ಭಾರತೀಯ ಕರಾವಳಿ ರಕ್ಷಣಾ ಪಡೆಯು ಸಮುದ್ರದ ಮೂಲಕ ಅಡಿಕೆ ಕಳ್ಳಸಾಗಣೆ ಮಾಡುವ ಪ್ರಕರಣವನ್ನು ಪತ್ತೆ ಮಾಡಿದೆ. ಕರಾವಳಿ ರಕ್ಷಣಾ ಪಡೆ ಹಡಗು ‘ವರದ್’ ಬಂಗಾಳ ಕೊಲ್ಲಿಯಲ್ಲಿ ಗಸ್ತು ನಡೆಸುತ್ತಿದ್ದಾಗ ಮೀನುಗಾರಿಕಾ ದೋಣಿಯಲ್ಲಿ ಅಡಿಕೆ ಸಾಗಾಣಿಕೆ ಪ್ರಕರಣ ಒಡಿಸ್ಸಾ ಕರಾವಳಿಯಲ್ಲಿ ಬೆಳಕಿಗೆ ಬಂದಿದೆ. ಮೀನುಗಾರಿಕಾ ದೋಣಿಯಲ್ಲಿ 450 ಚೀಲ ಅಡಿಕೆ ಪತ್ತೆಯಾಗಿದ್ದು, ಪ್ರತಿಯೊಂದು ಚೀಲವು ಸುಮಾರು 50 ರಿಂದ 60 ಕೆಜಿ ತೂಕವಿತ್ತು. ಈ ಅಡಿಕೆಯ ಮಾರುಕಟ್ಟೆ ಮೌಲ್ಯ ಸುಮಾರು 1 ಕೋಟಿ ರೂ. ಎಂದು ಅಂದಾಜಿಸಲಾಗಿದೆ.…..ಮುಂದೆ ಓದಿ….
ಪಶ್ಚಿಮ ಬಂಗಾಳದ ಕಾಕ್‌ದ್ವೀಪ್ ಮೀನುಗಾರಿಕಾ ಬಂದರಿನಲ್ಲಿ ನೋಂದಾಯಿಸಲಾದ ಮೀನುಗಾರಿಕಾ ದೋಣಿಯು ಯಾವುದೇ ದಾಖಲೆಗಳಿಲ್ಲದೆ ಅಡಿಕೆ ಸಾಗಿಸುತ್ತಿತ್ತು ಎಂದು ಭಾರತೀಯ ಕರಾವಳಿ ಕಾವಲು ಪಡೆ ತಿಳಿಸಿದೆ. ಮೀನುಗಾರಿಕಾ ದೋಣಿಯ 14 ಸಿಬ್ಬಂದಿಗಳ ಬಳಿಯೂ ಯಾವುದೇ ಬಯೋ-ಮೆಟ್ರಿಕ್ ಕಾರ್ಡ್‌ಗಳು ಕೂಡಾ ಇರಲಿಲ್ಲ. ದೋಣಿಯಲ್ಲಿ ಯಾವುದೇ ಮೀನುಗಾರಿಕೆ ಸಲಕರಣೆಗಳು ಅಥವಾ ಯಾವುದೇ ಮೀನು ಹಿಡಿಯುವ ಸಾಧನಗಳು ಕಂಡುಬಂದಿಲ್ಲ. ಹೆಚ್ಚಿನ ತನಿಖೆಗಾಗಿ ಒಡಿಶಾದ ಜಗತ್ಸಿಂಗ್‌ಪುರ ಜಿಲ್ಲೆಯ ಪ್ಯಾರದೀಪ್ ಬಂದರಿಗೆ ಸಾಗಿಸಲಾಗಿದೆ ತನಿಖೆ ನಡೆಯುತ್ತಿದೆ. ನಮ್ಮ ವ್ಯಾಟ್ಸಪ್ ಚಾನೆಲ್‌ಗೆ ಸೇರಲು ಇಲ್ಲಿ ಕ್ಲಿಕ್ ಮಾಡಿರಿ..
ಎಂತ ಮಾರ್ರೇ.... ಈ ಮನುಷ್ಯರಿಗೆ ಒಂದು ಸೊಲ್ಪ ಹೊತ್ತು ಕರೆಂಟ್ ಹೊದ್ರೆ ಕೂಡ್ಲೆ…
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಸುಳ್ಯ, ಪುತ್ತೂರು,ಚೆಂಬು ಪ್ರದೇಶದ ಕೆಲವು ಕಡೆ 100…
ಬಿತ್ತನೆ ಬೀಜ ಮತ್ತು ರಸಗೊಬ್ಬರವನ್ನು ಕಾಳಸಂತೆಯಲ್ಲಿ ಮಾರಾಟಮಾಡುವವರು ಮತ್ತು ಕೃತಕ ಅಭಾವ ಸೃಷ್ಟಿಸುವವರ…
ರೈತರು ಉತ್ತಮ ಇಳುವರಿ ಪಡೆಯಲು ಡಿಎಪಿ ಗೊಬ್ಬರಕ್ಕೆ ಪರ್ಯಾಯವಾಗಿ ಸಂಯುಕ್ತ ರಸಗೊಬ್ಬರ ಬಳಸಲು…
‘ಏಕಲವ್ಯ’ – ಈ ಪದವು ಸಾಧನೆಯ ಐಕಾನ್. ಪರ್ಯಾಯ ಪದ. ಸಾಧನೆಗೆ ಜಾತಿ,…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490