ಬೇಸಿಗೆಯಲ್ಲಿ ನೀರು ಜೊತೆ ಬೆಲ್ಲ ಸವಿಯಿರಿ – ದೇಹಕ್ಕೆ ತಂಪು, ಆರೋಗ್ಯಕ್ಕೂ ಒಳ್ಳೆಯದು

March 15, 2023
6:59 PM

ಸಾಮಾನ್ಯವಾಗಿ ಬೇಸಿಗೆಯಲ್ಲಿ ದಣಿದು ಮನೆಗೆ ಬಂದವರಿಗೆ ಒಂದು ಲೋಟ ನೀರು ಜೊತೆಗೆ ಒಂದು ತುಂಡು ಬೆಲ್ಲ ನೀಡುತ್ತಾರೆ. ಒಂದು ಲೋಟ ನೀರು ಹಾಗೂ ಆ ಬೆಲ್ಲದ ತುಂಡು ತಿಂದ ತಕ್ಷಣ ತುಂಬಾನೇ ರಿಲ್ಯಾಕ್ಸ್ ಅನಿಸುವುದು, ಆಯಾಸವೆಲ್ಲಾ ದೂರಾಗುವುದು ಅಲ್ವಾ?
ನೀವು ಇದುವರೆಗೆ ನೀರು ಹಾಗೂ ಬೆಲ್ಲ ಸೇವಿಸಿಲ್ಲ ಎಂದಾದರೆ ಬಿಸಿಲಿನಲ್ಲಿ ಓಡಾಡಿ ಬಂದಾಗ ಒಂದು ಲೋಟ ನೀರು ಜೊತೆಗೆ ಚಿಕ್ಕ ತುಂಡು ಬೆಲ್ಲ ತಿಂದು ಸುಸ್ತು ಪಟ್ ಅಂತ ಮಾಯಾಗುವುದು.

Advertisement
Advertisement

ಮಲಬದ್ಧತೆ ತಡೆಗಟ್ಟುತ್ತದೆ

ಬೇಸಿಗೆಯಲ್ಲಿ ಕೆಲವರಿಗೆ ದೇಹದಲ್ಲಿ ನೀರಿನಂಶ ಕಡಿಮೆಯಾಗಿ ಮಲಬದ್ಧತೆ ಸಮಸ್ಯೆ ಉಂಟಾಗುವುದು, ಬೆಲ್ಲ ಮಲಬದ್ಧತೆ ಸಮಸ್ಯೆ ತಡೆಗಟ್ಟಲು ಸಹಕಾರಿಯಾಗಿದೆ

Advertisement

ದೇಹದಲ್ಲಿರುವ ಕಲ್ಮಶವನ್ನು ಹೊರಹಾಕುತ್ತದೆ

ಬೆಲ್ಲ ತಿನ್ನುವುದರಿಂದ ದೇಹವನ್ನು ಡಿಟಾಕ್ಸ್ ಮಾಡುತ್ತದೆ, ಇದು ಲಿವರ್ ಅನ್ನು ಕ್ವೆನ್ಸ್ ಮಾಡುವುದರಿಂದ ಲಿವರ್‌ನ ಆರೋಗ್ಯ ಉತ್ತಮವಾಗಿರುತ್ತದೆ. ಇದು ಅನ್ನನಾಳ, ಶ್ವಾಸಕೋಶ, ಕರುಳು ಇವುಗಳನ್ನು ಶುದ್ಧ ಮಾಡುವ ಕಾರ್ಯವನ್ನು ಮಾಡುತ್ತದೆ.

ರಕ್ತವನ್ನು ಶುದ್ದೀಕರಿಸುತ್ತದೆ

ನೀವು ಬೆಲ್ಲವನ್ನು ದಿನಾ ಸ್ವಲ್ಪ ತಿನ್ನುವುದರಿಂದ ರಕ್ತವನ್ನು ಶುದ್ದೀಕರಿಸಲು ಸಹಕಾರಿ. ಇದರಿಂದ ಅನೇಕ ಬಗೆಯ ಕಾಯಿಲೆ ತಡೆಗಟ್ಟಬಹುದು.

Advertisement

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

ಬೆಲ್ಲದಲ್ಲಿ ಸತು, ಸೆಲೆನಿಯಮ್ ಇರುವುದರಿಂದ ದೇಹದಲ್ಲಿ ಕೆಂಪು ರಕ್ತಕಣಗಳು ಹೆಚ್ಚಾಗುವುದರಿಂದ ರಕ್ತಹೀನತೆ ತಡೆಗಟ್ಟಲು ಸಹಕಾರಿ.

ರಕ್ತದೊತ್ತಡ ನಿಯಂತ್ರಣದಲ್ಲಿಡುತ್ತದೆ

ಬೆಲ್ಲದಲ್ಲಿ ಪೊಟಾಸ್ಕಿಯಂ, ಸೋಡಿಯಂ ಇರುವುದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿಡಲು ಸಹಕಾರಿ, ನೀವು ಬೇಸಿಗೆಯಲ್ಲಿ ಬೆಲ್ಲದಿಂದ ಇವುಗಳನ್ನು ಮಾಡಿ ಕುಡಿದರೆ ತುಂಬಾ ಒಳ್ಳೆಯದು ದೊಡ್ಡ ಲೋಟ ನೀರಿಗೆ ಚಿಕ್ಕ ತುಂಡು ಬೆಲ್ಲ ಹಾಕಿ ಕುದಿಸಿ, ಬೆಲ್ಲ ಕರಗಿದಾಗ ನೀರನ್ನು ಸೋಸಿ ತಣಿಯಲು ಬಿಡಿ. ನೀರು ತಣ್ಣಗಾದ ಮೇಲೆ ಅದಕ್ಕೆ ನಿಂಬೆರಸ ಸೇರಿಸಿ ಕುಡಿಯಿರಿ. ಮನೆಯಲ್ಲಿ ಈ ನೀರನ್ನು ಮಾಡಿಟ್ಟರೆ ಬಿಸಿಲಿನಲ್ಲಿ ದಣಿದು ಬಂದಾಗ ಈ ನೀರು ಕುಡಿದರೆ ಆಯಾಸ ದೂರಾಗುವುದು.

Advertisement

ಬೆಲ್ಲವನ್ನು ಮಧುಮೇಹಿಗಳು ಬಳಸಬಹುದೇ?

ಬೆಲ್ಲದಲ್ಲೂ ಕ್ರೈಸೆಮಿಕ್ ಇಂಡೆಕ್ಸ್ ಅಧಿಕವಿರುವುದರಿಂದ ಬೆಲ್ಲ ತಿಂದಾಗ ದೇಹದಲ್ಲಿ ಸಕ್ಕರೆಯಂಶ ಹೆಚ್ಚಾಗುವುದು, ಆದರೆ ಸಕ್ಕರೆಗೆ ಹೋಲಿಕೆ ಮಾಡಿದರೆ ಬೆಲ್ಲ ಹಾನಿಕಾರವಲ್ಲ, ಬೆಲ್ಲದಿಂದ ಮಾಡಿದ ಪದಾರ್ಥಗಳನ್ನು ಸೇವಿಸಿ.

Advertisement
Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಏರಿದ ತಾಪಮಾನ : ರಾಜ್ಯದಲ್ಲಿ ಇಂದಿನಿಂದ 5 ದಿನ ಬೀಸಲಿದೆ ಬಿಸಿಗಾಳಿ ಎಚ್ಚರಿಕೆ..!
April 25, 2024
11:01 PM
by: The Rural Mirror ಸುದ್ದಿಜಾಲ
ನೆಲ್ಯಾಡಿ | ವಿಶ್ವವಿದ್ಯಾನಿಲಯ ಕಾಲೇಜು ಶಿಕ್ಷಕ-ರಕ್ಷಕ ಸಂಘದ ಮಹಾಸಭೆ | ನೂತನ ಪದಾಧಿಕಾರಿಗಳ ನೇಮಕ
April 25, 2024
10:12 PM
by: ದ ರೂರಲ್ ಮಿರರ್.ಕಾಂ
ಇತ್ತೀಚಿಗೆ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತಿದೆ | ಮಕ್ಕಳ ತೂಕ ಮತ್ತು ಎತ್ತರವನ್ನು ಹೆಚ್ಚಿಸುವ ಆಹಾರಗಳು |
April 25, 2024
3:13 PM
by: The Rural Mirror ಸುದ್ದಿಜಾಲ
ಕೊನೆಗೂ ಗಾಂಧಿ ಕುಡಿಗಳ ಕ್ಷೇತ್ರ ಫಿಕ್ಸ್‌ | ರಾಯ್ ಬರೇಲಿಯಿಂದ ಪ್ರಿಯಾಂಕಾ, ಅಮೇಥಿಯಿಂದ ರಾಹುಲ್ ಸ್ಪರ್ಧೆ ಬಹುತೇಕ ಖಚಿತ |
April 25, 2024
3:00 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror