ಮಳೆಗಾಲ ಆರಂಭ ಆಯ್ತು… | ತರಕಾರಿ ಬೆಳೆಯಲು ಸರಿಯಾದ ಸಮಯ | ಬೆಳೆಗಳನ್ನು ಬೆಳೆಯಿರಿ, ತರಕಾರಿ ಸವಿಯಿರಿ….ಆದಾಯ ಗಳಿಸಿ..!

June 21, 2024
1:57 PM

ಮುಂಗಾರು ಮಳೆಯ(Monsoon Season) ಆಗಮನವಾಗಿದೆ. ಕೃಷಿ ಚಟುವಟಿಕೆಗಳನ್ನು(Agriculture Activities) ಆರಂಭ ಮಾಡಲು ಸರಿಯಾದ ಸಮಯ.  ತಜ್ಞರ ಪ್ರಕಾರ, ಖಾರಿಫ್ ಬೆಳೆಗಳನ್ನು(Kharif crop) ಬಿತ್ತನೆ ಮಾಡಲು ಈ ತಿಂಗಳು ತುಂಬಾ ಒಳ್ಳೆಯದು. ಇದರೊಂದಿಗೆ ಈ ಮಳೆಗಾಲದ ಸೀಸನ್‌ನಲ್ಲಿ(Rainy Season) ಬೆಳೆಯುವ ಕೆಲವೊಂದು ತರಕಾರಿಗಳೂ ಇವೆ. ಮಳೆಗಾಲದಲ್ಲಿ ತರಕಾರಿ ಬೆಳೆಯನ್ನು(Vegetable Farming) ಬೆಳೆದರೆ, ರಾಸಾಯನಿಕ ರಹಿತ ತರಕಾರಿಯ ಮೂಲಕ ತರಕಾರಿ ಸವಿ ಸವಿದು, ಆ ಬಳಿಕ ಆದಾಯ(income) ಗಳಿಸುವುದು ಖಂಡಿತಾ. ಹೀಗಾಗಿ ಮಳೆಗಾಲದಲ್ಲಿ ಬೆಳೆಯುವಂತಹ ಕೆಲವೊಂದು ಬೆಳೆಗಳ ಕುರಿತು ಒಂದಷ್ಟು ಮಾಹಿತಿ ಇಲ್ಲಿದೆ.

ಸಾಮಾನ್ಯವಾಗಿ ಅನೇಕ ರೈತರು ಯಾವ ಸಮಯದಲ್ಲಿ ಯಾವ ಬೆಳೆಗಳನ್ನು ಬೆಳೆಯಬೇಕು ಎಂಬುದರ ಅರಿವು ಇಲ್ಲದೇ ಯಾವ್ಯಾವ ಸೀಸನ್‌ನಲ್ಲಿ ಬೆಳೆಯಲಾರದ ಬೆಳೆಗಳನ್ನು ಬಿತ್ತನೆ ಮಾಡಿ ನಷ್ಟ ಅನುಭವಿಸುತ್ತಾರೆ. ಚಳಿಗಾಲ, ಮಳೆಗಾಲ, ಬೇಸಿಗೆಕಾಲ ಹೀಗೆ ಒಂದೊಂದು ಸೀಸನ್‌ನಲ್ಲಿ ಆ ಸೀಸನ್‌ನಲ್ಲಿ ಬೆಳೆಯುವ ಬೆಳೆಗಳನ್ನು ಬೆಳೆದರೆ ಮಾತ್ರ ಲಾಭ ಗಳಿಸಲು ಸಾಧ್ಯ. ಹೀಗಾಗಿ ಇಂದು ಕಡಿಮೆ ಸಮಯದಲ್ಲಿ ದೊಡ್ಡದಾಗಿ ಬೆಳೆದು ರೈತರಿಗೆ ಹೆಚ್ಚು ಲಾಭ ಕೊಡುವ ಬೆಳೆಗಳ ಬಗ್ಗೆ ತಿಳಿದುಕೊಳ್ಳೋಣ.

ಮಳೆಗಾಲದಲ್ಲಿ ಯಾವುದೇ ಬೆಳೆಗಳಿಗೆ ನೀರುಣಿಸುವ ಅಗತ್ಯ ಕಂಡು ಬರುವುದಿಲ್ಲ. ಹೀಗಾಗಿ ಈ ಹಂಗಾಮಿನಲ್ಲಿ ರೈತರು ಮೆಣಸಿನಕಾಯಿ ಮತ್ತು ಕೊತ್ತಂಬರಿ ಬೆಳೆಯಬಹುದು. ಈ ಬೆಳೆಗಳು ಮಾನ್ಸೂನ್ ಸಮಯದಲ್ಲಿ ಬಹಳ ವೇಗವಾಗಿ ಬೆಳೆಯುತ್ತವೆ. ಇದಲ್ಲದೆ, ಅವರಿಗೆ ಹೆಚ್ಚಿನ ನಿರ್ವಹಣೆಯ ಅಗತ್ಯವಿಲ್ಲ. ಈ ಎರಡೂ ಬೆಳೆಗಳಿಗೆ ಮರಳು ಮಿಶ್ರಿತ ಲೋಮ್ ಅಥವಾ ಕೆಂಪು ಮಣ್ಣು ಬೇಕಾಗುತ್ತದೆ.

ಇನ್ನು, ರೈತರು ಮಳೆಗಾಲದಲ್ಲಿ ಸೌತೆಕಾಯಿ ಮತ್ತು ಮೂಲಂಗಿ ಬೆಳೆಯುವ ಮೂಲಕ ಉತ್ತಮ ಲಾಭ ಗಳಿಸಬಹುದು. ಈ ಎರಡು ಬೆಳೆಗಳನ್ನು ಬಿತ್ತಲು ಹೆಚ್ಚು ಸ್ಥಳಾವಕಾಶದ ಅಗತ್ಯ ಬೇಕಾಗಿಲ್ಲ. ಎರಡೂ ಬೆಳೆಗಳು ಕೇವಲ ಮೂರ್ನಾಲ್ಕು ವಾರಗಳಲ್ಲಿ ತಯಾರಾಗಿ ರೈತರಿಗೆ ಉತ್ತಮ ಇಳುವರಿಯ ಜೊತೆಗೆ ಕೈ ತುಂಬಾ ಲಾಭವನ್ನೂ ಸಹ ನೀಡುತ್ತವೆ.

ಬದನೆ ಮತ್ತು ಟೊಮೆಟೊವನ್ನು ವರ್ಷದ ಯಾವುದೇ ಋತುವಿನಲ್ಲಿ ಬೆಳೆಯಬಹುದು. ಚಳಿಗಾಲದಲ್ಲಿಯೂ ಅವುಗಳನ್ನು ಬೆಳೆಸಬಹುದು. ಮಳೆಗಾಲದಲ್ಲೂ ಅವುಗಳನ್ನು ಬಿತ್ತಿದರೆ ಬಂಪರ್ ಉತ್ಪಾದನೆ ಸಾಧ್ಯ. ಹೇಳಿ ಕೇಳಿ ಕಳೆದ ಒಂದು ವಾರದಿಂದ ಟೊಮೆಟೋ ಬೆಲೆ ನೂರರ ಗಡಿ ದಾಟಿದೆ. ಇಂತಹ ಸಮಯದಲ್ಲಿ ಟೊಮೆಟೋ ಬೆಳೆದರೆ ನೀವು ಕೈತುಂಬಾ ಆದಾಯ ಗಳಿಸಬಹುದು.

Advertisement

ಜುಲೈ ಮತ್ತು ಆಗಸ್ಟ್ ತಿಂಗಳುಗಳು ಬೀನ್ಸ್ ಕೃಷಿಗೆ ಉತ್ತಮ ಸಮಯವಾಗಿದೆ. ಈ ಎರಡೂ ಗಿಡಗಳು ಬಳ್ಳಿಗಳು, ಆದ್ದರಿಂದ ಅವುಗಳನ್ನು ಮರ ಅಥವಾ ಗೋಡೆಯ ಬೆಂಬಲದೊಂದಿಗೆ ನೆಡಬೇಕು. ಮಳೆಗಾಲದಲ್ಲಿ ಅವುಗಳ ಹಣ್ಣುಗಳು ಚೆನ್ನಾಗಿ ಬೆಳೆಯುತ್ತವೆ. ಇವುಗಳಲ್ಲದೆ, ಪಾಲಕ್ ಮತ್ತು ಸೋರೆಕಾಯಿ ಇಂತಹ ತರಕಾರಿಗಳಾಗಿದ್ದು, ಮಳೆಗಾಲದಲ್ಲಿ ಸುಲಭವಾಗಿ ಮತ್ತು ಕಡಿಮೆ ವೆಚ್ಚದಲ್ಲಿ ಕೃಷಿ ಮಾಡಬಹುದು. ಎರಡು ಬೆಳೆಗಳಿಗೂ ಲೋಮಿ ಮಣ್ಣು ಸೂಕ್ತವಾಗಿದೆ.

ಇನ್ನು ನೀವು ಮಳೆಗಾಲದಲ್ಲಿ ತೊಂಡೆಕಾಯಿ ಕೃಷಿ ಮಾಡಿ ಕೈ ತುಂಬಾ ಆದಾಯ ಗಳಿಸಬಹುದು. ಅಂದಹಾಗೆ ತೊಂಡೆಕಾಯಿ ಯಾವುದೇ ಸೀಸನ್‌ನಲ್ಲಿಯೂ ಬೆಳೆಯುತ್ತದೆ. ಕಮ್ಮಿ ನೀರಾವರಿ ಮತ್ತು ಸ್ವಲ್ಪ ನಿರ್ವಹಣೆಯ ಅಗತ್ಯವಿದೆ. ಮಳೆಗಾಲದಲ್ಲಿ ನೀರಿನ ಅಗತ್ಯವಿಲ್ಲ. ತೊಂಡೆಕಾಯಿ ಗಿಡವನ್ನು ಚೆನ್ನಾಗಿ ನೋಡಿಕೊಂಡರೆ ಎರಡ್ಮೂರು ವರ್ಷಗಳ ಕಾಲ ನಿರಂತರ ಆದಾಯ ಗಳಿಸುತ್ತಿರಬಹುದು. ತೊಂಡೆಕಾಯಿಗೆ ರೇಟ್ ಏನು ಕಡಿಮೆ ಇದೆ ಅಂದ್ಕೊಂಡ್ರಾ.!

ಆದರೆ ನೀವು ಈ ವಿಷಯಗಳಿಗೆ ವಿಶೇಷ ಗಮನ ಕೊಡಬೇಕು.

  1. ನಿಮ್ಮ ಬೆಳೆಗೆ ಸರಿಯಾದ ಬೀಜವನ್ನು ಆರಿಸಿ.
  2. ಬೇಸಾಯ ಮಾಡುವ ಮುನ್ನ ಮಣ್ಣಿನ ಪರೀಕ್ಷೆ ಮಾಡಿಕೊಳ್ಳಿ.
  3. ಕಳೆ ನಿಯಂತ್ರಣ ಮತ್ತು ನೀರಾವರಿ ಬಗ್ಗೆ ಕಾಳಜಿ ವಹಿಸಿ.
  4. ನಿಮ್ಮ ಬೆಳೆಗೆ ವಿಮೆ ಮಾಡಿಸಿ.
  5. ಸಮಯಕ್ಕೆ ಸರಿಯಾಗಿ ಕೊಯ್ಲು ಮಾಡಿ ಮತ್ತು ನಿಮ್ಮ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಿ.

ಈ ಅಂಶಗಳನ್ನು ತಪ್ಪದೇ ಫಾಲೋ ಮಾಡಬೇಕು.

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಬಂಟ್ವಾಳ : ನಾವೂರು ಪೋಯಿಲೊಡಿಯಲ್ಲಿ ಏಣಿಗಳ ವಿತರಣೆ
November 16, 2025
10:18 AM
by: ದ ರೂರಲ್ ಮಿರರ್.ಕಾಂ
ಸುಳ್ಯ, ಅಜ್ಜಾವರ : ಕೃಷಿ ಸಖಿಯರ ಮೂಲಕ ರೈತರಿಗೆ ಏಣಿಗಳ ವಿತರಣೆ
November 16, 2025
10:16 AM
by: ದ ರೂರಲ್ ಮಿರರ್.ಕಾಂ
ಒಣಹುಲ್ಲು ಸುಡುವಿಕೆ ತಡೆಯಲು ವಿವರಣೆ ಕೇಳಿದ ಸುಪ್ರೀಂ ಕೋರ್ಟ್
November 16, 2025
10:05 AM
by: ರೂರಲ್‌ ಮಿರರ್ ಸುದ್ದಿಜಾಲ
ಶರಾವತಿ ಪಂಪ್ ಸ್ಟೋರೇಜ್ ಗೆ ತಡೆ
November 16, 2025
9:52 AM
by: ರೂರಲ್‌ ಮಿರರ್ ಸುದ್ದಿಜಾಲ

You cannot copy content of this page - Copyright -The Rural Mirror