ಉತ್ತರ ಪ್ರದೇಶದ ಮೈನ್‌ಪುರಿ ಜಿಲ್ಲೆಯ ಕೃಷಿಭೂಮಿಯಲ್ಲಿ ಆಕಸ್ಮಿಕ ಉತ್ಖನನದ ಸಂದರ್ಭ ಸುಮಾರು 4,000 ವರ್ಷಗಳ ಹಿಂದಿನ ದೊಡ್ಡ ಸಂಖ್ಯೆಯ ತಾಮ್ರದ ಕತ್ತಿಗಳು ಪತ್ತೆಯಾಗಿದೆ.
ಮೈನ್ ಪುರಿ ಜಿಲ್ಲೆಯ ರೈತ ತನ್ನ ಹೊಲವನ್ನು ಸಮತಟ್ಟು ಮಾಡುತ್ತಿದ್ದನು. ಈ ಸಂದರ್ಭ ತಾಮ್ರದ ಕತ್ತಿಗಳು ಪತ್ತೆಯಾಗಿತ್ತು. ಆರಂಭದಲ್ಲಿ, ರೈತರು ಈ ಕಲಾಕೃತಿಗಳನ್ನು ಚಿನ್ನ ಮತ್ತು ಬೆಳ್ಳಿಯೆಂದು ಭಾವಿಸಿ ಮನೆಗೆ ಕೊಂಡು ಹೋಗಿದ್ದರು. ಆದರೆ ಈ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದ ಬಳಿಕ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಗೆ ಮಾಹಿತಿ ನೀಡಲಾಯಿತು.
ತಜ್ಞರ ಪ್ರಕಾರ, ಆಯುಧಗಳನ್ನು ತಾಮ್ರದ ಯುಗಕ್ಕೆ ಅಂದರೆ ಸರಿಸುಮಾರು 4,000 ವರ್ಷಗಳ ಹಿಂದೆ ಗುರುತಿಸಬಹುದು. “ಈ ತಾಮ್ರದ ಶೇಖರಣೆಗಳು ಚಾಲ್ಕೋಲಿಥಿಕ್ ಅವಧಿಗೆ ಸೇರಿವೆ ಮತ್ತು ಓಕ್ರೆ-ಬಣ್ಣದ ಕುಂಬಾರಿಕೆ (OCP) ಉಪಸ್ಥಿತಿಯು ಈ ಸಮಯದೊಂದಿಗೆ ನೇರವಾಗಿ ಸಂಬಂಧಿಸಿದೆ” ಎಂದು ಪುರಾತತ್ವ ನಿರ್ದೇಶಕ ಭುವನ್ ವಿಕ್ರಮ್ ಮಾಧ್ಯಮಗಳಿಗೆ ಹೇಳಿದರು.
ಪುರಾತತ್ವ ಇಲಾಖೆಯ ಶಾಸ್ತ್ರಜ್ಞ ರಾಜ್ ಕುಮಾರ್, “ಆಯುಧಗಳ ದಾಸ್ತಾನು ಗಮನಿಸಿದಾಗ ಜನರು ಹೋರಾಟದಲ್ಲಿ ತೊಡಗಿಸಿಕೊಂಡಿರುವುದನ್ನು ಸೂಚಿಸುತ್ತದೆ ಮತ್ತು ಅಂತಹ ಹೋರಾಟಗಳು ಅಂದು ಭೂಮಿ ಅಥವಾ ಹಕ್ಕುಗಳಿಗಾಗಿ ದೊಡ್ಡ ಗುಂಪುಗಳ ನಡುವೆ ಇದ್ದಿರಬಹುದು ಎಂದರು.

ಮಿರರ್ ಡೆಸ್ಕ್ – ಮಿರರ್ ನ್ಯೂಸ್ ನೆಟ್ವರ್ಕ್
Be the first to comment on "ಹೊಲದಲ್ಲಿ ಹೂತಿಟ್ಟ 4,000 ವರ್ಷಗಳಷ್ಟು ಹಳೆಯದಾದ ತಾಮ್ರದ ಆಯುಧಗಳು ಪತ್ತೆ….!"