ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಸಂಬರಗಿ ಗ್ರಾಮದ ಅಶೋಕ ಮಾಸಾಳ ಅವರು ಜಮೀನಿನಲ್ಲಿ ಯುವ ತಂತ್ರಜ್ಞಾನದ ಸಹಾಯದಿಂದ 1083 ತಳಿಯ 2200 ಬದನೆಕಾಯಿ ಸಸಿಗಳನ್ನು ನೆಟ್ಟು ಉತ್ತಮ ಆದಾಯವನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತೊಟ್ಟಿಲು ಮಾದರಿಯ ಸರಿಯಾದ ಅಂತರ ಹಾಗೂ ನೀರಾವರಿ ಕ್ರಮದೊಂದಿಗೆ ಸಸಿಗಳಿಗೆ ಪೋಷಕಾಂಶ ಸಮರ್ಪಕವಾಗಿ ತಲುಪುವಂತೆ ಮಾಡಿದ್ದಾರೆ. ಮಾತ್ರವಲ್ಲ, ಅವರು ರೂ 12,000 ಮೌಲ್ಯದ ಪ್ಲಾಸ್ಟಿಕ್ ಮಲ್ಚಿಂಗ್ ಶೀಟ್ ಗಳು ಮತ್ತು ರೂ 9,000 ಮೌಲ್ಯದ ಡ್ರಿಪ್ ನೀರಾವರಿ ವ್ಯವಸ್ಥೆ ಅಳವಡಿಸಿಕೊಂಡಿದ್ದಾರೆ. ಇದರಿಂದ ನೀರಿನ ಉಳಿತಾಯವಾಗಿದ್ದು, ಹುಲ್ಲು ಬೆಳೆಯುವುದನ್ನು ತಡೆದು, ಬೆಳೆ ಆರೋಗ್ಯಕರವಾಗಿ ಬೆಳೆಯುವುದಕ್ಕೂ ಸಹಾಯವಾಗಿದೆ.
ಅಶೋಕ ಮಾಸಾಳರು ಬದನೆಕಾಯಿ ಬೆಳೆಗಳಿಗೆ ಯಾವುದೇ ರೋಗಗಳು ಬರದಂತೆ ಗಮನವಹಿಸಿ 7 ದಿನಗಳ ಅಂತರದಲ್ಲಿ ಪೋಷಕ ದ್ರವ್ಯಗಳ ಸಿಂಪಡಣೆ ಹಾಗೂ 3 ದಿನಗಳ ಅಂತರದಲ್ಲಿ ಹಾನಿಕಾರಕ ಕೀಟ ನಿರ್ವಹಿಸುತ್ತಾರೆ. ಇವರಿಗೆ ಈ ಕೃಷಿಯಿಂದ ಒಟ್ಟು ಉತ್ಪಾದನೆ 18 ರಿಂದ 20 ಟನ್ ಆಗಿದ್ದು, ಪ್ರತಿ ಕಿಲೋಗೆ ರೂ 40 ರಿಂದ ರೂ 50 ದರ ಸಿಕ್ಕಿದೆ. ಹೀಗಾಗಿ ಕೇವಲ ಒಂದು ಎಕರೆ ಬದನೆ ತೋಟದಿಂದಲೇ 6 ಲಕ್ಷದ ವರೆಗೂ ಆದಾಯ ಪಡೆದಿದ್ದಾರೆ.
ಕರಾವಳಿ ಹಾಗೂ ಮಲೆನಾಡಿನ ಕೆಲವೆಡೆ ಸಂಜೆ ಗುಡುಗು ಸಹಿತ ಮಳೆಯ ಸಾಧ್ಯತೆಯಿದ್ದು, ಅ.9…
ಕರ್ನಾಟಕದಲ್ಲಿ ನೈಋತ್ಯ ಮುಂಗಾರು ಸಕ್ರಿಯವಾಗಿದ್ದು, ಕರಾವಳಿ ಮತ್ತು ಮಲೆನಾಡು ಸೇರಿದಂತೆ ಹಲವೆಡೆ ಉತ್ತಮ…
ರಾಜ್ಯದಲ್ಲಿ ಸದ್ಯ ಯಾವುದೇ ರೀತಿಯ ವಿದ್ಯುತ್ ಲೋಡ್‌ಶೆಡ್ಡಿಂಗ್ ಇಲ್ಲ ಎಂದು ಇಂಧನ ಸಚಿವ…
2027-28ನೇ ಸಾಲಿನಲ್ಲಿ ನವೋದಯ ವಿದ್ಯಾಲಯಗಳ 9 ಮತ್ತು 11ನೇ ತರಗತಿಯ ಖಾಲಿ ಸ್ಥಾನಗಳಿಗೆ…
1973ರ ಅಡಿಕೆ ಮಾರುಕಟ್ಟೆ ಬಿಕ್ಕಟ್ಟು ಉತ್ಪಾದನೆ ಹೆಚ್ಚಳಕ್ಕೆ ತಕ್ಕಂತೆ ಮಾರುಕಟ್ಟೆ ಹೀರಿಕೊಳ್ಳುವ ಸಾಮರ್ಥ್ಯವೂ…
ಅರಬ್ಬಿ ಸಮುದ್ರದ ಉಡುಪಿ–ದಕ್ಷಿಣ ಕನ್ನಡ ಕರಾವಳಿ ಸಮೀಪ ರೂಪುಗೊಂಡಿರುವ ಮೇಲ್ಮೈ ಸುಳಿಗಾಳಿಯಿಂದ ಕರಾವಳಿ,…