ಮೀನುಗಾರಿಗೆ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿ ತೀರದ ಜನರ ಜೀವನೋಪಾಯ. ಮತ್ಸ್ಯೋದ್ಯಮ ವಿಶ್ವ ಮಟ್ಟದಲ್ಲಿ ಈ ಜಿಲ್ಲೆಗಳು ಗುರುತಿಸಿಕೊಳ್ಳುವಂತೆ ಮಾಡಿದೆ. ವರ್ಷದ 10 ತಿಂಗಳು ಮೀನುಗಾರರ ಜೀವನ ಮೀನುಗಾರಿಕೆಯಲ್ಲೇ ಕಳೆಯುತ್ತದೆ. ಈ ಬಾರಿ ಮೀನುಗಾರಿಕೆ ನಡೆದರೂ ನಿರೀಕ್ಷಿತ ಮಟ್ಟದಲ್ಲಿ ನಡೆದಿದೆ. ಮೀನುಗಾರರ ಬದುಕು ಸಾಗಿದೆ, ಆದರೆ ನಿರೀಕ್ಷಿತ ಆದಾಯ ಸಾಧ್ಯವಾಗಿಲ್ಲ.
ಈ ಬಾರಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉತ್ತಮ ಪ್ರಮಾಣದಲ್ಲಿ ಮೀನುಗಾರಿಕೆ ನಡೆದಿದೆ. ಆದರೆ, ಲಾಭಾಂಶ ಮಾತ್ರ ಕಡಿಮೆ ಆಗಿದೆ. 2022-23 ನೇ ಸಾಲಿನ ಋತುವಿನಲ್ಲಿ ಮಳೆ, ಚಂಡಮಾರುತದ ಎಫೆಕ್ಟ್ ಕಡಿಮೆ ಇದ್ದಿದ್ರಿಂದ ಈ ಸಾಲಿನ ಅಂತ್ಯದವರೆಗೂ (ಮೇ 31) ಮೀನುಗಾರಿಕೆ ನಡೆಸಲು ಸಾಧ್ಯವಾಗಿದೆ. ಆದರೆ, ತೀವ್ರ ಬೆಲೆ ಕುಸಿತ, ರಫ್ತು ಪ್ರಮಾಣ ಕಡಿಮೆ ಇದೆಲ್ಲವೂ ಮೀನುಗಾರರಿಗೆ ಹೆಚ್ಚಿನ ಲಾಭವನ್ನು ತಂದಿಲ್ಲ. ಆದರೆ ಸ್ಥಳೀಯ ಗ್ರಾಹಕರಿಗೆ ಮಾತ್ರ ಕಡಿಮೆ ಬೆಲೆಯಲ್ಲಿ ಮೀನುಗಳು ಸಿಗುವಂತಾಗಿತ್ತು.
ಹೇಗಿತ್ತು ಈ ಋತುವಿನ ಮೀನುಗಾರಿಕೆ? : ಈ ವರ್ಷ ಅಧಿಕ ಪ್ರಮಾಣದಲ್ಲಿ ಮೀನುಗಾರಿಕೆ ನಡೆದಿದೆ. ಈ ಋತುವಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 3,33,537 ಮೆಟ್ರಿಕ್ ಟನ್ನಷ್ಟು ಹಾಗೂ ಉಡುಪಿ ಜಿಲ್ಲೆಯಲ್ಲಿ 2,12,081 ಮೆಟ್ರಿಕ್ ಟನ್ ಮೀನುಗಾರಿಕೆ ನಡೆದಿದೆ. ಹಿಂದಿನ ವರುಷಗಳಿಗೆ ಹೋಲಿಸಿದರೆ ಈ ಬಾರಿ ಉತ್ತಮ ಮೀನುಗಾರಿಕೆ ನಡೆದಿದೆ. ಒಟ್ಟು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2022-23 ನೇ ಸಾಲಿನ ಋತುವಿನಲ್ಲಿ 5,45,618 ಮೆಟ್ರಿಕ್ ಟನ್ ಮೀನುಗಾರಿಕೆ ನಡೆದಿದೆ. ಕಳೆದ ಬಾರಿಗೆ ಹೋಲಿಸಿದರೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹತ್ತಿರ ಹತ್ತಿರ ಮೂರು ಪಟ್ಟಿನಷ್ಟು ಮೀನುಗಾರಿಕೆ ಅಧಿಕವಾಗಿದೆ.
ಕೈಗೂಡದ ನಿರೀಕ್ಷೆ : ಈ ಬಾರಿ ನಿರೀಕ್ಷೆಯಂತೆ ಫಿಶ್ ಮಿಲ್ಗಳು ಸರಿಯಾಗಿ ಕಾರ್ಯ ನಿರ್ವಹಿಸಿಲ್ಲ ಎನ್ನುವ ಮಾತಿದೆ. ಉಳ್ಳಾಲದ ಒಂದೇ ಭಾಗದಲ್ಲಿರುವ 13 ಫಿಶ್ ಮಿಲ್ಗಳು ವರ್ಷವಿಡೀ ಬಂದ್ ಆಗಿತ್ತು. ಜೊತೆಗೆ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಕೂಡಾ ತಲೆದೋರಿದ್ದರಿಂದ ಮೀನು ರಫ್ತಿನ ಮೇಲೆ ಹೊಡೆತ ಬಿದ್ದಿದೆ. ಮೀನುಗಾರಿಕೆ ಹೆಚ್ಚಿದ್ದರೂ, ಲಾಭಾಂಶ ಮಾತ್ರ ಶೇಕಡಾ 30-40 ರಷ್ಟು ಕುಸಿದಿದೆ ಎಂದು ಮೀನುಗಾರರು ತಿಳಿಸಿದ್ದಾರೆ.
ಅಡಿಕೆ ಸಿಪ್ಪೆ, ಸೋಗೆ ಮತ್ತು ಇತರ ಕೃಷಿ ಅವಶೇಷಗಳಿಂದ ಕಾರ್ಬನ್ ನ್ಯಾನೋಸ್ಫಿಯರ್ಗಳನ್ನು ಅಭಿವೃದ್ಧಿಪಡಿಸಿ,…
ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಗೆ ಬೆಳ್ಳಾರೆ…
ಸುಬ್ರಹ್ಮಣ್ಯದಲ್ಲಿ ಐದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಶ್ರೀ ಹೋಮಿಯೋಕೇರ್ ಗುತ್ತಿಗಾರಿಗೆ ಸ್ಥಳಾಂತರಗೊಂಡಿದ್ದು, ಎಸ್ಎಂಎಸ್ಜಿ ಕಾಂಪ್ಲೆಕ್ಸ್ನಲ್ಲಿ…
ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಗುಡುಗು…
ಕರ್ನಾಟಕದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜುಲೈ 1ರಿಂದ ಅಕ್ಟೋಬರ್ 14ರವರೆಗೆ ದಾಖಲೆಯ…