ಅಡಿಕೆ ವಹಿವಾಟಿನಲ್ಲಿ ವಂಚನೆ | ಮುಂಬೈ ಉದ್ಯಮಿಗೆ 30 ಲಕ್ಷ ಪಂಗನಾಮ

August 8, 2025
7:49 AM

ಅಡಿಕೆ ವಹಿವಾಟಿನಲ್ಲಿ ಈಚೆಗೆ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದೆ. ಅಡಿಕೆ ಬೆಳೆಯುವ ಪ್ರದೇಶದಲ್ಲಿ ಮಾತ್ರವಲ್ಲ ಖರೀದಿ-ಮಾರಾಟ ಎರಡೂ ಕಡೆಗಳಲ್ಲಿ ವಂಚನೆ ನಡೆಯುತ್ತಿದೆ.ಇದೀಗ ಅಡಿಕೆ ವ್ಯಾಪಾರದ ಮದ್ಯವರ್ತಿಗೂ 30 ಲಕ್ಷ ರೂಪಾಯಿ ವಂಚಿಸಿದ ಘಟನೆಯೊಂದು ಮುಂಬೈಯಲ್ಲಿ ನಡೆದಿದೆ.

ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಗೆ ಅಡಿಕೆ ಪೂರೈಸುವುದಾಗಿ ನಂಬಿಸಿ , ಉತ್ತಮ ಲಾಭ ಗಳಿಸುವ ಆಮಿಷವೊಡ್ಡಿ ಮುಂಬೈಯ ಅಂಧೇರಿಯ ಉದ್ಯಮಿಯೊಬ್ಬರಿಗೆ ಮೂವರು ವ್ಯಕ್ತಿಗಳು 30 ಲಕ್ಷ ರೂಪಾಯಿ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ. ಆರ್ ಗುಪ್ತಾ, ಮನೋಜ್ ಪಟೇಲ್ ಮತ್ತು ಮಹೇಂದ್ರ ಶಾ ಆರೋಪಿಗಳು. ಪ್ರಕಾಶ್ ಶುಕ್ಲಾ ವಂಚನೆಗೊಳಗಾದವರು.

ಅಡಿಕೆ ವ್ಯವಹಾರದಲ್ಲಿ ಹೂಡಿಕೆ ಮಾಡುವುದಾಗಿ ಆಮಿಷವೊಡ್ಡಿ ಹಾಗೂ ಮಾರುಕಟ್ಟೆ ದರಕ್ಕಿಂತ ಕಡಿಮೆ ದರದಲ್ಲಿ ಅಡಿಕೆ ಮಾಡಿ ಭಾರಿ ಲಾಭದ ಭರವಸೆ ನೀಡಿ  30 ಲಕ್ಷ ವಂಚಿಸಿದ್ದಾರೆ. ಸೊಮಾಲಿಯಾದ ವ್ಯಾಪಾರಿಯೊಂದಿಗೆ  1.3 ಕೋಟಿ ಮೌಲ್ಯದ 52 ಟನ್ ಅಡಿಕೆಗೆ ಒಪ್ಪಂದ ಮಾಡಿಕೊಂಡಿದ್ದೇವೆ. ಇದಕ್ಕಾಗಿ  30 ಲಕ್ಷ ನಗದು ಮುಂಗಡ ಹಣ ನೀಡುವಂತೆ  ಆರೋಪಿಗಳು ಹೇಳಿದ್ದರು. ಅದಕ್ಕೂ ಮೊದಲು ನಂಬಿಕೆ ಬರುವಂತೆ ನಟಿಸಿದ್ದರು, ವಿವಿಧ ಬಾರಿ ಸಭೆ ಸೇರಿ ಮಾತುಕತೆ ನಡೆಸಿದ್ದರು.  ಹಣ ಪಾವತಿಯಾದ ಬಳಿಕ ಆರೋಪಿಗಳು ಯಾವುದೇ ಕರೆಗಳಿಗೆ ಸ್ಪಂದಿಸುತ್ತಿರಲಿಲ್ಲ ಎಂದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಪ್ರತೀ ಸಭೆಯಲ್ಲಿ ಆರೋಪಿಗಳು 52 ಟನ್ ಅಡಿಕೆಯನ್ನು ಪ್ರತಿ ಕಿಲೋಗ್ರಾಂಗೆ 250 ರೂ.ಗೆ ಬರುವುದಾಗು ಹೇಳಿದ್ದರು. ಅಂದರೆ 1.30 ಕೋಟಿ ರೂ. ಮೌಲ್ಯದ್ದಾಗಿದೆ. ಆದರೆ 30 ಲಕ್ಷ ರೂ. ಮುಂಗಡ ನಗದು ನೀಡುವಂತೆ ಹೇಳಿದ್ದರು. ಉಳಿದ ಮೊತ್ತವನ್ನು ಚೆಕ್ ಅಥವಾ ಆರ್‌ಟಿಜಿಎಸ್ ಮೂಲಕ ಅಡಿಕೆ ತಲುಪಿದ ನಂತರ ಪಾವತಿಸಬಹುದು ಎಂದು ಭರವಸೆ ನೀಡಿದ್ದರು.ಇದೀಗ ಪ್ರಕರಣ ದಾಖಲಾಗಿದೆ.

Source: Indian Express

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 02-10-2026 | ಸುಳ್ಯದಲ್ಲಿ 100 ಮಿ.ಮೀ.ವರೆಗೆ ಮಳೆ – ಕರಾವಳಿ–ಮಲೆನಾಡಿನಲ್ಲಿ ಮುಂದಿನ 10 ದಿನವೂ ಮಳೆಯ ಸಾಧ್ಯತೆ
October 2, 2026
12:46 PM
by: ಸಾಯಿಶೇಖರ್ ಕರಿಕಳ
ಕಬ್ಬು ಬೆಳೆಗಾರರ ಹಿತರಕ್ಷಣೆಗೆ ಕೇಂದ್ರ ಸರ್ಕಾರ ಬದ್ಧ: ಎಥೆನಾಲ್ ಖರೀದಿ 1,200 ಕೋಟಿ ಲೀಟರ್‌ಗೆ ಏರಿಕೆ
October 2, 2026
7:41 AM
by: ದ ರೂರಲ್ ಮಿರರ್.ಕಾಂ
ಅಂತಾರಾಷ್ಟ್ರೀಯ ಕಾಫಿ ದಿನಾಚರಣೆ – ಕಾಫಿ ಬಗ್ಗೆ ಜಾಗೃತಿಗೆ ಚಿಕ್ಕಮಗಳೂರಿನಲ್ಲಿ ಸೈಕಲ್ ಜಾಥಾ
October 2, 2026
7:28 AM
by: ದ ರೂರಲ್ ಮಿರರ್.ಕಾಂ
ಏಷ್ಯನ್ ಗೇಮ್ಸ್‌ ಕ್ರಿಕೆಟ್‌ : ಚಿನ್ನದ ಪದಕಕ್ಕಾಗಿ ಭಾರತ–ಪಾಕಿಸ್ತಾನ ಫೈನಲ್‌
October 2, 2026
7:03 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror