ಆಹಾರ-ನಿದ್ರೆ ಪರಸ್ಪರ ಪೂರಕ; ಉತ್ತಮ ನಿದ್ರೆಗೆ ಹಸಿವು ಅಗತ್ಯ: ರಾಘವೇಶ್ವರ ಶ್ರೀ

August 2, 2026
9:50 PM
ಉತ್ತಮ ಆರೋಗ್ಯಕ್ಕೆ ಸರಿಯಾದ ಆಹಾರ ಮತ್ತು ನಿದ್ರೆ ಎರಡೂ ಅವಿಭಾಜ್ಯ ಎಂದು ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು. ರಾತ್ರಿ ತಡವಾಗಿ 'ಡಿನ್ನರ್' ಮಾಡುವ ಪದ್ಧತಿ ಆರೋಗ್ಯಕ್ಕೆ ಹಾನಿಕಾರಕ ಎಂದು ಎಚ್ಚರಿಸಿದರು.

ಆಹಾರ ಹಾಗೂ ನಿದ್ದೆ ಪರಸ್ಪರ ಸಂಬಂಧ ಹೊಂದಿದ್ದು, ಉತ್ತಮ ನಿದ್ರೆ ಬರಲು ಹಸಿವು ಅಗತ್ಯ. ಅದೇ ರೀತಿ ಸರಿಯಾದ ಆಹಾರ ಸೇವನೆಯಿಂದ ಉತ್ತಮ ನಿದ್ರೆ ಪ್ರಾಪ್ತವಾಗುತ್ತದೆ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.

ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ ಧರ್ಮಸಭೆಯಲ್ಲಿ ಭಾನುವಾರ ‘ಅನ್ನಂ ಬ್ರಹ್ಮ’ ಪ್ರವಚನ ಸರಣಿಯ ಅಂಗವಾಗಿ ‘ನಿದ್ದೆಯೆಂಬ ಪೂಜೆ’ ವಿಷಯದ ಕುರಿತು ಆಶೀರ್ವಚನ ನೀಡಿದ ಅವರು, ದೇಹಕ್ಕೆ ಸಂಬಂಧಿಸಿದ ಮೂರು ಪ್ರಮುಖ ಉಪಾಂಗಗಳಲ್ಲಿ ಆಹಾರ ಮತ್ತು ನಿದ್ದೆ ಪ್ರಮುಖವಾಗಿವೆ ಎಂದು ತಿಳಿಸಿದರು.

ನಿದ್ದೆ ಮಾತೃಸ್ವರೂಪಿಣಿ ದೇವಿ :  ನಿದ್ರೆ ಕೇವಲ ಒಂದು ಅವಸ್ಥೆಯಲ್ಲ. ಅದು ಮಾತೃಸ್ವರೂಪಿಣಿ ದೇವಿಯೇ ಆಗಿದ್ದು, ದಿನವಿಡೀ ಉಂಟಾಗುವ ಶ್ರಮವನ್ನು ನಿವಾರಿಸಿ, ದೇಹ ಹಾಗೂ ಮನಸ್ಸಿನ ಆಯಾಸವನ್ನು ಸರಿಪಡಿಸಿ, ಹೊಸ ಶಕ್ತಿ ಮತ್ತು ಚೈತನ್ಯವನ್ನು ತುಂಬುವ ಶಕ್ತಿಯನ್ನು ಹೊಂದಿದೆ. ಸಕಾಲದಲ್ಲಿ ಬರುವ ನಿದ್ರೆ ಆರೋಗ್ಯ, ಸುಖ ಹಾಗೂ ಹಲವು ಸಿದ್ಧಿಗಳಿಗೆ ಕಾರಣವಾಗುತ್ತದೆ ಎಂದು ಹೇಳಿದರು.

ಸರಿಯಾದ ಸಮಯದ ನಿದ್ರೆ ಸಮಾಧಿಸ್ಥಿತಿ : ನಿದ್ರೆ ಸರಿಯಾಗಿ ಬಂದಾಗ ಅದು ಸಮಾಧಿಸ್ಥಿತಿಗೆ ಸಮಾನ ಎಂದು ಶಾಸ್ತ್ರಗಳು ಹೇಳಿವೆ. ರಾತ್ರಿ ಹಾಗೂ ಬೆಳಗಿನ ನಡುವಿನ ಎರಡು ಯಾಮಗಳು ನಿದ್ರೆಗೆ ಅತ್ಯುತ್ತಮ ಸಮಯ. ಮಧ್ಯರಾತ್ರಿ ಸಮಾನವಾಗಿ ಬರುವಂತೆ ನಿದ್ರೆ ಮಾಡಿದರೆ ಅದು ಕೇವಲ ನಿದ್ರೆಯಲ್ಲ, ಯೋಗಸಮಾಧಿಯಾಗಿದೆ ಎಂದು ಶ್ರೀಗಳು ವಿವರಿಸಿದರು.

ತಲೆಹಾಕುವ ದಿಕ್ಕಿಗೂ ಮಹತ್ವ : ಪೂರ್ವ ದಿಕ್ಕಿಗೆ ತಲೆಹಾಕಿ ಮಲಗಿದರೆ ಸಂಪತ್ತು, ದಕ್ಷಿಣಕ್ಕೆ ಮಲಗಿದರೆ ಆಯಸ್ಸಿನ ವೃದ್ಧಿ ಉಂಟಾಗುತ್ತದೆ. ಪಶ್ಚಿಮಕ್ಕೆ ತಲೆಹಾಕಿದರೆ ಚಿಂತೆ ಹೆಚ್ಚಾಗುತ್ತದೆ ಹಾಗೂ ಉತ್ತರಕ್ಕೆ ತಲೆಹಾಕಿ ಮಲಗುವುದು ಶಾಸ್ತ್ರದ ಪ್ರಕಾರ ಸೂಕ್ತವಲ್ಲ ಎಂದು ಅವರು ತಿಳಿಸಿದರು. ನಿದ್ರೆಗೆ ಮುನ್ನ ಮನಸ್ಸನ್ನು ಶಾಂತವಾಗಿರಿಸಿಕೊಂಡು, ಉದ್ವೇಗ ಉಂಟುಮಾಡುವ ವಿಷಯಗಳಿಂದ ದೂರವಿರಬೇಕು ಎಂದೂ ಸಲಹೆ ನೀಡಿದರು.

‘ಡಿನ್ನರ್’ ನಮ್ಮ ಸಂಸ್ಕೃತಿಯಲ್ಲ : ಸಂಜೆ ಸೂರ್ಯಾಸ್ತದ ಸುಮಾರು ಒಂದು ಗಂಟೆಯೊಳಗೆ ಆಹಾರ ಸೇವಿಸುವುದು ಆರೋಗ್ಯಕ್ಕೆ ಉತ್ತಮ. ರಾತ್ರಿಯ ಆಹಾರ ಕಡಿಮೆ ಪ್ರಮಾಣದಲ್ಲಿದ್ದು, ಸುಲಭವಾಗಿ ಜೀರ್ಣವಾಗುವಂತಿರಬೇಕು. ಭೂರಿ ಭೋಜನವನ್ನು ರಾತ್ರಿ ಸೇವಿಸುವುದು ಶಾಸ್ತ್ರದಲ್ಲಿ ನಿಷಿದ್ಧವಾಗಿದೆ. ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದ ‘ಡಿನ್ನರ್’ ಹೆಸರಿನಲ್ಲಿ ರಾತ್ರಿ ತಡವಾಗಿ ಭೋಜನ ಕೂಟ ನಡೆಸುವ ಪ್ರವೃತ್ತಿ ಆರೋಗ್ಯಕ್ಕೆ ಹಾನಿಕಾರಕ ಎಂದು ಅವರು ಹೇಳಿದರು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಫಾಲೋಮಾಡಲು ಇಲ್ಲಿ ಕ್ಲಿಕ್‌ ಮಾಡಿ

Jagadguru Sri Raghaveshwara Bharathi Swamiji said that food and sleep are closely connected, and proper hunger and balanced eating are essential for quality sleep. Speaking during the ‘Annam Brahma’ discourse at the Annabrahma Chaturmasya in Gokarna, he also advised against late-night dinners and highlighted the spiritual and health significance of disciplined sleep.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕೃಷಿಕರ ಮಿತ್ರ ಸಾಯಿಶೇಖರ್‌ ಕರಿಕಳ ಅವರಿಗೆ ರೈತ ರತ್ನ ಪ್ರಶಸ್ತಿ
August 2, 2026
9:41 PM
by: ದ ರೂರಲ್ ಮಿರರ್.ಕಾಂ
ಮಂಗಳೂರಿನಲ್ಲಿ ರಾಷ್ಟ್ರೀಯ ಚೆಸ್ ಚಾಂಪಿಯನ್ ಶಿಪ್‌ಗೆ ಚಾಲನೆ – 28 ರಾಜ್ಯ–ಕೇಂದ್ರಾಡಳಿತ ಪ್ರದೇಶಗಳಿಂದ 644 ಬಾಲಕಿ-ಬಾಲಕಿಯರು
August 2, 2026
8:39 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 02-08-2026 | ಕರಾವಳಿಯಲ್ಲಿ ಮಳೆ ಇಳಿಮುಖ ..? ರಾಜ್ಯದಲ್ಲಿ ಮುಂಗಾರು ಸ್ಥಿತಿ ಏನು..?
August 2, 2026
6:59 PM
by: ಸಾಯಿಶೇಖರ್ ಕರಿಕಳ
ಭಾರೀ ಮಳೆಯ ಎಚ್ಚರಿಕೆ : 24 ಗಂಟೆ ಸನ್ನದ್ಧವಾಗಿರಲು ಡಿಸಿ ಸೂಚನೆ, ಭೂಕುಸಿತ ಪ್ರದೇಶಗಳ ಮೇಲೆ ಕಟ್ಟೆಚ್ಚರ
August 2, 2026
7:24 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror