ಸಂಪಾದಕೀಯ ಆಯ್ಕೆ

#FranceRiots | ಫ್ರಾನ್ಸ್‌ ಏಕೆ ಹೊತ್ತಿ ಉರಿಯುತ್ತಿದೆ….? |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಕಳೆದ ಮೂರು ದಿನಗಳಿಂದ ಫ್ರಾನ್ಸ್‌ ಹೊತ್ತಿ ಉರಿಯುತ್ತಿದೆ. ಹಲವು ಕಡೆಗಳಲ್ಲಿ  ಬೆಂಕಿಯ ಜ್ವಾಲೆ ಹಬ್ಬಿದೆ. ಪ್ರತಿಭಟನೆ, ಹಿಂಸಾತ್ಮಕ ರೂಪಗಳು ಕಂಡುಬಂದಿದೆ.ಕಳೆದ ಐದು ದಿನಗಳಲ್ಲಿ 10 ಶಾಪಿಂಗ್ ಮಾಲ್‌ಗಳು, 200ಕ್ಕೂ ಹೆಚ್ಚು ಸೂಪರ್ ಮಾರ್ಕಟ್‌ಗಳು, 250 ತಂಬಾಕು ಮಳಿಗೆಗಳು ಹಾಗೂ 250 ಬ್ಯಾಂಕ್‌ಗಳನ್ನು ದಂಗೆಕೋರರು ಲೂಟಿ ಮಾಡಿದ್ದಾರೆ.  ಫ್ರಾನ್ಸ್‌ನಾದ್ಯಂತ ಸುಮಾರು 1500 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಈಗ ಅಲ್ಲಿನ  ಸರ್ಕಾರವು ಸುಮಾರು 45,000 ಪೊಲೀಸ್ ಅಧಿಕಾರಿಗಳನ್ನು ಶಾಂತಿಗಾಗಿ ನಿಯೋಜಿಸಿದೆ. ಇಷ್ಟಕ್ಕೆಲ್ಲಾ ಸದ್ಯದ ಕಾರಣ, ನಹೆಲ್ ಎಂಬ 17 ವರ್ಷದ ಹುಡುಗನ ಹತ್ಯೆಯ ಪರಿಣಾಮ..!

Advertisement
Advertisement

ಫ್ರಾನ್ಸ್‌ನಲ್ಲಿ 17 ವರ್ಷದ ಹುಡುಗನೊಬ್ಬನ ಸಾವು ಇಡೀ ದೇಶದಲ್ಲಿ ಕಳೆದ ಮೂರು ದಿನಗಳಿಂದ ಉಗ್ರ ಪ್ರತಿಭಟನೆಯನ್ನು ಹುಟ್ಟುಹಾಕಿದೆ. ಪ್ರತಿಭಟನೆ ವೇಳೆ ಕೈಗೆ ಸಿಕ್ಕಸಿಕ್ಕದ್ದನ್ನೆಲ್ಲ ಜನರು ಧ್ವಂಸಮಾಡಿದ್ದಾರೆ. ಫ್ರಾನ್ಸ್‌ನ ಮಾರ್ಸಿಲ್ಲೆ, ಲಿಲ್ಲೆ ಲಿಯಾನ್, ಪೌ, ಟೌಲೌಸ್ ಮತ್ತು ಮುಂತಾದ ಪ್ರದೇಶಗಳಲ್ಲಿ ಪ್ರತಿಭಟನಾಕಾರರು ಕಟ್ಟಡಗಳಿಗೆ, ಪೊಲೀಸ್​ ವಾಹನಗಳಿಗೆ, ಬಸ್ ಡಿಪೋ, ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಬೆಂಕಿ ಹಚ್ಚಿದ್ದಾರೆ.

ಕಳೆದ ಮಂಗಳವಾರ ಪ್ಯಾರಿಸ್‌ನ ನಾಂಟೆರ್ರೆ ಎಂಬ ಪ್ರದೇಶದಲ್ಲಿ ಟ್ರಾಫಿಕ್ ಸಿಗ್ನಲ್ ವೇಳೆ  ನಹೆಲ್ ಎಂಬ 17 ವರ್ಷದ ಹುಡುಗ ನಿಯಮ ಉಲ್ಲಂಘಿಸಿದ ಕಾರಣದಿಂದ ಪೊಲೀಸರು ಗುಂಡು ಹಾರಿಸಿದರು. ‌ಈತ ಈ ಹಿಂದೆ ಕೂಡ ಹಲವಾರು ಬಾರಿ ಸಂಚಾರ ನಿಯಮ ಉಲ್ಲಂಘಿಸಿದ್ದಾನೆಂದು ಹೇಳಲಾಗಿದೆ. ತೀವ್ರ ಗಾಯಗೊಂಡ ಈ ಯುವಕ ಮೃತಪಟ್ಟಿದ್ದ. ಹೀಗಾಗಿ ಮಂಗಳವಾರ ರಾತ್ರಿ ನಾಂಟೆರ್ರೆಯಲ್ಲಿ ಪ್ರತಿಭಟನೆಯ ಸರಣಿ ಆರಂಭವಾಯಿತು. ತಕ್ಷಣವೇ ನಹೆಲ್ ಮೇಲೆ ಗುಂಡು ಹಾರಿಸಿದ ಅಧಿಕಾರಿಗಳು ಮೃತಪಟ್ಟ ಯುವಕನ ಕುಟುಂಬದವರಲ್ಲಿ ಕ್ಷಮೆಯಾಚಿಸಿದ್ದಾರೆ. ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗಿತ್ತು. ಆದರೆ ಹೋರಾಟವು ವಿಸ್ತರಣೆಯಾಯಿತು.

ನಹೆಲ್ ಫುಡ್​ ಡೆಲಿವರಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದನು. ಕಳೆದ ಮೂರು ವರ್ಷಗಳಿಂದ ಪೈರೇಟ್ಸ್ ಆಫ್ ನಾಂಟೆರ್ರೆ ರಗ್ಬಿ ಕ್ಲಬ್‌ನ ಸಕ್ರಿಯ ಸದಸ್ಯರಾಗಿದ್ದ. ಈತನ ಹತ್ಯೆಯು ಜನಾಂಗೀಯ ಹತ್ಯೆಯನ್ನು ಮತ್ತೆ ನೆನಪಿಸಿದೆ ಎಂದು ವರದಿಯಾಗಿದೆ. ಈ ಕಾರಣದಿಂದಲೇ ಫ್ರಾನ್ಸ್‌ ನಲ್ಲಿ ಈ ಘಟನೆ ಗಲಭೆಗೆ ಕಾರಣವಾಗಿದೆ.

Advertisement

ಫ್ರಾನ್ಸ್‌ನಲ್ಲಿ 2017ರಲ್ಲಿ  ಪೊಲೀಸ್‌ ಕಾಯಿದೆಗೆ ತಿದ್ದುಪಡಿ ತಂದು ಐದು ಗಂಭೀರ ಬಗೆಯ ಟ್ರಾಫಿಕ್‌ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಪೊಲೀಸರು ವಾಹನ ಸವಾರರ ಮೇಲೆ ಗುಂಡು ಹಾರಿಸುವ ಅವಕಾಶ ನೀಡಲಾಗಿದೆ. ಈ ಕಾಯಿದೆಯನ್ನು ಜನರು ಮೊದಲಿನಿಂದಲೂ ವಿರೋಧಿಸಿಕೊಂಡು ಬಂದಿದ್ದಾರೆ. ಆ ಸಿಟ್ಟು ಈಗ ನಹೇಲ್‌ ಹತ್ಯೆ ಪ್ರಕರಣದ ಮೂಲಕ ಸ್ಫೋಟಗೊಂಡಿದೆ ಎಂಬುದು ಇನ್ನೊಂದು ವರದಿ.

ಇಲ್ಲಿ ಈ ಬಾರಿ ಪೊಲೀಸರ ಮೇಲಿನ ಸಿಟ್ಟು ಹಾಗೂ ಜನಾಂಗೀಯ ದ್ವೇಷವೇ ಪ್ರತಿಭಟನೆ ಉಗ್ರ ರೂಪ ತಾಳಲು ಕಾರಣವಾಗಿದೆ.  2005 ರಲ್ಲಿ ಫ್ರಾನ್ಸ್‌ನಲ್ಲಿ ನಡೆದ ಘಟನೆಯನ್ನು ಇರಿಸಿಕೊಂಡು ಈಗ ಮತ್ತೆ ಹಿಂಸಾಚಾರಕ್ಕೆ ಪ್ರೇರೇಪಣೆಯಾಗಿದೆ. ಅಂದು ಇಬ್ಬರು ಹದಿಹರೆಯದವರ ಸಾವುಗಳೂ ಇದೇ ಮಾದರಿ ನಡೆದಿತ್ತು. ಇದೀಗ ಈ ದ್ವೇಷವೂ ಹರಡಿದಿದೆ. ವಿಶೇಷವಾಗಿ ಮುಸ್ಲಿಂ ಸಮುದಾಯದ ಉದ್ರಿಕ್ತರು ಫ್ರಾನ್ಸ್‌ನ ಬೀದಿ ಬೀದಿಗಳಲ್ಲಿ ಪೊಲೀಸ್‌ ಬ್ಯಾರಿಕೇಡ್‌ಗಳನ್ನು ಮುರಿದು ಹಾಕಿ, ಸಿಕ್ಕ ಸಿಕ್ಕ ವಾಹನಗಳಿಗೆ ಹಾಗೂ ಟೈರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ.

ಶಾಂತಿ ಮರುಸ್ಥಾಪಿಸಲು  ಫ್ರೆಂಚ್ ಅಧ್ಯಕ್ಷ ಎಮಾನ್ಯುಯಲ್‌ ಮ್ಯಾಕ್ರಾನ್‌ ಸರಕಾರ ಹರಸಾಹಸ ನಡೆಸುತ್ತಿದ್ದು, ಎಮರ್ಜೆನ್ಸಿ ಘೋಷಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ. ಮುಂದಿನ ಕೆಲವು ಗಂಟೆಗಳು ನಿರ್ಣಾಯಕ ಎಂದಿರುವ ಫ್ರಾನ್ಸ್ ಸರ್ಕಾರ, ಶೀಘ್ರವೇ ಗಲಭೆಯನ್ನು ಹತ್ತಿಕ್ಕಲು ಸುಮಾರು 45 ಸಾವಿರ ಪೊಲೀಸರನ್ನು ನಿಯೋಜಿಸಿದೆ.

(ಚಿತ್ರ ಮೂಲ : ರಾಯಿಟರ್ಸ್ )

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಕರೆಂಟ್ ಹೊದ ಕೂಡ್ಲೆ ಬೊಬ್ಬೆ ಹೊಡೆಯೋದು ಯಾಕೆ..!?

ಎಂತ ಮಾರ್ರೇ.... ಈ ಮನುಷ್ಯರಿಗೆ ಒಂದು ಸೊಲ್ಪ ಹೊತ್ತು ಕರೆಂಟ್ ಹೊದ್ರೆ ಕೂಡ್ಲೆ…

16 hours ago

ಮಳೆ Update | ಕರಾವಳಿ ಜಿಲ್ಲೆಯಲ್ಲಿ ವ್ಯಾಪಕ ಮಳೆ | ಹಲವು ಕಡೆ 100 ಮಿಮೀಗಿಂತಲೂ ಅಧಿಕ ಮಳೆ | ಉಡುಪಿಯಲ್ಲಿ 164 ಮಿಮೀ ಮಳೆ |

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಸುಳ್ಯ, ಪುತ್ತೂರು,ಚೆಂಬು ಪ್ರದೇಶದ ಕೆಲವು ಕಡೆ 100…

16 hours ago

ಬಿತ್ತನೆ ಬೀಜ ರಸಗೊಬ್ಬರ ಕಾಳಸಂತೆಯಲ್ಲಿ ಮಾರಾಟ ಮಾಡಿದರೆ ಕಠಿಣ ಕ್ರಮದ ಎಚ್ಚರಿಕೆ

ಬಿತ್ತನೆ ಬೀಜ ಮತ್ತು ರಸಗೊಬ್ಬರವನ್ನು ಕಾಳಸಂತೆಯಲ್ಲಿ ಮಾರಾಟಮಾಡುವವರು ಮತ್ತು ಕೃತಕ ಅಭಾವ ಸೃಷ್ಟಿಸುವವರ…

19 hours ago

ರೈತರು ಉತ್ತಮ ಇಳುವರಿ ಪಡೆಯಲು ಸಂಯುಕ್ತ ರಸಗೊಬ್ಬರ ಬಳಸುವಂತೆ ಕೃಷಿ ಇಲಾಖೆ ಸೂಚನೆ

ರೈತರು ಉತ್ತಮ ಇಳುವರಿ ಪಡೆಯಲು ಡಿಎಪಿ ಗೊಬ್ಬರಕ್ಕೆ ಪರ್ಯಾಯವಾಗಿ ಸಂಯುಕ್ತ ರಸಗೊಬ್ಬರ ಬಳಸಲು…

19 hours ago

ಬದುಕು ಪುರಾಣ | ಎಲ್ಲರೊಳಗೂ ಏಕಲವ್ಯನಿದ್ದಾನೆ!

 ‘ಏಕಲವ್ಯ’ – ಈ ಪದವು ಸಾಧನೆಯ ಐಕಾನ್. ಪರ್ಯಾಯ ಪದ. ಸಾಧನೆಗೆ ಜಾತಿ,…

19 hours ago

ಮನೆಯಲ್ಲಿ ಸಂಪತ್ತು, ಸಂತೋಷ ಹೆಚ್ಚಾಗಲು ಮುಖ್ಯ ದ್ವಾರ ಹೀಗಿರಲಿ…

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

19 hours ago