ದಾಖಲೆ ಪ್ರಮಾಣದಲ್ಲಿ ಮೀನುಗಾರಿಕೆ | ಕುಸಿದ ಲಾಭಾಂಶ | ಮೀನುಗಾರರಿಗೆ ಸಿಹಿಕಹಿ |

May 31, 2023
7:03 PM

ಮೀನುಗಾರಿಗೆ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿ ತೀರದ ಜನರ ಜೀವನೋಪಾಯ. ಮತ್ಸ್ಯೋದ್ಯಮ ವಿಶ್ವ ಮಟ್ಟದಲ್ಲಿ ಈ ಜಿಲ್ಲೆಗಳು ಗುರುತಿಸಿಕೊಳ್ಳುವಂತೆ ಮಾಡಿದೆ. ವರ್ಷದ 10 ತಿಂಗಳು ಮೀನುಗಾರರ ಜೀವನ ಮೀನುಗಾರಿಕೆಯಲ್ಲೇ ಕಳೆಯುತ್ತದೆ. ಈ ಬಾರಿ ಮೀನುಗಾರಿಕೆ ನಡೆದರೂ ನಿರೀಕ್ಷಿತ ಮಟ್ಟದಲ್ಲಿ ನಡೆದಿದೆ. ಮೀನುಗಾರರ ಬದುಕು ಸಾಗಿದೆ, ಆದರೆ ನಿರೀಕ್ಷಿತ ಆದಾಯ ಸಾಧ್ಯವಾಗಿಲ್ಲ.

ಈ ಬಾರಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉತ್ತಮ ಪ್ರಮಾಣದಲ್ಲಿ ಮೀನುಗಾರಿಕೆ ನಡೆದಿದೆ. ಆದರೆ, ಲಾಭಾಂಶ ಮಾತ್ರ ಕಡಿಮೆ ಆಗಿದೆ. 2022-23 ನೇ ಸಾಲಿನ ಋತುವಿನಲ್ಲಿ ಮಳೆ, ಚಂಡಮಾರುತದ ಎಫೆಕ್ಟ್‌ ಕಡಿಮೆ ಇದ್ದಿದ್ರಿಂದ ಈ ಸಾಲಿನ ಅಂತ್ಯದವರೆಗೂ (ಮೇ 31) ಮೀನುಗಾರಿಕೆ ನಡೆಸಲು ಸಾಧ್ಯವಾಗಿದೆ. ಆದರೆ, ತೀವ್ರ ಬೆಲೆ ಕುಸಿತ, ರಫ್ತು ಪ್ರಮಾಣ ಕಡಿಮೆ ಇದೆಲ್ಲವೂ ಮೀನುಗಾರರಿಗೆ ಹೆಚ್ಚಿನ ಲಾಭವನ್ನು ತಂದಿಲ್ಲ. ಆದರೆ ಸ್ಥಳೀಯ ಗ್ರಾಹಕರಿಗೆ ಮಾತ್ರ ಕಡಿಮೆ ಬೆಲೆಯಲ್ಲಿ ಮೀನುಗಳು ಸಿಗುವಂತಾಗಿತ್ತು.

ಹೇಗಿತ್ತು ಈ ಋತುವಿನ ಮೀನುಗಾರಿಕೆ? : ಈ ವರ್ಷ ಅಧಿಕ ಪ್ರಮಾಣದಲ್ಲಿ ಮೀನುಗಾರಿಕೆ ನಡೆದಿದೆ. ಈ ಋತುವಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 3,33,537 ಮೆಟ್ರಿಕ್‌ ಟನ್​ನಷ್ಟು ಹಾಗೂ ಉಡುಪಿ ಜಿಲ್ಲೆಯಲ್ಲಿ 2,12,081 ಮೆಟ್ರಿಕ್‌ ಟನ್‌ ಮೀನುಗಾರಿಕೆ ನಡೆದಿದೆ. ಹಿಂದಿನ ವರುಷಗಳಿಗೆ ಹೋಲಿಸಿದರೆ ಈ ಬಾರಿ ಉತ್ತಮ ಮೀನುಗಾರಿಕೆ ನಡೆದಿದೆ. ಒಟ್ಟು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2022-23 ನೇ ಸಾಲಿನ ಋತುವಿನಲ್ಲಿ 5,45,618 ಮೆಟ್ರಿಕ್‌ ಟನ್‌ ಮೀನುಗಾರಿಕೆ ನಡೆದಿದೆ. ಕಳೆದ ಬಾರಿಗೆ ಹೋಲಿಸಿದರೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹತ್ತಿರ ಹತ್ತಿರ ಮೂರು ಪಟ್ಟಿನಷ್ಟು ಮೀನುಗಾರಿಕೆ ಅಧಿಕವಾಗಿದೆ.

ಕೈಗೂಡದ ನಿರೀಕ್ಷೆ : ಈ ಬಾರಿ ನಿರೀಕ್ಷೆಯಂತೆ ಫಿಶ್‌ ಮಿಲ್​ಗಳು ಸರಿಯಾಗಿ ಕಾರ್ಯ ನಿರ್ವಹಿಸಿಲ್ಲ ಎನ್ನುವ ಮಾತಿದೆ. ಉಳ್ಳಾಲದ ಒಂದೇ ಭಾಗದಲ್ಲಿರುವ 13 ಫಿಶ್‌ ಮಿಲ್​ಗಳು ವರ್ಷವಿಡೀ ಬಂದ್‌ ಆಗಿತ್ತು. ಜೊತೆಗೆ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಕೂಡಾ ತಲೆದೋರಿದ್ದರಿಂದ ಮೀನು ರಫ್ತಿನ ಮೇಲೆ  ಹೊಡೆತ ಬಿದ್ದಿದೆ. ಮೀನುಗಾರಿಕೆ ಹೆಚ್ಚಿದ್ದರೂ, ಲಾಭಾಂಶ ಮಾತ್ರ ಶೇಕಡಾ 30-40 ರಷ್ಟು ಕುಸಿದಿದೆ ಎಂದು ಮೀನುಗಾರರು ತಿಳಿಸಿದ್ದಾರೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಆಹಾರ-ನಿದ್ರೆ ಪರಸ್ಪರ ಪೂರಕ; ಉತ್ತಮ ನಿದ್ರೆಗೆ ಹಸಿವು ಅಗತ್ಯ: ರಾಘವೇಶ್ವರ ಶ್ರೀ
August 2, 2026
9:50 PM
by: ದ ರೂರಲ್ ಮಿರರ್.ಕಾಂ
ಕೃಷಿಕರ ಮಿತ್ರ ಸಾಯಿಶೇಖರ್‌ ಕರಿಕಳ ಅವರಿಗೆ ರೈತ ರತ್ನ ಪ್ರಶಸ್ತಿ
August 2, 2026
9:41 PM
by: ದ ರೂರಲ್ ಮಿರರ್.ಕಾಂ
ಮಂಗಳೂರಿನಲ್ಲಿ ರಾಷ್ಟ್ರೀಯ ಚೆಸ್ ಚಾಂಪಿಯನ್ ಶಿಪ್‌ಗೆ ಚಾಲನೆ – 28 ರಾಜ್ಯ–ಕೇಂದ್ರಾಡಳಿತ ಪ್ರದೇಶಗಳಿಂದ 644 ಬಾಲಕಿ-ಬಾಲಕಿಯರು
August 2, 2026
8:39 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 02-08-2026 | ಕರಾವಳಿಯಲ್ಲಿ ಮಳೆ ಇಳಿಮುಖ ..? ರಾಜ್ಯದಲ್ಲಿ ಮುಂಗಾರು ಸ್ಥಿತಿ ಏನು..?
August 2, 2026
6:59 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror