06.07.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :
ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಬಿಟ್ಟು ಬಿಟ್ಟು ಉತ್ತಮ ಮಳೆಯ ಮುನ್ಸೂಚೆನೆ ಇದೆ. ಕರಾವಳಿ ತೀರ ಭಾಗಗಳಲ್ಲಿ ಬಿಡುವು ಕಡಿಮೆ ಇದ್ದು, ಉತ್ತಮ ಮಳೆಯ ಸಾಧ್ಯತೆ ಇದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಕರಾವಳಿ ತೀರ ಭಾಗಗಳಲ್ಲಿ ಸ್ವಲ್ಪ ಜಾಸ್ತಿ ಇರಬಹುದು.
ಕೊಡಗು, ಹಾಸನ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚೆನೆ ಇದೆ. ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಉತ್ತಮ ಮಳೆಯ ಸಾಧ್ಯತೆ ಇದೆ. ಶಿವಮೊಗ್ಗ ಜಿಲ್ಲೆಯಲ್ಲಿ ಸಹ ಮಳೆಯ ಮುನ್ಸೂಚೆನೆ ಇದೆ
ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಬೆಂಗಳೂರು, ಧಾರವಾಡ, ಬೆಳಗಾವಿ, ಚಿಕ್ಕೋಡಿ, ಕಲಬುರ್ಗಿ ಹಾಗೂ ಬೀದರ್ ಜಿಲ್ಲೆಗಳ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.ಉಳಿದ ಕರ್ನಾಟಕದ ಭಾಗಗಳಲ್ಲಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು ಅಲ್ಲಲ್ಲಿ ತುಂತುರು ಮಳೆಯ ಸಾಧ್ಯತೆ ಇದೆ.
ಮುಂಗಾರು ಸಾಂಪ್ರದಾಯಿಕ ಪಥದಲ್ಲಿ ಸಾಗುವ ಲಕ್ಷಣಗಳಿದ್ದು, ಈಗಿನಂತೆ ಜುಲೈ 15ರಿಂದ ರಾಜ್ಯದಾದ್ಯಂತ ಚುರುಕಾಗುವ ಲಕ್ಷಣಗಳಿವೆ. ಅಲ್ಲಿಯವರೆಗೆ ಕರಾವಳಿ, ಮಲೆನಾಡು ಹೊರತುಪಡಿಸಿ ಅಲ್ಲಲ್ಲಿ ಸಾಮಾನ್ಯ ಮಳೆಯ ಸಾಧ್ಯತೆ ಇದೆ. ಕರಾವಳಿಯ ಕಾಸರಗೋಡು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಜುಲೈ 10ರಿಂದ ಒಂದೆರಡು ದಿನಗಳ ಮಟ್ಟಿಗೆ ಮಳೆ ಕಡೆಮೆ ಇದ್ದರೂ ನಂತರ ಚುರುಕಾಗುವ ಲಕ್ಷಣಗಳಿವೆ.
ಎಂ ಜಿ ಸಿದ್ದೇಶ ರಾಮ, 5 ನೇ ತರಗತಿ ಎಂ ಜಿ ಸಿದ್ದೇಶ…
ಸಾನ್ವಿ ದೊಡ್ಡಮನೆ, 8 ನೇ ತರಗತಿ, ಕ್ನನಾಯ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆ…
ದೇಶದಲ್ಲಿಯೇ ಅತ್ಯುನ್ನತ ಶೈಕ್ಷಣಿಕ ಹಾಗೂ ಸಂಸ್ಥೆಗಳು ಕರ್ನಾಟಕದಲ್ಲಿದ್ದು, ಅವುಗಳ ಅಭಿವೃದ್ದಿ ಹಾಗೂ ಸಂಶೋಧನಾ…
ಹಿಮಾಚಲ ಪ್ರದೇಶದಲ್ಲಿ ಮಾನ್ಸೂನ್ ಆಗಮನದ ನಂತರ, ಭಾರೀ ಮಳೆಯಾಗುತ್ತಿದ್ದು, ಪ್ರವಾಹ ಮತ್ತು ಭೂಕುಸಿತದ…
ಹಿರಿಯ ತಲೆಮಾರಿನವರಿಗೆ ಅಸಹ್ಯವೆನಿಸುವ ಲೈಂಗಿಕ ವರ್ತನೆಗಳಲ್ಲಿ ಮುಂದುವರೆಯಲು ಹೊಸ ತಲೆಮಾರಿನ ಯುವ ಜನರಿಗೆ…
ನಗರದಲ್ಲಿ ಮಾತ್ರಾ ಕಂಡುಬರುತ್ತಿದ್ದ ಸಂಸ್ಕೃತಿಯೊಂದು ಈಗ ಗ್ರಾಮೀಣ ಭಾಗಕ್ಕೂ ತಲಪಿದೆ. ಅದರಲ್ಲೂ ಕುಕ್ಕೆ…