ಸುದ್ದಿಗಳು

ಆರೋಗ್ಯ ಯೋಜನೆಗಳಿಗೆ ಪ್ರಧಾನಿ ಚಾಲನೆ | ಆಯುಷ್ಮಾನ್ ಭಾರತ್  ಜನಾರೋಗ್ಯ ಯೋಜನೆ ವಿಸ್ತರಣೆ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಧನ್ವಂತರಿ ಜಯಂತಿ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ  ಸುಮಾರು 12,850 ಕೋಟಿ ರೂಪಾಯಿ ಮೌಲ್ಯದ ವಿವಿಧ ಆರೋಗ್ಯ ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದರು. ಇದೇ ವೇಳೆ ಪ್ರಧಾನಿ ಅವರು, 70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಆಯುಷ್ಮಾನ್ ಭಾರತ್  ಜನಾರೋಗ್ಯ ಯೋಜನೆ ವಿಸ್ತರಣೆಗೂ ಚಾಲನೆ ನೀಡಿದರು.ದೇಶದ ಮೊದಲ ಅಖಿಲ ಭಾರತ ಆಯುರ್ವೇದ ಸಂಸ್ಥೆಯ ಎರಡನೇ ಹಂತವನ್ನು ಉದ್ಘಾಟಿಸಿದರು. 

Advertisement
Advertisement

ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಆಧುನಿಕ ವಿಜ್ಞಾನ ಮತ್ತು  ಭಾರತದ  ಪ್ರಾಚೀನ ಜ್ಞಾನದ  ಸೂಕ್ತ ಸಮನ್ವಯದೊಂದಿಗೆ ಆರೋಗ್ಯ  ವಲಯದಲ್ಲಿ  ಮಹತ್ತರ ಬದಲಾವಣೆ ತರಲು ಸಕಲ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು. ಭಾರತದ  ಯೋಗ , ಪಂಚಕರ್ಮ, ಧ್ಯಾನ ಮುಂತಾದ  ಪ್ರಾಚೀನ ಜ್ಞಾನಗಳತ್ತ ಇಂದು ಇಡೀ ಜಗತ್ತು ಆಕರ್ಷಿತವಾಗಿದ್ದು,  ರಾಷ್ಟ್ರ  ವೈದ್ಯಕೀಯ ಪ್ರವಾಸದ  ತಾಣವಾಗಿ ಹೊರಹೊಮ್ಮಿದೆ.  ಭಾರತ ಅಲ್ಲದೆ, ಇತರ ದೇಶಗಳಲ್ಲೂ ಆಯುಷ್  ತಜ್ಞರಿಗೆ ಬೇಡಿಕೆ ಹೆಚ್ಚುತ್ತಿದೆ.  ಇದರಿಂದ  ದೇಶದ ಯುವಜನರಿಗೆ ಉದ್ಯೋಗಾವಕಾಶ ಸೃಷ್ಟಿಯಾಗುತ್ತಿರುವ ಜೊತೆಗೆ ಮಾನವಿಕ ಸೇವೆ ಮಾಡಲು ಅವಕಾಶ ದೊರೆಕಿದೆ ಎಂದು ತಿಳಿಸಿದರು.

ಪ್ರಸ್ತುತ ದೇಶದಲ್ಲಿ 7.5 ಲಕ್ಷಕ್ಕೂ ಹೆಚ್ಚು  ನೋಂದಾಯಿತ ಆಯುಷ್ ತಜ್ಞರಿದ್ದು, ಈ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸುವ ಗುರಿ ಇದೆ ಎಂದರು.  21ನೇ ಶತಮಾನದಲ್ಲಿ ವೈದ್ಯಕೀಯ ವಿಜ್ಞಾನ ಸಾಕಷ್ಟು ಪ್ರಗತಿ ಕಂಡಿದ್ದು, ಇದರೊಂದಿಗೆ ಭಾರತದ ಪ್ರಾಚೀನ  ಜ್ಞಾನವನ್ನು ಸಮ್ಮಿಳಿತಗೊಳಿಸುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ  ಸಾಕ್ಷ್ಯಾಧಾರಿತ ಆಯುರ್ವೇದ  ಚಿಕಿತ್ಸೆ ಮತ್ತು ಸಂಶೋಧನೆಗೆ ಉತ್ತೇಜನ ನೀಡಲಾಗುತ್ತಿದ್ದು,  ಪ್ರಕೃತಿ ಪರೀಕ್ಷಣಾ ಅಭಿಯಾನ  ಆರಂಭಿಸಲಾಗುತ್ತಿದೆ. ಸರ್ಕಾರದ ಈ ಕ್ರಮಗಳು ಆರೋಗ್ಯ ವಲಯದಲ್ಲಿ  ಇಡೀ ಜಗತ್ತಿಗೆ  ಹೊಸ ದೃಷ್ಟಿಕೋನ ನೀಡಲಿದೆ ಎಂದು ಹೇಳಿದರು.

ಕಳೆದ 10 ವರ್ಷಗಳಲ್ಲಿ ವೈದ್ಯಕೀಯ ವಲಯದಲ್ಲಿ ಮಹತ್ತರ ಪ್ರಗತಿಯಾಗಿದ್ದು, ಎಂಬಿಬಿಎಸ್ ಮತ್ತು ಸ್ನಾತಕೋತ್ತರ ವೈದ್ಯಕೀಯ ವ್ಯಾಸಂಗದ ಸೀಟುಗಳ ಸಂಖ್ಯೆ  ಗಣನೀಯ ಏರಿಕೆ ಕಂಡಿದೆ.  ಮುಂದಿನ 5 ವರ್ಷಗಳಲ್ಲಿ  75 ಸಾವಿರ ಹೆಚ್ಚುವರಿ ಸೀಟುಗಳ ಸೇರ್ಪಡೆಯಾಗಲಿವೆ. ಇದರಿಂದ  ಬಡಕುಟುಂಬದ ಪ್ರತಿಭಾನ್ವಿತರು ವೈದ್ಯರಾಗುವ ಕನಸು ನನಸಾಗಲಿದೆ ಎಂದು ತಿಳಿಸಿದರು. ದೇಶಾದ್ಯಂತ  14 ಸಾವಿರಕ್ಕೂ ಹೆಚ್ಚು  ಜನೌಷಧ ಕೇಂದ್ರಗಳಿದ್ದು,  ಇವುಗಳಲ್ಲಿ  ಮಾರುಕಟ್ಟೆ ಬೆಲೆಗಿಂತ ಶೇಕಡ 80ರಷ್ಟು ರಿಯಾಯಿತಿ ದರದಲ್ಲಿ ಔಷಧಗಳನ್ನು ಮಾರಾಟ ಮಾಡಲಾಗುತ್ತಿದೆ.  ಇದರಿಂದ ಜನಸಾಮಾನ್ಯರಿಗೆ   ಒಟ್ಟು 30 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಉಳಿತಾಯವಾಗಿದೆ ಎಂದರು.

ಆರೋಗ್ಯ ಕ್ಷೇತ್ರದಲ್ಲಿ ತಂತ್ರಜ್ಞಾನ ಬಳಕೆಗೆ  ಆದ್ಯತೆ ನೀಡಲಾಗಿದ್ದು,  ಜನರಿಗೆ  ಅತ್ಯಾಧುನಿಕ ಸೌಲಭ್ಯದೊಂದಿಗೆ ಗುಣಮಟ್ಟದ ವೈದ್ಯಕೀಯ ಸೇವೆ ಒದಗಿಸಲು ಸರ್ಕಾರ ಬದ್ಧವಾಗಿದೆ. ಇ- ಸಂಜೀವಿನಿ ಯೋಜನೆಯಡಿ  ಈವರೆಗೆ 30 ಕೋಟಿಗೂ ಹೆಚ್ಚು ಜನರು  ಆನ್ ಲೈನ್ ಮೂಲಕ ಉಚಿತ ಸಲಹೆ  ಪಡೆದಿದ್ದಾರೆ ಎಂದು ತಿಳಿಸಿದರು.

Advertisement

ಇಂದು ಆಯುಷ್ಮಾನ್ ಭಾರತ್  ಯೋಜನೆಯ ವ್ಯಾಪ್ತಿ ವಿಸ್ತರಿಸಲಾಗಿದ್ದು, 70 ವರ್ಷ ದಾಟಿದ ಎಲ್ಲರಿಗೂ  ಇದರಡಿ  ಉಚಿತ ಚಿಕಿತ್ಸೆ ಒದಗಿಸಲಾಗುತ್ತಿದೆ.  ಬಡ, ಮಧ್ಯಮ, ಶ್ರೀಮಂತ ಭೇದವಿಲ್ಲದೆ 70 ವರ್ಷ ಮೀರಿದ ಎಲ್ಲ ಹಿರಿಯ ನಾಗರಿಕರು ಸ್ವಾಭಿಮಾನ ಮತ್ತು ಆರೋಗ್ಯ ಪೂರ್ಣವಾಗಿ ಬದುಕು ನಡೆಸಲು ಅವಕಾಶ ಕಲ್ಪಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಆರೋಗ್ಯ ಸಚಿವ ಜೆ.ಪಿ. ನಡ್ಡಾ,  ಕಳೆದ 10 ವರ್ಷಗಳಲ್ಲಿ ಆರೋಗ್ಯ ಸಚಿವಾಲಯದ ಚಿತ್ರಣ ಬದಲಾಗಿದ್ದು, ಹೊಸ ದಿಕ್ಕಿನಲ್ಲಿ ಮುನ್ನಡೆಯುತ್ತಿದೆ ಎಂದರು. ಅಲೋಪತಿ, ಆಯುರ್ವೇದ  ಸೇರಿದಂತೆ  ಎಲ್ಲ  ಚಿಕಿತ್ಸಾ ವಿಧಾನಗಳಿಗೂ  ಉತ್ತೇಜನ ನೀಡಲಾಗುತ್ತಿದ್ದು, ಸಮಗ್ರ  ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಆರೋಗ್ಯ ವಲಯದಲ್ಲಿ  ದೇಶ ಆತ್ಮನಿರ್ಭರವಾಗುವ  ನಿಟ್ಟಿನಲ್ಲಿ ಸಕಲ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಮಳೆ ಸುದ್ದಿ ಏನು ? | ನಾಳೆಯೂ ರೆಡ್‌ ಎಲರ್ಟ್‌ ಎಲ್ಲಿ..?

ಚಿಕ್ಕಮಗಳೂರು ಜಿಲ್ಲೆಯಾದ್ಯಂತ ನಿನ್ನೆ ಸಂಜೆಯಿಂದ ಧಾರಾಕಾರ ಮಳೆಯಾಗುತ್ತಿದ,  ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.…

25 minutes ago

ಸಿಂಧು ಜಲ ಒಪ್ಪಂದ ಅಮಾನತು – ದೇಶದ ಹಲವು ರಾಜ್ಯಗಳ ರೈತರಿಗೆ ಅನುಕೂಲ

ಸಿಂಧು ಜಲ ಒಪ್ಪಂದದ ಅಮಾನತ್ತಿನಿಂದ ಜಮ್ಮು ಮತ್ತು ಕಾಶ್ಮೀರ, ರಾಜಸ್ತಾನ, ಹರಿಯಾಣ, ಪಂಜಾಬ್…

2 hours ago

ಕಾಡಿನಲ್ಲಿ ಶೇಖರಿಸಿದ್ದ ಅಡಿಕೆ ವಶ | 327 ಚೀಲ ಅಡಿಕೆ ವಶಕ್ಕೆ ಪಡೆದ ಅಸ್ಸಾಂ ರೈಫಲ್ಸ್‌ |

ಅಸ್ಸಾಂ ರೈಫಲ್ಸ್, ಕಸ್ಟಮ್ಸ್ ಪ್ರಿವೆಂಟಿವ್ ಫೋರ್ಸ್, ಚಂಫೈ ಅವರ ಸಹಯೋಗದೊಂದಿಗೆ ಮಿಜೋರಾಂನ ಚಂಫೈ…

6 hours ago

ಬೆಂಗಳೂರಿನಲ್ಲಿ ಭಾರಿ ಮಳೆ | ಬೆಂಗಳೂರು ಮಹಾನಗರ ಪಾಲಿಕೆ, SDRFನಿಂದ ರಕ್ಷಣಾ ಕಾರ್ಯ

ರಾಜಧಾನಿ ಬೆಂಗಳೂರು ಸೇರಿದಂತೆ  ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಜನರು ಹೈರಾಣರಾಗಿದ್ದು,  ಬೃಹತ್ ಬೆಂಗಳೂರು…

6 hours ago

ಹವಾಮಾನ ವರದಿ | 20.05.2025 |ಮೇ. 21ರಿಂದ ಕರಾವಳಿ ಭಾಗದಲ್ಲಿ ಮಳೆ ಕಡಿಮೆ ನಿರೀಕ್ಷೆ

21.05.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…

10 hours ago

ಆರ್ದ್ರಾ ನಕ್ಷತ್ರಕ್ಕೆ ಗುರು | ಈ 7 ರಾಶಿಗೆ ಗುರು ಬಲ, ಬೇಡವೆಂದರೂ ಲಾಭ..!

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷ್ಗಳನ್ನು ಸಂಪರ್ಕಿಸಿ 9535156490

14 hours ago