ಅಡಿಕೆ ವ್ಯಾಪಾರಕ್ಕಾಗಿ ನಕಲಿ ಬಿಲ್ ತಯಾರಿಸಿ ಸುಮಾರು 9.5 ಕೋಟಿ ರೂಪಾಯಿ ತೆರಿಗೆ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಬಂಧಿಸಲಾಗಿದೆ. ಬಂಧಿತರ ಕೇರಳ ಮೂಲದವರಾಗಿದ್ದಾರೆ.
Advertisement
ಕೇರಳ ಮತ್ತು ಕರ್ನಾಟಕದ ಜಿಎಸ್‌ಟಿ ಗುಪ್ತಚರ ಘಟಕದ ಅಧಿಕಾರಿಗಳು ಈ ನಕಲಿ ಸಾಗಾಟವನ್ನು ಪತ್ತೆ ಮಾಡಿದ್ದಾರೆ. ಅಡಿಕೆ ವ್ಯಾಪಾರಕ್ಕಾಗಿ ನಕಲಿ ಇನ್‌ವಾಯ್ಸ್‌ಗಳನ್ನು ತಯಾರಿಸಿ ಅಡಿಕೆ ಸಾಗಾಟ ಮಾಡುತ್ತಿದ್ದರು. ಅಂತರ್ ರಾಜ್ಯ ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಅಶ್ರಫ್ (48) ಮತ್ತು ಶೌಕತ್ (54) ಎಂಬವರನ್ನು ಬಂಧಿಸಲಾಗಿದೆ. ಇವರಿಬ್ಬರೂ ಕೇರಳ ಮೂಲದವರು. ಕೇರಳ ಮತ್ತು ಕರ್ನಾಟಕದ ವಿವಿಧ ಸ್ಥಳಗಳಲ್ಲಿ ಶೋಧ ನಡೆಸಿದ ನಂತರ ಕಣ್ಣೂರು ಮತ್ತು ಆಲಪ್ಪುಳದಿಂದ ಅವರನ್ನು ಬಂಧಿಸಲಾಗಿದೆ. ಈಗಿನ ಮಾಹಿತಿ ಪ್ರಕಾರ, ಸುಮಾರು 9.5 ಕೋಟಿಗಳಷ್ಟು ತೆರಿಗೆ ವಂಚನೆಯನ್ನು ಇದುವರೆಗೆ ಮಾಡಲಾಗಿದೆ ಎಂದು ಜಿಎಸ್‌ಟಿ ಇಲಾಖೆ ತಿಳಿಸಿದೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement