ್ಧಿ ಯೆಡೆಗೆ ಮುನ್ನಡೆಯದು ಎಂದು ಯುವಜನತೆಗೆ ಸದಾ ಎಚ್ಚರಿಕೆಯನ್ನು ತಮ್ಮ ಕಾರ್ಯದ ಮೂಲಕ ಮಾಡಿ ತೋರಿಸಿದ ಸರ್ ಎಂ. ವಿಶ್ವೇಶ್ವರಯ್ಯ ರವರಿಗೆ ಶಿರಬಾಗಿ ನಮಿಸೋಣ. 

#ಅಶ್ವಿನಿಮೂರ್ತಿ ಅಯ್ಯನಕಟ್ಟೆ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಹವಾಮಾನ ವರದಿ | 20-04-2025 | ಕೆಲವು ಕಡೆ ಸಾಮಾನ್ಯ ಮಳೆ ಸಾಧ್ಯತೆ | ಕರಾವಳಿ-ಮಲೆನಾಡಿನಲ್ಲಿ ಮುಂದಿನ 10 ದಿನಗಳವರೆಗೂ ಮಳೆ ನಿರೀಕ್ಷೆ

ಕರಾವಳಿ ಹಾಗೂ ಮಲೆನಾಡಿನಲ್ಲಿ ಮುಂದಿನ 10 ದಿನಗಳವರೆಗೂ ಮಳೆಯ ಸಾಧ್ಯತೆಗಳು ಗೋಚರಿಸುತ್ತಿವೆ. ಒಳನಾಡಿನಲ್ಲಿ…

3 hours ago

ತರಕಾರಿ,ಹಣ್ಣುಗಳಲ್ಲಿ ಶೇ. 15ರಷ್ಟು ತ್ಯಾಜ್ಯ ಉತ್ಪತ್ತಿ

ಕೇಂದ್ರ ವಾಣಿಜ್ಯ ಕೈಗಾರಿಕೆಗಳ ಸಚಿವಾಲಯ ಸಹಯೋಗದೊಂದಿಗೆ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ  ಕೇಂದ್ರ…

12 hours ago

ಬದುಕು ಪುರಾಣ | ‘ಅಲ್ಲಿ ತುಂಬಾ ರಾಮಾಯಣವಿದೆ !?’

ಧರ್ಮನಿಷ್ಠರಾಗಿ ಹೇಗೆ ಬದುಕಬೇಕು, ಹೇಗೆ ಬದುಕಬಹುದು ಎಂದು ಜಗತ್ತಿಗೆ ಸಾರಿದ ಮಹಾಕಾವ್ಯ ರಾಮಾಯಣ.…

12 hours ago

ಮನೆಗೆ 4 ರಿಂದ 6 ಬಾಗಿಲುಗಳು ಇದ್ದರೆ ಏನೆಲ್ಲಾ ಪ್ರಯೋಜನಗಳಿವೆ ..? ಹೀಗಿವೆ ಶುಭ, ಅಶುಭ ಫಲಗಳು

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

13 hours ago

ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ವಿದ್ಯಾರ್ಥಿಗೆ ಪ್ರವೇಶ ನಿರಾಕರಣೆ ಆರೋಪ | ಶಿಕ್ಷಣ ಇಲಾಖೆ ಅಧಿಕಾರಿ ವಿರುದ್ಧ ಪ್ರಕರಣ ದಾಖಲು

ಶಿವಮೊಗ್ಗದಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ ಸಂದರ್ಭದಲ್ಲಿ ಜನಿವಾರ ಧರಿಸಿದ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸಿದ…

1 day ago

ದಾವಣಗೆರೆ ಜಿಲ್ಲೆಯ ಹಲವೆಡೆ ಬಿರುಗಾಳಿ ಸಹಿತ ಮಳೆ | ತೋಟಗಾರಿಕಾ ಬೆಳೆ ನಾಶ

ಕಳೆದ ಎರಡು ದಿನಗಳಿಂದ ದಾವಣಗೆರೆ ಜಿಲ್ಲೆಯ ಹಲವೆಡೆ ಬಿರುಗಾಳಿ ಸಹಿತ ಮಳೆಯಾಗುತ್ತಿದ್ದು, ತೋಟಗಾರಿಕೆ…

1 day ago