ಸಾಮಾನ್ಯವಾಗಿ ಬೇಸಿಗೆಯಲ್ಲಿ ದಣಿದು ಮನೆಗೆ ಬಂದವರಿಗೆ ಒಂದು ಲೋಟ ನೀರು ಜೊತೆಗೆ ಒಂದು ತುಂಡು ಬೆಲ್ಲ ನೀಡುತ್ತಾರೆ. ಒಂದು ಲೋಟ ನೀರು ಹಾಗೂ ಆ ಬೆಲ್ಲದ ತುಂಡು ತಿಂದ ತಕ್ಷಣ ತುಂಬಾನೇ ರಿಲ್ಯಾಕ್ಸ್ ಅನಿಸುವುದು, ಆಯಾಸವೆಲ್ಲಾ ದೂರಾಗುವುದು ಅಲ್ವಾ?
ನೀವು ಇದುವರೆಗೆ ನೀರು ಹಾಗೂ ಬೆಲ್ಲ ಸೇವಿಸಿಲ್ಲ ಎಂದಾದರೆ ಬಿಸಿಲಿನಲ್ಲಿ ಓಡಾಡಿ ಬಂದಾಗ ಒಂದು ಲೋಟ ನೀರು ಜೊತೆಗೆ ಚಿಕ್ಕ ತುಂಡು ಬೆಲ್ಲ ತಿಂದು ಸುಸ್ತು ಪಟ್ ಅಂತ ಮಾಯಾಗುವುದು.
ಬೇಸಿಗೆಯಲ್ಲಿ ಕೆಲವರಿಗೆ ದೇಹದಲ್ಲಿ ನೀರಿನಂಶ ಕಡಿಮೆಯಾಗಿ ಮಲಬದ್ಧತೆ ಸಮಸ್ಯೆ ಉಂಟಾಗುವುದು, ಬೆಲ್ಲ ಮಲಬದ್ಧತೆ ಸಮಸ್ಯೆ ತಡೆಗಟ್ಟಲು ಸಹಕಾರಿಯಾಗಿದೆ
ಬೆಲ್ಲ ತಿನ್ನುವುದರಿಂದ ದೇಹವನ್ನು ಡಿಟಾಕ್ಸ್ ಮಾಡುತ್ತದೆ, ಇದು ಲಿವರ್ ಅನ್ನು ಕ್ವೆನ್ಸ್ ಮಾಡುವುದರಿಂದ ಲಿವರ್‌ನ ಆರೋಗ್ಯ ಉತ್ತಮವಾಗಿರುತ್ತದೆ. ಇದು ಅನ್ನನಾಳ, ಶ್ವಾಸಕೋಶ, ಕರುಳು ಇವುಗಳನ್ನು ಶುದ್ಧ ಮಾಡುವ ಕಾರ್ಯವನ್ನು ಮಾಡುತ್ತದೆ.
ನೀವು ಬೆಲ್ಲವನ್ನು ದಿನಾ ಸ್ವಲ್ಪ ತಿನ್ನುವುದರಿಂದ ರಕ್ತವನ್ನು ಶುದ್ದೀಕರಿಸಲು ಸಹಕಾರಿ. ಇದರಿಂದ ಅನೇಕ ಬಗೆಯ ಕಾಯಿಲೆ ತಡೆಗಟ್ಟಬಹುದು.
ಬೆಲ್ಲದಲ್ಲಿ ಸತು, ಸೆಲೆನಿಯಮ್ ಇರುವುದರಿಂದ ದೇಹದಲ್ಲಿ ಕೆಂಪು ರಕ್ತಕಣಗಳು ಹೆಚ್ಚಾಗುವುದರಿಂದ ರಕ್ತಹೀನತೆ ತಡೆಗಟ್ಟಲು ಸಹಕಾರಿ.
ಬೆಲ್ಲದಲ್ಲಿ ಪೊಟಾಸ್ಕಿಯಂ, ಸೋಡಿಯಂ ಇರುವುದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿಡಲು ಸಹಕಾರಿ, ನೀವು ಬೇಸಿಗೆಯಲ್ಲಿ ಬೆಲ್ಲದಿಂದ ಇವುಗಳನ್ನು ಮಾಡಿ ಕುಡಿದರೆ ತುಂಬಾ ಒಳ್ಳೆಯದು ದೊಡ್ಡ ಲೋಟ ನೀರಿಗೆ ಚಿಕ್ಕ ತುಂಡು ಬೆಲ್ಲ ಹಾಕಿ ಕುದಿಸಿ, ಬೆಲ್ಲ ಕರಗಿದಾಗ ನೀರನ್ನು ಸೋಸಿ ತಣಿಯಲು ಬಿಡಿ. ನೀರು ತಣ್ಣಗಾದ ಮೇಲೆ ಅದಕ್ಕೆ ನಿಂಬೆರಸ ಸೇರಿಸಿ ಕುಡಿಯಿರಿ. ಮನೆಯಲ್ಲಿ ಈ ನೀರನ್ನು ಮಾಡಿಟ್ಟರೆ ಬಿಸಿಲಿನಲ್ಲಿ ದಣಿದು ಬಂದಾಗ ಈ ನೀರು ಕುಡಿದರೆ ಆಯಾಸ ದೂರಾಗುವುದು.
ಬೆಲ್ಲವನ್ನು ಮಧುಮೇಹಿಗಳು ಬಳಸಬಹುದೇ?
ಬೆಲ್ಲದಲ್ಲೂ ಕ್ರೈಸೆಮಿಕ್ ಇಂಡೆಕ್ಸ್ ಅಧಿಕವಿರುವುದರಿಂದ ಬೆಲ್ಲ ತಿಂದಾಗ ದೇಹದಲ್ಲಿ ಸಕ್ಕರೆಯಂಶ ಹೆಚ್ಚಾಗುವುದು, ಆದರೆ ಸಕ್ಕರೆಗೆ ಹೋಲಿಕೆ ಮಾಡಿದರೆ ಬೆಲ್ಲ ಹಾನಿಕಾರವಲ್ಲ, ಬೆಲ್ಲದಿಂದ ಮಾಡಿದ ಪದಾರ್ಥಗಳನ್ನು ಸೇವಿಸಿ.
ಕೃಷಿಯಲ್ಲಿ ಯಾವುದೇ ಬಲವಾದ ಸಂಘಟನೆ ಇಲ್ಲ. ನಮ್ಮ ಧ್ವನಿ ಎತ್ತಲು ಯಾರೂ ಇಲ್ಲ.ಇಂತಹ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದು ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಭಾರತೀಯ ಸೇನಾಪಡೆಯು, ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರಗಾಮಿಗಳ ನೆಲೆಗಳನ್ನು ನಾಶಗೊಳಿಸಿ…
ರಾತ್ರಿ ಗುಡುಗು ಸಹಿತ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಈಗಿನಂತೆ ಕರಾವಳಿಯಲ್ಲಿ…
ಈ ತಿಂಗಳ ಅಂತ್ಯದೊಳಗೆ ಮೀನ ಕಟಕ ಕುಂಭ ಮಿಥುನ ವೃಶ್ಚಿಕ ವೃಷಭ ಈ…