MIRROR FOCUS

ಹೀಗೊಂದು ಸೇವೆ… ನಮಗೂ-ನಿಮಗೂ ಮಾಡಬಹುದು…!

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಕೃಷಿಕರ ತೋಟದಲ್ಲಿಬಿದ್ದು ಹಾಳಾಗುವ , ಗ್ರಾಮೀಣ ಭಾಗದಲ್ಲಿ ಬಳಕೆಯಾಗದ ಹಲವು ಕೃಷಿ ಉತ್ಪನ್ನಗಳು ಇವೆ. ಆದರೆ ಇದೆಲ್ಲವೂ ನಗರದಲ್ಲಿ ಬೇಡಿಕೆ ಇದೆ, ಇನ್ನೊಂದು ಕಡೆ ತೀರಾ ಅಗತ್ಯದ ವಸ್ತುವಾಗುತ್ತದೆ. ಹಾಗಾದರೆ ಇದನ್ನು ಲಿಂಕ್‌ ಮಾಡುವವರು ಯಾರು..? ಹೇಗೆ..?. ಇಲ್ಲೊಂದು ಕಡೆ ಸೇವಾ ಕಾರ್ಯದ ರೂಪದಲ್ಲಿ ಈ ಕೆಲಸ ನಡೆಯುತ್ತಿದೆ. ಇತರ ಕಡೆಗೂ ಇದೊಂದು ಮಾದರಿ ಕೆಲಸ.…… ಮುಂದೆ ಓದಿ……

Advertisement

ಬಂಟ್ವಾಳ ತಾಲೂಕಿನ ಪುಣಚದಲ್ಲಿ ಒಂದು ತಂಡ ಇದೆ. ಇವರು ಕೃಷಿಕರ ತೋಟದಲ್ಲಿರುವ ಹಲಸು, ಬಾಳೆ ಹಾಗೂ ಇತರ ವಸ್ತುಗಳನ್ನು ಸಂಗ್ರಹಿಸಿ ಒಂದು ವಾಹನದಲ್ಲಿ ತುಂಬಿ ಆಶ್ರಮಗಳಿಗೆ ಕಳುಹಿಸುವ ಕೆಲಸವನ್ನು ಕಳೆದ ಮೂರು ವರ್ಷಗಳಿಂದ ಮಾಡುತ್ತಿದ್ದಾರೆ. ಕನ್ಯಾನ, ದೈಗೋಳಿ ಆಶ್ರಮ ಹಾಗೂ ಇತರ ಕೆಲವು ಅಗತ್ಯ ಇರುವ ಕಡೆ ತಮ್ಮದೇ ಖರ್ಚಿನಲ್ಲಿ ಕಳುಹಿಸುತ್ತಿದ್ದಾರೆ. ಯಾವುದೇ ರಾಸಾಯನಿಕ ಗೊಬ್ಬರ ಅಥವಾ ಔಷಧಿ ಸ್ಪ್ರೇ ಮಾಡದೆ ಇರುವ ಏಕೈಕ ತರಕಾರಿ ಅಂದರೆ ಅದು ಹಲಸು. ಇದು ಪ್ರಕೃತಿ ನೀಡಿದ ಅತ್ಯಂತ ದೊಡ್ಡ ಕೊಡುಗೆ, ಆದರೆ ಎಲ್ಲವನ್ನೂ ಕೃಷಿಕನಿಗೆ ಬಳಕೆ ಮಾಡಲು ಸಾಧ್ಯವಾಗುವುದಿಲ್ಲ. ಹಲಸು ಮೌಲ್ಯವರ್ಧನೆ ಅಥವಾ ಹಲಸು ಆದಾಯ ತರುವಂತಹ ಕೆಲಸಗಳು ನಡೆಯುತ್ತಿದ್ದರೂ ಗ್ರಾಮೀಣ ಭಾಗದಲ್ಲಿ ಅಷ್ಟ ಮಟ್ಟಿಗಿನ ಕೆಲಸವೂ ಆಗಿಲ್ಲ. ಆದರೆ ವ್ಯರ್ಥವಾಗುವ ಅಥವಾ ಕೃಷಿಕರಿಗೆ ಬಳಕೆ ಮಾಡಿ ಉಳಿಯುವ ಹಲಸು ಸೇವಾಶ್ರಮಗಳಿಗೆ ಅಗತ್ಯ ಇದೆ. ಸೇವಾ ಆಶ್ರಮದಲ್ಲಿ ಆಶ್ರಯ ಪಡೆದಿರುವ ವ್ಯಕ್ತಿಗಳಿಗೆ ಯಾವಾಗಲಾದರೊಮ್ಮೆ ಲಭ್ಯವಾಗುವ ಹಲಸು ವಿಶೇಷವಾದ ಆಹಾರವಾಗುತ್ತದೆ. ಅಲ್ಲಿ ಸಾಕುವ ದನಗಳಿಗೆ ಇದು ಅತ್ಯುತ್ತಮ ಆಹಾರವೂ ಆಗುತ್ತದೆ. ಹಣ್ಣು ಇದ್ದಲ್ಲಿ ತಿನ್ನಲು ಮತ್ತು ತಿಂಡಿ ಮಾಡಲು ಉಪಯೋಗ ಮಾಡುತ್ತಾರೆ. ಬೆಳೆದದ್ದು ಉಪ್ಪು ಸೊಳೆ ಹಾಕಿ ಶೇಖರಣೆ ಮಾಡಿ ಇಡುತ್ತಾರೆ. ಅದರಲ್ಲಿ ಉಳಿದ ಭಾಗ ರೆಚ್ಚೆ ಮತ್ತು ಹಲಸಿನ ಬೀಜ ದನಗಳಿಗೆ ಬೇಯಿಸಿ ಹಾಕಲಾಗುತ್ತೆ. ಹೀಗಾಗಿ ಹಲಸಿನಲ್ಲಿ ಎಸೆಯುವ ಯಾವ ಅಂಶಗಳೂ ಇಲ್ಲ. ಈ ಕಾರಣದಿಂದ ಊರಿನಿಂದ ಹಲಸು ಸಂಗ್ರಹಿಸಿ ವಾಹನದಲ್ಲಿ ಕಳುಹಿಸುವ ಕೆಲಸ ನಡೆಯುತ್ತದೆ.ಇದರ ನೇತೃತ್ವವನ್ನು ಸಹಕಾರಿ ಕ್ಷೇತ್ರದಲ್ಲಿ ಸಕ್ರಿವಾಗಿರುವ ದೇವಿಪ್ರಸಾದ್‌ ಪುಣಚ ವಹಿಸಿಕೊಂಡಿದ್ದರು. ಕಳೆದ ಮೂರು ವರ್ಷಗಳಿಂದ ಈ ಸೇವಾ ಕಾರ್ಯ ನಡೆಯುತ್ತಿದೆ. ಪುಣಚ ಗ್ರಾಮದಿಂದ ಎರಡು ಪಿಕಪ್ ಹಲಸು, ತೆಂಗಿನ ಕಾಯಿ, ಬಾಳೆಗೊನೆ ಕನ್ಯಾನ ಭಾರತ್ ಸೇವಾಶ್ರಮಕ್ಕೆ ಈಗಾಗಲೇ ತಲುಪಿಸಲಾಗಿದೆ.

ಈ ಸೇವಾ ಕಾರ್ಯವನ್ನು ನಮ್ಮೂರಿನ ಒಂದು ತಂಡದ ಮೂಲಕ ನಾವೆಲ್ಲರೂ ಜೊತೆ ಸೇರಿ ಮಾಡುತ್ತೇವೆ. ಊರಿನ ಜನರೂ,ಕೃಷಿಕರೂ ಸಹಕಾರ ನೀಡುತ್ತಾರೆ. ನಮ್ಮಲ್ಲಿ ಯಾವುದೇ ಉಪಯೋಗ ಇಲ್ಲದೆ ಹಲಸು ವ್ಯರ್ಥವಾಗುತ್ತದೆ. ಮಳೆಗಾಲ ಬಾಳೆಗೊನೆಗಳಿಗೂ ಉತ್ತಮ ಧಾರಣೆ ಕೃಷಿಕರಿಗೆ ಸಿಗುತ್ತಿಲ್ಲ. ಹೀಗಾಗಿ ಎಲ್ಲಾ ಸೇರಿಸಿ ಉಪಯೋಗವಾಗುವ ಕಡೆ ಉಚಿತವಾಗಿ ನೀಡುವ ಕೆಲಸ ಮಾಡುತ್ತಿದ್ದೇವೆ.ಇದರಲ್ಲಿ ಒಂದು ಖುಷಿ-ನೆಮ್ಮದಿ ಕಾಣುತ್ತೇವೆ ಎನ್ನುತ್ತಾರೆ ದೇವಿಪ್ರಸಾದ್‌ ಪುಣಚ.

ಇದೇ ಮಾದರಿಯಲ್ಲಿ ನಮ್ಮ ಊರಿನಲ್ಲೂ ನಾವು ಮಾಡಬಹುದಾದ ಸೇವಾ ಕಾರ್ಯ ಇದು.  ಊರಿನ ಆಸು ಪಾಸಿನಲ್ಲಿರುವ ಸೇವಾ ಆಶ್ರಮ, ಶಾಲೆಗಳು, ದೇವಸ್ಥಾನಗಳಿಗೆ, ಗೋಶಾಲೆಗಳಿಗೆ ಪೂರೈಕೆ ಮಾಡುವ ಮೂಲಕ ವ್ಯರ್ಥವಾಗುವ ಒಂದು ವಸ್ತುವನ್ನು ಬಳಕೆಯಾಗುವಂತೆ ಮಾಡಬಹುದಾಗಿದೆ.ಈ ನಿಟ್ಟಿನಲ್ಲಿ ಇದೊಂದು ಮಾದರಿ ಸೇವೆ.

Advertisement

In recent times, an increasing number of farmers have embarked on a commendable initiative to distribute jackfruit free of charge to their local communities. This philanthropic gesture is largely driven by an abundant harvest, which often results in surplus produce that could otherwise go to waste. By offering jackfruit for free, farmers not only help in reducing food wastage but also promote the nutritional benefits of this tropical fruit.The distribution effort further aids in raising awareness about jackfruit’s versatility as a food source, encouraging more people to incorporate it into their meals. Farmers have also reported positive social impacts, as this initiative fosters a stronger sense of community and goodwill among residents.The free distribution of jackfruit by farmers illustrates an exemplary model of resource management and community engagement.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಮುಂದಿನ 7 ದಿನಗಳ ಉತ್ತಮ ಮಳೆ – ಹವಾಮಾನ ಇಲಾಖೆ

ಮುಂದಿನ ಏಳು ದಿನಗಳ ಕಾಲ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಕೆಲವು ಕಡೆ ಭಾರೀ…

2 hours ago

ತೆಂಗು ಉತ್ಪಾದನೆ ಹೆಚ್ಚಿಸಲು‌ ಕೇರಳದಲ್ಲಿ ಪ್ಲಾನ್‌ | ಹೊಸ ಕೋರ್ಸ್‌ ಅಭಿವೃದ್ಧಿಪಡಿಸಲು ಚಿಂತನೆ |

ಇತಿಹಾಸದಲ್ಲಿ ಮೊದಲ ಬಾರಿಗೆ ಕೇರಳ ಕೊಬ್ಬರಿ ಆಮದು ಮಾಡಿಕೊಳ್ಳುವ ಸಾಧ್ಯತೆ ಇದೆ.ತೆಂಗಿನಕಾಯಿ ಉತ್ಪಾದನೆಯಲ್ಲಿ…

2 hours ago

ಶ್ರಾವಣ ಮಾಸದಲ್ಲಿ ಮೊಸರನ್ನು ತಿನ್ನಬಾರದಂತೆ ಯಾಕೆ?

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

3 hours ago

ಹೆದ್ದಾರಿಗಳಲ್ಲಿ ಹಸಿರು ಅಭಿಯಾನ | 4.78 ಕೋಟಿಗೂ ಹೆಚ್ಚು ಗಿಡಗಳ ನಾಟಿ

ದೇಶದಲ್ಲಿ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಮತ್ತು ರಾಷ್ಟ್ರೀಯ ಹೆದ್ದಾರಿಗಳನ್ನು ಹೆಚ್ಚು ಪರಿಸರ…

12 hours ago

ಪ್ರತಿಯೊಂದು  ಗ್ರಾಮ ಪಂಚಾಯಿತಿಯಲ್ಲಿ  ಕರ್ನಾಟಕ ಪಬ್ಲಿಕ್ ಶಾಲೆ ನಿರ್ಮಾಣ

ಗ್ರಾಮೀಣ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಆಧುನಿಕ ಮೂಲಭೂತ…

13 hours ago

ದಾವಣಗೆರೆ ನಗರ ಸೇರಿದಂತೆ ಜಿಲ್ಲೆಯಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ಬಳಕೆ ನಿಷೇಧ

ದಾವಣಗೆರೆ ನಗರ ಸೇರಿದಂತೆ ಜಿಲ್ಲಾದ್ಯಂತ ಏಕ ಬಳಕೆಯ ಪ್ಲಾಸ್ಟಿಕ್ ಬಳಕೆ ಮತ್ತು ಮಾರಾಟವನ್ನು…

13 hours ago