ಈ ಬಾರಿಯ ಹವಾಮಾನ ವೈಪರೀತ್ಯ (Climate change) ಹಾಗೂ ಬರಗಾಲ(Drought) ಕೇವಲ ಮನುಷ್ಯರಿಗೆ ಮಾತ್ರವಲ್ಲ. ಪ್ರಕೃತಿಯಲ್ಲಿ(Nature) ಬದುಕುವ ಪ್ರತಿ ಪ್ರಾಣಿ- ಪಕ್ಷಿಗಳು(Animal-Birds), ಜಲಚರಗಳು(Aquatic), ಕ್ರೀಮಿ ಕೀಟಗಳಿಗೂ(Insects) ಕಾಡುತ್ತಿದೆ. ದಿನದಿಂದ ದಿನಕ್ಕೆ ಬಿಸಿಲ ಧಗೆ(Heat) ಏರುತ್ತಿದೆ. ತಾಪಮಾನ(Temperature) 40 ಡಿಗ್ರಿ ದಾಟುತ್ತಿದೆ. ಕರಾವಳಿಯ ಅನೇಕ ಭಾಗಗಳಲ್ಲಿ ಕೆಂಪಿರುವೆ ಬಿಸಿಲ ತಾಪ ತಾಳಲಾರದೆ ಸಾಯುತ್ತಿರುವ ದೃಶ್ಯ ಕಂಡುಬರುತ್ತಿದೆ. ಈಗ ಬಿಸಿಲಿನ ತಾಪಮಾನ ಜಲಚರಕ್ಕೂ ಕಂಟಕವಾಗಿದೆ. ಅರಮನೆ ನಗರಿಯ(Palace city) ಕುಕ್ಕರಹಳ್ಳಿ ಕೆರೆಯಲ್ಲಿರುವ ಮೀನು(Fish) ಸಾಲು ಸಾಲಾಗಿ ಸಾವನ್ನಪ್ಪುತ್ತಿವೆ. ಸತ್ತು ನೀರಿನ ಮೇಲೆ ತೇಲಾಡುತ್ತಿರುವುದನ್ನು ಕಂಡು ಜನ ಆತಂಕ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿಯೂ(Mysore) ಗರಿಷ್ಠ ಉಷ್ಣಾಂಶ ದಾಖಲಾಗುತ್ತಿದ್ದು, ಬಿಸಿಲಿನ ಬೇಗೆಯಿಂದ ಜಲಚರಗಳು ತತ್ತರಿಸುತ್ತಿವೆ. ಪ್ರತಿದಿನ ಹತ್ತಾರು ಮೀನುಗಳು ಸಾವನ್ನಪ್ಪುತ್ತಿದೆ. ಅವುಗಳ ಮೃತದೇಹಗಳು ಕೆರೆ ದಡಕ್ಕೆ ತೇಲಿಕೊಂಡು ಬರುತ್ತಿವೆ. ಕಳೆದ ಎರಡು ದಿನಗಳಿಂದ ಕುಕ್ಕರಹಳ್ಳಿಕೆರೆಯಲ್ಲಿ ಮೃತಪಡುತ್ತಿರುವ ಮೀನುಗಳ ಸಂಖ್ಯೆ ಹೆಚ್ಚಾಗುತ್ತಿದೆ.…….ಮುಂದೆ ಓದಿ…..
ಭಾನುವಾರ ಮುಂಜಾನೆ ಕುಕ್ಕರಹಳ್ಳಿಕೆರೆಗೆ ಬಂದ ವಾಯುವಿಹಾರಿಗಳಿಗೆ ಕೆರೆಯಲ್ಲಿ ಸತ್ತು ತೇಲುತ್ತಿರುವ ಮೀನುಗಳು ಕಂಡಿವೆ. ಅಲ್ಲದೆ, ಸತ್ತ ಮೀನುಗಳು ಕೊಳೆಯಲಾರಂಭಿಸಿದ್ದು, ಕೆರೆ ಪರಿಸರ ಹದಗೆಡುತ್ತಿದೆ ಎಂದು ʼಕನ್ನಡಪ್ರಭʼ ವರದಿ ಮಾಡಿದೆ. ಇನ್ನು ಮೃತ ಮೀನುಗಳನ್ನು ತೋಟಗಾರಿಕಾ ವಿಭಾಗದ ಸಿಬ್ಬಂದಿಗಳು ತೆರವುಗೊಳಸಿದ್ದಾರೆ. ಆದರೆ, ಈ ಬಾರಿಯ ರಣ ಬಿಸಿಲು ಜಲಚರಗಳ ಜೀವಕ್ಕೂ ಕಂಟಕವಾಗುತ್ತಿರುವುದು ಆತಂಕ ಮೂಡಿಸಿದೆ.
ಪರಿಸರ ಪ್ರೇಮಿಗಳಿಗೆ, ನಗರದಲ್ಲಿ ಹೂವು, ಸಣ್ಣ ಸಣ್ಣ ಗಿಡ ಬೆಳೆಸುವವರಿಗೆ ಹೂಕುಂಡವಾಗಿ ಅಡಿಕೆಯ…
2026 ಜೂನ್ ವೇಳೆಗೆ ಎತ್ತಿನಹೊಳೆ ನೀರು ತುಮಕೂರು ತಲುಪಲಿದೆ ಎಂದು ಗೃಹ ಸಚಿವ…
ರಾಜ್ಯದ ಕರಾವಳಿ ಹಾಗೂ ಒಳನಾಡಿನ ಒಂದೆರೆಡು ಕಡೆ ಮಳೆಯಾಗಿದೆ. ಉತ್ತರ ಕನ್ನಡ, ಉಡುಪಿ,…
ಹಾವೇರಿ ಜಿಲ್ಲೆಯಲ್ಲಿರುವ 17 ಗ್ರಾಮ ಪಂಚಾಯಿತಿ ವ್ಯಾಪ್ತಿಯ 18 ಗ್ರಾಮಗಳಿಗೆ 21 ಬಾಡಿಗೆ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
11.04.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…