– ಅಜೀರ್ಣ, ಹೊಟ್ಟೆ ಉರಿಯಿಂದ ಬಳಲುತ್ತಿರುವವರಿಗೆ ತೆಂಗಿನಕಾಯಿ ಸೇವನೆಯು ಪ್ರಯೋಜನಕಾರಿಯಾಗಿದೆ. – ಅನಿಯಮಿತ ಮುಟ್ಟಿನಿಂದ ಬಳಲುತ್ತಿರುವ ಮಹಿಳೆಯರು ಪ್ರತಿದಿನ 10 ಗ್ರಾಂ ಹಸಿ ಕೊಬ್ಬರಿಯನ್ನು ಸೇವಿಸಬೇಕು. ದೇಸಿ ಹಸುವಿನ ಹಾಲನ್ನೂ ಕುಡಿಯಿರಿ. ಮುಟ್ಟಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತವೆ. – ಶೀಘ್ರಸ್ಖಲನದಿಂದ ಬಳಲುತ್ತಿರುವ ಪುರುಷರು ಪ್ರತಿದಿನ ಒಣಕೊಬ್ಬರಿ ಮತ್ತು ಹಸುವಿನ ಹಾಲನ್ನು ಕುಡಿಯುವುದರಿಂದ ವಿಶೇಷವಾಗಿ ಪ್ರಯೋಜನವನ್ನು ಪಡೆಯುತ್ತಾರೆ.
– ತೆಂಗಿನ ನೀರು ಹೊಟ್ಟೆಯ ಅಸ್ವಸ್ಥತೆಗಳನ್ನು ಗುಣಪಡಿಸಲು ಕೆಲಸ ಮಾಡುತ್ತದೆ. ಹುಣ್ಣು ಮುಂತಾದ ಕಾಯಿಲೆ ವಾಸಿಯಾಗುತ್ತದೆ. – ಮೂತ್ರಪಿಂಡ, ಥೈರಾಯ್ಡ್, ಮಧುಮೇಹ ಮತ್ತು ಮೂತ್ರಕೋಶದ ತೊಂದರೆ ಇರುವವರು ತೆಂಗಿನ ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬೇಕು. – ತೆಂಗಿನಕಾಯಿಯು ಜೀರ್ಣಕ್ರಿಯೆಗೆ ಬಹಳ ಪ್ರಯೋಜನಕಾರಿಯಾದ ಅನೇಕ ಜೀವಸತ್ವಗಳನ್ನು ಹೊಂದಿರುತ್ತದೆ. ನಿಮಗೆ ಹೊಟ್ಟೆನೋವು ಅಥವಾ ಗ್ಯಾಸ್ ಇದ್ದರೆ ತೆಂಗಿನ ನೀರು ಕುಡಿಯಿರಿ. ತೆಂಗಿನ ನೀರು ವಾಂತಿಯನ್ನೂ ನಿಲ್ಲಿಸುತ್ತದೆ.
– ತೆಂಗಿನಕಾಯಿ ಕೆಮ್ಮಿಗೆ ಉತ್ತಮ ಪರಿಹಾರವಾಗಿದೆ. ತೆಂಗಿನ ಹಾಲನ್ನು ಒಂದು ಚಮಚ ಗಸಗಸೆ ಮತ್ತು ಒಂದು ಚಮಚ ಜೇನುತುಪ್ಪದೊಂದಿಗೆ ಪ್ರತಿದಿನ ರಾತ್ರಿ ಕುಡಿಯುವುದು ಒಳ್ಳೆಯದು. – ಬಾಯಿಯಲ್ಲಿ ಹುಣ್ಣು ಇದ್ದರೆ, ಹಸಿ ಕೊಬ್ಬರಿಯನ್ನು ಮಾತ್ರ ತಿನ್ನಿರಿ ಮತ್ತು ಸಾಧ್ಯವಾದಷ್ಟು ತೆಂಗಿನ ನೀರನ್ನು ಕುಡಿಯಿರಿ. – ತೆಂಗಿನ ಎಣ್ಣೆಯನ್ನು ಪ್ರತಿದಿನ ಚರ್ಮಕ್ಕೆ ಹಚ್ಚುವುದರಿಂದ ತಾಜಾತನದ ಅನುಭವವಾಗುತ್ತದೆ. – ಹುಳಿ ಮೊಸರು, ಜೇಡಿ ಮಣ್ಣು (ಮುಲ್ತಾನಿ ಮಿಟ್ಟಿ) ಮತ್ತು ತೆಂಗಿನ ಎಣ್ಣೆಯ ಮಿಶ್ರಣವು ಕೂದಲನ್ನು ಹೊಳೆಯುವಂತೆ ಮಾಡುತ್ತದೆ.
– ನಿತ್ಯ ಎರಡರಿಂದ ಮೂರು ತೆಂಗಿನ ನೀರನ್ನು ಸೇವಿಸುವುದರಿಂದ ಮುಖ ಕಾಂತಿಯುತವಾಗುತ್ತದೆ. – ಚಳಿಗಾಲದಲ್ಲಿ ಪ್ರತಿ ರಾತ್ರಿ ಒಣ ಕೊಬ್ಬರಿಯನ್ನು ತಿನ್ನಬೇಕು. ರಾತ್ರಿ ಮಲಗುವಾಗ ಕೊಬ್ಬರಿ ಎಣ್ಣೆಯನ್ನು ಮುಖ, ಕುತ್ತಿಗೆ ಮತ್ತು ಚರ್ಮಕ್ಕೆ ಹಚ್ಚಿ ಮತ್ತು ಕೈಗಳಿಂದ ಮೃದುವಾಗಿ ಮಸಾಜ್ ಮಾಡಿ. ಬೆಳಿಗ್ಗೆ ಎದ್ದ ನಂತರ ನಿಮ್ಮ ಮುಖವನ್ನು ನೀರಿನಿಂದ ತೊಳೆಯಿರಿ. ಕೆಲವೇ ದಿನಗಳಲ್ಲಿ ಸುಕ್ಕುಗಳು ಮಾಯವಾಗುತ್ತವೆ. – ಕೊಬ್ಬರಿ ಎಣ್ಣೆಯನ್ನು ಮುಖಕ್ಕೆ ಹಚ್ಚುವುದರಿಂದ ಮುಖದಲ್ಲಿರುವ ಹುಣ್ಣುಗಳು ಮಾಯವಾಗುತ್ತವೆ.
– ಗರ್ಭಿಣಿಯರು ಪ್ರತಿದಿನ ಹಸಿ ಕೊಬ್ಬರಿಯನ್ನು ತಿನ್ನುವುದರಿಂದ ಅವರ ಆರೋಗ್ಯವು ಸದೃಢವಾಗಿರುತ್ತದೆ. ಅಲ್ಲದೆ, ಆರೋಗ್ಯವಂತ ಮಗು ಜನಿಸುತ್ತದೆ. – ಬಾದಾಮಿಯನ್ನು ತೆಂಗಿನ ಎಣ್ಣೆಯಲ್ಲಿ ರುಬ್ಬಿಕೊಳ್ಳಿ. ಈ ಎಣ್ಣೆ ತಲೆನೋವಿಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ. – ಹೊಟ್ಟೆ ಹುಳುಗಳಿದ್ದರೆ ಪ್ರತಿದಿನ ಬೆಳಗ್ಗೆ ತೆಂಗಿನ ತುರಿ ತಿನ್ನಿ.
ಕನ್ನಡಕ್ಕೆ: ಡಾ. ಪ್ರ. ಅ. ಕುಲಕರ್ಣಿ
ಚೀನಾದ Chinese Academy of Tropical Agricultural Sciences (CATAS) ವಿಜ್ಞಾನಿಗಳು Electron…
ಕೃಷಿ ಭೂಮಿಯ ಲಭ್ಯತೆ ಕಡಿಮೆಯಾಗಿ ಸಂಕಷ್ಟದಲ್ಲಿರುವ ರೈತರಿಗಾಗಿ ಸರ್ಕಾರವು ಅರಣ್ಯ ಭೂಮಿಯನ್ನು ಕೃಷಿ…
ಯಾವುದೇ ಕಾಯಿಲೆಗಳಿಲ್ಲದೆ ಆರೋಗ್ಯವಂತರಾಗಿರಲು ಎಲ್ಲರೂ ಇಷ್ಟಪಡುತ್ತಾರೆ. ಒಂದು ವೇಳೆ ಆರೋಗ್ಯ ಕೆಟ್ಟರೆ ಜೀವನವೇ…
ಹೊಸ ರೇಷನ್ ಕಾರ್ಡ್ ಅನುಮೋದನೆ ಪ್ರಾರಂಭವಾಗಿದ್ದು 2026 ಮಾರ್ಚ್ ವರೆಗೆ ಅವಕಾಶ ಕರ್ನಾಟಕ…
ಟ್ಯಾಕ್ಸಿ, ಆಟೋ ಟ್ಯಾಕ್ಟರ್, ಗೂಡ್ಸ್ ವಾಹನದ ಡ್ರೈವರ್ ಆಗಿದ್ದರೂ ಸ್ವಂತ ವಾಹನವಿಲ್ಲ ಎಂಬ…
ಮಧ್ಯಪ್ರದೇಶ ಸರ್ಕಾರದಿಂದ ಅನುದಾನಿತ ಸಂಶೋಧನಾ ಉಪಕ್ರಮವು, ಸಾಂಪ್ರದಾಯಿಕ ಹಸು ಆಧಾರಿತ ಸಿದ್ಧತೆಗಳನ್ನು ಬಳಸಿಕೊಂಡು…