Advertisement
ಅನುಕ್ರಮ

ಸವಿರುಚಿ | ಆರೋಗ್ಯ ವರ್ಧಕ ಹಣ್ಣುಗಳ ಸಲಾಡ್….

Share
ನಮ್ಮ  ಊರಲ್ಲಿ   ಯಾವುದೇ ವಿಶೇಷ ಸಂದರ್ಭದಲ್ಲಿ  ಮಕ್ಕಳು ಅಪ್ಪ ಅಮ್ಮನಲ್ಲಿ ಡಿಮಾಂಡ್ ಮಾಡಿ ತಿನ್ನುತ್ತಿದ್ದುದು ಗಡ್ ಬಡ್ ಐಸ್ ಕ್ರೀಂ. ಹಣ್ಣುಗಳು ಹಾಗೂ ಐಸ್ ಕ್ರೀಂ ಗಳ  ಅಚ್ಚುಕಟ್ಟಾದ ಮಿಶ್ರಣ ಗಡ್ ಬಡ್.  ಯಾವ ಹೋಟೆಲ್ ಗಳಿಗೆ ಹೋದರು ಮೆನು ಇಡೀ ಓದಿ ಕೊನೆಯಲ್ಲಿ ಕೇಳುವುದು ಇದೇ ಗಡ್ ಬಡ್. ಎಂತ ಮಕ್ಕಳೊ ಏನೋ ಒಳ್ಳೆಯ ಹೋಟೆಲ್ , ಇಲ್ಲಿನ ಬನ್ಸ್ ರುಚಿ, ಮಸಾಲಾ ದೋಸೆ ಸೂಪರ್, ಹಾಗಿದ್ದೂ ಮತ್ತದೇ  ಗಡ್ ಬಡ್.  ಪ್ರತಿ ಹೋಟೆಲ್ ನ ಗಡ್ ಬಡ್ ಬೇರೆ ಬೇರೆಯೇ. ರುಚಿಯಲ್ಲಿ , ಬಣ್ಣದಲ್ಲಿ ಹಣ್ಣು , ಒಣ್ ಹಣ್ಣುಗಳ  ಮಿಶ್ರಣ, ಬಳಸುವ ಐಸ್ ಕ್ರೀಂ ಗಳು  ವಿಭಿನ್ನ ರೀತಿಯಲ್ಲಿರುತ್ತವೆ. ಆದರೆ ಅವುಗಳೆಲ್ಲವೂ  ಗಡ್ ಬಡ್ ಐಸ್ ಕ್ರೀಂ  ಎನ್ನುವುದರಲ್ಲಿ ಸಂಶಯವಿಲ್ಲ.
ನಮ್ಮ ಕರಾವಳಿ ಪ್ರದೇಶದಲ್ಲಿನ ವಾತಾವರಣ ಯಾರನ್ನಾದರೂ ಐಸ್ ಕ್ರೀಂ ಸೇವಿಸಲು ಪ್ರೇರೇಪಿಸುತ್ತದೆ.  ಅಲ್ಲದೇ ಒಂದು ಕಪ್ ತಿಂದರೆ ಇನ್ನೊಂದು ಬೇಕೆನಿಸುವಷ್ಟು ಇಷ್ಟವಾಗಿ ಬಿಡುವಂತಹುದೇ ಆಗಿದೆ ಈ ಐಸ್ ಕ್ರೀಂ .  ಹಾಗಾಗಿ ಇಲ್ಲಿ  ನಿತ್ಯವೂ ಹೊಸ ಹೊಸ  ರುಚಿಯ  , ನವೀನ ಬಣ್ಣ, ಪರಿಮಳಗಳ ಐಸ್ ಕ್ರೀಂ ಗಳ ಮಾರುಕಟ್ಟೆಗೆ ಬಿಡುಗಡೆಯಾಗುತ್ತಿರುತ್ತವೆ.
ಸದ್ಯ ಕೊರೋನಾ ಸಮಯದಲ್ಲಿ ತಣ್ಣಗೆ ಏನೂ ತಿನ್ನಬೇಡಿ, ಕುಡಿಯ ಬೇಡಿ ಅಂತ ಎಲ್ಲೆಡೆಯೂ ಕೇಳಿ ಬರುತ್ತಿರುವ ಮಾತು. ಆದರೆ ಏನು ಮಾಡೋಣ, ಮನೆಯಲ್ಲಿ ಮಕ್ಕಳು ಒಂದೇ ಸಮನೆ ಪ್ರುಟ್ ಸಲಾಡ್ ಬೇಕು,  ಬೇಕು ಎಂದು ಬೊಬ್ಬೆ ಹೊಡೆಯುವಾಗ ,  ಮನೆಯಲ್ಲೇ ಇದ್ದ ಹಣ್ಣುಗಳಿಂದಲೇ ವಿಶೇಷವಾಗಿ  ಮಿಶ್ರ ಹಣ್ಣುಗಳ ಸಲಾಡ್ ಮಾಡಿ ಕೊಟ್ಟಾಯಿತು.  ಮಾವಿನ ಹಣ್ಣಿನ ಹೋಳುಗಳು, ಅನನಾಸಿನ ಸಣ್ಣ ಸಣ್ಣ ತುಂಡುಗಳು, ಪಪ್ಪಾಯ, ಒಣದ್ರಾಕ್ಷಿ, ಜೇನು ಬಳಸಿ ಮಾಡಿದ ಫ್ರುಟ್ ಸಲಾಡ್ ಬಹಳ ಇಷ್ಟವಾಗಿ ಇನ್ನೊಮ್ಮೆ ಮಾಡ ಬೇಕೆಂಬ ಬೇಡಿಕೆ ಬಂದಲ್ಲಿಗೆ  ನಮ್ಮ ಮನೆ  ಪಾಕ ಯಶಸ್ವಿಯಾಯಿತು . ನೀವು ಮಾಡಿ ನೋಡಿ!!!!
# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಮಳೆ ಕೈಕೊಟ್ಟಿದೆ… ಜಾನುವಾರುಗಳಿಗೆ ಮೇವು ಎಲ್ಲಿಂದ..?

ಬರದ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗದಂತೆ ಸರ್ಕಾರ ಉಚಿತವಾಗಿ…

19 hours ago

ಗೋಡಂಬಿ ಬೇರೆ ದೇಶಗಳಿಂದ… ಜಾಗತಿಕ ಮಾರುಕಟ್ಟೆ ವಿಯೆಟ್ನಾಂನ ಕೈಯಲ್ಲಿ..!

ಕಚ್ಚಾ ಗೋಡಂಬಿಯ ದೊಡ್ಡ ಭಾಗವನ್ನು ವಿದೇಶಗಳಿಂದ ಆಮದು ಮಾಡಿಕೊಂಡರೂ, ಸಂಸ್ಕರಣೆ ಮತ್ತು ಮೌಲ್ಯವರ್ಧನೆಯ…

19 hours ago

ರೇಷನ್ ಕಾರ್ಡ್‌ ಇ-ಕೆವೈಸಿಗೆ ಇನ್ನು ಕ್ಯೂ ಬೇಕಿಲ್ಲ – ಮನೆಯಲ್ಲೇ ಇ-ಕೆವೈಸಿಗೆ ‘ಅನ್ನಸೇವೆ’ ಆ್ಯಪ್‌

ಪಡಿತರ ಚೀಟಿಗೆ ಆಧಾರ್‌ ಆಧಾರಿತ ಇ-ಕೆವೈಸಿ ಮಾಡಲು ಇನ್ನು ನ್ಯಾಯಬೆಲೆ ಅಂಗಡಿಗಳ ಮುಂದೆ…

20 hours ago

ಅಡಿಕೆ ವಹಿವಾಟಿನ ಹಿಂದೆ ಮತ್ತೊಂದು ದೊಡ್ಡ ತನಿಖೆ..? ₹1.3 ಕೋಟಿ ನಗದು ವಶ

ಅಕ್ರಮ ಅಡಿಕೆ ವ್ಯಾಪಾರ, ಕಳ್ಳಸಾಗಣೆ ಹಾಗೂ ಜಿಎಸ್‌ಟಿ ವಂಚನೆ ಆರೋಪದ ತನಿಖೆಯಲ್ಲಿ ಪಶ್ಚಿಮ…

20 hours ago

ಇಂಧನ ಮಾತ್ರವಲ್ಲ, ಕೃಷಿಗೂ ಹೊಸ ಮಾರುಕಟ್ಟೆ: ಎಥೆನಾಲ್‌ ಮಿಶ್ರಣ ಕೃಷಿ ವೈವಿಧ್ಯೀಕರಣಕ್ಕೆ ಹೆಜ್ಜೆ ಎಂದ ಗಡ್ಕರಿ

ಎಥೆನಾಲ್‌ ಮಿಶ್ರಣವು ಕೇವಲ ಇಂಧನ ನೀತಿಯಲ್ಲ, ಕೃಷಿ ಉತ್ಪನ್ನಗಳಿಗೆ ಹೊಸ ಮಾರುಕಟ್ಟೆ ಸೃಷ್ಟಿಸುವ…

20 hours ago

ಹವಾಮಾನ ವರದಿ | 02-10-2026 | ಸುಳ್ಯದಲ್ಲಿ 100 ಮಿ.ಮೀ.ವರೆಗೆ ಮಳೆ – ಕರಾವಳಿ–ಮಲೆನಾಡಿನಲ್ಲಿ ಮುಂದಿನ 10 ದಿನವೂ ಮಳೆಯ ಸಾಧ್ಯತೆ

ಸುಳ್ಯ ತಾಲೂಕಿನ ಹಲವು ಕಡೆ ನಿನ್ನೆ ಸುಮಾರು 100 ಮಿ.ಮೀ.ನಷ್ಟು ಮಳೆಯಾಗಿದ್ದು, ಕರಾವಳಿ–ಮಲೆನಾಡಿನ…

2 days ago