ಇತ್ತೀಚಿನ ದಿನಗಳಲ್ಲಿ ವಾಟ್ಸ್ ಆಪ್ ಗ್ರೂಪ್ ಗಳು ಸಮೂಹ ಮಾಧ್ಯಮವಾಗಿ ಬಹಳ ನವೀನವಾಗಿ ಮಾಹಿತಿಗಳನ್ನು ರವಾನಿಸುತ್ತಿವೆ. ಅದೆಷ್ಟೋ ವಿಚಾರಗಳು ಒಬ್ಬರಿಂದ ಒಬ್ಬರಿಗೆ ಹರಡಿ ವಿಷಯ ತಿಳಿದುಕೊಳ್ಳಲು ಸಹಾಯಕವಾಗಿದೆ. ಮೊದಲಾದರೆ ಒಂದು ವಿಷಯ ತಿಳಿಯ ಬೇಕಾದರೆ ಪೇಪರ್, ಟಿವಿ ಮೊರೆ ಹೋಗಬೇಕಾಗಿತ್ತು ಈಗ ಹಾಗಿಲ್ಲ.. ಒಂದು ಆಂಡ್ರಾಯ್ಡ್ ಮೊಬೈಲ್ ಕೈಯಲ್ಲಿ ಇದ್ರೆ ಇಡೀ ಪ್ರಪಂಚವೇ ಅಂಗೈಯಲ್ಲಿ ಇದ್ದ ಹಾಗೆ..
ಆದ್ರೆ ನಾವು ಮುಂದೆ ಸಾಗಿದಷ್ಟು ನಮ್ಮ ಹಳೇ ಸಂಸ್ಕೃತಿ, ಆಚಾರ- ವಿಚಾರಗಳು ಹಿಂದಕ್ಕೆ ಸರಿಯುತ್ತಿದೆ ಅನ್ನೋದು ಬೇಸರದ ಸಂಗತಿ. ಅದರಲ್ಲೂ ನಮ್ಮ ತುಳುನಾಡ ಆಚಾರ ವಿಚಾರಗಳ ಬಗ್ಗೆ ಈಗಿನ ಯುವ ಜನತೆಗೆ ಅಷ್ಟಕಷ್ಟೆ. ಈ ಬಗ್ಗೆ ಚಂದು ಎನ್ನುವವರು ಬಹಳ ವಿಷಾದದಿಂದ ಬರೆದಿದ್ದಾರೆ. ಹಾಗೆ ಮನ ಮುಟ್ಟುವಂತಿದೆ ಬರವಣಿಗೆ. ಇಲ್ಲಿ ಅವರು ಬರೆದ ಬರೆದ ಲೇಖನವನ್ನು ಯಥಾವತ್ತಾಗಿ ಅಂಟಿಸಲಾಗಿದೆ.. ತಾಳ್ಮೆಯಿಂದ ಓದುತ್ತ ಹೋಗಿ..
✍🏾ಬರಹ- ಚಂದು
ಈ ಬರಹವನ್ನು ವಿಷಾದದಿಂದ ಬರೆಯುತ್ತಿದ್ದೆನೆ.ಇದು ಎಲ್ಲಾ ಜಾತಿಯ ಕುಟುಂಬಗಳಿಗೆ ಮತ್ತು ಅದರ ಎಲ್ಲಾ ಸದಸ್ಯರಿಗೂ ಅನ್ವಯಿಸುತ್ತದೆ.ಅದರಲ್ಲಿ ದುಡಿಯುವವರಿಗೆ ಈ ಬರಹ ಅನ್ವಯಿಸುವುದಿಲ್ಲ. ತುಳುನಾಡಿನಲ್ಲಿ ಕುಟುಂಬದ ಮನೆ ಇಲ್ಲದ ಜನರೆ ಇಲ್ಲ.ಪ್ರತಿಯೊಬ್ಬರಿಗೂ ಕುಟುಂಬದ ಮನೆ,ತರವಾಡು ಮನೆ,ಗರಡಿಮನೆಗಳು ಇವೆ.ಹಳೆಯ ಮನೆಗಳು
ಒಂದೊಮ್ಮೆ ಕಾಲನ ಹೊಡೆತಕ್ಕೆ ಸಿಲುಕಿ ಹೆಚ್ಚಿನ ಕುಟುಂಬದ ಮನೆಗಳು ಅಸ್ತವ್ಯಸ್ತತೆ ಕಂಡು ಹೆಚ್ವಿನವು ಅನಂತರ ಜೀರ್ಣೋದ್ಧಾರ ಗೊಂಡವು. ಕೌಟುಂಬಿಕ ಕಲಹ ಜಾಗದ ಕಲಹಕ್ಕೆ ಸಿಕ್ಕಿ ನಲುಗಿದ್ದ ಮನೆಗಳು ನಂತರದ ದಿನದಲ್ಲಿ ಯುವ ಜನತೆಯ ಅಶಯದ ಮೇರೆಗೆ ಹೊಸ ಹೊಳಪು ಕಂಡವು.ಆದರೆ ಮೂಲ
ಸಮಸ್ಯೆ ಶುರುವಾಗಿದ್ದೂ ಇಲ್ಲಿಂದಲೆ.ಹೆಚ್ಚಿನ ಕುಟುಂಬದ ಮನೆಗಳು ದೈವಸ್ಥಾನದ ಪಟ್ಟ ಪಡೆದು ಕೊಂಡವು.ಒಂದನೊಂದು ಕಾಲದಲ್ಲಿ ಹತ್ತಿಪ್ಪತ್ತು ತೊಟ್ಟಿಲು ತೂಗಿ ನೂರು ಇನ್ನೂರು ಜನರನ್ನು ಪೋಷಿಸಿದ ಕುಟುಂಬದ ಮನೆ ಕೇವಲ ದೈವಗಳಿಗೆ ಸೀಮಿತವಾಗಿ ಹೋದವು.ಜನರು ವರ್ಷಕ್ಕೆ ಒಂದೇ ಸಾರಿ ಕುಟುಂಬದ ಮನೆಗೆ ಬರುವಂತ ಸ್ಥಿತಿಯನ್ನು ನಾವು ನಿರ್ಮಾಣ ಮಾಡಿ ಕೊಂಡಿದ್ದೆವೆ.ಒಬ್ಬರಿಗೊಬ್ಬರ ಸರಿಯಾದ ಪರಿಚಯ ಇಲ್ಲದ ಕಾಲಘಟ್ಟಕ್ಕೆ ತಲುಪಿದ್ದೆವೆ.
ಇದಕ್ಕಿಂತಲೂ ಮೊದಲು ಹೆಚ್ಚಿನ ಕುಟುಂಬದ ಮನೆಗಳಲ್ಲಿ ಕುಡಿತದ ಮಾವ,ಅಜ್ಜ ಇನ್ನಿತರರು ಇರುತ್ತಿದ್ದರು. ಅದರೂ ನಮ್ಮ ಅಜ್ಜಿ,ಅಮ್ಮ ಚಿಕ್ಕಮ್ಮ,ದೊಡ್ಡಮ್ಮ ಎಲ್ಲಾರೂ ಒಂದು ದಿನ ಮುಂಚಿತವಾಗಿ ಹೋಗಿ ದೈವ ದೇವರ ಕಾರ್ಯಕ್ಕೆ ಅಣಿಯಾಗುತ್ತಿದ್ದರು. ಅದೂ ಯಾವುದೇ ಕೆಲಸ ಆಗಿರಲಿ ಮೆಣಸಿನ ತೊಟ್ಟು ತೆಗೆಯುವ ಕೆಲಸ,ತೆಂಗಿನ ಕಾಯಿ ತುರಿಯುವುದು, ಬಾವಿಯಿಂದ ನೀರು ಸೇದಿ ಕೊಡುವ ಕೆಲಸ, ಮಸಾಲೆ ಪದಾರ್ಥ ಅರೆಯುವುದು, ಅಕ್ಕಿಯನ್ನು ಗೆರಸೆಯಲ್ಲಿ ಹಾಕಿ ಶುದ್ದ ಗೊಳಿಸುವುದು,ಪಾತ್ರೆ ಪಗಡೆಗಳನ್ನು ತೊಳೆಯುವುದು ಎಲ್ಲಾ ಕೆಲಸವನ್ನು ತಮ್ಮ ಕುಟುಂಬದ ಮನೆ ಎಂಬ ಅಭಿಮಾನ ಮತ್ತು ಭಕ್ತಿ ನಿಷ್ಠೆಯಿಂದ ಮಾಡುತ್ತಿದ್ದರು.
ಹ..ಗಂಡಸರೂ ಮಾಡುತ್ತಿದ್ದರು ಗಂಧ ಅರೆದು ಬೂಲ್ಯ ಮಾಡಿ ಕಟ್ಟುವ ಕೆಲಸ,ಬಾಲೆ ಎಲೆಯಲ್ಲಿ ಔಡಿ ಮಾಡುವ ಕೆಲಸ,ಕೋಲಿಗೆ ಕೋಲು ನೀಣೆ ಕೊಳ್ತಿರಿ ಮಾಡುವ ಕೆಲಸ,ತೆಂಗಿನ ಹಾಳೆಯಲ್ಲಿ ಚಿಲ್ಲಿ ಮಾಡುವ ಕೆಲಸ.ಮಕ್ಕಳು ಹೂವು ಕೊಯ್ಯುವ ಕೆಲಸ ಎಲ್ಲವನ್ನೂ ಮಾಡುತ್ತಿದ್ದರು.
ಕುಟುಂಬದಲ್ಲಿ ಅನ್ಯೊನ್ಯತೆಯು ಅಷ್ಟೇ ಚೆನ್ನಾಗಿ ಇತ್ತು.ಆದರೆ
ಇತ್ತಿಚ್ಚಿನ ಹತ್ತು ಹದಿನೈದು ವರ್ಷಗಳ ಈಚೆಗೆ ನಮ್ಮ ಯುವಕ ಯುವತಿಯರಿಗೆ ಕುಟುಂಬದ ಮನೆಯ ಮೇಲೆ ಅಷ್ಟೊಂದು ವಿಶೇಷವಾದ ಭಯ ಭಕ್ತಿ ಅಭಿಮಾನ ಕಡಿಮೆಯಾಗುತ್ತಿರುವುದು ಮತ್ತು ಇಲ್ಲದಿರುವುದು ಅತ್ಯಂತ ನೋವಿನ ವಿಚಾರ.ವರ್ಷದಲ್ಲಿ ಕುಟುಂಬದ ಮನೆಯ ಕಾಲಾದಿ ಅಗುವ ಸಮಯಕ್ಕೆ ಎರಡು ದಿನ ರಜೆ ಹಾಕಿ ಕೆಲಸ ಕಾರ್ಯದಲ್ಲಿ ತೊಡಗಿಸಿ ಕೊಳ್ಳಲು ತಮ್ಮ ಖಾಸಗಿ,ಸರ್ಕಾರಿ ಕೆಲಸ ಕಾರ್ಯದ ಕುಂಟು ನೆಪವನ್ನು ವೊಡ್ಡಿ ತಪ್ಪಿಸಿಕೊಳ್ಳುತ್ತಾರೆ. ಅದೇ ಅವರ ಗೆಳೆಯರ ಗೆಳತಿಯರ ಮದುವೆ ,ಬರ್ತ್ ಡೆ,ಪಿಕ್ನಿಕ್,ಟ್ರೀಪ್,ಟೂರು ಎಲ್ಲಾದಕ್ಕೂ ವರ್ಷದಲ್ಲಿ ಎಷ್ಟು ಬೇಕಾದರೂ ರಜೆ ಮಾಡುತ್ತಾರೆ ಅಂದರೆ ಅದಕ್ಕಿಂತ ಶೋಚನೀಯ ವಿಚಾರ ಮತ್ತೊಂದು ಇಲ್ಲ. ಯಾಂತ್ರಿಕತೆಯ ಇಂದಿನ ಜೀವನದಲ್ಲಿ ಹಣವೊಂದು ಇದ್ದರೆ ಎಲ್ಲಾವೂ ಅಗುತ್ತದೆ ಎನ್ನುವ ಯುವ ಸಮೂಹದ ಮನೊಭಾವದಿಂದ ಕುಟುಂಬದ ಮನೆ ಎಲ್ಲಾವು ಅಲ್ಲೊಲಕಲ್ಲೊಲಾ ಅಗುತ್ತಿದೆ. ಯಾವುತ್ತೂ ಕುಟುಂಬದ ಮನೆಗಳು ಜ್ಯೊತಿಷ್ಯಿಯ, ವೈದಿಕರ ಮಾತಿನಿಂದ ಕೇವಲ ದೈವ ದೇವರುಗಳ ಚಾವಡಿಗಳು ಆಯಿತೊ ಅಂದಿನಿಂದಲೆ ಅಹ ಮನೆಯ ಲಯ ತಪ್ಪುತ್ತ ಬಂತು.ಅದರಲ್ಲೂ ಹಿಂದೆ ಒಂದೇ ಕೋಣೆಯೊಳಗೆ ಮೂರ್ನಾಲ್ಕು ಮಂಚಮದಲ್ಲಿ ದೈವಗಳು ಇದ್ದವು.ಅದನ್ನು ಯಾರದೊ ಮಾತು ಕೇಳಿ ಕೊಂಡು ಬೇರೆ ಬೇರೆ ಕೋಣೆಗಳಿಗೆ ತಂದು ಸ್ಥಾಪನೆ ಮಾಡಿ ದೈವಗಳನ್ನು ದೂರ ದೂರ ಮಾಡಿದರೊ ಅದೇ ರೀತಿ ಕುಟುಂಬದ ಸದಸ್ಯರು ಕೂಡ ಒಬ್ಬರಿಂದ ಒಬ್ಬರು ಮಾನಸಿಕವಾಗಿ ದೂರ ದೂರ ಅಗುತ್ತಿರುವುದು ದೊಡ್ಡ ವಿಪರ್ಯಾಸ.ಇದರ ವ್ಯತಿರಿಕ್ತ ಪರಿಣಾಮ ನೇರವಾಗಿ ಇಂದು ಮಕ್ಕಳ ಮತ್ತು ಯುವಜನತೆಯ ಮೇಲೆ ಬೀಳುತ್ತಿರುವುದು ಅಂತೂ ಸತ್ಯ.ಇಂದಿನ ಮಕ್ಕಳು ಯುವಕರು ಕುಟುಂಬದ ಮನೆಗೆ ಹೋಗುವುದು ಎಂದರೆ ಒಂಥಾರ ಅಲಸ್ಯ ಹಿಡಿದವರಂತೆ ಮಾಡುತ್ತಾರೆ.ಅದರಲ್ಲೂ ಹೆಣ್ಮಕ್ಕಳು ಸಂಸ್ಕ್ರತಿಹೀನ ಜೀನ್ಸ್ ಪ್ಯಾಂಟ್,ಟೈಟ್ ಪಿಟ್ಟ್ ಬನಿಯನ್ ಹಾಕಿಕೊಂಡು ಯಾರೊಬ್ಬರ ಪರಿಚಯ ಇಲ್ಲದವರಂತೆ ನಟಿಸುತ್ತ ಒಂದು ಮೂಲೆಯಲ್ಲಿ ಕುಳಿತು ಮೊಬೈಲ್ ಒತ್ತುತ್ತ ಕುಳಿತು ಕೊಂಡರೆ ಇವರ ಎದುರು ಎಷ್ಟು ಹಿರಿಜೀವಗಳು ಹಾದುಹೋದರೂ ಗೊತ್ತಾಗುವುದಿಲ್ಲ. ನೋಡಿದರೂ ನೋಡದವರಂತೆ ಮುಖ ತಿರುವಿ ಕೂರುತ್ತಾರೆ.ಇದು ನಮ್ಮ ಸಂಸ್ಕ್ರತಿಯ ಅಧಃಪತನ ಎಂದರೂ ತಪ್ಪಾಗಲಾರದು.
ಇದು ಮುಂದಿನ ಕಾಲಕ್ಕೆ ತುಂಬಾ ಅಪಾಯಕಾರಿ ಸನ್ನಿವೇಶ. ಇನ್ನೂ ಯುವಕರ ವಿಚಾರ ಅಂತೂ ಶೋಚನೀಯ. ನಿಜವಾಗಿಯೂ ಕುಟುಂಬದ ಮನೆಯಲ್ಲಿ ಯುವಕರು ಮುಂದೆ ನಿಂತು ದೈವ ದೇವರ ಕಾರ್ಯವನ್ನು ಒಂದು ದಿನ ಮುಂಚೆ ಬಂದು ನಡೆಸಿಕೊಡ ಬೇಕು. ಆದರೆ ಇಂದಿನ ಹೆಚ್ಚಿನ ಯುವಕರು ದೈವದ ಎಲ್ಲಾ ಕೆಲಸ ಆಗಿ ತಯಾರದಾಗ ಬಂದು ಕೈಮುಗಿದು ಉಂಡುಕೊಂಡು ಹೊಗುವ ಸನ್ನಿವೇಶದಲ್ಲಿ ನಾವು ನೋಡುತ್ತಿದ್ದೆವೆ.ಅದೂ ಊಟ ಆಗಿ ಪುರ್ಶೊತ್ತ್ ಇಲ್ಲ.ಅವರಿಗೆ ಬಡಿಸಿದಾತನ ಊಟ ಆಗುವಾಗ ಈ ವಯ್ಯ ಮನೆಯಲ್ಲಿ ಇರುತ್ತಾರೆ.ಕಾರಣ ಜನರಿಗೆ ನಿಲ್ಲುವ ತಾಳ್ಮೆ ಇಲ್ಲ.ಇನ್ನೊಂದು ವಂತಿಗೆ ಕೊಡುತ್ತೆವೆ ಎನ್ನುವ ಕೊಂಕು ನುಡಿ.
ಹಾಗೆಂದೂ ನಾವುಗಳು ಮಾಡುವ ಇಂತ ಅನಾಚಾರಗಳನ್ನು ನಾವು ನಂಬಿದ ದೈವಗಳು ಖಂಡಿತ ಮೆಚ್ಚುವುದಿಲ್ಲ.
ಯಾಕೆಂದರೆ ನಾವು ಇಂದು ಏನು ಬೇಕಾದರೂ ಮಾಡಿ ತಪ್ಪಿಸಿಕೊಳ್ಳಬಹುದು.ನಾಳೆ ನಮ್ಮ ಅಮ್ಮನ, ಅಜ್ಜನ,ಮಾವನ ಸ್ಥಾನಕ್ಕೆ ಅದೇ ಕುಟುಂಬದ ಮನೆಯಲ್ಲಿ ನಿಲ್ಲ ಬೇಕಾದ ಪ್ರಸಂಗ ಬಂದೇ ಬರುತ್ತಾದೆ,ಅಹ ಹೊತ್ತಿನಲ್ಲಿ ನಾವು ಮಾಡುವ ಇಂದಿನ ಅಧಿಕ ಪ್ರಸಂಗತನವನ್ನು ನಮ್ಮ ಮಕ್ಕಳು ನಮಗೆ ಮೂರು ಪಟ್ಟು ಜಾಸ್ತಿ ಮಾಡಿ ತೋರಿಸುತ್ತಾರೆ. ಅದಕ್ಕಾಗಿ ಈಗಲೂ ಹೇಳುತ್ತಿದ್ದೆನೆ.
ನಾವು ಎಷ್ಟೆ ದೊಡ್ಡ ಹುದ್ದೆಯಲ್ಲಿದ್ದರೂ ಕುಟುಂಬದ ಮನೆಗೆ ಒಬ್ಬ ಸಾಮಾನ್ಯ ಕುಟುಂಬದ ಸದಸ್ಯನಂತೆ ಬನ್ನಿ.
ಕುಟುಂಬದ ಮನೆಯಲ್ಲಿ ಎಲ್ಲಾರೊಂದಿಗೆ ಬೆರೆತು ಮಾತನಾಡಿರಿ,ಹಿರಿಯಾರಿಗೆ ಗೌರವ ಕೊಡಲು ಕಲಿಯಿರಿ.
ಕುಟುಂಬದ ಮನೆಯಲ್ಲಿ ಸ್ವಯಪ್ರತಿಷ್ಠೆ ಯಾವತ್ತಿಗೂ ಬೇಡ, ಇದು ಭವಿಷ್ಯದ ಕಾಲಕ್ಕೆ ಮಾರಕ.
ನೀವು ಬಡವರಾಗಿರಿ ಅಥವಾ ಶ್ರೀಮಂತರಾಗಿರಿ ಕುಟುಂಬದ ಮನೆಗೆ ಕಾಲಾದಿಯ ಕಾರ್ಯಕ್ರಮಕ್ಕೆ ಒಂದು ದಿನ ಮುಂಚೆ ಬಂದು ಎಲ್ಲಾ ಕೆಲಸಕಾರ್ಯಗಳೊಂದಿಗೆ ಕೈ ಜೋಡಿಸಿ. ಸಾದ್ಯವಾಗದಿದ್ದರೆ ಮರುದಿನ ಅದರೂ ಬಂದು ದೈವ ದೇವರ ಕೆಲಸದಲ್ಲಿ ಸಕ್ರಿಯರಾಗಿರಿ.
ಕುಟುಂಬದ ಮನೆ ಎಂಬುದು ಒಟ್ಟುಗೂಡಿ ಯೋಗ ಕ್ಷೆಮ ವಿಚಾರಿಸಿ,ಕಷ್ಟ ಸುಖ ಮಾತನಾಡಿಕೊಳ್ಳುವ ನಂದನವನ ಅಗಿರ ಬೇಕು. ಅದೂ ಒಬ್ಬರ ಮುಖ ಒಬ್ಬರು ನೋಡಿ ಪರಿಚಯ ಇಲ್ಲದಂತೆ ಇರುವ ಬಸ್ ಸ್ಟಾಂಡುನಂತೆ ಯಾವತ್ತಿಗೂ ಆಗಬಾರದು.
ತಾವುಗಳು ವಂತಿಗೆ ಕೊಡುತ್ತೆವೆ,ಇನ್ನೂ ನಾವು ಕುಟುಂಬದ ಮನೆಯಲ್ಲಿ ಕೆಲಸಕಾರ್ಯ ಯಾಕೆ ಮಾಡ ಬೇಕು ಎಂದು ಪ್ರಶ್ನಿಸುವ ಜನರೂ ಹಲವರು ಇದ್ದಾರೆ.ಆದರೆ ತಮ್ಮಂತೆಯೆ ಎಲ್ಲಾರೂ ಅವರನ್ನು ಅವರೆ ಪ್ರಶ್ನೆ ಮಾಡುತ್ತಾ ಕುಳಿತರೆ ದೈವಗಳಿಗೆ ಅಗೆಲು ತಂಬಿಲ ಬಿಡಿ,ಒಂದು ಚೊಂಬು ನೀರು ಇಡಲೂ ಅಹ ಕುಟುಂಬದಲ್ಲಿ ಒಬ್ಬೆ ಒಬ್ಬ ವ್ಯಕ್ತಿಗೆ ಗತಿ ಇರುವುದಿಲ್ಲ.ಅದ್ದರಿಂದ ಒಟ್ಟಾಗಿ ಒಗ್ಗಟ್ಟಿನ ಮೂಲಕ ನಮಗೆ ಸಾದ್ಯ ಆದಷ್ಟೂ ಕೆಲಸ ಮಾಡಿದರೆ ಮಾತ್ರ ಎಲ್ಲಾವು ಚೆಂದ.
ಇಂದು ಯುವತಿಯರು ವಿದ್ಯಾವಂತರಾಗಿದ್ದರೆ, ಅದ್ದರಿಂದ ಅವರುಗಳಲ್ಲಿ ಮಸಾಲೆ ಕಡೆಯುವ ಕೆಲಸ,ಗುಡಿಸುವ ಕೆಲಸ,ಸ್ವಚ್ಚತೆಯ ವಿಚಾರದಲ್ಲಿ ಅವರು ಸ್ವಲ್ಪ ಹಿಂಜರಿಯುತ್ತಾರೆ.ಹಾಗೆಯೇ ಮತ್ತೊಬ್ಬರು ಅವರಿಗೆ ಹೇಳುವ ಹಾಗಿಲ್ಲ.ಆದರೆ ಅವರಾಗಿಯೆ ಬಂದು ಅದಕ್ಕೆ ಸಹಕಾರ ಕೊಟ್ಟರೆ ಅವರಿಗೆ ದೈವ ದೇವರ ಅನುಗ್ರಹ ಸದಾ ಇರುತ್ತಾದೆ.ಯಾಕೆಂದರೆ ಕುಟುಂಬದ ಮನೆಯಲ್ಲಿ ಒಬ್ಬರಿಗೊಷ್ಕರ ನಾವು ಶ್ರಮ ಪಡುವುದಲ್ಲ,ಸಾವಿರ ಜನ ಕುಟುಂಬಸ್ಥರ ನಡುವಿನಲ್ಲಿ ಕೆಲಸ ಮಾಡಲು ಯೋಗ್ಯತೆ ಅನ್ನುವುದು ಬಂದರೆ ಮಾತ್ರ ನಾವು ಅಲ್ಲಿ ದುಡಿಯಬಹುದು. ಹಾಗೆಂದು ಮಾತ್ರಕ್ಕೆ ಯೋಗ್ಯತೆ ಬರಲು ಕಾಯಬೇಡಿ.ನಾವು ಅಲ್ಲಿ ಇಳಿದು ಶ್ರದ್ದಾ ಭಕ್ತಿಯಿಂದ ಕೆಲಸ ಮಾಡಿದರೆ ನಮ್ಮ ಕುಟುಂಬಸ್ಥರೆ ನಮ್ಮ ಯೋಗ್ಯತೆಯನ್ನು ಇತರೊಂದಿಗೆ ಹೇಳಿ ಕೊಂಡಾಡುತ್ತಾರೆ.
ನಾವು ವರ್ಷಕ್ಕೆ ನೌಕರಿಗೆ ಎಷ್ಟೋ ರಜೆ ಹೊಡೆದು ಚಕ್ಕರ್ ಹಾಕಿ ಜ್ವಾಲಿ ಮಾಡುತ್ತೆವೆ.ಹಾಗೆಯೇ ಕುಟುಂಬದ ಕಾಲಾದಿಯ ಕಾರ್ಯಕ್ರಮಕ್ಕೆ ವರ್ಷದಲ್ಲಿ ಎರಡು ದಿನ ತಮ್ಮ ನೌಕರಿಗೆ ರಜೆ ಹಾಕಿ ಮೀಸಲಿಡಿ.
ಹಿಂದೆ ಕುಟುಂಬದ ಮನೆಯಲ್ಲಿ ಯಾವುದೇ ವ್ಯವಸ್ಥೆಗಳು ಇರಲಿಲ್ಲ,ಆದರೆ ಈಗ ಎಲ್ಲಾವು ಇದೆ.ಆದರೆ ಅದಕ್ಕಿಂತ ನೂರು ಪಟ್ಟು ಉದಾಶಿನ ಜನರಿಗೆ ಅಂಟಿ ಹೋಗಿದೆ. ಅದರ ಪರಿಣಾಮ ಇಂದು ದೈವಗಳ ಅಡುಗೆಯು ಕ್ಯಾಟರಿಂಗ್ ಮಾಡುವವನ ಕೈಯಲ್ಲಿ ನಡೆಯುತ್ತಿದೆ.ಅದರ ಪುಣ್ಯದ ಫಲವು ಅವನಿಗೆಯೆ ಲಭಿಸುವುದು.ಯಾಕೆಂದರೆ ನಮ್ಮ ದೈವದ ಅಡುಗೆ ಮಾಡಲೂ ನಮಗೆ ಯೋಗ್ಯತೆ ಇಲ್ಲವಾಗುತ್ತಿದೆ.ಕಾರಣ ನಮಗೆ ಪುರ್ಶೊತ್ತ್ ಇಲ್ಲ,ಮಾಡುವ ವಿದಾನವು ಗೊತ್ತಿಲ್ಲ. ಗೊತ್ತಿರಲೂ ಅದರ ನಾವು ಹತ್ತಿರ ಹೋಗಿಯೆ ಇಲ್ಲ.
ಕುಟುಂಬದ ಮನೆಗೆ ಬರುವಾಗ ನಾವು ಹಾಕುವ ಬಟ್ಟೆ ಬರೆಯ ಮೇಲೆ ನಿಗಾ ಇರಲಿ. ತುಳುನಾಡಿನಲ್ಲಿ ನಮ್ಮ ಹಿರಿಯಾರು ಹೇಳಿ ಕೊಟ್ಟ ಸಂಸ್ಕ್ರತಿಯನ್ನು ಅಹ ಎರಡು ದಿನದ ಮಟ್ಟಿಗಾದರೂ ಉಳಿಸುವ ಕೆಲಸ ಮಾಡೊಣ.
ಕುಟುಂಬದ ಮನೆಯಲ್ಲಿ ಎಲ್ಲಾರೂ ಕೂಡಿ ಕೆಲಸ ಮಾಡಿದರೆ ಮಾತ್ರ ಚೆಂದ,ಯಾರಿಗೂ ಅಲ್ಲಿದ್ದವರಿಗೆ ಗೊತ್ತಾಗಲ್ಲ ಎಂದು ದೈವಕ್ಕೆ ಅಗೆಲು-ತಂಬಿಲ ಬಡಿಸಿ ರೆಡಿಯಾಗುವ ಹೊತ್ತಿಗೆ ಬಂದು ಕೈಮುಗಿದು ಊಟ ಮಾಡಿ ಹೋದರೆ, ನೀವುಗಳು ಎರಡು ಕಣ್ಣುಗಳಲ್ಲಿ ಅತ್ತಿತ್ತ ನೋಡಿ ಹೋಗಬಹುದು, ಆದರೆ ನಿಮ್ಮನ್ನು ಅಲ್ಲಿ ನೂರು ಕಣ್ಣುಗಳು ನೋಡುತ್ತ ಇರುತ್ತಾವೆ. ಅವುಗಳು ಅಲ್ಲಿಯೇ ನಿಮ್ಮ ಯೋಗ್ಯತೆ ಗಳನ್ನು ಲೆಕ್ಕ ಹಾಕುತ್ತವೆ ಎಂಬುದನ್ನು ಮರೆಯದಿರಿ.
ಕುಟುಂಬದ ಮನೆಯಲ್ಲಿ ಎಲ್ಲಾರೂ ಒಟ್ಟಾಗಿ ಪಂಕ್ತಿಯಲ್ಲಿ ಕುಳಿತು ಊಟ ಮಾಡುವ ಪರಿಪಾಠ ಇದ್ದರೆನೆ ಚೆಂದ,ಇತ್ತಿಚಿನ ದಿನಗಳಲ್ಲಿ ಬಫೆ ಸಿಸ್ಟಮ್ ನ ಬಟ್ಟಲು ಊಟ ಮಾಡಿ ಬಿಸಾಡುವ ಹಾಗೆಯೇ ನಮ್ಮ ಮನಸ್ಸು ನಿಕೃಷ್ಟ ಆಗಿ ಹೋಗುತ್ತಿದೆ.
ನಾವು ಮುಂದಿನ ಕುಟುಂಬ ಪದ್ದತಿಯ ಪರಂಪರೆಗೆ ಇಂದು ಮುನ್ನುಡಿ ಬರೆಯಬೇಕು. ಇಲ್ಲವಾದಲ್ಲಿ ಕುಟುಂಬದ ಮನೆ “ಕುಂಬು”(ತುಕ್ಕು ಹಿಡಿದ ಮನೆ) ಅದ ಮನೆ ಅಗುವುದು ಅಂತೂ ಖಂಡಿತ.ಹಿರಿಯಾರ ಮಾತಿನಂತೆ ಹಿಂದೆ ದೈವದ ಮೊಗ,ಅಣಿ ಕಂಗಿನ ಸೊಗೆ ಹಾಳೆಯಲ್ಲಿ ಇತ್ತು.ಜನರಿಗೆ ಬಂಗಾರದ ಮನಸ್ಸಿತ್ತು.ಆದರೆ ಈಗ ಬಂಗಾರದ ಮೊಗ ಅಣಿ ದೈವಗಳಿಗೆ ಉಂಟು,ಜನರಿಗೆ ಮಾತ್ರ ಹಾಳೆಯ ಮನಸ್ಸು ಉಂಟು.
ಇದನ್ನು ನಿಮ್ಮ ಕುಟುಂಬದ ಎಲ್ಲಾ ಸದಸ್ಯನಿಗೆ ಶೆರ್ ಮಾಡಿ.ಅದರಲ್ಲೂ ಕುಟುಂಬದ ಮನೆಯಲ್ಲಿ ದುಡಿಯದೆ ಬಿಳಿ ಪಂಚೆ,ಬಿಳಿ ಅಂಗಿ ಹಾಕಿ ಬಿಲ್ಡಪ್ ಕೊಡುವ ವ್ಯಕ್ತಿಗೆ(ಅವರಿಗೆ ತುಳುವಿನಲ್ಲಿ ತಿಗಲೆಗಂಟೆ ಎನ್ನುತ್ತಾರೆ) ಮೊದಲು ಶೆರ್ ಮಾಡಿ.
ಕುಟುಂಬದ ಮನೆಯಲ್ಲಿ ಒಂದು ದಿನ ಮುಂಚೆ ಬಂದು ದುಡಿಯಲು ನೀವು ಪ್ರೆರೇಪಿಸಿ.
ರಾಜ್ಯದ ಗ್ರಾಮ ಪಂಚಾಯತ್ ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅರಿವು ಕೇಂದ್ರಗಳು ಜ್ಞಾನದ ಕೇಂದ್ರಗಳಾಗಿದ್ದು, ಸ್ಪರ್ಧಾತ್ಮಕ…
ಜಲಾನಯನ ಯಾತ್ರೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಯಾತ್ರೆ ಸಂಚರಿಸಲಿದ್ದು, ನೀರು ನಿರ್ವಹಣೆ ಬಗ್ಗೆ…
15 ರಾಜ್ಯಗಳಲ್ಲಿ 2 ಸಾವಿರದ 590 ಮೊಬೈಲ್ ಸಂಪರ್ಕರಹಿತ ಗ್ರಾಮಗಳನ್ನು ಗುರುತಿಸಲಾಗಿದೆ. ಈ…
ಗದಗ ಜಿಲ್ಲೆಯ ಮುಂಡರಗಿ ಮತ್ತು ಶಿರಹಟ್ಟಿ ತಾಲೂಕಿನ ಸುಮಾರು 33 ಸಾವಿರ ಹೆಕ್ಟೇರ್…
ಅಡಿಕೆಯಲ್ಲೂ ಟಿಶ್ಯೂ ಕಲ್ಚರ್ ತಂತ್ರಜ್ಞಾನದ ಅಳವಡಿಕೆ ಸಾಧ್ಯವೇ ಎಂಬ ಪ್ರಯತ್ನ ಸಾಕಷ್ಟು ಹಿಂದೆಯೇ…
ಅಡಿಕೆ ಆಮದು ಆಗುತ್ತಿರುವ ಹಿನ್ನಲೆ ನಮ್ಮ ಸ್ಥಳೀಯ ಅಡಿಕೆ ಬೆಳೆಗಾರರು ನ್ಯಾಯಸಮ್ಮತವಲ್ಲದ ದರ…