“ನಮ್ಮ ಪೂರ್ವಜರು ಸುಮಾರು 20ನೇ ಶತಮಾನದ 40ರ ದಶಕದವರೆಗೆ ಸೃಷ್ಟಿ ದೇವತೆಯು ತೋರಿಸಿಕೊಟ್ಟಂತೆ ರೈತರು(Farmer) ಬೇಸಾಯ ಪದ್ದತಿಗಳನ್ನು ಅಂದರೆ ಸಾವಯವ ಬೇಸಾಯ ಪದ್ದತಿಗಳನ್ನು(Organic Farming System) ಅನುಸರಿಸುತ್ತಿದ್ದರು. ಆದರೆ ಇತರ ದಿನಗಳಲ್ಲಿ ಮಾನವರು(Human)) ಸೃಷ್ಟಿ ನಿಯಮಕ್ಕೆ ವಿರುದ್ಧವಾಗಿ ನಡೆದು ಸಜೀವಿಗಳು (ಸಸ್ಯಗಳು, ಪ್ರಾಣಿಗಳು) ಬದುಕಿ, ಬಾಳಿ, ಸುಖ, ಶಾಂತಿ, ಸಂತೃಪ್ತಿ ಪಡೆಯಲು ಬೇಕಾದ ನೆಲ, ಆಕಾಶ, ಜಲ, ಅಗ್ನಿ, ಮತ್ತು ಗಾಳಿ ಇವುಗಳನ್ನು ಪೂರ್ತಿ ಮಾಲಿನ್ಯವಾಗುವಂತೆ(Pollution)ವರ್ತಿಸುತ್ತಿದ್ದಾರೆ. ತತ್ಪರಿಣಾಮವಾಗಿ ಬೇಸಾಯ ಕ್ಷೀಣವಾಗಿದೆ.
ಪರಿಸರವನ್ನು ಮಾಲಿನ್ಯಗೊಳಿಸುವಲ್ಲಿ ಬೇಸಾಯದಲ್ಲಿ ರಾಸಾಯನಿಕ ಗೊಬ್ಬರಗಳನ್ನು ಹಾಗೂ ಬೆಳೆಗಳಿಗೆ ಹಾನಿ ಉಂಟು ಮಾಡುವ ಪಿಡುಗುಗಳನ್ನು ನಾಶ ಮಾಡಲು ವಿಷಕಾರಿ ರಾಸಾಯನಿಕ ಪಿಡುಗುನಾಶಕಗಳನ್ನು ಹೆಚ್ಚು ಹೆಚ್ಚು ಉಪಯೋಗ ಮಾಡಿದುದೇ ಇದಕ್ಕೆ ಪ್ರಮುಖ ಅಂಶವಾಗಿದೆ. ರಾಸಾಯನಿಕ ಗೊಬ್ಬರಗಳು ಹಾಗೂ ವಿಷಕಾರಿ ರಾಸಾಯನಿಕ ಪಿಡುಗುನಾಶಕಗಳನ್ನು ಉಪಯೋಗ ಮಾಡುತ್ತಿರುವುದರಿಂದ ಮಾನವನ ಆಹಾರಕ್ಕಾಗಿ ಬಳಸುವ ಹಣ್ಣುಗಳು, ತರಕಾರಿಗಳು, ತೃಣಧಾನ್ಯಗಳು, ಬೇಳೆಕಾಳುಗಳು, ಎಣ್ಣೆಕಾಳುಗಳು ವಿಷಮಯವಾಗಿವೆ. ಈಗಿನ ಕಾಲಕ್ಕೆ ಒಂದರ್ಥದಲ್ಲಿ ಮಾನವನ ಆಹಾರವೆಲ್ಲವೂ ವಿಷಮಯವಾಗಿವೆ.”
ಪೋಷಕಾಂಶಗಳಾದ ಇಂಗಾಲ, ಆಮ್ಲಜನಕ ಮತ್ತು ಜಲಜನಕಗಳನ್ನು ಈಗಾಗಲೇ ಹೇಳಿದಂತೆ ಸಸ್ಯಗಳು ವಾತಾವರಣದಿಂದಲೇ ( ಗಾಳಿ ಮತ್ತು ನೀರಿನಿಂದ) ಪಡೆಯುತ್ತವೆ. ಇನ್ನುಳಿದ 13 ಪೋಷಕಾಂಶಗಳನ್ನು ಸಸ್ಯಗಳು ತಮ್ಮ ಬೇರಿನ ಮುಖಾಂತರ ಮಣ್ಣಿನಿಂದ ಪಡೆಯುತ್ತವೆ.”
“ತಿಪ್ಪೆ ಗುಂಡಿಯ ಮೇಲೆ ಬಿಸಿಲು, ಮಳೆ, ಗಾಳಿಗಳ ದುಷ್ಪರಿಣಾಮವನ್ನು ತಪ್ಪಿಸಲು ಬಹಳ ವೆಚ್ಚ ಮಾಡದೆ, ಒಂದು ಚಪ್ಪರವನ್ನು ಹಾಕುವುದು ಒಳಿತು. ಯಾಕೆಂದರೆ ತಿಪ್ಪೆ ಗುಂಡಿಯ ಮೇಲೆ ಮಳೆ, ಬಿಸಿಲು ಬಿದ್ದರೆ, ಆ ತಿಪ್ಪೆ ಗುಂಡಿಯಲ್ಲಿರುವ ಸಾರಜನಕವು ನೈಟ್ರೇಟ್ ಆಗಿ ಹಾರಿಹೋಗುವ ಸಂಭವವಿರುತ್ತದೆ.” ” ಮೃಗ ಪಂಚಕ ಮಳೆಗಾಲದ ಮೃಗಶಿರಾ, ಆರಿದ್ರಾ, ಪುನರ್ವಸು, ಪುಷ್ಯ, ಮತ್ತು ಆಶ್ಲೇಷಾ ಈ 5 ಮಳೆಗಳ ಅವಧಿಗೆ ಮುಂಗಾರು ಹಂಗಾಮು ಎಂದು ಕರೆಯುತ್ತಾರೆ.
ಮಘ ಪಂಚಕ ಮಳೆಗಳಾದ ಮಘಾ, ಉತ್ತರೆ, ಹಸ್ತ, ಚಿತ್ತ, ಮತ್ತು ಸ್ವಾತಿ ಈ 5 ಮಳೆಗಳ ಅವಧಿಗೆ ಹಿಂಗಾರು ಹಂಗಾಮು ಎಂದು ಕರೆಯುತ್ತಾರೆ. ”
ಕಳೆದ ಒಂದು ವಾರದಲ್ಲಿ ಚಾರ್ಮಾಡಿ ಘಾಟ್ನಲ್ಲಿ ಉಂಟಾದ ಎರಡನೇ ಕಾಡ್ಗಿಚ್ಚು ಪ್ರಕರಣ ಇದಾಗಿದೆ.…
ಅಡಿಕೆ ಆಮದು ವ್ಯವಹಾರದಲ್ಲಿ ತಪ್ಪು ಮಾಹಿತಿ ನೀಡಿ ವಿದೇಶದಿಂದ ಕಳ್ಳಸಾಗಾಣಿಕೆ ಮಾಡುತ್ತಿದ್ದ ಪ್ರಕರಣದಲ್ಲಿ ತೂತುಕುಡಿಯ…
ಸಾರಡ್ಕದ ಆರಾಧನಾ ಕಲಾಭವನದಲ್ಲಿ ಜ.26 ರಂದು ಕೃಷಿ ಹಬ್ಬ ನಡೆಯಲಿದೆ.ಬೆಳಗ್ಗೆ ಉದ್ಘಾಟನೆಗೊಳ್ಳುವ ಕೃಷಿ…
ಆಮದು ಸುಂಕವನ್ನು ತಪ್ಪಿಸಲು ಹುರಿದ ಅಡಿಕೆಯನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಹುರಿದ ಅಡಿಕೆಯ ಆಮದು…
ಇತ್ತೀಚಿನ ಅಧ್ಯಯನಗಳ ಪ್ರಕಾರ, ಭಾರತವು ಜಾಗತಿಕವಾಗಿ ಪ್ಲಾಸ್ಟಿಕ್ ತ್ಯಾಜ್ಯದ ಅಗ್ರ ಉತ್ಪಾದಕ ಎಂದು…
115 ವರ್ಷಗಳ ಇತಿಹಾಸ ಇರುವ ಹಾಗೂ ರಾಜ್ಯದಲ್ಲಿ ನಿರ್ಮಾಣವಾದ ಮೊದಲ ಜಲಾಶಯ ವಾಣಿವಿಲಾಸ…