ಹೊಸದೊಂದು ವಂಚನಾ ಜಾಲ | ಫಾಸ್ಟ್ ಟ್ಯಾಗ್ ಮೂಲಕ 80 ಲಕ್ಷ ಹಣ ಲಪಟಾಯಿಸಿ ವಂಚನೆ | ವಂಚನಾ ಜಾಲ ಬೇಧಿಸಿದ ಪೋಲಿಸರು |

Advertisement
Advertisement

ಕ್ರೆಡಿಟ್‌ ಕಾರ್ಡ್‌ (Credit Card) ಸೇವೆಗಳನ್ನು ಸಕ್ರಿಯಗೊಳಿಸುವ ಹೆಸರಿನಲ್ಲಿ ಫಾಸ್ಟ್‌ ಟ್ಯಾಗ್ (Fast Tag)  ಮೂಲಕ ಹಣ ಲಪಟಾಯಿಸಿ ವಂಚಿಸುತ್ತಿದ್ದ ವಂಚಕರ ತಂಡವನ್ನು ದೆಹಲಿ ಪೊಲೀಸ್ ಕ್ರೈಂ ಬ್ರಾಂಚ್‌ ಬಂಧಿಸಿದೆ.‌ ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಬಂಧಿಸಲಾಗಿದ್ದು, ಅವರಲ್ಲಿದ್ದ ಐಷಾರಾಮಿ ವಾಹನಗಳು, ಲ್ಯಾಪ್‌ಟಾಪ್‌, ಮೊಬೈಲ್‌ ಫೋನ್‌ಗಳು, ಕಾರ್ಡ್‌ ಸ್ವೈಪ್‌ ಯಂತ್ರ, ಸಿಮ್‌ ಕಾರ್ಡ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಕೇವಲ ಒಂದು ತಿಂಗಳ ಅವಧಿಯಲ್ಲಿ ಈ ಆರೋಪಿಗಳು 80 ಲಕ್ಷ ರೂ.ಗಳನ್ನು ಲಪಟಾಯಿಸಿದ್ದಾರೆ.

Advertisement

ವಂಚನಾ ಜಾಲದ ಒಬ್ಬ ಸದಸ್ಯ ಬ್ಯಾಂಕ್ ಅಧಿಕಾರಿಯಂತೆ ಕಾರ್ಯನಿರ್ವಹಿಸುವ ಮೂಲಕ ಕ್ರೆಡಿಟ್ ಕಾರ್ಡ್‌ಗಳು ಮತ್ತು ಇತರ ಸೇವೆಗಳನ್ನು ಸಕ್ರಿಯಗೊಳಿಸುವ ನೆಪದಲ್ಲಿ ಜನರನ್ನು ವಂಚಿಸುತ್ತಿದ್ದರು. ಇನ್ನೊಬ್ಬ ಗ್ರಾಹಕರು ನೀಡಿದ  ಬ್ಯಾಂಕ್ ವಿವರಗಳನ್ನು ಬಳಸಿಕೊಂಡು ಫಾಸ್ಟ್‌ಟ್ಯಾಗ್ ವ್ಯಾಲೆಟ್ ಅನ್ನು ರಚಿಸಿ ಆ ಮೂಲಕ ಹಣ ವಂಚನೆ ಮಾಡುತ್ತಿದ್ದರು. ಆರಂಭದಲ್ಲಿ  ಕ್ರೆಡಿಟ್‌ ಕಾರ್ಡ್‌ ಲಿಮಿಟ್‌ ಹೆಚ್ಚು ಮಾಡುವುದು  ಸೇರಿದಂತೆ ಇತರ ವಿಚಾರಗಳ ಬಗ್ಗೆ ಕರೆ ಮಾಡುತ್ತಾ ಮಾಹಿತಿ ಪಡೆಯುತ್ತಿದ್ದರು.

Advertisement
Advertisement

ವಂಚನೆ ಹೇಗೆ ? : ವಂಚನಾ ಜಾಲದ ಸದಸ್ಯರೊಬ್ಬರು ಹೊಸ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಕರೆ ಮಾಡುತ್ತಾರೆ ಮತ್ತು ಬ್ಯಾಂಕ್ ಅಧಿಕಾರಿಯಂತೆ ನಟಿಸುವ ಮೂಲಕ ಅಗತ್ಯ ಮಾಹಿತಿಯನ್ನು ಪಡೆಯುತ್ತಾರೆ. ಬ್ಯಾಂಕ್ ವಿವರಗಳನ್ನು ಸಂಗ್ರಹಿಸಿದ  ನಂತರ, ವಂಚನಾ ಜಾಲದ ಇತರ ಸದಸ್ಯರು  ಫಾಸ್ಟ್‌ಟ್ಯಾಗ್ ವ್ಯಾಲೆಟ್ ಅನ್ನು ರಚಿಸುತ್ತಾರೆ. ಸ್ಕ್ಯಾಮರ್‌ಗಳು ಕದ್ದ ಮಾಹಿತಿಯನ್ನು ಬಳಸಿಕೊಂಡು ಫಾಸ್ಟ್‌ಟ್ಯಾಗ್ ವ್ಯಾಲೆಟ್‌ಗೆ ಹಣವನ್ನು ಜಮೆ ಮಾಡುತ್ತಾರೆ ಮತ್ತು ನಂತರ ಇ-ವ್ಯಾಲೆಟ್‌ನಿಂದ ಹಣವನ್ನು ಹೊರತೆಗೆಯುತ್ತಿದ್ದರು. ಈ ವಂಚನಾ ಜಾಲವನ್ನು ಬೇಧಿಸಲು ಪೊಲೀಸರಿಗೂ ಕಷ್ಟವಾಗಿತ್ತು. ಅತ್ಯಂತ ತಾಂತ್ರಿಕವಾಗಿ ಈ ಜಾಲವನ್ನು ವಂಚಕರು ರಚಿಸಿದ್ದರು.

ಹೆಚ್ಚಿನ ಫಾಸ್ಟ್‌ಟ್ಯಾಗ್ ಲಿಂಕ್ ಮಾಡಿದ ಇ-ವ್ಯಾಲೆಟ್‌ಗಳು ಸ್ವಯಂಚಾಲಿತ ರೀಚಾರ್ಜ್ ವ್ಯವಸ್ಥೆ ಇರುವುದರಿಂದ  ಸ್ಕ್ಯಾಮರ್‌ಗಳು  ಜನರನ್ನು ಸುಲಭವಾಗಿ ವಂಚಿಸಿದ್ದರು.

Advertisement
Advertisement

ಇದೀಗ ಹೊಸ ಮಾದರಿಯ ವಂಚನಾ ಜಾಲಗಳು ಕೂಡಾ ಬೆಳಕಿಗೆ ಬರುತ್ತಿದೆ. ಹೀಗಾಗಿ  ಬ್ಯಾಂಕ್ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ನೀವು ಇ-ವ್ಯಾಲೆಟ್‌ಗಳು ಮತ್ತು ಫಾಸ್ಟ್‌ಟ್ಯಾಗ್ ಅನ್ನು ಬಳಸುತ್ತಿದ್ದರೆ, ನೀವು ಆಗಾಗ ಪರಿಶೀಲನೆ ಮಾಡುತ್ತಿರಬೇಕು. ವ್ಯತ್ಯಾಸಗಳು ಕಂಡುಬಂದರೆ ತಕ್ಷಣವೇ ಸಂಬಂಧಿತ ಇಲಾಖೆ ಹಾಗೂ ಬ್ಯಾಂಕ್‌ ಸಂಪರ್ಕ ಮಾಡಬೇಕು. ಫಾಸ್ಟ್‌ ಟ್ಯಾಗ್‌ ನಂತರ ಸ್ವಯಂ ಚಾಲಿತ (Auto debit-auto credit )  ವ್ಯವಸ್ಥೆಗಳನ್ನು ಮಾಡಿದ್ದರೆ ಆಗಾಗ ಪರಿಶೀಲನೆ ಅತೀ ಅಗತ್ಯ.

 

Advertisement
Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಹೊಸದೊಂದು ವಂಚನಾ ಜಾಲ | ಫಾಸ್ಟ್ ಟ್ಯಾಗ್ ಮೂಲಕ 80 ಲಕ್ಷ ಹಣ ಲಪಟಾಯಿಸಿ ವಂಚನೆ | ವಂಚನಾ ಜಾಲ ಬೇಧಿಸಿದ ಪೋಲಿಸರು |"

Leave a comment

Your email address will not be published.


*