ಸುಳ್ಯ ತಾಲೂಕು ಪಂಚಾಯತ್ ಮಿನಿ ಸಭಾಂಗಣದಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಬೆಂಗಳೂರು, ಜಿಲ್ಲಾ ಪಂಚಾಯತ್ ಮಂಗಳೂರು, ತಾಲೂಕು ಪಂಚಾಯತ್ ಸುಳ್ಯ, ಕೃಷಿ ವಿಜ್ಞಾನ ಕೇಂದ್ರ ಮಂಗಳೂರು, ICAR-IIHR ಬೆಂಗಳೂರು, ಕೃಷಿ ಇಲಾಖೆ ಸುಳ್ಯ, ತೋಟಗಾರಿಕಾ ಇಲಾಖೆ ಸುಳ್ಯ ಇವರ ಆಶ್ರಯದಲ್ಲಿ ಕೃಷಿ ಸಖಿ, ಕೃಷಿ ಉದ್ಯೋಗ ಸಖಿ, FLCRP, BC ಸಖಿಗಳಿಗೆ ಪ್ರಗತಿ ಪರಿಶೀಲನಾ ಸಭೆ ಮತ್ತು SC TSP ಯೋಜನೆ ಅಡಿಯಲ್ಲಿ ರೈತರಿಗೆ ತರಕಾರಿ ಬೀಜ ವಿತರಣೆ ಕಾರ್ಯಕ್ರಮ ನಡೆಯಿತು.……..ಮುಂದೆ ಓದಿ…..
ಕಾರ್ಯಕ್ರಮವನ್ನು ICAR-IIHR ಮುಖ್ಯ ವಿಜ್ಞಾನಿ ಡಾ. ಸೆಂತಿಲ್ ಕುಮಾರ್ ಉದ್ಘಾಟಿಸಿದರು. ಸಭಾಧ್ಯಕ್ಷತೆಯನ್ನು ನರೇಗಾ ಸಹಾಯಕ ನಿರ್ದೇಶಕ ರವಿಚಂದ್ರ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಡಾ. ಟಿ ಜೆ ರಮೇಶ್, ಮುಖ್ಯಸ್ಥರು ಹಿರಿಯ ವಿಜ್ಞಾನಿ ಕೃಷಿ ವಿಜ್ಞಾನ ಕೇಂದ್ರ ಮಂಗಳೂರು, ವಿಜೇತ್ ಹಿರಿಯ ನಿರ್ದೇಶಕರು ತೋಟಗಾರಿಕಾ ಇಲಾಖೆ ಸುಳ್ಯ, ವಿನೀತ್ ಮೋನಿಶ್ ಕೃಷಿ ಜೀವನೋಪಾಯ ಜಿಲ್ಲಾ ಪಂಚಾಯತ್ ಮಂಗಳೂರು, ಯಶೋಧ ಬಾಳೆಗುಡ್ಡೆ, ಅಧ್ಯಕ್ಷರು ಪಯಸ್ವಿನಿ ತಾಲೂಕು ಮಟ್ಟದ ಒಕ್ಕೂಟ ಸುಳ್ಯ, ಶ್ವೇತ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರು ಎನ್ ಆರ್ ಎಲ್ ಎಂ ಸುಳ್ಯ ಇವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕೃಷಿ ಸಖಿ, ಉದ್ಯೋಗ FLCRP, BC ಸಖಿಗಳಿಗೆ ಪ್ರಥಮ ಪ್ರಗತಿ ಪರಿಶೀಲನ ಸಭೆ ಆಯೋಜಿಸಿದ್ದು ಇದರಲ್ಲಿ ಕೃಷಿ ಸಖಿ ಪ್ರಗತಿ ಬಗ್ಗೆ ಜಿಲ್ಲಾ ವ್ಯವಸ್ಥಾಪಕರು ಕೃಷಿ ಜೀವನೋಪಾಯ ಜಿಲ್ಲಾ ಪಂಚಾಯತ್ ಮಂಗಳೂರು ಇವರು ಕೃಷಿ ಸಖಿಯರ ಕಾರ್ಯವೈಖರಿ, ಕೃಷಿ ಸಖಿ ಜವಾಬ್ದಾರಿ ಮತ್ತು ಪಾತ್ರಗಳು, ನೈಸರ್ಗಿಕ ಕೃಷಿ, ಪೌಷ್ಟಿಕ ಕೈತೋಟ, ನರೇಗಾ ಯೋಜನೆಯ ಸಹಭಾಗಿತ್ವ ಕೆಲಸ, ಅಜೀವಿಕ ರಿಜಿಸ್ಟರ್, IFC, PMFME ಸಾಲ, MIS ಇತ್ಯಾದಿಗಳ ಬಗ್ಗೆ ಪ್ರಗತಿ ಪರಿಶೀಲನೆ ನಡೆಸುವುದರ ಜೊತೆಗೆ ಮುಂದಿನ ಪ್ರಗತಿ ಪರಿಶೀಲನೆ ಸಭೆಗೆ ಯಾವ ರೀತಿಯಲ್ಲಿ ಸಿದ್ಧತೆಗಳನ್ನು ನಡೆಸಿಕೊಂಡಿರಬೇಕು ಎಂಬುದರ ಬಗ್ಗೆ ವಿಸ್ಕೃತ ಮಾಹಿತಿಯನ್ನು ನೀಡಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅರ್ಹ ರೈತ ಫಲಾನುಭವಿಗಳಿಗೆ ಅಲಸಂಡೆ ಬೀಜ, ಈರುಳ್ಳಿ, ಟೊಮೇಟೊ, ಮೆಣಸಿನ ಬೀಜ, ಬದನೆಕಾಯಿ, ಹರಿವೆ, ತಿಂಗಳ ಅವರೇ, ಚಪ್ಪರದ ಅವರೇ, ಬೆಂಡೆಕಾಯಿ ಇತ್ಯಾದಿ ಬೀಜಗಳನ್ನು ಅತಿಥಿಗಳ ಮೂಲಕ ವಿತರಿಸಲಾಯಿತು. ಬೆಂಗಳೂರಿನ ವಿಜ್ಞಾನಿಗಳಾದ ಡಾಕ್ಟರ್ ಸೆಂಥಿಲ್ ಕುಮಾರ್ ಅವರು ತರಕಾರಿ ಬೀಜದ ಬಗ್ಗೆ ಯಾವುದೇ ಹಣ್ಣಿನ ಗಿಡ, ತೋಟಗಾರಿಕಾ ಬೆಳೆ ಬೆಳೆಸುವ ಮೊದಲು ಮಣ್ಣಿನ ಪರೀಕ್ಷೆ ಮಾಡಿಸಬೇಕು ಮತ್ತು ಇದರ ಮಾಹಿತಿಯನ್ನು ಸಖಿಯರು ನೀಡಬೇಕು ಎಂದು ತಿಳಿಸಿದರು. ಪಪ್ಪಾಯಿ, ಪುನರ್ಪುಳಿ ಹಣ್ಣಿಗೆ ಇರುವ ಮಹತ್ವದ ಬಗ್ಗೆ ಆರೋಗ್ಯಕ್ಕೆ ಸಂಬಂಧಪಟ್ಟಂತೆ ಮಾಹಿತಿ ನೀಡಿದರು.
ಕೃಷಿ ವಿಜ್ಞಾನ ಕೇಂದ್ರ ಮಂಗಳೂರಿನ ಹಿರಿಯ ವಿಜ್ಞಾನಿಗಳಾದ ಡಾ. ಟಿ.ಜೆ ರಮೇಶ್ ಇವರು ಸಂಜೀವಿನಿ ಒಕ್ಕೂಟಗಳ ಕೃಷಿ ಸಖಿಯರ ಮುಖಾಂತರ ಸುಳ್ಯ ತಾಲೂಕಿನ ಎಲ್ಲಾ ಗ್ರಾಮಗಳ ಕೃಷಿಕರಿಗೆ ಉತ್ತಮ ಮಾಹಿತಿ, ವಿವಿಧ ಇಲಾಖೆಗಳ ಯೋಜನೆಗಳ ಮಾಹಿತಿ ಹಾಗೂ ಕೃಷಿಗೆ ಸಂಬಂಧಿಸಿದ ವಿವಿಧ ಸೌಲಭ್ಯಗಳು ದೊರಕಲು ಸಾಧ್ಯವಾಗುತ್ತಿದೆ. ಕೃಷಿಕರ ಅಭಿವೃದ್ಧಿಗೆ ಸಹಕರಿಸುತ್ತಿರುವ ಸಂಜೀವಿನಿ ಟಿಪಿಎಂ ಶ್ವೇತ ,ಜೀವನ್ ಪ್ರಕಾಶ ಹಾಗೂ ಸಂಪಾಜೆ ಕೃಷಿ ಸಖಿ ಮೋಹಿನಿ ವಿಶ್ವನಾಥ್ ಹಾಗೂ ತಾಲ್ಲೂಕಿನ ಎಲ್ಲಾ ಕೃಷಿ ಸಖಿಯರ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಪಂಜ ಗ್ರಾಮದ ಕೃಷಿ ಸಖಿ ವೇದಾವತಿಯವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಶ್ವೇತ ಟಿಪಿಎಂ ಅತಿಥಿಗಳನ್ನು ಸ್ವಾಗತಿಸಿ ವಂದಿಸಿದರು.
ಆಮದು ಕಾರಣದಿಂದ ಮಿಜೋರಾಂ ಅಡಿಕೆ ಬೆಳೆಗಾರರು ಸ್ಪರ್ಧಾತ್ಮಕ ಬೆಲೆಯಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ…
ಇಂದು ಯಾವುದೇ ಪ್ರಮುಖ ಕ್ಷೇತ್ರಗಳನ್ನು ಗಮನಿಸಿ, ಅಲ್ಲೊಂದು ವಿವಾದ ಇಲ್ಲದೇ ಇರುವುದೇ ಇಲ್ಲ.…
ಈ ವಾರ ದೆಹಲಿ, ರಾಜಸ್ಥಾನ , ಗುಜರಾತ್, ಮಧ್ಯಪ್ರದೇಶ , ಮಹಾರಾಷ್ಟ್ರ ಮತ್ತು…
ಗುಜ್ಜೆ ಕಡಲೆ ಗಸಿಗೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ: ಗುಜ್ಜೆ 1…
ಸ್ಥಳೀಯ ಉತ್ಪನ್ನ ಉತ್ತೇಜನ, ಪರಿಸರ ಸಂರಕ್ಷಣೆ ಸೇರಿದಂತೆ ಉತ್ತಮ ಯೋಗಕ್ಷೇಮಕ್ಕೆ 9 ಸಂಕಲ್ಪಗಳನ್ನು …
ಭಾರತೀಯ ರಿಸರ್ವ್ ಬ್ಯಾಂಕ್ ನ ಹಣಕಾಸು ನೀತಿ ಸಮಿತಿ ಹಲವು ಮಹತ್ವದ ನಿರ್ಧಾರಗಳನ್ನು…