ಪ್ರತ್ಯೇಕ ಘಟನೆಗಳಲ್ಲಿ ಪಟಾಕಿ ಕಾರಣದಿಂದ 12 ಮಂದಿ ಗಾಯಗೊಂಡಿದ್ದಾರೆ. 7 ಮಂದಿ ಆಸ್ಪತ್ರೆಗೆ ದಾಖಲಾಗಿದ್ದು, ಪಟಾಕಿ ಸಿಡಿತದಿಂದ ಪೆಟ್ರೋಲ್ ಕ್ಯಾನ್ ಗೆ ಬೆಂಕಿ ಹಿಡಿದು ಅಂಗಡಿ ಭಸ್ಮವಾದ ಘಟನೆ ನಡೆದಿದೆ.
ಬೆಂಗಳೂರು ನಗರದಲ್ಲಿ ಪಟಾಕಿ ಅವಘಡಗಳು ತಕ್ಷಣಕ್ಕೆ ವರದಿಯಾಗಿದೆ. ಉಳಿದ ಜಿಲ್ಲೆಗಳ ಪಟಾಕಿ ಅವಘಡಗಳು ಇನ್ನಷ್ಟೆ ಬೆಳಕಿಗೆ ಬರಬೇಕಿದೆ. ಸದ್ಯದ ಮಾಹಿತಿ ಪ್ರಕಾರ ಚಾಮರಾಜಪೇಟೆ ಮತ್ತು ಮೈಸೂರು ರಸ್ತೆಯಲ್ಲಿ ತಲಾ ಇಬ್ಬರು ಗಾಯಗೊಂಡಿದ್ದಾರೆ. ಚಾಮರಾಜಪೇಟೆಯ 10 ವರ್ಷದ ಬಾಲಕ ಆಜಾದ್, 50 ವರ್ಷದ ರಮೇಶ್, ಮೈಸೂರು ರಸ್ತೆಯ 19 ವರ್ಷದ ಜಯಸೂರ್ಯ, 4 ವರ್ಷದ ಸುರಭಿ, ಸರ್ಜಾಪುರದ ಸಂಗೀತ ವರ್ಮಾ 49 ವರ್ಷ, ಅವೆನ್ಯೂ ರಸ್ತೆಯ ಹಬೀಬುಲ್ಲ 22 ವರ್ಷ, ಅನ್ನಪೂರ್ಣೇಶ್ವರಿ ನಗರದ 39 ವರ್ಷದ ಮಮತಾ ಅವರಿಗೆ ಪಟಾಕಿ ಸಿಡಿತದಿಂದ ಗಾಯಗಳಾಗಿವೆ ಎಂದು ವರದಿಯಾಗಿದೆ.
ಚಿಕ್ಕಬಳ್ಳಾಪುರದ ಬಾಗೇಪಲ್ಲಿ ತಾಲೂಕಿನ ಪಾಳ್ಯಕೆರೆ ಗ್ರಾಮದಲ್ಲಿ ಪಟಾಕಿ ಸಿಡಿಯುವ ವೇಳೆ ಅಂಗಡಿಯಲ್ಲಿದ್ದ ಪೆಟ್ರೋಲ್ ಕ್ಯಾನ್ ಗೆ ಬೆಂಕಿ ತಗುಲಿ ಅಂಗಡಿ ಹೊತ್ತಿ ಉರಿದ ಘಟನೆ ನಡೆದಿದೆ. ಅವಘಡದಲ್ಲಿ ಯಾವುದೇ ಗಾಯಗಳಾಗಿಲ್ಲ ಎಂದು ವರದಿಯಾಗಿದೆ.
ಅರಬ್ಬಿ ಸಮುದ್ರದ ವಾಯುಭಾರ ಕುಸಿತವು ಉತ್ತರ ಮಹಾರಾಷ್ಟ್ರ ಕರಾವಳಿ ತಲುಪಿದ್ದು, ಇನ್ನೆರಡು ದಿನಗಳಲ್ಲಿ…
ಮಾವು ಉತ್ಪಾದನೆಯಲ್ಲಿ ರಾಜ್ಯದಲ್ಲೇ ಎರಡನೇ ಸ್ಥಾನ ಪಡೆದಿರುವ ರಾಮನಗರ ಜಿಲ್ಲೆಯಲ್ಲಿ ಈ ಬಾರಿ…
ಶಾಲೆಯ ಯೋಜಿತ ಮತ್ತು ಪರಿಣಾಮಕಾರಿ ಆರಂಭಕ್ಕೆ ವಿದ್ಯಾರ್ಥಿ – ಪೋಷಕ – ಶಿಕ್ಷಕ …
ಬಡವರಿಗೆ, ಹಳ್ಳಿಗರಿಗೆ, ದಲಿತರಿಗೆ, ನಿರಕ್ಷಕ ಕುಕ್ಷಿಗಳಿಗೆ, ನಿರುದ್ಯೋಗಿಗಳಿಗೆ ಸಮಾನತೆಯೆಂಬುದು ಮತದಾನದ ಸಂದರ್ಭದಲ್ಲಿ ಮಾತ್ರವೇ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳಲ್ಲಿ ಸಂಪರ್ಕಿಸಿ 9535156490
ಮಾನವ ಆನೆ ಸಂಘರ್ಷ ತಡೆಗಟ್ಟಲು ಅಕ್ಕ ಪಕ್ಕದ ರಾಜ್ಯಗಳ ಸಹಕಾರ ಅಗತ್ಯ ಎಂದು…