MIRROR FOCUS

#CauveryWater| ರಾಜ್ಯದಿಂದ ತಮಿಳುನಾಡಿಗೆ ಹರಿದ ಕಾವೇರಿ ನೀರು | ರೈತರ ಆಕ್ರೋಶ, ಬಿಜೆಪಿಯಿಂದ ಬೃಹತ್ ಪ್ರತಿಭಟನೆಗೆ ನಿರ್ಧಾರ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಪ್ರತೀ ವರ್ಷ  ಕಾವೇರಿ ನೀರು ವಿಚಾರವಾಗಿ ಕರ್ನಾಟಕ ಹಾಗೂ ತಮಿಳುನಾಡು ವೈಮನಸ್ಸು ಇದ್ದೇ ಇರುತ್ತದೆ. ಸುಪ್ರೀಂ ಕೋರ್ಟ್‌ ನಿಂದ ಅಂತಿಮ ತೀರ್ಪು ಬಂದರು ಈ ರಗಳೆಗೆ ಕೊನೆಯೇ ಇಲ್ಲ. ರಾಜ್ಯದಲ್ಲಿ ಕಾವೇರಿ ಕಿಚ್ಚು ಜೋರಾಗುತ್ತಿದೆ. ತಮಿಳುನಾಡಿಗೆ  ಕೆಆರ್​ಎಸ್​ ಡ್ಯಾಂನಿಂದ  ನೀರು ಬಿಟ್ಟಿದ್ದಕ್ಕೆ ಸರ್ಕಾರದ ವಿರುದ್ಧ ಬಿಜೆಪಿ, ಜೆಡಿಎಸ್‌ ನಾಯಕರು ಕಿಡಿಕಾರುತ್ತಿದ್ದಾರೆ. ಸರ್ಕಾರ ಕೂಡಲೇ ಸರ್ವಪಕ್ಷ ಸಭೆ ಕರೆಯಲು ಒತ್ತಾಯಿಸಿದ್ದಾರೆ.

Advertisement

ಹಿನ್ನೆಲೆ ಕಾಂಗ್ರೆಸ್ ಸರ್ಕಾರ ಸರ್ವಪಕ್ಷ ಸಭೆ ಕರೆಯಲು ಮುಂದಾಗಿದೆ. ಇನ್ನು ಈ ಕುರಿತು ಮಾತನಾಡಿರುವ ಡಿಸಿಎಂ ಡಿ.ಕೆ ಶಿವಕುಮಾರ್, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಪ್ರತಿಭಟನೆ ಮಾಡುವ ಹಕ್ಕಿದೆ. ಪ್ರತಿಭಟನೆ ಮಾಡಲಿ ಆದರೆ, ಅವರ ನಾಯಕರು ಯಾರು ತಿಳಿಸಿ ಪ್ರತಿಭಟನೆ ಮಾಡಲಿ ಅಂತ ಬಿಜೆಪಿಗೆ ಟಾಂಗ್‌ ಕೊಟ್ಟಿದ್ದಾರೆ. ತಮಿಳುನಾಡಿಗೆ ಕೆಆರ್​​ಎಸ್​​ ಡ್ಯಾಂನಿಂದ ನೀರು ಬಿಟ್ಟಿದ್ದಕ್ಕೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಸರ್ಕಾರದ ವಿರುದ್ಧ ಬಿಜೆಪಿ ಕಾವೇರಿ ಅಸ್ತ್ರವನ್ನು ಪ್ರಯೋಗಿಸಲು ಮುಂದಾಗಿದೆ. ಮಂಡ್ಯದ ಬಿಜೆಪಿ ಕಚೇರಿಯಲ್ಲಿ ಮೈಸೂರು ವಿಭಾಗದ ಪದಾಧಿಕಾರಿಗಳ ಸಭೆ ನಡೆಸಲಾಯಿತು. ಸಭೆಯಲ್ಲಿ ಮಂಡ್ಯ ಸಂಸದೆ ಸುಮಲತಾ ಸೇರಿದಂತೆ ಚಾಮರಾಜನಗರ, ಹಾಸನ,‌ ರಾಮನಗರ ಜಿಲ್ಲೆಗಳ ಬಿಜೆಪಿ ಪರಾಜಿತ ಅಭ್ಯರ್ಥಿಗಳು ಭಾಗವಹಿಸಿದ್ದರು. ಮುಂದಿನ ದಿನಗಳಲ್ಲಿ ಹೋರಾಟ ರೂಪರೇಷ ಬಗ್ಗೆ ಚರ್ಚಿಸಲಾಯಿತು.

ತಮಿಳುನಾಡಿಗೆ ಸರ್ಕಾರ ನೀರು ಬಿಡ್ತಿರೋ ಬಗ್ಗೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್, ನೀರಿನ ಸಮಸ್ಯೆ ಒಂದು ಸರ್ಕಾರದ, ಒಂದು ಪಕ್ಷದ ಸಮಸ್ಯೆಯಲ್ಲ, ಸರ್ವಪಕ್ಷ ಸಭೆ ಕರೆದು ಚರ್ಚಿಸಿ ಸಮಸ್ಯೆಗೆ ಪರಿಹಾರ ಕೊಡಬೇಕು ಅಂತ ಹೇಳಿದರು. ಕಾವೇರಿ ವಿಚಾರದ ಹೋರಾಟ ರಾಜಕೀಯ ಹೋರಾಟ ಅಲ್ಲ. ನಾವು ಎಲ್ಲರೂ ರೈತರ ಪರ ಹೋರಾಟ ಮಾಡಬೇಕಿದೆ. ಸಾಕಷ್ಟು ವರ್ಷಗಳಿಂದ ಕಾವೇರಿ ವಿಚಾರ ತಮಿಳುನಾಡು ಪರವಾಗೆ ತೀರ್ಪುಗಳು ಬರ್ತಿದೆ. ಹಿಂದಿನಿಂದಲೂ ನಮ್ಮ ರೈತರಿಗೆ ಅನ್ಯಾಯ ಆಗ್ತಾ ಇದೆ. ಈ ಬಗ್ಗೆ ಸರ್ಕಾರ ಯಾಕೆ ಹೋರಾಟ ಮಾಡ್ತಿಲ್ಲ ಅಂತ ಪ್ರಶ್ನೆ ಮಾಡಬೇಕಾಗಿದೆ.

ಕಾವೇರಿ ವಿಚಾರ ಬರಿ ಮಂಡ್ಯಕ್ಕೆ ಸೀಮಿತವಾಗಿಲ್ಲ. ಕಾವೇರಿ ಕೊಳ್ಳದ ರಾಮನಗರ, ಬೆಂಗಳೂರು, ಮೈಸೂರು ಭಾಗದ ಎಲ್ಲರ ಜವಾಬ್ದಾರಿಯಾಗಿದೆ. ಪ್ರಾಧಿಕಾರದ ಸೂಚನೆಯಂತೆ ಕಾವೇರಿ ನೀರು ಹರಿಸಲಾಗ್ತಿದೆ ಇದರಲ್ಲಿ ರಾಜ್ಯ ಸರ್ಕಾರದ ಪಾತ್ರ ಇಲ್ಲ, ಇವರು  ಹಾಗಾದ್ರೆ ಕೇಂದ್ರ ಸರ್ಕಾರದ ಪಾತ್ರ ಇದೆ ಅಂತ ಅವರು ಹೇಳುವುದರಲ್ಲಿ ಏನು ಅರ್ಥ ಇದೆ?

Advertisement

ಕೇಂದ್ರ ಸರ್ಕಾರದ ಕೈಯಲ್ಲಿ ಕಾವೇರಿ ಕೀ ಇದ್ದಿದ್ದರೆ ಹಿಂದೆ ಅಂಬರೀಶ್ ಅವರು ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುವ ಅವಶ್ಯಕತೆ ಇರ್ತಿರಲಿಲ್ಲ. ಇಲ್ಲಿ ಮಳೆ ಆಗಿಲ್ಲ ಅಂದ ತಕ್ಷಣ ತಮಿಳುನಾಡಿನವರು ಆ್ಯಕ್ಟೀವ್​ ಆಗಿ ನೀರು ಕೇಳ್ತಾರೆ. ಆದರೆ ಇಲ್ಲಿ ನಮ್ಮವರು ಆ ರೀತಿ ಆ್ಯಕ್ಟೀವ್​ ಆಗಿ ಮಾಹಿತಿ ನೀಡೋದು ಅವರ ಜವಾಬ್ದಾರಿ. ಆದರೆ ಮಾಹಿತಿ ನೀಡುವುದರಲ್ಲಿ ನಮ್ಮವರ ನಿರ್ಲಕ್ಷ್ಯ ಇದೆ ಸಂಸದೆ ಸುಮಲತಾ ಕಿಡಿ ಕಾರಿದರು.

Advertisement

ಡಿಸಿಎಂ ಡಿ.‌ಕೆ‌. ಶಿವಕುಮಾರ್ ಸ್ವಕ್ಷೇತ್ರ ಕನಕಪುರದಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟ ಪ್ರತಿಭಟನೆ ನಡೆಸಿತು. ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿದ್ದಕ್ಕೆ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ಹೊರ ಹಾಕಿದರು.

Source : Digital Media

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಕಾವೇರಿ ನದಿ ನೀರು ಮಲಿನ ತಡೆಯಲು ಕ್ರಮ | ಅಸ್ತಿ ವಿಸರ್ಜನೆ ಮಾಡದಂತೆ ಸೂಚನೆ

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಕಾವೇರಿ ನದಿ ತೀರದಲ್ಲಿ ಅಸ್ತಿ ವಿಸರ್ಜನೆ ಮಾಡಿ ನದಿ…

3 hours ago

ಸ್ವಾತಂತ್ರ್ಯಕ್ಕಾಗಿ ಮದುವೆ

ಕುಟುಂಬ ಎಂಬುದು ಸಮಾಜದ ಆಧಾರ ಸ್ಥಂಭ. ಮದುವೆ ಎಂಬುದು ಈ ಸ್ಥಂಭದ ತಳಪಾಯ.…

3 hours ago

ಅಡಿಕೆ ಕೊಳೆರೋಗ | ಸಿಎಂ ಜೊತೆ ಶಾಸಕ ಅಶೋಕ್ ಕುಮಾರ್ ರೈ ಚರ್ಚೆ

ದ ಕ ಜಿಲ್ಲೆಯಲ್ಲಿ ಅಡಿಕೆಗೆ ಕೊಳೆರೋಗ ಭಾದಿಸಿದ್ದು ಇದರಿಂದ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ…

9 hours ago

ಹವಾಮಾನ ವರದಿ | 14-08-2025 | ಆ.20 ರವರೆಗೂ ಮಳೆ -ತುಂತುರು ಮಳೆ

15.08.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…

9 hours ago

ಸಗಣಿಯಿಂದ 5500 ಕಿಮೀ ಮಾಲಿನ್ಯ ರಹಿತ ಪ್ರಯಾಣ..!

ಒಂದು ಹಸುವಿನ ಸಗಣಿಯಿಂದ ಪ್ರತಿ ವರ್ಷ 225 ಲೀಟರ್ ಪೆಟ್ರೋಲ್‌ಗೆ ಸಮಾನವಾದ ಮೀಥೇನ್…

16 hours ago

ಬಾಗಿಲು ಇಲ್ಲದ ಮನೆಯಂತಾದ ಕನ್ನಡ ಸ್ಥಿತಿ : ರಾಘವೇಶ್ವರ ಶ್ರೀ

ಕನ್ನಡದ ಸ್ಥಿತಿ ಇಂದು ಬೇಲಿ ಇಲ್ಲದ ತೋಟದಂತೆ, ಬಾಗಿಲಿಲ್ಲದ ಮನೆಯಂತಾಗಿದ್ದು, ನಾಲಿಗೆ ಶುದ್ಧೀಕರಣ,…

17 hours ago