ಪಾನ್ ಕಾರ್ಡ್ ಅಪ್ಡೇಟ್ ಮಾಡಬೇಕು ಎಂದು ಮಹಿಳೆಯೊಬ್ಬರು ಬ್ಯಾಂಕ್ ಖಾತೆಯಿಂದ 3.24 ಲಕ್ಷ ರೂ ವಂಚಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ದೂರು ದಾಖಲಾದ ತಕ್ಷಣ ಪೊಲೀಸರು ಹಣ ವರ್ಗಾವಣೆಗೆ ಬ್ಯಾಂಕ್ ಮೂಲಕ ತಡೆ ಹಿಡಿದ ಹಿನ್ನೆಲೆ ಮಹಿಳೆಗೆ 3 ಲಕ್ಷ ರೂ. ವಾಪಸ್ ಬಂದ ಘಟನೆ ನಡೆದಿದೆ.
ಕಳೆದ ಅಕ್ಟೋಬರ್ ಕೊನೆಯ ವಾರ ಕಾರವಾರ ನಗರದ ನಿವಾಸಿ ವಿದ್ಯಾ ಕಾಮತ್ ಅವರು 3.24 ಲಕ್ಷ ರೂ. ಸೈಬರ್ ವಂಚನೆಯಾದ ಬಗ್ಗೆ ದೂರು ದಾಖಲಿಸಿದ್ದರು. ಅವರು ತಮ್ಮ ಚಿಕ್ಕಮ್ಮನ ಎಸ್ಬಿಐ ಬ್ಯಾಂಕ್ ಖಾತೆಯನ್ನು ನಿರ್ವಹಿಸುತ್ತಿದ್ದರು. ಪಾನ್ ಕಾರ್ಡ್ ಅಪ್ಡೇಟ್ ಮಾಡಿಸಬೇಕು ಎಂದು ಬಂದ ಎಸ್ಎಂಎಸ್ ಲಿಂಕ್ನಲ್ಲಿ ಖಾತೆಯ ಎಲ್ಲ ಮಾಹಿತಿ ನಮೂದಿಸಿದ್ದರು. ಬಳಿಕ ಅವರ ಚಿಕ್ಕಮ್ಮನ ಖಾತೆಯಿಂದ 99 ಸಾವಿರ ರೂ.ನಂತೆ ಮೂರು ಬಾರಿ ಹಾಗೂ ಒಮ್ಮೆ 24 ಸಾವಿರ ರೂ. ಇನ್ನೊಂದು ಖಾತೆಗೆ ವರ್ಗಾವಣೆಯಾಗಿತ್ತು. ಈ ಬಗ್ಗೆ ವಿದ್ಯಾ ಅವರು ಕಾರವಾರ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ತನಿಖೆ ನಡೆಸಿದ ಪೊಲೀಸರು ಹಣ ವರ್ಗಾವಣೆಯಾದ ಖಾತೆಯನ್ನು ತಡೆ ಹಿಡಿದಿದ್ದಾರೆ. ನಂತರ ಮಹಿಳೆಯ 3 ಲಕ್ಷ ರೂ. ಹಣವನ್ನು ಮರಳಿ ಅವರ ಖಾತೆಗೆ ವರ್ಗಾಯಿಸಲಾಗಿದೆ. ಇನ್ನೂ ಉಳಿದ 24 ಸಾವಿರ ರೂ. ಹಾಗೂ ಆರೋಪಿಗಾಗಿ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕಡಲ ತೀರದ ಸ್ವಚ್ಛತೆಯ 100ನೇ ವಾರದ 'ಕ್ಲೀನ್ ಕಿನಾರ' ಕಾರ್ಯಕ್ರಮಕ್ಕೆ ಶಾಸಕ ಗುರುರಾಜ್…
ಗುಜ್ಜೆ ಚಟ್ನಿಗೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ: ಗುಜ್ಜೆ 3/4 ಕಪ್ ,ನೀರು…
2025ರಲ್ಲಿ ಮಂಗಳ ಗ್ರಹವು ವಿವಿಧ ನಕ್ಷತ್ರಗಳಲ್ಲಿ ಸಂಚಾರ ಮಾಡುವುದರಿಂದ ಕೆಲ ರಾಶಿಗಳಿಗೆ ವಿಶೇಷ…
ಶಿವಮೊಗ್ಗದ ನವಲೆ ಕೃಷಿ ವಿಜ್ಞಾನ ಕೇಂದ್ರದ ರಜತ ಮಹೋತ್ಸವದ ಅಂಗವಾಗಿ ಮೂರು ದಿನಗಳ…
ಈಗಿನಂತೆ ಎಪ್ರಿಲ್ 29 ಹಾಗೂ 30 ರಂದು ಮಳೆ ಸ್ವಲ್ಪ ಕಡಿಮೆ ಇರುವ…
ಬೆಟ್ಟಗುಡ್ಡಗಳಲ್ಲಿ ಬೆಳೆಯಲಾಗುವ ಸೇಬನ್ನು ಕರ್ನಾಟಕದಲ್ಲಿಯೂ ಬೆಳೆಯಲಾಗುತ್ತಿದೆ ಎಂದು ಮನ್ ಕಿ ಬಾತ್ನಲ್ಲಿ ಪ್ರಧಾನಿ…