ಸುದ್ದಿಗಳು

ಕೃಷಿ ಪಂಪ್ ಸೆಟ್‌ಗಳಿಗೆ ಆಧಾರ್ ಲಿಂಕ್ | ವರ್ಗಾವಣೆ ವೇಳೆ ಹೆಚ್ಚುವರಿ ಶುಲ್ಕವೇಕೆ..? | ಎಲ್ಲೂ ಕಾಣದ ಸುತ್ತೋಲೆ..! | ಮುಗಿಯದ ಗೊಂದಲ-ಬಾರದ ಉತ್ತರ |

Share

ವಿದ್ಯುತ್ ಸರಬರಾಜು ಕಂಪನಿಗಳು ಕೃಷಿ ಪಂಪ್‌ ಸೆಟ್‌ಗಳ ಆರ್‌ಆರ್ ಸಂಖ್ಯೆಯನ್ನು ಗ್ರಾಹಕರ ಆಧಾರ್ ಸಂಖ್ಯೆಗಳಿಗೆ ಜೋಡಿಸುವ ಕಾರ್ಯವನ್ನು ಆರಂಭಿಸಿದೆ. ಕಳೆದ ಸುಮಾರು ಒಂದು ತಿಂಗಳಿನಿಂದ ಈ ಚರ್ಚೆ ನಡೆಯುತ್ತಿದೆ. ನಿಜಕ್ಕೂ ಇದಕ್ಕೊಂದು ಸರಿಯಾದ ಸ್ಪಷ್ಟನೆ ಎಲ್ಲೂ, ಯಾರಿಂದಲೂ ಲಭ್ಯವಾಗಿಲ್ಲ.‌ ಹಾಗೆ ನೋಡಿದರೆ ಸರಿಯಾದ ಸುತ್ತೋಲೆಗಳೂ ಎಲ್ಲೂ ಲಭ್ಯವಾಗುತ್ತಿಲ್ಲ..!. ಆದರೂ ನಮ್ಮ ಪ್ರತಿನಿಧಿಗಳು ಮಾತನಾಡುತ್ತಿಲ್ಲ…!

Advertisement

ಕೃಷಿಕರ ಕೃಷಿ ಪಂಪ್‌ ಸೆಟ್‌ಗಳ ಆರ್‌ಆರ್ ಸಂಖ್ಯೆ ಗ್ರಾಹಕರ ಆಧಾರ್ ಸಂಖ್ಯೆಗಳಿಗೆ ಲಿಂಕ್‌ ಮಾಡಬೇಕು ಎಂಬ ಸುದ್ದಿಗಳು ಬಂದಿದೆ. ಪತ್ರಿಕೆಗಳಲ್ಲಿ ಸಹಿತ ವ್ಯಾಟ್ಸಪ್‌ ಗಳಲ್ಲಿ ಹರಿದಾಡಿದೆ. ಇದಕ್ಕೆ ಸರಿಯಾಗಿ ಇಲಾಖೆಗಳಿಂದಲೂ ಕೃಷಿಕರಿಗೆ ಕರೆ ಬಂದಿದೆ.  ಆಧಾರ್‌ ಲಿಂಕ್‌ ಮಾಡುವುದಕ್ಕೆ ಯಾವುದೇ ಗೊಂದಲಗಳು ಇಲ್ಲ. ಈಗಾಗಲೇ ಹಲವಾರು ವಿಷಯಗಳಿಗೆ ಆಧಾರ್‌ ಲಿಂಕ್‌ ಮಾಡಲಾಗಿದೆ. ಈಚೆಗೆ ಆರ್‌ಟಿಸಿಗೂ ಆಧಾರ್‌ ಲಿಂಕ್‌ ಪ್ರಕ್ರಿಯೆ ನಡೆಯುತ್ತಿದೆ, ಬ್ಯಾಂಕ್‌ ಖಾತೆಗಳಿಗೂ ಸೇರಿದಂತೆ ಎಲ್ಲಾ ಕಡೆಯೂ ಆಧಾರ್‌ ಲಿಂಕ್‌ ಪ್ರಕ್ರಿಯೆ ನಡೆದಿದೆ. ಎಲ್ಲೂ ಆಕ್ಷೇಪ ಇಲ್ಲ. ಆದರೆ ಈಗ ಕೃಷಿ ಪಂಪ್‌ ಸೆಟ್‌ಗಳ ಆರ್‌ಆರ್ ಸಂಖ್ಯೆಯನ್ನು ಆಧಾರ್‌ ಕಾರ್ಡ್‌ಗೆ ಲಿಂಕ್‌ ಮಾಡುವ ಪ್ರಕ್ರಿಯೆಯಲ್ಲಿ ಹಲವು ಗೊಂದಲ ಇದೆ.

ಮೊದಲನೆಯದಾಗಿ ಕೃಷಿ ಪಂಪ್‌ ಸೆಟ್‌ಗಳಿಗೆ ಉಚಿತವಾಗಿ ವಿದ್ಯುತ್‌ ನೀಡಲಾಗುತ್ತಿದೆ. ಕಳೆದ ಹಲವು ವರ್ಷಗಳಿಂದ ಈ ಉಚಿತ ಯೋಜನೆ ಇದೆ. ಬಹುತೇಕ ಕೃಷಿಕರ ಪಂಪ್ ಸೆಟ್ಟುಗಳು  ತಮ್ಮ ತಂದೆ ಅಥವಾ ತಾತನ ಕಾಲದಲ್ಲಿ  ಅಳವಡಿಸಿರುತ್ತಾರೆ. ಹೀಗಾಗಿ ಅವರ ನಿಧನಾ ನಂತರವೂ ಖಾತೆ ಬದಲಾವಣೆ ಮಾಡಿರುವುದಿಲ್ಲ. ಈಗ ಅವರ ಆಧಾರ್ ಕಾರ್ಡ್ ಆರ್‌ಆರ್ ನಂಬರ್ ಗೆ ಲಿಂಕ್ ಮಾಡಲಾಗುವುದಿಲ್ಲ. ಹೀಗಾಗಿ  ಸಾಕಷ್ಟು ಗೊಂದಲಗಳು ನಿರ್ಮಾಣವಾಗಿದೆ. ಈಗ ರೈತರ ಹೆಸರಿಗೆ ಬದಲಾವಣೆ ಮಾಡಲು ಹೆಚ್ಚುವರಿ ಶುಲ್ಕವನ್ನು ರೈತರಿಂದ ವಸೂಲು ಮಾಡಲಾಗುತ್ತಿದೆ. ಒಂದು ವೇಳೆ ಆಧಾರ್‌ ಲಿಂಕ್‌ ಮಾಡದೇ ಇದ್ದಲ್ಲಿ  ಮುಂದಿನ ದಿನಗಳಲ್ಲಿ ಸಿಗಬೇಕಾಗಿರುವಂತಹ ಸಬ್ಸಿಡಿ ಹಣ ದೊರಕುವುದಿಲ್ಲ ಎಂದೂ ಹೇಳಲಾಗಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತವಾದ ಆದೇಶಗಳು ಎಲ್ಲೂ ಲಭ್ಯವಾಗಿಲ್ಲ. ಹಾಗೆಂದು ಈ ಬಗ್ಗೆ ಯಾವುದೇ ಜನಪ್ರತಿನಿಧಿಗಳೂ ಮಾಹಿತಿ ನೀಡಿಲ್ಲ, ರೈತರಿಗೆ ಭರವಸೆಯನ್ನೂ, ಸರಿಯಾದ ಕ್ರಮಗಳ ಬಗ್ಗೆಯೂ ಹೇಳಿಲ್ಲ. ಈ ಆಧಾರ್‌ ಲಿಂಕ್‌ ಉದ್ದೇಶವೇನು..? ಖಾತೆ ವರ್ಗಾವಣೆ ವೇಳೆ ಹೆಚ್ಚುವರಿ ಹಣ ಪಾವತಿ ಏಕೆ ಎಂಬುದರ ಬಗ್ಗೆ ಸರಿಯಾದ ಮಾಹಿತಿಯನ್ನು ಕೃಷಿಕರಿಗೆ ನೀಡಬೇಕಿದೆ.

ರಾಜ್ಯದಲ್ಲಿ  34.17 ಲಕ್ಷ ರೈತರು ಸರ್ಕಾರದಿಂದ ಉಚಿತ ವಿದ್ಯುತ್ ಪಡೆದುಕೊಳ್ಳುತ್ತಿದ್ದಾರೆ. ವರ್ಷಕ್ಕೆ 10 ರಿಂದ 11 ಸಾವಿರ ಕೋಟಿ ರೂಪಾಯಿ ಹಣವನ್ನು ಸರ್ಕಾರ ಇದಕ್ಕಾಗಿ ವಿದ್ಯುತ್ ಇಲಾಖೆಗೆ ಸರ್ಕಾರವೇ ಪಾವತಿ ಮಾಡುತ್ತಿದೆ. ಆದರೆ ಈಗ ಉಚಿತ ವಿದ್ಯುತ್‌ ಯಾರೋ ಬಳಕೆ ಮಾಡುತ್ತಿದ್ದಾರೆ, ಕೃಷಿ ಯೋಜನೆಗಳಿಗೆ ಬಳಕೆ ಆಗುತ್ತಿಲ್ಲ ಎನ್ನುವುದು ಇನ್ನೊಂದು ಮಾಹಿತಿ. ಈ ಬಗ್ಗೆಯೂ ಅಧಿಕೃತವಾದ ಯಾವ ಮಾಹಿತಿಯೂ ಲಿಖಿತ ರೂಪದಲ್ಲಿ ಇಲಾಖೆ ನೀಡಿಲ್ಲ.ಸದ್ಯ ಮೆಸ್ಕಾಂ, ಎಸ್ಕಾಂಗಳಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಹಲವು ಕೃಷಿಕರು ಈಗಾಗಲೇ ಲಿಂಕ್‌ ಮಾಡಿದ್ದಾರೆ, ಶುಲ್ಕ ಪಾವತಿ ಮಾಡಿ ಖಾತೆ ಬದಲಾವಣೆಯನ್ನೂ ಮಾಡಿದ್ದಾರೆ.

ಈ ಬಗ್ಗೆ ರೈತರ ನಡುವೆಯೇ ಚರ್ಚೆ ನಡೆಯುತ್ತಿದೆ. ರೈತ ಪರವಾದ ಸಂಘಟನೆಗಳು ಹೆಚ್ಚುವರಿ ಶುಲ್ಕ ಪಾವತಿಸಬೇಕಾಗಿಲ್ಲ, ಖಾತೆ ಬದಲಾವಣೆಗೆ ಹೆಚ್ಚುವರಿ ಶುಲ್ಕ ಏಕೆ..? ಎಂದು ಪ್ರಶ್ನಿಸಿವೆ. ಆಧಾರ್‌ ಲಿಂಕ್‌ ನೆಪದಲ್ಲಿ ರೈತರ ನೆರವಿಗೆ ಇರುವ ಯೋಜನೆಯನ್ನು ಕಡಿತಗೊಳಿಸುವುದು ಹಾಗೂ ಖಜಾನೆ ಭರ್ತಿ ಮಾಡುವ ಪ್ಲಾನ್‌ ಇದಾಗಿದೆ ಎಂದು ಹೇಳಿವೆ.

ಹಾಗಿದ್ದರೆ ನಿಜಕ್ಕೂ ಇದು ಏನು ? ಉಚಿತವನ್ನು ತೆಗೆಯುವ ಯೋಜನೆಯೇ..? ಉಚಿತವನ್ನು ಮಿತಿಗೊಳಿಸುವ ಯೋಜನೆಯೇ..? ಖಾತೆ ಬದಲಾವಣೆ ಹೆಸರಿನಲ್ಲಿ ಖಜಾನೆ ಭರ್ತಿ ಮಾಡುವ ಪ್ಲಾನ್‌ ಇದಾಗಿದೆಯೇ..? ಇಂತಹ ಹಲವು ಗೊಂದಲಗಳಿಗೆ ಸರಿಯಾದ ಮಾಹಿತಿ, ಉತ್ತರವನ್ನು ಜನಪ್ರತಿನಿಧಿಗಳು, ಸರ್ಕಾರವು ನೀಡಬೇಕಿದೆ.

There are reports circulating in newspapers and on WhatsApp that the RR number of agricultural pump sets belonging to farmers should be linked with consumers’ Aadhaar numbers. As a result, departments have started contacting farmers regarding this matter. The process of linking Aadhaar is not difficult, as Aadhaar is already linked to various services. Recently, the Aadhaar linking process has been implemented for RTC and bank accounts without any issues. However, there seems to be confusion surrounding the current linking process.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

ಮಣಿಪುರದಲ್ಲಿ 68 ಟನ್ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಅಡಿಕೆ ವಶ

ಅಕ್ರಮವಾಗಿ ಸುಮಾರು 68 ಟನ್‌ ಅಡಿಕೆ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಅಸ್ಸಾಂ ಪೊಲೀಸರು…

9 hours ago

ಅಡುಗೆ ಮನೆ ‘ಬೇಯಿಸುವ ಕೋಣೆ’ಯಲ್ಲ!

ಬದುಕಿನ ಒಂದೊಂದು ಅಂಗವೂ ‘ಕಲಾತ್ಮಕ’. ಒದಗುವ ಸುಭಗತನವು ಅನುಭವವೇದ್ಯ. ಅಡುಗೆ ಮನೆಯು ಬರೇ…

10 hours ago

2025ರಲ್ಲಿ ಶನಿ ತಮ್ಮ ನಕ್ಷತ್ರ ಅಥವಾ ರಾಶಿಯಲ್ಲಿ ಅಧೋಗತಿಯ ಚಲನೆ

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜೋತಿಷಿಗಳನ್ನು ಸಂಪರ್ಕಿಸಿ 9535156490

10 hours ago

ತಾಪಮಾನ ಹೆಚ್ಚಳ | ಬನ್ನೇರುಘಟ್ಟ ಉದ್ಯಾನವನದಲ್ಲಿ ಪ್ರಾಣಿಗಳಿಗೆ ತಂಪಾದ ಆಹಾರ ಪದಾರ್ಥ |

ಬೇಸಿಗೆ ತಾಪಮಾನ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮೃಗಾಲಯದ ಪ್ರಾಣಿಗಳು ಸುಡುಬಿಸಿಲಿಗೆ ಕಂಗಾಲಾಗಿದ್ದು, ಮಧ್ಯಾಹ್ನದ ವೇಳೆಯಲ್ಲಿ…

19 hours ago

ತೊಗರಿ ಉತ್ಪನ್ನ ಖರೀದಿ ಅವಧಿ ಎ.25 ರವರೆಗೆ ವಿಸ್ತರಣೆ

ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ ಗುಣಮಟ್ಟದ ತೊಗರಿ ಉತ್ಪನ್ನವನ್ನು ಖರೀದಿಸುವ…

20 hours ago

ತಾಂತ್ರಿಕ ಸಮಸ್ಯೆ | ದೇಶಾದ್ಯಂತ ಯುಪಿಐ, ಬ್ಯಾಂಕಿಂಗ್ ಸೇವೆಗಳಲ್ಲಿ ವ್ಯತ್ಯಯ

ತಾಂತ್ರಿಕ ಸಮಸ್ಯೆ ಹಿನ್ನೆಲೆಯಲ್ಲಿ ಏಕೀಕೃತ ಪಾವತಿ ಇಂಟರ್ ಫೇಸ್ - ಯುಪಿಐ ಸೇವೆಯ…

20 hours ago