ಚೀನಾದಲ್ಲಿ ಹಸಿ ಅಡಿಕೆ ಬೇಡಿಕೆ – 2026 ರಲ್ಲಿ ರಫ್ತು ವ್ಯಾಪಾರಕ್ಕೆ ಹೊಸ ಅವಕಾಶ | ಭಾರತದಲ್ಲಿ ಅಡಿಕೆ ಉತ್ಪನ್ನಗಳ ರಪ್ತು ಅವಕಾಶ ಇದೆಯೇ..?

January 26, 2026
5:53 AM
2026ರಲ್ಲಿ ಚೀನಾ ಹಸಿ ಅಡಿಕೆ ಮಾರುಕಟ್ಟೆಯಲ್ಲಿ ಸಂಚಲನ ಕಾಣಿಸಿಕೊಂಡಿದೆ. ಚೀನಾದಲ್ಲಿ ಹಸಿ ಅಡಿಕೆ ಬಳಕೆಯು ದಕ್ಷಿಣ ಪ್ರಾಂತ್ಯಗಳಲ್ಲಿ ಮುಂದುವರಿದಿರುವ ಹಿನ್ನೆಲೆಯಲ್ಲಿ, ರಫ್ತು ವ್ಯಾಪಾರಕ್ಕೆ ಮತ್ತೆ ಒತ್ತು ಸಿಕ್ಕಿದೆ. ವಿಶೇಷವಾಗಿ ವಿಯೆಟ್ನಾಂ- ಚೀನಾದ ಅಡಿಕೆ ಆಮದು ಮಾರುಕಟ್ಟೆಯಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದೆ. ಈ ನಡುವೆ ಮುಂದಿನ ದಿನಗಳಲ್ಲಿ ಭಾರತವೂ ಅಡಿಕೆ ಅಥವಾ ಅಡಿಕೆ ಉತ್ಪನ್ನಗಳ ರಫ್ತಿನಲ್ಲಿ ಮಾಡಬೇಕಿರುವ ಕೆಲಸಗಳು ಏನು..?

ಚೀನಾದಲ್ಲಿ ಈ ಬಾರಿ ಮತ್ತೆ ಹಸಿ ಅಡಿಕೆಗೆ ಬೇಡಿಕೆ ವ್ಯಕ್ತವಾಗುತ್ತಿದೆ. ಕಳೆದ ಬಾರಿ ವಿಯೆಟ್ನಾಂ ಸೇರಿದಂತೆ ಇತರ ಕೆಲವು ದೇಶಗಳು ಹಸಿ ಅಡಿಕೆ ಬೇಡಿಕೆ ವ್ಯಕ್ತಪಡಿಸಿದ್ದರೆ ಈ ಬಾರಿ ಚೀನಾ ಮತ್ತೆ ಹಸಿ ಅಡಿಕೆ ಬೇಡಿಕೆ ವ್ಯಕ್ತಪಡಿಸಿದೆ. 2026 ರಲ್ಲಿ ಹಸಿ ಅಡಿಕೆ ಅಥವಾ ತಾಜಾ ಅಡಿಕೆ ರಫ್ತು ಚೀನಾ ಕೊಲಾತಿಯಲ್ಲಿ ಹೊಸ ಅವಕಾಶಗಳನ್ನು ಕಂಡಿದೆ. ಚೀನಾ ಬೆಳೆದ ಅಗತ್ಯವನ್ನು ಪೂರೈಸಲು ವಿಯೆಟ್ನಾಂ ಸೇರಿದಂತೆ ರಫ್ತುಗಾರರು ಉತ್ತಮ ಬೆಲೆ ಹಾಗೂ ಗುಣಮಟ್ಟದ ಉತ್ಪನ್ನಗಳಿಗೆ ಸಿದ್ಧತೆ ನಡೆಸಿದ್ದಾರೆ.

Advertisement
Advertisement
ವಿಯೆಟ್ನಾಂ ಹಸಿ ಅಡಿಕೆ ಮಾರುಕಟ್ಟೆಯು ಪ್ರಮುಖವಾಗಿ ಚೀನಾದ ಬೇಡಿಕೆಯಿಂದಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ. ಇಲ್ಲಿನ ಎಳೆ ಅಡಿಕೆಯನ್ನು ಸಂಸ್ಕರಿಸಿ ಕ್ಯಾಂಡಿ ಅಥವಾ ಒಣಗಿದ ರೂಪದಲ್ಲಿ ಚೀನಾಕ್ಕೆ ಹೆಚ್ಚಿನ ಪ್ರಮಾಣದಲ್ಲಿ ರಫ್ತು ಮಾಡಲಾಗುತ್ತದೆ. ವಿಯೆಟ್ನಾಂನ ಉಷ್ಣವಲಯದ ಹವಾಮಾನವು ಅಡಿಕೆ ಬೆಳೆಗೆ ಪೂರಕವಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ಅಡಿಕೆ ಕೃಷಿ ಮತ್ತು ರಫ್ತು ವಾಣಿಜ್ಯವಾಗಿ ಬೆಳೆಯುತ್ತಿದೆ.  
ಚೀನಾದ ಮಾರುಕಟ್ಟೆಯಲ್ಲಿ ವಿಯೆಟ್ನಾಂನ ಎಳೆ ಅಡಿಕೆಗೆ  ಬೇಡಿಕೆಯಿದೆ. ವಿಯೆಟ್ನಾಂ ಅಡಿಕೆಯನ್ನು ಸಂಸ್ಕರಿಸಿ ಚೀನಾಕ್ಕೆ ರಫ್ತು ಮಾಡುತ್ತದೆ. ಸುಮಾರು 5-6 ಕಿಲೋಗ್ರಾಂ ಹಸಿ ಅಡಿಕೆಯಿಂದ 1 ಕೆಜಿ ಒಣ ಅಡಿಕೆ ದೊರೆಯುತ್ತದೆ.

2026 ರಲ್ಲಿ ಚೀನಾದ ಹಸಿ ಅಡಿಕೆ ಮಾರುಕಟ್ಟೆಯಲ್ಲಿ ಈಗ ಸಂಚಲನ ಕಾಣಿಸಿಕೊಂಡಿದೆ. ಚೀನಾದ ಹಸಿ ಅಡಿಕೆ ಬಳಕೆಯು ದಕ್ಷಿಣ ಪ್ರಾಂತ್ಯಗಳಲ್ಲಿ ಮುಂದುವರಿದಿರುವ ಹಿನ್ನೆಲೆಯಲ್ಲಿ, ರಫ್ತು ವ್ಯಾಪಾರಕ್ಕೆ ಮತ್ತೆ ಒತ್ತು ಸಿಕ್ಕಿದೆ.  ಮಾರುಕಟ್ಟೆ ತಜ್ಞರ ಪ್ರಕಾರ, 2026 ರಲ್ಲಿ ಚೀನಾ ಗುಣಮಟ್ಟದ, ರಾಸಾಯನಿಕ ರಹಿತ ಮತ್ತು ಪ್ರಮಾಣೀಕೃತ ತಾಜಾ ಅಡಿಕೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಆಹಾರ ಸುರಕ್ಷತಾ ನಿಯಮಗಳು ಕಠಿಣಗೊಂಡಿರುವುದರಿಂದ, ಫೈಟೋಸಾನಿಟರಿ ಪ್ರಮಾಣಪತ್ರ, ಟ್ರೇಸಬಿಲಿಟಿ ಮತ್ತು ಶೀತ ಸರಣಿ  ವ್ಯವಸ್ಥೆ ಹೊಂದಿರುವ ರಫ್ತುಗಾರರಿಗೆ ಹೆಚ್ಚಿನ ಅವಕಾಶಗಳು ಲಭ್ಯವಾಗಿವೆ.

ವಿಯೆಟ್ನಾಂ ತನ್ನ ಭೌಗೋಳಿಕ ಸಮೀಪತೆ, ವೇಗದ ಸಾಗಣೆ ವ್ಯವಸ್ಥೆ ಮತ್ತು ತಾಜಾತನ ಕಾಪಾಡುವ ಲಾಜಿಸ್ಟಿಕ್ಸ್‌ ಮೂಲಕ ಚೀನಾದ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ಮುನ್ನಡೆ ಸಾಧಿಸಿದೆ. ತಜ್ಞರ ಅಭಿಪ್ರಾಯದಂತೆ, ಮುಂದಿನ ದಿನಗಳಲ್ಲಿ ಗುಣಮಟ್ಟ ಮತ್ತು ನಿಯಂತ್ರಣ ಮಾನದಂಡಗಳನ್ನು ಪಾಲಿಸುವ ದೇಶಗಳಿಗೆ ಚೀನಾದ ಅಡಿಕೆ ಮಾರುಕಟ್ಟೆ ಸ್ಥಿರ ಅವಕಾಶ ಒದಗಿಸಲಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಸ್ಥಿರ ಬೇಡಿಕೆ: ಚೀನಾ ತಾಜಾ ಅಡಿಕೆಗಳ ನಿರಂತರ ಬೇಡಿಕೆ ಹೊಂದಿದೆ .ವಿಶೇಷವಾಗಿ ದಕ್ಷಿಣ ಪ್ರಾಂತ್ಯಗಳಲ್ಲಿ (ಹೈನಾನ್, ಹುನಾನ್, ಗುಯಾಂಗ್ಡಾಂಗ್) ಮತ್ತು ಗುಣಮಟ್ಟ ಹಾಗೂ ಆಹಾರ ಸುರಕ್ಷತೆ ಮೇಲಿನ ಗ್ರಾಹಕ ಬೇಡಿಕೆ ಹೆಚ್ಚಿದೆ.  ರಾಸಾಯನ ರಹಿತ, ಮೂಲ ಪ್ರಮಾಣಪತ್ರ ಹೊಂದಿರುವ ಅಡಿಕೆಗಳಿಗೆ ಹೆಚ್ಚಿನ ಬೇಡಿಕೆ ಇದೆ. ಚೀನಾ ಹಾಗೂ ವಿಯೆಟ್ನಾಂ ನಡುವೆ ಅಧಿಕೃತ ವ್ಯಾಪಾರನೀತಿಗಳು, ಫೈಟೋಸಾನಿಟರಿ ಲೈಸೆನ್ಸ್‌ಗಳು ಮತ್ತು ಫುಡ್ ಸೆಫ್ಟಿ ಪರೀಕ್ಷೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಚೀನಾ ವ್ಯಾಪಾರದಲ್ಲಿ ಸಾಂಪ್ರದಾಯಿಕ ತಿನಿಸು ಮತ್ತು ಸಾಂಸ್ಕೃತಿಕ ಉಪಯೋಗದೊಂದಿಗೆ ಜೊತೆಗೆ ಔಷಧಿ ಹಾಗೂ ಮೂಲಭೂತ ಕಾಸ್ಮೆಟಿಕ್ ವಸ್ತುಗಳಲ್ಲೂ ಅಡಿಕೆ ಪ್ರಭಾವ ಬಲವಾಗಿ ಕಾಣುತ್ತದೆ.

ಚೀನಾ ಅಡಿಕೆ ಆಮದು ಟ್ರೆಂಡ್‌: ಭಾರತದ ಅಡಿಕೆ ಬೆಳೆಗಾರರಿಗೆ ಏನು ಪರಿಣಾಮ? ಸುಧಾರಣೆ ಆಗಬೇಕಿರುವುದು ಏನು..? :  2026ರಲ್ಲಿಚೀನಾದ ಹಸಿ ಅಡಿಕೆ ಆಮದು ಮಾರುಕಟ್ಟೆಯಲ್ಲಿ ವಿಯೆಟ್ನಾಂ ಮುನ್ನಡೆ ಸಾಧಿಸುತ್ತಿರುವುದು, ಭಾರತದ ಅಡಿಕೆ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಭಾರತ ವಿಶ್ವದ ಅತಿದೊಡ್ಡ ಅಡಿಕೆ ಉತ್ಪಾದಕ ರಾಷ್ಟ್ರಗಳಲ್ಲಿ ಒಂದಾಗಿದ್ದರೂ, ಚೀನಾ ಮಾರುಕಟ್ಟೆಯಲ್ಲಿ ಭಾರತದ ನೇರ ಹಾಜರಾತಿ ಸೀಮಿತವಾಗಿಯೇ ಉಳಿದಿದೆ.

ಈ ಬೇಡಿಕೆಯ ಪರಿಣಾಂದಿಂದ ಭಾರತದ ಅಡಿಕೆ ಬೆಳೆಗಾರರ ಮೇಲೆ ಉಂಟಾದ  ಪ್ರಮುಖ ಪರಿಣಾಮಗಳು ಹಲವು. ಚೀನಾ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಹಸಿ ಅಡಿಕೆ ಪೂರೈಕೆಯಾಗುತ್ತಿರುವುದರಿಂದ, ದಕ್ಷಿಣ ಏಷ್ಯಾದ ಅಡಿಕೆ ವ್ಯಾಪಾರದಲ್ಲಿ ಬೆಲೆ ಅಸ್ಥಿರತೆ ಉಂಟಾಗುವ ಸಾಧ್ಯತೆ ಇದೆ. ಇದು ಕರ್ನಾಟಕ, ಕೇರಳ, ಅಸ್ಸಾಂ ಸೇರಿದಂತೆ ಪ್ರಮುಖ ಅಡಿಕೆ ಬೆಳೆ ಪ್ರದೇಶದ ರೈತರ ಆದಾಯದ ಮೇಲೆ ಪರೋಕ್ಷ ಪರಿಣಾಮ ಬೀರುತ್ತದೆ.

ವಿಯೆಟ್ನಾಂ ವೇಗದ ಲಾಜಿಸ್ಟಿಕ್ಸ್ ಹಾಗೂ ತಾಜಾ ಉತ್ಪನ್ನ ರಫ್ತಿನಲ್ಲಿ ಮುನ್ನಡೆ ಸಾಧಿಸಿರುವುದರಿಂದ ಹಾಗೂ ಕೋಲ್ಡ್‌ ಪ್ರೊಸೆಸಿಂಗ್‌ ಮೂಲಕ ಸಾಗಾಟ ಮಾಡುವ ವ್ಯವಸ್ಥೆ ಬಲಪಡಿಸಿಕೊಂಡಿರುವುದು ಭಾರತ ಗುಣಮಟ್ಟ ಮತ್ತು ಈ ನೆಲೆಯಲ್ಲಿ  ಸೀಮಿತ ವ್ಯವಸ್ಥೆ ಒಳಗೊಂಡಿರುವುದು ಸ್ಪರ್ಧಾತ್ಮಕ ಹಿನ್ನಡೆಯಾಗುತ್ತಿದೆ.

ಭಾರತೀಯ ಅಡಿಕೆ ವ್ಯಾಪಾರ ಇನ್ನೂ ಬಹುಪಾಲು ದೇಶೀಯ ಬಳಕೆಯ ಮೇಲೆ ನಿಂತಿರುವುದರಿಂದ, ಅಂತಾರಾಷ್ಟ್ರೀಯ ಮಾರುಕಟ್ಟೆ ಟ್ರೆಂಡ್ಸ್‌ಗೆ ತಕ್ಷಣ ಸ್ಪಂದಿಸುವ ವ್ಯವಸ್ಥೆಯ ಕೊರತೆ ಇದೆ. ಭಾರತಕ್ಕೆ ಅಡಿಕೆ ವಹಿವಾಟಿನಲ್ಲಿ ಇನ್ನೂ ಸುಧಾರಣೆಗೆ ಅವಕಾಶ ಇದ್ದು, ಸಂಸ್ಕರಣೆ ಮಾಡಿದಿ ಅಡಿಕೆ ಉತ್ಪನ್ನಗಳಿಗೆ ರಫ್ತು ಮಾಡುವ ಅವಕಾಶ ಇದೆ. ಗುಣಮಟ್ಟದ ಅಡಿಕೆ ಉತ್ಪನ್ನಗಳಿಗೆ ಪ್ರಮಾಣಪತ್ರ, ಪಾರದರ್ಶಕತೆ ಇತ್ಯಾದಿಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ.

ತಜ್ಞರ ಪ್ರಕಾರ, ಭಾರತವು ಹಸಿ ಅಡಿಕೆ ರಫ್ತು ಕ್ಷೇತ್ರದಲ್ಲಿ ಸ್ಪರ್ಧಿಸಲು ಬಯಸಿದರೆ, ರಫ್ತು ನೀತಿ, ಲಾಜಿಸ್ಟಿಕ್ಸ್ ಹಾಗೂ ಗುಣಮಟ್ಟ ನಿಯಂತ್ರಣ ವ್ಯವಸ್ಥೆಗಳನ್ನು ಪುನರ್‌ವಿಮರ್ಶೆ ಮಾಡುವುದು ಅನಿವಾರ್ಯವಾಗುತ್ತದೆ.

ಚೀನಾ–ವಿಯೆಟ್ನಾಂ ಅಡಿಕೆ ವ್ಯಾಪಾರವು ಭಾರತದ ಅಡಿಕೆ ಬೆಳೆಗಾರರಿಗೆ ಸವಾಲು ಜೊತೆಗೆ ಎಚ್ಚರಿಕೆಯ ಸೂಚನೆಯಾಗಿದೆ. ಈಗಲೇ ಸರಿಯಾದ ನೀತಿ ಮತ್ತು ಮಾರುಕಟ್ಟೆ ತಂತ್ರ ರೂಪಿಸದಿದ್ದರೆ, ಭವಿಷ್ಯದಲ್ಲಿ ಅಂತರರಾಷ್ಟ್ರೀಯ ಅಡಿಕೆ ವ್ಯಾಪಾರದಲ್ಲಿ ಭಾರತ ಇನ್ನಷ್ಟು ಹಿಂದೆ ಬೀಳುವ ಅಪಾಯವಿದೆ. ಅಡಿಕೆ ಉತ್ಪನ್ನಗಳ ರಫ್ತು ಸಂಬಂಧಿಸಿ ಸೂಕ್ತವಾದ ನೀತಿಗಳು, ಉತ್ಪಾದಕರಿಗೆ ಸೂಕ್ತವಾದ ಬೆಂಬಲ ಬೇಕಿದೆ.

Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಸರ್ಕಾರಿ ಶಾಲೆ ಮಕ್ಕಳಿಗೆ ಚೆಸ್ ಪಾಠ | ದ.ಕ ದಲ್ಲಿ “ಚೆಸ್ ಇನ್ ಸ್ಕೂಲ್” ಆರಂಭ | ಗ್ರಾಮೀಣ ಮಕ್ಕಳಿಗೆ ಬೌದ್ಧಿಕ ಅವಕಾಶ
January 29, 2026
2:18 PM
by: ದ ರೂರಲ್ ಮಿರರ್.ಕಾಂ
ಕೊಳೆ ರೋಗ ನಿಯಂತ್ರಣಕ್ಕೂ ತೆರಿಗೆ…? ಮೈಲುತುತ್ತಿಗೆ ಸುಂಕ – ಅಡಿಕೆ ರೈತನಿಗೆ ಮತ್ತೊಂದು ಹೊರೆ..!
January 29, 2026
7:39 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ದೇಶದಲ್ಲಿ ರಬಿ ಋತು ಬಿತ್ತನೆ ದಾಖಲೆ ಹೆಚ್ಚಳ | 660.48 ಲಕ್ಷ ಹೆಕ್ಟೇರ್‌ಗೆ ಏರಿದ ಒಟ್ಟು ವಿಸ್ತೀರ್ಣ
January 29, 2026
7:18 AM
by: ದ ರೂರಲ್ ಮಿರರ್.ಕಾಂ
ಯೂರಿಯಾ ಮಾರಾಟ 3.8% ಏರಿಕೆ | ದೇಶೀಯ ಉತ್ಪಾದನೆ ಕುಸಿತ, ಆಮದು 85% ಹೆಚ್ಚಳ
January 29, 2026
7:08 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror