Advertisement
MIRROR FOCUS

ಭಕ್ತಾದಿಗಳೇ ಎಚ್ಚರ..!, ಕುಕ್ಕೆಗೆ ಬಂದು ಎಲ್ಲೆಂದರಲ್ಲಿ ಕಸ ಎಸೆಯಬೇಡಿ – ಈಗ ಕಸ ಎಸೆದರೆ ದಂಡ ಖಚಿತ

Share

ಭಕ್ತಾದಿಗಳೇ ಎಚ್ಚರ, ಇನ್ನು ಮುಂದೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದು ಎಲ್ಲೆಂದರಲ್ಲಿ ಪ್ಲಾಸ್ಟಿಕ್‌, ಕಸ ಎಸೆದರೆ, ಕುಮಾರಧಾರಾ ನದಿಗೆ ತ್ಯಾಜ್ಯ ಎಸದರೆ ದಂಡ ಖಚಿತ.  ಈಗಾಗಲೇ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಶುಚಿತ್ವದ ಕಡೆಗೆ ಆದ್ಯತೆ ನೀಡಲಾಗುತ್ತಿದೆ, ಪ್ಲಾಸ್ಟಿಕ್‌ ಬಳಕೆ ನಿಲ್ಲಿಸಲು ದೇವಸ್ಥಾನದ ಆಡಳಿತ  ಕ್ರಮ ಕೈಗೊಂಡಿದೆ. ಇದೀಗ ತ್ಯಾಜ್ಯ ಎಸೆದರೆ ದಂಡ ಪ್ರಯೋಗಕ್ಕೂ ಕುಕ್ಕೆ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್‌ ಕೂಡಾ  ಪೊಲೀಸ್‌ ಇಲಾಖೆ ಸಹಕಾರದೊಂದಿಗೆ ಮುಂದಾಗಿದೆ. ಈಗಾಗಲೇ ಕೆಲವರಿಗೆ ದಂಡ ವಿಧಿಸಿದೆ.…… ಮುಂದೆ ಓದಿ……

ಸೆಪ್ಟೆಂಬರ್ 8 ರಂದು ಕುಮಾರಧಾರ ನದಿಯ ಸೇತುವೆ ಮೇಲಿಂದ ಕಾರ್ಕಳದ ವ್ಯಕ್ತಿಯೊಬ್ಬರು  ಕಸ ಎಸೆದ ದೃಶ್ಯವನ್ನು ಸ್ಥಳೀಯ ಯುವಕರೊಬ್ಬರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದರು. ಈ ಮಾಹಿತಿ ತಕ್ಷಣವೇ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ನೀಡಿದ್ದರು.  ಗ್ರಾಮ ಪಂಚಾಯತ್ ಅಧಿಕಾರಿಗಳು ಈ ಕುರಿತು ವಾಹನದ ವಿವರವನ್ನು ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ಹಂಚಿಕೊಂಡಿದ್ದು, ಪೊಲೀಸರು ವಾಹನ ಮಾಲೀಕರನ್ನು ಪತ್ತೆಹಚ್ಚಲು ನೆರವಾದರು. ನಂತರ ಗ್ರಾಮ ಪಂಚಾಯತ್ ಕಾನೂನು ಕ್ರಮ ಕೈಗೊಂಡು, ಕಸ ಎಸೆದವರಿಗೆ  ರೂ.2000 ದಂಡ ವಿಧಿಸಿತು. …… ಮುಂದೆ ಓದಿ…… ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ..

ಕುಕ್ಕೆ ಸುಬ್ರಹ್ಮಣ್ಯದ ಗ್ರಾಮ ಪಂಚಾಯತ್ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯವರು ಈ ಕಾರ್ಯಾಚರಣೆಯ ಮೂಲಕ ಸಾರ್ವಜನಿಕರಿಗೆ, ಭಕ್ತಾದಿಗಳಿಗೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ. ಭಕ್ತರು ಹಾಗೂ ಸ್ಥಳೀಯರು ಪ್ಲಾಸ್ಟಿಕ್ ಅಥವಾ ಬೇರೆ ಯಾವುದೇ ರೀತಿಯ ಕಸವನ್ನು ನದಿ ನೀರಿಗೆ ಎಸೆಯುವುದು  ತಪ್ಪು. ಇದು ಪರಿಸರ ಮಾಲಿನ್ಯ ಹೆಚ್ಚಿಸುವುದಲ್ಲದೆ, ಪವಿತ್ರ ಕುಮಾರಧಾರ ನದಿಯ ಸ್ವಚ್ಛತೆಯನ್ನು ಹಾಳುಮಾಡುತ್ತದೆ ಎಂದು ತಿಳಿಸಿದ್ದಾರೆ. ಇದರ ಜೊತೆಗೆ ಎಲ್ಲೆಂದರಲ್ಲಿ ಪ್ಲಾಸ್ಟಿಕ್‌ ಬಾಟಲಿ, ಪ್ಲಾಸ್ಟಿಕ್‌ ತ್ಯಾಜ್ಯ ಎಸೆಯುವುದು ಕೂಡಾ ನಿಲ್ಲಿಸಬೇಕಿದೆ. …… ಮುಂದೆ ಓದಿ……

ಈ ಕಾರ್ಯಾಚರಣೆಗೆ ಸ್ಥಳೀಯ ಯುವಕರ ತಂಡ ಹಾಗೂ ಪರಿಸರ ಪ್ರೇಮಿಗಳ ಸಹಕಾರ ಇದ್ದು, ವಾಹನದಲ್ಲಿ ತೆರಳುವ ಯಾರೇ ಆದರೂ ತಕ್ಷಣವೇ ಫೋಟೊ ತೆಗೆದು ಪಂಚಾಯತ್‌ ಆಡಳಿತಕ್ಕೆ ನೀಡಲಿದೆ. ಹೀಗಾಗಿ ಎಲ್ಲೆಂದರಲ್ಲಿ ಕಸ ಎಸೆಯದೇ ಇರುವುದು ಉತ್ತಮ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ..

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 28-09-2026 | ಮುಂಗಾರು ಹಿಂದೆ ಸರಿಯುತ್ತಿದ್ದರೂ ಮಳೆ ಇನ್ನೂ ಮುಗಿದಿಲ್ಲ

ಮುಂಗಾರು ಹಿಂದೆ ಸರಿಯುವ ಪ್ರಕ್ರಿಯೆ ಆರಂಭವಾಗಿದ್ದರೂ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಇನ್ನೂ ಗುಡುಗು…

58 minutes ago

ಸದ್ಯಕ್ಕೆ ರಾಜ್ಯದಲ್ಲಿ ವಿದ್ಯುತ್ ಲೋಡ್ ಶೆಡ್ಡಿಂಗ್ ಇಲ್ಲ- ಸಚಿವ ಜಾರ್ಜ್ ಸ್ಪಷ್ಟನೆ

ಕರ್ನಾಟಕದಲ್ಲಿ ಸದ್ಯಕ್ಕೆ ವಿದ್ಯುತ್ ಲೋಡ್ ಶೆಡ್ಡಿಂಗ್ ಜಾರಿಗೊಳಿಸುವ ಯಾವುದೇ ನಿರ್ಧಾರ ಸರ್ಕಾರದ ಮುಂದಿಲ್ಲ…

1 hour ago

ಸೂಪರ್ ಎಲ್ ನಿನೋ ಆತಂಕ – ಫೆಬ್ರವರಿವರೆಗೆ 4.51 ಲಕ್ಷ ತಾಪಮಾನ ಸಂಬಂಧಿ ಸಾವುಗಳ ಅಂದಾಜು

ಸೂಪರ್ ಎಲ್ ನಿನೋದಿಂದ 2027ರ ಫೆಬ್ರವರಿವರೆಗೆ ಸಾಮಾನ್ಯ ವರ್ಷಕ್ಕಿಂತ 4.51 ಲಕ್ಷ ತಾಪಮಾನ…

2 hours ago

ಬ್ಯಾಂಕ್‌ ಮುಷ್ಕರ ಮುಂದೂಡಿಕೆ – ಇಂದು ಎಂದಿನಂತೆ ಬ್ಯಾಂಕ್‌ ಸೇವೆ

ಸೆ.28ರಿಂದ 30ರವರೆಗೆ ನಡೆಯಬೇಕಿದ್ದ ರಾಷ್ಟ್ರವ್ಯಾಪಿ ಮೂರು ದಿನಗಳ ಬ್ಯಾಂಕ್‌ ಮುಷ್ಕರವನ್ನು ಕೊನೆ ಕ್ಷಣದಲ್ಲಿ…

6 hours ago

ಖ್ಯಾತಿ-ಪ್ರಚಾರವಲ್ಲ, ಸಮಾಜ ಪರಿವರ್ತನೆಯೇ ಚಾತುರ್ಮಾಸ್ಯದ ಗುರಿ

‘ಅನ್ನಂ ಬ್ರಹ್ಮ’ ಚಾತುರ್ಮಾಸ್ಯದ ಉದ್ದೇಶ ಖ್ಯಾತಿ ಅಥವಾ ಪ್ರಚಾರವಲ್ಲ, ಸಮಾಜ ಪರಿವರ್ತನೆ ಎಂದು…

14 hours ago