ಫೆಬ್ರವರಿಯಲ್ಲಿ ಬಿಸಿಲಿನ ತಾಪದ ಎಚ್ಚರಿಕೆ | ಗೋಧಿ ಸೇರಿ 10 ಕ್ಕೂ ಹೆಚ್ಚು ಬೆಳೆಗಳಿಗೆ ಹಾನಿ ಸಾಧ್ಯತೆ..!

February 2, 2026
6:39 AM

ಫೆಬ್ರವರಿ ಆರಂಭವಾಗುತ್ತಿದ್ದಂತೆ ದೇಶದ ಹಲವು ಭಾಗಗಳಲ್ಲಿ ತಾಪಮಾನ ಏರಿಕೆ ಕಾಣಿಸಿಕೊಂಡಿದ್ದು, ರಬಿ ಬೆಳೆಗಳಿಗೆ ಗಂಭೀರ ಅಪಾಯ ಉಂಟಾಗುವ ಸಾಧ್ಯತೆ ಇದೆ. ಗೋಧಿ ಸೇರಿದಂತೆ 10ಕ್ಕೂ ಹೆಚ್ಚು ಪ್ರಮುಖ ಬೆಳೆಗಳು ಈ ಹೆಚ್ಚುವರಿ ಬಿಸಿಯಿಂದ ಹಾನಿಗೊಳಗಾಗಬಹುದು ಎಂದು ಭಾರತ ಹವಾಮಾನ ಇಲಾಖೆ (IMD) ಎಚ್ಚರಿಸಿದೆ.

ರಾಜಸ್ಥಾನ ಹೊರತುಪಡಿಸಿ ವಾಯುವ್ಯ ರಾಜ್ಯಗಳು ಫೆಬ್ರವರಿಯಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯೊಂದಿಗೆ ಹೆಚ್ಚು ತಾಪಮಾನದ ನಿರೀಕ್ಷೆಯಿದೆ. ರಾಜ್ಯವಾರು ಮುನ್ಸೂಚನೆ ನೀಡದಿದ್ದರೂ, ಅತಿಯಾದ ಬಿಸಿಯು ಗೋಧಿ ಉತ್ಪಾದನೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.

ಗೋಧಿಗೆ ಸೂಕ್ತ ತಾಪಮಾನ ಎಷ್ಟು? : ಕರ್ನಾಲ್‌ನ ಭಾರತೀಯ ಗೋಧಿ ಮತ್ತು ಬಾರ್ಲಿ ಸಂಶೋಧನಾ ಸಂಸ್ಥೆ (IIWBR) ಯ ಮಾಜಿ ನಿರ್ದೇಶಕ ಜ್ಞಾನೇಂದ್ರ ಸಿಂಗ್ ಅವರ ಪ್ರಕಾರ, ಗೋಧಿಗೆ ರಾತ್ರಿ ಸೂಕ್ತ ತಾಪಮಾನ ,12 ಡಿಗ್ರಿ ಹಾಗೂ ಹಗಲಿನ ಸೂಕ್ತ ತಾಪಮಾನ: 25 ಡಿಗ್ರಿ.  ಹಗಲಿನ ತಾಪಮಾನ 30 ಡಿಗ್ರಿಗೆ ಗೆ ಏರಿ ಒಂದು ವಾರಕ್ಕಿಂತ ಕಡಿಮೆ ಕಾಲ ಇದ್ದರೆ ದೊಡ್ಡ ಅಪಾಯವಿಲ್ಲ. ಆದರೆ ಹಗಲು-ರಾತ್ರಿ ಎರಡೂ ತಾಪಮಾನಗಳು ಹೆಚ್ಚಾಗಿ ಒಂದು ವಾರಕ್ಕಿಂತ ಹೆಚ್ಚು ಕಾಲ ಮುಂದುವರೆದರೆ ಇಳುವರಿಯಲ್ಲಿ ಗಣನೀಯ ಕುಸಿತ ಕಾಣಬಹುದು ಎಂದು ಎಚ್ಚರಿಸಿದ್ದಾರೆ.

2025-26ನೇ ಸಾಲಿಗೆ ಸರ್ಕಾರವು 119 ಮಿಲಿಯನ್ ಟನ್ ಗೋಧಿ ಉತ್ಪಾದನಾ ಗುರಿ ಹೊಂದಿದ್ದು, ಕೊಯ್ಲು ಏಪ್ರಿಲ್‌ನಲ್ಲಿ ನಡೆಯಲಿದೆ. ಈ ವರ್ಷ ಗೋಧಿ ಬಿತ್ತನೆ ಪ್ರದೇಶವು 334.17 ಲಕ್ಷ ಹೆಕ್ಟೇರ್ . ಕಳೆದ ವರ್ಷ 328.04 ಲಕ್ಷ ಹೆಕ್ಟೇರ್ ಇತ್ತು. ಈ ಬಾರಿ ಶೇ.2ರಷ್ಟು ಹೆಚ್ಚಳವಾಗಿದೆ. 2024-25ರಲ್ಲಿ ಗೋಧಿ ಉತ್ಪಾದನೆ ದಾಖಲೆಯ 117.54 ಮಿಲಿಯನ್ ಟನ್ ಆಗಿತ್ತು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಹವಾಮಾನ ಇಲಾಖೆ  ಪ್ರಕಾರ, ಫೆಬ್ರವರಿಯಲ್ಲಿ ಹೆಚ್ಚುವರಿ ಬಿಸಿಲಿನ ತಾಪಮಾನದ ಬೆಳವಣಿಗೆಯು ಸುಗ್ಗಿ ಅವಧಿಯನ್ನು ಕಡಿಮೆ ಮಾಡುತ್ತದೆ. ಇದರಿಂದ ಧಾನ್ಯ ಸರಿಯಾಗಿ ಬೆಳೆದೇ ಇಳುವರಿ ಕಡಿಮೆಯಾಗುತ್ತದೆ. ಸಾಸಿವೆ, ಕಡಲೆ, ಮಸೂರ, ಬಟಾಣಿ ಮೊದಲಾದ ಬೆಳೆಗಳು ಬೇಗನೆ ಹೂಬಿಟ್ಟು ಅಕಾಲಿಕವಾಗಿ ಪಕ್ವವಾಗುವ ಸಾಧ್ಯತೆ ಇದೆ. ಇದರ ಪರಿಣಾಮವಾಗಿ ಹಣ್ಣು ಮತ್ತು ಬೀಜಗಳು ಚಿಕ್ಕದಾಗುತ್ತವೆ, ಇಳುವರಿ ಕಡಿಮೆಯಾಗುತ್ತದೆ. ಇದಲ್ಲದೆ ಬೆಚ್ಚಗಿನ ವಾತಾವರಣವು ಗಿಡಹೇನು ಮತ್ತು ಕೀಟಗಳ ತ್ವರಿತ ಹರಡುವಿಕೆಗೆ ಕಾರಣವಾಗಬಹುದು.

ಹೆಚ್ಚಿನ ತಾಪಮಾನದಿಂದ ಈರುಳ್ಳಿ, ಬೆಳ್ಳುಳ್ಳಿ ಬಲ್ಕಿಂಗ್ ಕಡಿಮೆಯಾಗುತ್ತದೆ, ಆಲೂಗಡ್ಡೆಯಲ್ಲಿ ಗೆಡ್ಡೆ ಗಾತ್ರ ಕುಗ್ಗುತ್ತದೆ, ಟೊಮೆಟೊ ಹೂವು ಉದುರುತ್ತದೆ, ಹೂಕೋಸು, ಎಲೆಕೋಸು ಗುಣಮಟ್ಟ ಕುಸಿಯುತ್ತದೆ ಇದು ಮಾರುಕಟ್ಟೆ ಮೌಲ್ಯಕ್ಕೂ ಹೊಡೆತ ನೀಡಬಹುದು ಎಂದು ಹೇಳಿದೆ.

ತೋಟಗಾರಿಕೆ ಬೆಳೆಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದ್ದು ಮಾವು, ಸಿಟ್ರಸ್, ಬಾಳೆ, ದ್ರಾಕ್ಷಿ ಬೆಳೆಗಳಲ್ಲಿ ಬೇಗ ಹೂಬಿಡುವಿಕೆ,  ಅಸಮರ್ಪಕ ಹಣ್ಣು ಬಿಡುವಿಕೆ, ಹಣ್ಣು ಉದುರುವಿಕೆ, ಸೇಬು, ಪೇರಳೆ, ಪೀಚ್‌ಗಳಂತಹ ಶೀತ ಪ್ರದೇಶದ ಬೆಳೆಗಳಲ್ಲಿ ಅನಿಯಮಿತ ಹೂಬಿಡುವಿಕೆ ಮತ್ತು ಕಳಪೆ ಹಣ್ಣು ಬೆಳವಣಿಗೆ ಸಾಧ್ಯತೆ ಇದೆ.

ಇಂತಹ ಸಮಯದಲ್ಲಿ ತಜ್ಞರು ರೈತರಿಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಸಲಹೆ ನೀಡಿದ್ದಾರೆ. ತಾಪಮಾನ ಮುನ್ಸೂಚನೆಗಳನ್ನು ನಿರಂತರ ಗಮನಿಸುವುದು, ಹೆಚ್ಚುವರಿ ನೀರಾವರಿ ವ್ಯವಸ್ಥೆ ಸಿದ್ಧಪಡಿಸುವುದು, ಕೀಟನಿಯಂತ್ರಣ ಕ್ರಮಗಳನ್ನು ಬಲಪಡಿಸುವುದು, ಕೃಷಿ ವಿಜ್ಞಾನ ಕೇಂದ್ರಗಳ ಮಾರ್ಗದರ್ಶನ ಪಡೆಯುವುದು ಅಗತ್ಯವಾಗಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 12.09.2026 | ಸೆ.15ರಿಂದ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆ ಚುರುಕು? ಕರಾವಳಿ–ಮಲೆನಾಡಿನಲ್ಲಿ ಸದ್ಯ ಬಿಸಿಲಿನ ವಾತಾವರಣ
September 12, 2026
12:52 PM
by: ಸಾಯಿಶೇಖರ್ ಕರಿಕಳ
ಹಸುವಿನ ಹಾಲಿಗೆ ಬದಲಾಗಿ ‘ಲ್ಯಾಬ್‌ ಹಾಲು’ – ಇನ್ನು ಕೇವಲ ವಿಜ್ಞಾನಕಲ್ಪನೆ ಅಲ್ಲ..! ಹೊಸ ಅಧ್ಯಯನದ ಲೆಕ್ಕಾಚಾರ
September 12, 2026
7:30 AM
by: ದ ರೂರಲ್ ಮಿರರ್.ಕಾಂ
ಅಡಿಕೆಗೆ ಉತ್ತಮ ಬೆಲೆ , ಆದರೂ ಬೆಳೆಗಾರರ ಚಿಂತೆ ಮುಂದುವರಿದಿದೆ – ಕಾರಣವೇನು?
September 12, 2026
7:08 AM
by: ದ ರೂರಲ್ ಮಿರರ್.ಕಾಂ
ಚಂಡಮಾರುತಗಳು ಏಕೆ ಕಡಿಮೆಯಾಗುತ್ತಿವೆ? ಎಲ್ ನಿನೋದಿಂದ ಮಳೆ–ಬಿಸಿಲಿನ ಚಿತ್ರಣ ಬದಲಾಗುತ್ತಿದೆಯೇ?
September 11, 2026
8:34 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror