Advertisement
ಸುದ್ದಿಗಳು

ಮರದ ಕಾಲುಸಂಕ ಮುಕ್ತ ದಕ್ಷಿಣ ಕನ್ನಡ ಜಿಲ್ಲೆ‌ ಅಭಿಯಾನ‌ | ಯುವ ತೇಜಸ್ಸು ಬಳಗದಿಂದ ಪ್ರಯತ್ನ | ನಿಮ್ಮ‌ ಬೆಂಬಲವೂ ಬೇಕಿದೆ… |

Share

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿನೂತನ ಅಭಿಯಾನವೊಂದನ್ನು  ಯುವತೇಜಸ್ಸು ಟ್ರಸ್ಟ್‌ ಹಮ್ಮಿಕೊಂಡಿದೆ. ಯುವಕರನ್ನೊಳಗೊಂಡ ಈ ತಂಡವು ತನ್ನ ಮಾಸಿಕ ಯೋಜನೆಯ ಜೊತೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರದ ಅಪಾಯಕಾರಿ ಕಾಲುಸಂಕ ನಿರ್ಮೂಲನೆ ಮಾಡಿ ಸುಸಜ್ಜಿತವಾದ ಸುರಕ್ಷಿತ ಕಬ್ಬಿಣದ ಕಾಲುಸಂಕ ನಿರ್ಮಿಸುವ ಅಭಿಯಾನಕ್ಕೆ ಮುಂದಡಿ ಇಟ್ಟಿದೆ.

Advertisement
Advertisement

ಈ ಯೋಜನೆಯು ಸಾರ್ವಜನಿಕ ರಸ್ತೆಯಲ್ಲಿ ಅತಿ ಹೆಚ್ಚು ಮನೆಗಳ ಸಂಪರ್ಕ ಹೊಂದಿದ ಅಪಾಯಕಾರಿ ಮರದ ಕಾಲುಸಂಕ ಇರುವ ಯೋಜನೆಯನ್ನು ಕೈಗೆತ್ತಿಕೊಂಡು ಮೊದಲ ಪ್ರಾಶಸ್ತ್ಯದಲ್ಲಿ ಸುಸಜ್ಜಿತ ಕಬ್ಬಿಣದ ಕಾಲುಸಂಕ ನಿರ್ಮಿಸುವ ಮೂಲಕ ಸಮಸ್ಯೆಗಳಿಗೆ ಮುಕ್ತಿ ಕೊಡುವ ಕಾರ್ಯ ಮಾಡುವ ದೃಢ ಸಂಕಲ್ಪ ಮಾಡಿದೆ. ಇದಕ್ಕಾಗಿ ಮ್ಮ ಊರಿನ ಅಪಾಯಕಾರಿ ಮರದ ಕಾಲು ಸಂಕದ ಪೋಟೋ ಸಮೇತ ವಿವರಗಳನ್ನು ಯುವ ತೇಜಸ್ಸು ಸಂಸ್ಥೆಗೆ ನೀಡಿದಲ್ಲಿ, ಅತೀ ಅಗತ್ಯ ಎನಿಸುವ ಸ್ಥಳಗಳಿಗೆ ಮೊದಲ ಪ್ರಾಶಸ್ತ್ಯ ನೀಡಿ, ಜಿಲ್ಲೆಯ ಪ್ರತಿ ಭಾಗದ ಮರದ ಅಪಾಯಕಾರಿ ಕಾಲುಸಂಕಗಳನ್ನು ತೆರವುಗೊಳಿಸಿ ಉತ್ತಮವಾದ ಕಬ್ಬಿಣದ ಕಾಲುಸಂಕ ನಿರ್ಮಾಣಕ್ಕೆ ಯುವ ತೇಜಸ್ಸು ಬಳಗ ಮುಂದಾಗಲಿದೆ‌.

ಮಾನವೀಯತೆಗಿಂತ ದೊಡ್ಡ ಧರ್ಮವಿಲ್ಲ ಎಂಬುದು ನಾಣ್ಣುಡಿ. ಸಮಾಜದಲ್ಲಿನ ಸತ್ತು‌ಹೋದ ಕೆಲ ಮನಸ್ಸುಗಳ ನಡುವೆ ಜೀವಂತ ಶವಗಳಾಗುವ ಬದಲು ನಮ್ಮಿಂದ ಸಮಾಜಕ್ಕೇನಾದರೂ ಸಹಾಯ ಮಾಡಬಹುದು ಎಂಬ ಸಮಾನ ಮನಸ್ಕರ ಗುಂಪೊಂದು ಯೋಚಿಸಿದ ಫಲವಾಗಿ ಹುಟ್ಟಿಕೊಂಡ ಸಂಸ್ಥೆಯೇ ಯುವ ತೇಜಸ್ಸು ಟ್ರಸ್ಟ್. ಸಾಮಾಜಿಕ ಜಾಲತಾಣದ‌ ಬಳಕೆಯಿಂದ ಯುವ ಸಮೂಹ ಕೆಡುಕಿನತ್ತ ಸಾಗುತ್ತಿದೆ ಎಂಬ ಕಾಲಘಟ್ಟದಲ್ಲಿ ಸಮಾಜದಲ್ಲಿನ ಅಶಕ್ತರ ಪಾಲಿಗೆ ಕಿಂಚಿತ್ತಾದರೂ ಸಹಾಯ ಮಾಡುವ ಆಶಯದೊಂದಿಗೆ ಆರಂಭವಾದ ಯುವ ತೇಜಸ್ಸು ಸಂಸ್ಥೆ ಬಳಿಕ ಹೆಮ್ಮರವಾಗಿ ಬೆಳೆದಿದ್ದು ಈಗ ಇತಿಹಾಸ.

ಯುವ ಜನಾಂಗವನ್ನೇ ಸೇತುವೆಯನ್ನಾಗಿಸಿಕೊಂಡು ಸಮಾಜದ ಅಸಹಾಯಕರ ಕಷ್ಟಗಳಿಗೆ ನೆರವಾಗುತ್ತಾ ಅವರ ಜೀವನದಲ್ಲಿ ನಗುವಿನ ದಡ ಸೇರಿಸುವಲ್ಲಿ ಯುವ ತೇಜಸ್ಸು ಟ್ರಸ್ಟ್ ಇದುವರೆಗೆ ತನ್ನಿಂದಾದ ನೆರವು ಕಾರ್ಯವನ್ನು ಯಶಸ್ವಿಯಾಗಿ ನಿಭಾಯಿಸಿದೆ. ಒಂದಿಷ್ಟು ಸಮಾಜಕ್ಕಾಗಿ ಎಂಬ ಧ್ಯೇಯದೊಂದಿಗೆ ತನ್ನಿಂದಾದ ಅಳಿಲು ಸೇವೆಯನ್ನು ಸಮಾಜಕ್ಕೆ ನೀಡುತ್ತ ಕಳೆದ ಎಂಟು ವರ್ಷಗಳಿಂದ ತನ್ನದೇ ಕಾರ್ಯದಲ್ಲಿ ಯುವ ತೇಜಸ್ಸು ಬಳಗ ತೊಡಗಿದೆ‌.

ಬಡತನದ ನೋವನ್ನು ಅರಿತ ಬಡ ಸದಸ್ಯರಿಂದ ಸಮಾಜದ ಕಟ್ಟ ಕಡೆಯ ವ್ಯಕ್ತಿಗಳ ಸೇವೆ ಮಾಡುವ ಸಲುವಾಗಿ ಆರಂಭಗೊಂಡ ಸಂಸ್ಥೆ ದಾನಿಗಳಿಂದ ಪ್ರತಿತಿಂಗಳಿಗೆ ಒಂದಿಷ್ಟು ಸಮಾಜಕ್ಕಾಗಿ ಮೀಸಲಿಡಿ ಎಂಬ ಭಿನ್ನಹದೊಂದಿಗೆ ಸಾಮಾಜಿಕ ಜಾಲತಾಣಗಳಾದ ವಾಟ್ಸಪ್, ಫೇಸ್ ಬುಕ್ ಗ್ರೂಪ್ ಗಳಲ್ಲಿ ತನ್ನ ಸೇವಾ ವೈಖರಿಯನ್ನು ಬಿತ್ತರಿಸುತ್ತ ಅಂತೆಯೇ ಹಣಕಾಸಿನ ವ್ಯವಹಾರವನ್ನು ಪಾರದರ್ಶಕವಾಗಿ ತಿಂಗಳಿಗೊಮ್ಮೆ ವರದಿ ನೀಡಿಕೊಂಡು ಅಪಾರ ಜನ ಮನ್ನಣೆಗೆ ಪಾತ್ರವಾಗಿದೆ ಯುವ ತೇಜಸ್ಸು ಬಳಗ. ನಿರಂತರವಾಗಿ ದಕ್ಷಿಣ ಕನ್ನಡ, ಮಡಿಕೇರಿ, ಕಾಸರಗೋಡು, ಉಡುಪಿ ಜಿಲ್ಲೆಯಾದ್ಯಂತ ಬಡ ಕುಟುಂಬದ ವಿದ್ಯಾರ್ಥಿಗಳಿಗೆ, ವಯೋವೃದ್ಧರಿಗೆ ,ಶಿಕ್ಷಣ ಸಂಸ್ಥೆಗಳಿಗೆ, ಅನಾರೋಗ್ಯ ಪೀಡಿತರಿಗೆ ಸಹಾಯಧನ, ವೈದ್ಯಕೀಯ ಶಿಬಿರ, ರಕ್ತದಾನ ಶಿಬಿರ, ಧಾರ್ಮಿಕ ಕ್ಷೇತ್ರಗಳಲ್ಲಿ ಕರಸೇವೆ, ಪ್ರಾಕೃತಿಕ ವಿಕೋಪಗಳಿಂದ ಹಾನಿಯಾದ ಪ್ರದೇಶದಲ್ಲಿ ಸದಸ್ಯರಿಂದ ಸಾಮೂಹಿಕ ಶ್ರಮದಾನ ನಡೆಸುತ್ತಾ ಬಂದಿದೆ.

ಯುವ ತೇಜಸ್ಸು ಸಂಸ್ಥೆಯ ಸಾಮಾಜಿಕ ಸೇವೆಯನ್ನು ಪ್ರೋತ್ಸಾಹಿಸುವ ಸದಸ್ಯರು ದೇಶ ವಿದೇಶಗಳಲ್ಲಿ ಉದ್ಯೋಗದಲ್ಲಿರುವ, ಊರಿನ ಪರೋಪಕಾರಿ ಮನೋಭಾವ ಹೊಂದಿರುವ ಸಹೃದಯಿ ದಾನಿಗಳ ಸಹಕಾರದಿಂದ, ಬೆಂಬಲದಿಂದ ಇದುವರೆಗೆ 134 ಯೋಜನೆಯ ಮೂಲಕ ಸುಮಾರು ನಲವತ್ತು ಲಕ್ಷಕ್ಕೂ ಅಧಿಕ ಮೊತ್ತಗಳಷ್ಟು ಧನಸಹಾಯವನ್ನು ನೊಂದ ಕುಟುಂಬಗಳಿಗೆ ನೀಡಿದ್ದು, ತನ್ನ ಸೇವೆಯನ್ನು ವಿಸ್ತರಿಸುತ್ತಾ ಯುವ ತೇಜಸ್ಸು ಸಂಸ್ಥೆಯು ಯುವ ಜನಾಂಗದ ಚಿತ್ತವನ್ನು ತನ್ನತ್ತ ಸೆಳೆಯುತ್ತಾ ಸಾಗುತ್ತಿದ್ದು ಹಂತಹಂತವಾಗಿ ಬೆಳವಣಿಗೆಯತ್ತ ಮುಖ ಮಾಡಿದೆ.

ಕಳೆದ ವರ್ಷದಿಂದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಆರಂಭಗೊಂಡ ಯುವ ತೇಜಸ್ಸು ಅಂಬ್ಯುಲೆನ್ಸ್ ಕೂಡ ಸಮಾಜಕ್ಕೆ ಈ ಸಂಸ್ಥೆ ನೀಡಿದ ಕೊಡುಗೆ. ಅಪಘಾತ ಅಥವಾ ತುರ್ತು ಸಂದರ್ಭಗಳಲ್ಲಿ ರೋಗಿಗಳನ್ನು ಆಸ್ಪತ್ರೆಗೆ ಸುರಕ್ಷಿತವಾಗಿ ಸೇರಿಸುವ ಮಹತ್ತರವಾದ ಕಾರ್ಯ ನಿರ್ವಹಿಸುತ್ತಾ ಬರುತ್ತಿದೆ. ತೀರಾ ಅಗತ್ಯ ಎನಿಸುವ ಕುಟುಂಬಗಳಿಗೆ ಉಚಿತ ಸೇವೆ ನೀಡುತ್ತಾ, ಅತ್ಯಲ್ಪ ಗೌರವಧನ ಪಡೆದು ಉತ್ಕೃಷ್ಟ ಸೇವೆ ನೀಡುವಲ್ಲಿ ಯುವ ತೇಜಸ್ಸು ಅಂಬ್ಯುಲೆನ್ಸ್ ಯಶಸ್ವಿಯಾಗಿದೆ.

ಇದೀಗ ಹೊಸ ಯೋಜನೆಯ ಪ್ರಕಾರ,  ನಿಮ್ಮ ಊರಿನ ಅಪಾಯಕಾರಿ ಮರದ ಕಾಲು ಸಂಕದ ಪೋಟೋ ಸಮೇತ ವಿವರಗಳನ್ನು ಯುವ ತೇಜಸ್ಸು ಸಂಸ್ಥೆಗೆ ನೀಡಿದಲ್ಲಿ, ಅತೀ ಅಗತ್ಯ ಎನಿಸುವ ಸ್ಥಳಗಳಿಗೆ ಮೊದಲ ಪ್ರಾಶಸ್ತ್ಯ ನೀಡಿ, ಜಿಲ್ಲೆಯ ಪ್ರತಿ ಭಾಗದ ಮರದ ಅಪಾಯಕಾರಿ ಕಾಲುಸಂಕಗಳನ್ನು ತೆರವುಗೊಳಿಸಿ ಉತ್ತಮವಾದ ಕಬ್ಬಿಣದ ಕಾಲುಸಂಕ ನಿರ್ಮಾಣಕ್ಕೆ ಯುವ ತೇಜಸ್ಸು ಬಳಗ ಮುಂದಾಗಲಿದೆ‌.

ಕಳುಹಿಸಿಕೊಡಬೇಕಾದ ವಿವರಗಳು: ಊರಿನ ಹೆಸರು, ಕಾಲುಸಂಕದ ಸದ್ಯದ ಫೋಟೋ , ಕಾಲುಸಂಕದ ವಿವರ , ಊರಿನಲ್ಲಿರುವ ಮನೆಯ ಸಂಖ್ಯೆ, ಸಂಪರ್ಕಕ್ಕಾಗಿ ಮೊಬೈಲ್ ಸಂಖ್ಯೆ.

ಅಂಚೆಯಲ್ಲಿ ಪತ್ರ ಕಳಿಸಿಕೊಡಬೇಕಾದ ವಿಳಾಸ : ಬಾಲಾಜಿ ಕೊಬ್ಬರಿ ಎಣ್ಣೆ ಮಿಲ್ , ಕಾಶಿಕಟ್ಟೆ, ಕುಕ್ಕೆ ಸುಬ್ರಹ್ಮಣ್ಯ , ಕಡಬ ತಾಲೂಕು ದ.ಕ – 574238

ವಾಟ್ಸಪ್ ಮಾಡಬೇಕಾದ ನಂಬರ್: 94801 77770 , 88610 74919, 76187 46761, 91085 87145, 80888 37771

ನೆರವಾಗುವ ದಾನಿಗಳಿಗಾಗಿ..
  • 9740206706
  • ಸಂಸ್ಥೆಯ ಬ್ಯಾಂಕ್ ಖಾತೆ ಸಂಖ್ಯೆ:-
  • ಖಾತೆ ಹೆಸರು:- YUVA TEJASSU
  • ಖಾತೆ ಸಂಖ್ಯೆ:- 01782200083523
  • IFSC CODE:- CNRB0010178
  • Canara Bank, Panja Branch {Sullia Tq}
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಕರಾವಳಿ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಆಗ್ರಹ | ಕರಾವಳಿ ಜಿಲ್ಲೆಗಳ ಅಭಿವೃದ್ಧಿಗೆ ಸಮಗ್ರ ದೃಷ್ಟಿ ಅಗತ್ಯ

ಕರಾವಳಿ ಜಿಲ್ಲೆಗಳ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಅಗತ್ಯ ಅನುದಾನವನ್ನು ಮುಂದಿನ ಬಜೆಟ್‌ನಲ್ಲಿ ನೀಡಬೇಕೆಂದು…

3 hours ago

ಅಡಿಕೆಯ ಬಗ್ಗೆ ಹೊಸ ಅಧ್ಯಯನ | ಕ್ಯಾನ್ಸರ್‌ ಅಷ್ಟೇ ಅಲ್ಲ… ಹೃದಯ ರೋಗ ಮತ್ತು ಮೆಟಾಬಾಲಿಕ್ ಸಮಸ್ಯೆಯೂ ಇದೆ…!

ಅಡಿಕೆ ಜಗಿಯುವುದು ಕೇವಲ ಸಾಂಪ್ರದಾಯಿಕ ಅಭ್ಯಾಸ ಮಾತ್ರವಲ್ಲ,  ಅದು ಗಂಭೀರ ಆರೋಗ್ಯ ಅಪಾಯಗಳಿಗೆ…

1 day ago

ರಾಜ್ಯದಲ್ಲಿ ಹೆಚ್ಚುತ್ತಿರುವ ಮಾನವ–ವನ್ಯಜೀವಿ ಸಂಘರ್ಷ | ಶಾಶ್ವತ ಪರಿಹಾರಕ್ಕೆ ಕೇಂದ್ರದ ಗಮನ ಸೆಳೆದು ಕುಮಾರಸ್ವಾಮಿ ಮನವಿ

ರಾಜ್ಯದಲ್ಲಿ ಹೆಚ್ಚುತ್ತಿರುವ ಮಾನವ–ವನ್ಯಜೀವಿ ಸಂಘರ್ಷ ಹಾಗೂ ಆನೆ ದಾಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು…

1 day ago

ಮೆಕ್ಕೆಜೋಳ ಖರೀದಿ ಕೇಂದ್ರಗಳಿಂದ 3,412 ರೈತರಿಗೆ ಲಾಭ

ದಾವಣಗೆರೆ ಜಿಲ್ಲೆಯಲ್ಲಿ 5 ಮೆಕ್ಕೆಜೋಳ ಖರೀದಿ ಕೇಂದ್ರಗಳಿಂದ 3,412 ರೈತರು 87,258 ಕ್ವಿಂಟಲ್…

1 day ago

ಜಲಜೀವನ್ ಮಿಷನ್ ವೇಗಕ್ಕೆ ಕಟ್ಟುನಿಟ್ಟಿನ ಗಡಿ : ಉಳಿದ ಕಾಮಗಾರಿಗಳು ತ್ವರಿತ ಪೂರ್ಣಗೊಳಿಸಿ

ಜಲಜೀವನ್‌ ಮಿಷನ್ ಯೋಜನೆಯ ಕಾಮಗಾರಿಗಳನ್ನು ಆದಷ್ಟು ಶೀಘ್ರ ಪೂರ್ಣಗೊಳಿಸುವಂತೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್…

1 day ago

ಕೃಷಿಯ ಮೌನ ಆಕ್ರಂದನ | ಕಾಡಂಚಿನ ಅಡಿಕೆ ತೋಟಗಳ ಅಳಲು

ಕರಾವಳಿ ಕರ್ನಾಟಕದ ಅಡಿಕೆ ತೋಟಗಳು ಕಾಡುಪ್ರಾಣಿಗಳ ಹಾವಳಿಯಿಂದ ಭಾರೀ ನಷ್ಟ ಅನುಭವಿಸುತ್ತಿವೆ. ಮಾನವ–ವನ್ಯಜೀವಿ…

1 day ago