ಗಾಂಧಿ ಜಯಂತಿ. ಇದು ವ್ಯಕ್ತಿಯ ಆರಾಧನೆಯಲ್ಲ, ಇದೊಂದು ಚಿಂತನೆಯ ಆರಾಧನೆ. ಈ ಚಿಂತನೆ ಸಾರ್ವಕಾಲಿಕ ಸತ್ಯ.
ಈ ದೇಶದಲ್ಲಿ ಮಹಾನ್ ರಾಷ್ಟ್ರಪುರುಷ ಹುಟ್ಟಿದ್ದು ಮಾತ್ರವಲ್ಲ ಇಡೀ ಜಗತ್ತಿಗೆ ಸತ್ಯ, ಧರ್ಮ, ನ್ಯಾಯದ ಸಂದೇಶವನ್ನು ಸಾರಿ ರಾಷ್ಟ್ರಪಿತ ಎನಿಸಿಕೊಂಡ ಮಹಾನ್ ಚೇತನ. ಹೀಗಾಗಿಯೇ ಭಾರತ ಸರ್ವಶ್ರೇಷ್ಟ ಎನಿಸಿಕೊಳ್ಳಲು ಇಂತಹ ಚಿಂತನೆಗಳೂ ಒಂದು ಕಾರಣ. ಇಂದು ಉಳಿದಿರುವುದು ಹಾಗೂ ಮುಂದೆ ಉಳಿಯುವುದು ಕೂಡಾ ಆ ಚಿಂತನೆ ಮಾತ್ರಾ. ವ್ಯಕ್ತಿ ಕೇಂದ್ರಿತವಾದ ಯಾವ ಆಚರಣೆಗಳೂ, ಯಾವ ದಿನಗಳು, ಯಾವ ಸಂಗತಿಗಳು ತಾತ್ಕಾಲಿಕ. ಈ ಚಿಂತನೆಯ ಆಚರಣೆಗಳು ಶಾಶ್ವತ. ಹೀಗಾಗಿಯೇ ಗಾಂಧೀಜಿ ಚಿಂತನೆ ಸಾರ್ವಕಾಲಿಕ ಸತ್ಯ. ಈ ಚಿಂತನೆ ಇಂದಿನ ದಿನ ಹೆಚ್ಚು ಪ್ರಸ್ತುತವಾಗಿದೆ.
ಸ್ವಚ್ಛತೆ, ಅಹಿಂಸೆ ಮೊದಲಾದವುಗಳು ಇಂದೂ ನೆನಪಾಗುತ್ತವೆ. ಗಾಂಧಿಯವರಿಗೆ, ಸತ್ಯ ಹಾಗೂ ಅಹಿಂಸೆಗಳು ಪರಂಪರೆಯಿಂದ ಬಂದ ವಿಷಯ ಆಗಿರಲಿಲ್ಲ, ಅದು ಆಚರಣೆಯ ದಾರಿಯಾಗಿತ್ತು. ಹಾಗಾಗಿಯೇ ಅದು ಈ ಮಣ್ಣಿನಲ್ಲೂ ನೆಲೆಯಾಯಿತು. ಈ ಮೌಲ್ಯಗಳ ಅನುಸರಣೆಯೇ ಅವರಿಗೆ ಒಂದು ನೆಲೆಯಲ್ಲಿ ಅಧ್ಯಾತ್ಮಿಕ ಸಾಧನೆ ಹಾಗೂ ಇನ್ನೊಂದು ನೆಲೆಯಲ್ಲಿ ರಾಜಕೀಯ ಕ್ರಿಯೆ ಆಗಿತ್ತು. ಗಾಂಧೀ ಚಿಂತನೆಗಳೆಲ್ಲವೂ ಹಾಗೆಯೇ. ಯಾವ ಕ್ಷೇತ್ರದಲ್ಲಿ ನೋಡಿದರೂ ಗಾಂಧಿ ಚಿಂತನೆ ಎದ್ದು ಕಾಣುತ್ತದೆ.
ಗಾಂಧಿವಾದವನ್ನು ಹೀಗೇ ಸುಮ್ಮನೆ ಮಾತನಾಡುವುದರಲ್ಲಿ ಅರ್ಥವಿಲ್ಲ, ಅದು ಆಚರಣೆಯ ಮೂಲಕ ಜಾರಿಯಾಗಬೇಕು. ಗಾಂಧೀ ಚಿಂತನೆಯನ್ನು ಹೆಚ್ಚು ತಿಳಿಯುವ ಮೂಲಕ ಇನ್ನಷ್ಟು ಹತ್ತಿರವಾಗಬೇಕು. ಏಕೆಂದರೆ ಪ್ರಸ್ತುತ ಕಾಲಘಟ್ಟದ ಅಶಾಂತಿಯ ವಾತಾವರಣದಲ್ಲಿ ಪ್ರತೀ ವ್ಯಕ್ತಿಗೂ ಈ ಚಿಂತನೆಯ ಅವಶ್ಯಕತೆ ಇದೆ. ಸ್ವಾವಲಂಬನೆಯ ಹಾದಿ ಬೇಕಾಗಿದೆ, ಸಾತ್ವಿಕ ಹೋರಾಟದ ದಾರಿ ಅಗತ್ಯವಿದೆ. ಸ್ವಾಭಿಮಾನದ ಕಿಚ್ಚು ಬೇಕಾಗಿದೆ. ಹೀಗಾಗಿ ಕ್ಷುಲ್ಲಕ ರಾಜಕೀಯ ಬದಿಗಿಟ್ಟು ಪ್ರೀತಿ, ಶಾಂತಿ, ಅಹಿಂಸೆ, ಸತ್ಯಗಳೆಡೆಗಿನ ನಮ್ಮ ಬದ್ಧತೆಯ ಬದುಕು ಗಟ್ಟಿಯಾಗಬೇಕು, ಅನುದಿನವೂ ನಮ್ಮ ಸಣ್ಣ ಸಣ್ಣ ಕ್ರಿಯೆಗಳಲ್ಲೂ ಈ ಚಿಂತನೆಗಳು ಪ್ರತಿಫಲಿಸಬೇಕು. ಗಾಂಧೀಜಿ ಸಾರ್ವಕಾಲಿಕ ಹಾಗೂ ಪ್ರತಿದಿನವೂ ಸತ್ಯವಾಗಿರಬೇಕು.
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಧರ್ಮಸ್ಥಳ ಸುತ್ತಮುತ್ತ ಭಾಗಗಳಲ್ಲಿ ಒಂದೆರಡು ಕಡೆ ಹಾಗೂ…
ಉದ್ಯೋಗದ ಪರೀಕ್ಷೆಗಳಿಗೂ ಧಾರ್ಮಿಕ ಸಂಕೇತಗಳಿಗೂ ಯಾಕೆ ಹೊಂದಿ ಬರುವುದಿಲ್ಲ? ಇದೊಂದು ಮಿಲಿಯನ್ ಡಾಲರ್…
ರಾಷ್ಟ್ರೀಯ ಓಪನ್ ಕ್ಲಾಸಿಕಲ್ ರೇಟೆಡ್ ಚೆಸ್ ಪಂದ್ಯಾವಳಿ ಮೇ ತಿಂಗಳ 2 ರಿಂದ…
ವಿಶ್ವವಿಖ್ಯಾತ ಜೋಗ ಜಲಪಾತದಲ್ಲಿ ಪ್ರವಾಸಿಗರನ್ನು ಮತ್ತಷ್ಟು ಆಕರ್ಷಿಸುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವಿವಿಧ…
ಈಗಿನಂತೆ ಮೇ 1ರಿಂದ ದಕ್ಷಿಣ ಒಳನಾಡಿನ ಅಲ್ಲಲ್ಲಿ ಹಾಗೂ ಮೇ 5ರಿಂದ ಉತ್ತರ…
ಮೇ 4 ರಂದು ದೇಶಾದ್ಯಂತ ನೀಟ್ ಯುಜಿ ಪರೀಕ್ಷೆ ನಡೆಯಲಿದೆ. ಮೈಸೂರು ಜಿಲ್ಲೆಯ…