ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಿಡಿಲು ಬಡಿದು ಇಬ್ಬರು ರೈತರು ಸಾವು

Advertisement
Advertisement

ಜಿಲ್ಲೆಯಾದ್ಯಂತ ಮಂಗಳವಾರ ಸಂಜೆ ಗುಡುಗು ಸಹಿತ ಮಳೆಯಾಗಿದೆ. ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಿಡಿಲು ಬಡಿದು ಇಬ್ಬರು ರೈತರು ಸಾವನ್ನಪ್ಪಿದ ಘಟನೆಯೊಂದು ಸಂಡೂರು ತಾಲೂಕಿನಲ್ಲಿ ನಡೆದಿದೆ.

Advertisement

ತಾಲೂಕಿನ ಬೊಮ್ಮಲಗುಂಡ ಗ್ರಾಮದ ನಾಗಪ್ಪ (70) ಹಾಗೂ ನಾಗೇನಹಳ್ಳಿಯ ಜಾಜರ್‌ ಕಲ್ಲು ತಿಮ್ಮಣ್ಣ (70) ಮೃತರು. ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಿಡಿಲು ಬಡಿದಿದ್ದು, ಈ ವೇಳೆ ನಾಗಪ್ಪ ಅವರ ಮೇಕೆಯೂ ಸಿಡಿಲಿಗೆ ಬಲಿಯಾಗಿದೆ ಎಂದು ತಿಳಿದು ಬಂದಿದೆ.

Advertisement
Advertisement

ಮಂಗಳವಾರ ಸಂಜೆ ಸಂಡೂರು ಪಟ್ಟಣ ಹಾಗೂ ಚೋರನೂರು ಹೋಬಳಿಯಲ್ಲಿ ಉತ್ತಮ ಮಳೆಯಾಗಿದೆ. ಕೃಷಿ ಹಾನಿಯ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಳ್ಳಾರಿ ನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ವರುಣಾರ್ಭಟ ಮುಂದುವರೆದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ನದಿ, ಹಳ್ಳ-ಕೊಳಗಳು ತುಂಬಿ ಹರಿಯುತ್ತಿದ್ದು, ಮನೆ ಹಾಗೂ ಜಮೀನುಗಳಿಗೆ ನೀರು‌ ನುಗ್ಗಿದೆ. ಮನೆಯಲ್ಲಿನ ನೀರನ್ನು ಹೊರಹಾಕಲು ರೂಪನಗುಡಿ ರಸ್ತೆ, ವಡ್ಡರಬಂಡೆ, ಬಳ್ಳಾರಪ್ಪ ಕಾಲೋನಿಯ ಜನ ಹರಸಾಹಸ ಪಡುತ್ತಿದ್ದಾರೆ.

Advertisement
Advertisement
Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಿಡಿಲು ಬಡಿದು ಇಬ್ಬರು ರೈತರು ಸಾವು"

Leave a comment

Your email address will not be published.


*