ಕೃಷಿಕನಾದವನಿಗೆ ನಷ್ಟವಿಲ್ಲದೆ ಕೃಷಿ ಮಾಡಲು ಸಾಧ್ಯವೇ ಇಲ್ಲ. ಪ್ರತಿಯೊಂದು ಹಣ್ಣಿಗೂ ಅದರದೇ ಆದ ಸೀಸನ್ ಇರುತ್ತದೆ. ಮಾವಿನ ಹಣ್ಣು, ಅನಾನಸ್, ದ್ರಾಕ್ಷಿ, ಹೀಗೆ ಪ್ರತಿಯೊಂದು ಹಣ್ಣಿಗೂ ಒಂದು ಕಾಲದಲ್ಲಿ ತುಂಬ ಬೇಡಿಕೆ ಇದ್ದರೂ, ವರ್ಷ ಪೂರ್ತಿ ಬೇಡಿಕೆ ಇರಲು ಸಾಧ್ಯವಿಲ್ಲ.
ಆದರೆ, ನೆಲ್ಲಿಕಾಯಿಗೆ ವರ್ಷಪೂರ್ತಿ ಮಾರುಕಟ್ಟೆಯಲ್ಲು ಬೇಡಿಕೆ ಸೀರವಾಗಿರುತ್ತದೆ. ನೆಲ್ಲಿಕಾಯಿಂದ ಜ್ಯೂಸ್, ಜಾಮ್, ಕ್ಯಾಂಡಿ,ಪೌಡರ್ ಮೊದಲಾದ ಮೌಲ್ಯವರ್ದಿತ ಉತ್ಪನ್ನಗಳನ್ನು ತಯಾರಿಸಬಹುದು. ಇದರಿಂದ ರೈತರಿಗೆ ಹೆಚ್ಚುವರಿ ಲಾಭ ಸಹ ದೊರೆಯಲು ಸಹಾಯಕಾರಿಯಾಗುತ್ತದೆ. ಈ ನೆಲ್ಲಿಕಾಯಿ ಗಿಡವನ್ನು ರಾಜಸ್ಥಾನದ ಪುಷ್ಕರ್ ಪ್ರದೇಶದಲ್ಲಿ ರೈತರು ದೊಡ್ಡ ಪ್ರಮಾಣದಲ್ಲಿ ನೆಲ್ಲಿಕಾಯಿ ಕೃಷಿ ನಡೆಸುತ್ತಿದ್ದಾರೆ. ಈ ಬೆಳೆ ಇತ್ತೀಚಿನ ದಿನಗಳಲ್ಲಿ ಅತ್ಯಂತ ಲಾಭದಾಯಕ ಬೆಳೆಯಾಗಿ ಹೊರಹೊಮ್ಮಿದೆ. ಇಲ್ಲಿನ ಫಲವತ್ತಾದ ಮಣ್ಣು ಮತ್ತು ಹವಾಮಾನವು ಈ ಕೃಷಿಗೆ ಸೂಕ್ತವಾಗಿರುವುದರಿಂದ ರೈತರು ಸಾಂಪ್ರದಾಯಿಕ ಬೆಳೆಗಳಿಂದ ದೂರಾಗಿ ನೆಲ್ಲಿಕಾಯಿ ತೋಟಗಳನ್ನು ಸ್ಥಾಪಿಸಿದ್ದಾರೆ.
ಇಲ್ಲಿ ಹನಿ ನೀರಾವರಿ, ಆಧುನಿಕ ತಂತ್ರಜ್ಞಾನ ಮತ್ತು ಸರ್ಕಾರಿ ಯೋಜನೆಗಳ ಸಹಾಯದಿಂದ ಪುಷ್ಕರ್ ನ ರೈತರು ನೆಲ್ಲಿಕಾಯಿ ಉತ್ಪಾದನೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಈ ಕೃಷಿಯು ಅಲ್ಪ ಶ್ರಮ, ದೀರ್ಘಾವಧಿಯ ಫಲ ಮತ್ತು ನಿತ್ಯ ಬೇಡಿಕೆಗಳ ಕಾರಣದಿಂದ ಇಂದು ಅನೇಕ ರೈತರ ಆದಾಯದ ನಂಬಿಕೆಯಾಗಿದೆ.
ಅಡಿಕೆ ತೋಟಗಳಲ್ಲಿ ಹೂಗೊಂಚಲುಗಳು ಅರಳಿದರೂ ಕಾಯಿ ಕಟ್ಟದಿರುವುದಕ್ಕೆ ರೈತರು ಬಳಸುವ ಬೇವಿನ ಎಣ್ಣೆಯೇ…
ಕಳಪೆ ಗುಣಮಟ್ಟದ ಅಡಿಕೆ ಸಾಗಣೆ ಪ್ರಕರಣ ಪತ್ತೆಯಾಗಿದ್ದು, ಆಹಾರ ಸುರಕ್ಷತೆ ಮತ್ತು ಮಾನದಂಡಗಳ…
ಕಾಸರಗೋಡು CPCRI ತನ್ನ 110ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಜನರೇಷನ್ Z ಗಾಗಿ…
ಮಹಿಳಾ ಉದ್ಯಮಶೀಲತೆ, ತೆಂಗು ಮೌಲ್ಯವರ್ಧನೆ ಹಾಗೂ ರೈತರ ಆದಾಯ ವೃದ್ಧಿಯಲ್ಲಿ ತೆಂಗು ಅಭಿವೃದ್ಧಿ…
ತೆಂಗಿನಕಾಯಿ ಬೆಲೆ ಇಳಿಕೆ ಆತಂಕ ಹೆಚ್ಚಾಗಿದೆ. ಉತ್ಪಾದನೆ ಏರಿಕೆ ನಡುವೆಯೇ ರಫ್ತು ಮತ್ತು…
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾನ್ ಅವರು…