ನಿವೃತ್ತ ಶಿಕ್ಷಕರಿಗೆ ಅಭಿವಂದನೆ | ಸೈನಿಕರು ದೇಶ ರಕ್ಷಿಸಿದರೆ ಶಿಕ್ಷಕರು ದೇಶ ಕಟ್ಟುವವರು : ಟಿ.ನಾರಾಯಣ ಭಟ್ |

Advertisement
Advertisement

ಪುತ್ತೂರಿನ ಭಾರತೀಯ ಜೀವ ವಿಮಾ ನಿಗಮದ ಅಭಿವೃದ್ಧಿ ಅಧಿಕಾರಿ ಬಾಲಕೃಷ್ಣ ಕೆ.ಆರ್. ಹಾಗೂ ಅವರ ಪ್ರತಿನಿಧಿಗಳ ಬಳಗದಿಂದ ಪುತ್ತೂರು ಹಾಗೂ ಕಡಬ ತಾಲೂಕಿನ ನಿವೃತ್ತ ಶಿಕ್ಷಕರಿಗೆ ‘ಗುರುವಂದನಾ ಕಾರ್ಯಕ್ರಮ’ ನಗರದ ಸೈನಿಕ ಭವನದಲ್ಲಿ ಗುರುವಾರ ನಡೆಯಿತು.

Advertisement

ಕಾರ್ಯಕ್ರಮವನ್ನು ಉದ್ಘಾಟಿಸಿದ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಟಿ. ನಾರಾಯಣ ಭಟ್ ರಾಮಕುಂಜ ಮಾತನಾಡಿ ಸೈನಿಕರು ದೇಶ ರಕ್ಷಿಸುವವರಾದರೆ ಶಿಕ್ಷಕರು ರಾಷ್ಟ್ರ ಕಟ್ಟುವವರು ಎಂದರಲ್ಲದೆ ಜೀವ ವಿಮಾ ನಿಗಮ ಬದುಕಿಗೆ ಭದ್ರತೆ ಒದಗಿಸುವ ಕಾರ್ಯ ಮಾಡುತ್ತದೆ. ನಾವು ತೊಡಗಿಸಿದ ಹಣ ನಮಗೂ ಸುಭದ್ರತೆ ನೀಡುವುದರೊಂದಿಗೆ ದೇಶದ ಮೂಲಭೂತ ಸೌಕರ್ಯ ಹಾಗೂ ಅಭಿವೃದ್ಧಿಗೂ ಅನುಕೂಲವಾಗುತ್ತದೆ ಎಂದು ತಿಳಿಸಿದರು.

Advertisement
Advertisement
ಜೀವವಿಮಾ ಅಭಿವೃದ್ಧಿ ಅಧಿಕಾರಿ ಬಾಲಕೃಷ್ಣ ಕೆ.ಆರ್. ಅವರು ಮಾತನಾಡಿ ಉತ್ತಮ ಸಮಾಜಕ್ಕೆ ಕಾರಣರಾದ ನಿವೃತ್ತ ಶಿಕ್ಷಕರನ್ನು ಗೌರವಿಸುವುದು ಪುಣ್ಯಕಾರ್ಯ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಗರದ ಭಾರತೀಯ ಜೀವ ವಿಮಾ ನಿಗಮದ ಮುಖ್ಯ ಪ್ರಬಂಧಕ ಬಾಲಕೃಷ್ಣ ಡಿ. ಮಾತನಾಡಿ ದೇಶದಲ್ಲಿ ಅತಿ ದೊಡ್ಡ ಸಂಖ್ಯೆಯಲ್ಲಿರುವ ಶಿಕ್ಷಕರ ಸಮೂಹ ಎಲ್.ಐ.ಸಿ ಸಂಸ್ಥೆಯೊಂದಿಗೆ ನಿಕಟ ಸಂಪರ್ಕ ಹೊಂದಿದೆ. ಎಲ್.ಐ.ಸಿ ಎಂಬುದು ಸಮಾಜಕ್ಕೆ ಆರ್ಥಿಕ ಭದ್ರತೆ ನೀಡುವ ಸಂಸ್ಥೆ. ಸದಾ ಉತ್ತಮ ಸೇವೆಯೊಂದಿಗೆ ಜೀವವಿಮಾ ಪ್ರತಿನಿಧಿಗಳು ಸಮಾಜಮುಖಿ ಕಾರ್ಯದಲ್ಲಿ ತೊಡಗಿದ್ದಾರೆ ಎಂದರು.

Advertisement
Advertisement
ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್. ಶುಭಕೋರಿದರು. ಈ ಸಂದರ್ಭದಲ್ಲಿ ಭಾರತೀಯ ಜೀವ ವಿಮಾ ನಿಗಮದ ಉಪಪ್ರಬಂಧಕ ಗುರುರಾಜ್ ಎಂ.ಯು. ಭಾರತೀಯ ಜೀವ ವಿಮಾ ನಿಗಮದಲ್ಲಿ ಹೂಡಿಕೆ ಹಾಗೂ ಉಳಿತಾಯ ಯೋಜನೆಗಳ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ 35 ಮಂದಿ ವಿಶ್ರಾಂತ ಶಿಕ್ಷಕರಿಗೆ “ಗುರುವಂದನೆ” ಸಲ್ಲಿಸಲಾಯಿತು. ಸನ್ಮಾನ ಸ್ವೀಕರಿಸಿದ ನಿವೃತ್ತ ಶಿಕ್ಷಕರಲ್ಲಿ ಒಬ್ಬರಾದ ಉಪ್ಪಿನಂಗಡಿ ಮಾದರಿ ಶಾಲೆಯ ಪದವೀಧರೇತರ ಮುಖ್ಯ ಶಿಕ್ಷಕಿ ದೇವಕಿ ಹಾಗೂ ರಾಜ್ಯ ಪ್ರಶಸ್ತಿ ವಿಜೇತ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ದಯಾನಂದ ರೈಯವರು ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿದರು.

Advertisement

ಜೀವವಿಮಾ ಪ್ರತಿನಿಧಿ ನಾರಾಯಣ ಗೌಡ ಸ್ವಾಗತಿಸಿದರು. ಪ್ರತಿನಿಧಿ ಆನಂದ ಗೌಡˌ ರಾಮಕುಂಜ ವಂದಿಸಿದರು. ನಿವೃತ್ತ ಮುಖ್ಯ ಶಿಕ್ಷಕಿ ಹಾಗೂ ಪ್ರಸ್ತುತ ಜೀವವಿಮಾ ಪ್ರತಿನಿಧಿ ಯಶೋದಾ ಕೆ.ಎಸ್. ಮತ್ತು ಪ್ರತಿನಿಧಿ ಶುಕಲತಾ  ಕಾರ್ಯಕ್ರಮ ನಿರ್ವಹಿಸಿದರು. ಪ್ರತಿನಿಧಿಗಳಾದ ವಿದ್ಯಾˌ ಪ್ರೇಮಾˌ ರಾಘವೇಂದ್ರˌ ಸುಬ್ರಹ್ಮಣ್ಯ ಭಟ್, ವಿಷ್ಣುಭಟ್, ವಸಂತಗೌಡ, ಪ್ರಶಾಂತ ಭಂಡಾರಿ, ಪ್ರಸಾದ್ ಬಿ, ಸಂಧ್ಯಾ ಬಿ, ಅನುಷ ಹಾಗೂ ಅಭಿವೃದ್ಧಿ ಅಧಿಕಾರಿ ಬಾಲಕೃಷ್ಣ ಕೆ.ಆರ್. ಬಳಗದ ಪ್ರತಿನಿಧಿ ಮಿತ್ರರು ಸಹಕರಿಸಿದರು.

Advertisement
Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ನಿವೃತ್ತ ಶಿಕ್ಷಕರಿಗೆ ಅಭಿವಂದನೆ | ಸೈನಿಕರು ದೇಶ ರಕ್ಷಿಸಿದರೆ ಶಿಕ್ಷಕರು ದೇಶ ಕಟ್ಟುವವರು : ಟಿ.ನಾರಾಯಣ ಭಟ್ |"

Leave a comment

Your email address will not be published.


*