ಪಾಕಿಸ್ತಾನದಲ್ಲಿ ಮಾರ್ಚ್ ತಿಂಗಳಲ್ಲಿ ವರ್ಷದಿಂದ ವರ್ಷಕ್ಕೆ ಲೆಕ್ಕಹಾಕಲಾಗುವ ಹಣದುಬ್ಬರ ಶೇ.35.37 ರಷ್ಟು ತಲುಪಿದ್ದು, 50 ವರ್ಷಗಳಲ್ಲೇ ಮೊದಲ ಬಾರಿಗೆ ಗರಿಷ್ಠ ಹಣದುಬ್ಬರ ಬಿಕ್ಕಟ್ಟು ಎದುರಾಗಿದೆ.
ದೇಶಕ್ಕೆ ಅತ್ಯಗತ್ಯವಾಗಿದ್ದ ಬೇಲ್ಔಟ್ ಸಿಗುವುದಕ್ಕೆ ಐಎಂಎಫ್ ನ ಷರತ್ತುಗಳನ್ನು ಪೂರೈಸಲು ಸಾಧ್ಯವಾಗದ ಕಾರಣ ಪಾಕಿಸ್ತಾನದ ಆರ್ಥಿಕ ಬಿಕ್ಕಟ್ಟು ಮತ್ತಷ್ಟು ತೀವ್ರಗೊಂಡಿದೆ.
ತಿಂಗಳಿನಿಂದ ತಿಂಗಳಿಗೆ ಲೆಕ್ಕ ಹಾಕಲಾಗುವ ಹಣದುಬ್ಬರ ಶೇ.3.72 ರಷ್ಟಿದ್ದು, ಆದರೆ ಕಳೆದ ವರ್ಷದ ಸರಾಸರಿ ಹಣದುಬ್ಬರ ದರ ಶೇ. 27.26 ರಷ್ಟಿತ್ತು.
ಈಗಿರುವ ಸಾಲವನ್ನು ತೀರಿಸುವುದಕ್ಕೆ ಪಾಕ್ ಗೆ ಶತಕೋಟಿ ಡಾಲರ್ ಹಣಕಾಸು ಅಗತ್ಯವಿದೆ, ಆದರೆ ವಿದೇಶಿ ವಿನಿಮಯ ಮೀಸಲು ಕಡಿಮೆಯಾಗಿದೆ ಮತ್ತು ಅಲ್ಲಿನ ರೂಪಾಯಿ ಮೌಲ್ಯ ಕುಸಿಯುತ್ತಿದೆ.
ಬಡ ಪಾಕಿಸ್ತಾನಿಗಳು ಆರ್ಥಿಕ ಪ್ರಕ್ಷುಬ್ಧತೆಯ ತೀವ್ರತೆಯನ್ನು ಅನುಭವಿಸುತ್ತಿದ್ದಾರೆ ಮತ್ತು ಮುಸ್ಲಿಂ ಉಪವಾಸದ ತಿಂಗಳ ರಂಜಾನ್ ಪ್ರಾರಂಭವಾದಾಗಿನಿಂದ ಆಹಾರ ವಿತರಣಾ ಕೇಂದ್ರಗಳಲ್ಲಿ ಗುಂಪು ಘರ್ಷಣೆಗಳಲ್ಲಿ, ಕನಿಷ್ಠ 20 ಜನರು ಸಾವನ್ನಪ್ಪಿದ್ದಾರೆ.
“ಹಣದುಬ್ಬರವು ಏರುತ್ತಿರುವ ರೀತಿಯಲ್ಲಿ, ಕ್ಷಾಮದಂತಹ ಪರಿಸ್ಥಿತಿ ಎದುರಾಗಿದೆ ಎಂದು ಕರಾಚಿ ಮೂಲದ ವಿಶ್ಲೇಷಕ ಶಾಹಿದಾ ವಿಜಾರತ್ ಹೇಳಿದ್ದಾರೆ.
ಪಾಕಿಸ್ತಾನದ ದಕ್ಷಿಣ ನಗರವಾದ ಕರಾಚಿಯ ಕಾರ್ಖಾನೆಯೊಂದರಲ್ಲಿ ರಂಜಾನ್ ವೇಳೆ ನಡೆಯುವ ದಾನ ವಿತರಣೆ ಕಾರ್ಯಕ್ರಮದಲ್ಲಿ ನಡೆದ ಘರ್ಷಣೆಯಲ್ಲಿ ಕನಿಷ್ಠ 12 ಜನರು ಸಾವನ್ನಪ್ಪಿದ್ದಾರೆ
ಒಂದೆರಡು ಕಡೆ ಸಂಜೆ, ರಾತ್ರಿ ಗುಡುಗು ಸಹಿತ ಸಾಮಾನ್ಯ ಮಳೆಯ ಸಾಧ್ಯತೆಗಳಿವೆ. ಮೇ14ರಿಂದ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷ್ಗಳನ್ನು ಸಂಪರ್ಕಿಸಿ 9535156490
ಹಲಸಿನ ಬೀಜದ ಚಟ್ನಿ ಪುಡಿಗೆ ಬೇಕಾಗುವ ಸಾಮಗ್ರಿಗಳು: ಹಲಸಿನ ಬೀಜ 1ಕಪ್. (ಒಣಗಿಸಿದ ಹಲಸಿನ…
ನಿನ್ನೆ ಮಧ್ಯರಾತ್ರಿ ಪಾಕಿಸ್ತಾನ ಜಮ್ಮು ಮತ್ತು ಕಾಶ್ಮೀರದ ಹಲವು ಭಾಗಗಳಲ್ಲಿ ನಾಗರಿಕರನ್ನು ಮತ್ತು…
ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಹೆಚ್ಚಿರುವ ಹಿನ್ನೆಲೆಯಲ್ಲಿ ಸಂಭವನೀಯ ದಾಳಿಯ ಬಗ್ಗೆ…
ಹಿಂದೂ ಧರ್ಮದ ವಿಶೇಷತೆ ಎಂದರೆ ಅದು ಸ್ವ ವಿಮರ್ಶೆಯ (self -criticism) ಸ್ವಾತಂತ್ರ್ಯ…