ಮಂಗಳೂರು-ಬೆಂಗಳೂರು ಸಂಪರ್ಕಿಸಲು ಎಕ್ಸ್‌ಪ್ರೆಸ್‌ವೇ (ಹೈ-ಸ್ಪೀಡ್ ಕಾರಿಡಾರ್) ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಈ ಬಗ್ಗೆ ವಿವರವಾದ ಯೋಜನಾ ವರದಿಯನ್ನು (ಡಿಪಿಆರ್) ತಯಾರಿಸಲು ಸಲಹಾ ಸಂಸ್ಥೆಯನ್ನು ಆಯ್ಕೆ ಮಾಡಲು ಬಿಡ್‌ಗಳನ್ನು ಆಹ್ವಾನಿಸಿತ್ತು. ಇದೀಗ 9 ಸಂಸ್ಥೆಗಳು ಬಿಡ್ ಸಲ್ಲಿಸಿದೆ. ಡಿಪಿಆರ್ ತಯಾರಿಸಲು 540 ದಿನಗಳನ್ನು ನೀಡಲಾಗುತ್ತಿದ್ದು, ರಸ್ತೆ ನಿರ್ಮಾಣವು 2028 ರಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ.
ಮಂಗಳೂರು-ಬೆಂಗಳೂರು ರಸ್ತೆಯು 335 ಕಿ.ಮೀ ಇರಬಹುದು, ನಾಲ್ಕು ಅಥವಾ ಆರು ಲೇನ್‌ಗಳನ್ನು ಹೊಂದಿರಬಹುದು. ಹಾಸನದ ಮೂಲಕ ರಸ್ತೆ ಹಾದುಹೋಗುತ್ತದೆ. ಪಶ್ಚಿಮ ಘಟ್ಟಗಳ ಹಲವು ಕಡೆ ಬೈಪಾಸ್ ರಸ್ತೆ ಹೊಂದಿರುತ್ತದೆ. ಎಕ್ಸ್‌ಪ್ರೆಸ್‌ವೇ ಜಾರಿಯಾದರೆ, ಬೆಂಗಳೂರು ಮತ್ತು ಮಂಗಳೂರು ನಡುವಿನ ಪ್ರಯಾಣದ ಸಮಯವು ಇಳಿಕೆಯಾಗಲಿದೆ.
ಡಿಪಿಆರ್ ಸಿದ್ಧಪಡಿಸಿದ ಬಳಿಕವಷ್ಟೇ ಮುಂದಿನ ಎಲ್ಲಾ ಅಂಶಗಳು ತಿಳಿಯಲಿದೆ. ಈ ಕಾರಿಡಾರ್ ಯೋಜನೆಗೆ ಶಿರಾಡಿ ಘಾಟ್ ಪ್ರದೇಶವು ಮಾತ್ರಾ ಸಮಸ್ಯೆಯಾಗಲಿದೆ.ಅಲ್ಲಿ ಫ್ಲೈಓವರ್‌ಗಳು ಮತ್ತು ಕೆಲವು ಕಡೆ ಸುರಂಗಗಳನ್ನು ನಿರ್ಮಿಸುವ ಮೂಲಕ ಇನ್ನೂ ಎರಡು ಲೇನ್‌ಗಳನ್ನು ಸೇರಿಸಲು ಎನ್‌ಎಚ್‌ಎಐ ಯೋಜಿಸಿದೆ. ಯಾವುದೇ ಕಾರಣಕ್ಕೂ ಪರಿಸರಕ್ಕೆ ಹೆಚ್ಚಿನ ಹಾನಿಯಾಗದಂತೆ ರಸ್ತೆ ಕಾಮಗಾರಿ ನಡೆಸುವ ಬಗ್ಗೆಯೂ ಚಿಂತನೆ ನಡೆದಿದೆ.
ಆಮದು ಕಾರಣದಿಂದ ಮಿಜೋರಾಂ ಅಡಿಕೆ ಬೆಳೆಗಾರರು ಸ್ಪರ್ಧಾತ್ಮಕ ಬೆಲೆಯಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ…
ಇಂದು ಯಾವುದೇ ಪ್ರಮುಖ ಕ್ಷೇತ್ರಗಳನ್ನು ಗಮನಿಸಿ, ಅಲ್ಲೊಂದು ವಿವಾದ ಇಲ್ಲದೇ ಇರುವುದೇ ಇಲ್ಲ.…
ಈ ವಾರ ದೆಹಲಿ, ರಾಜಸ್ಥಾನ , ಗುಜರಾತ್, ಮಧ್ಯಪ್ರದೇಶ , ಮಹಾರಾಷ್ಟ್ರ ಮತ್ತು…
ಗುಜ್ಜೆ ಕಡಲೆ ಗಸಿಗೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ: ಗುಜ್ಜೆ 1…
ಸ್ಥಳೀಯ ಉತ್ಪನ್ನ ಉತ್ತೇಜನ, ಪರಿಸರ ಸಂರಕ್ಷಣೆ ಸೇರಿದಂತೆ ಉತ್ತಮ ಯೋಗಕ್ಷೇಮಕ್ಕೆ 9 ಸಂಕಲ್ಪಗಳನ್ನು …
ಭಾರತೀಯ ರಿಸರ್ವ್ ಬ್ಯಾಂಕ್ ನ ಹಣಕಾಸು ನೀತಿ ಸಮಿತಿ ಹಲವು ಮಹತ್ವದ ನಿರ್ಧಾರಗಳನ್ನು…