ದೇಶದೆಲ್ಲೆಡೆ ಗಾಂಧಿ ಜಯಂತಿ ಆಚರಿಸಲಾಗಿದೆ. ಎಲ್ಲೆಡೆಯೂ ಸ್ವಚ್ಛತಾ ಕಾರ್ಯಕ್ರಮದ ಮೂಲಕವೇ ಗಾಂಧಿ ಜಯಂತಿ ಆಚರಣೆ ನಡೆದಿದೆ. ಆದರೆ ಸುಳ್ಯ ತಾಲೂಕಿನ ಪಂಜದಲ್ಲಿ ಮಾತ್ರಾ ವಿಭಿನ್ನವಾಗಿ ಗಾಂಧಿ ಜಯಂತಿ ಆಚರಣೆಯಾಗಿದೆ. ಗಾಂಧೀಜಿಯವರ ಹೋರಾಟಗಳಲ್ಲಿ ಪ್ರಮುಖ ಪಾತ್ರ ವಹಿಸಿದ ಉಪವಾಸ ಸತ್ಯಾಗ್ರಹದ ಮೂಲಕ ಇಲ್ಲಿ ಗಾಂಧಿ ಚಿಂತನೆಗಳಿಗೆ ಆದ್ಯತೆ ನೀಡಲಾಗಿದೆ. ಗ್ರಾಮದ ಅಭಿವೃದ್ಧಿಯ ಕಡೆಗೆ ಗಮನ ಸಳೆಯಲು ಈ ಸತ್ಯಾಗ್ರಹ ನಡೆದಿದೆ. ಸಾತ್ವಿಕ ಹೋರಾಟದ ಮೂಲಕ ಪಂಜದ ಅಭಿವೃದ್ಧಿಯ ಚಿಂತನೆ ಇಲ್ಲಿ ನಡೆದಿದೆ.
ಸುಳ್ಯ ತಾಲೂಕಿನ ಪಂಜದಲ್ಲಿ ಗಾಂಧೀ ಜಯಂತಿ ಪ್ರಯುಕ್ತ ಬೆಳಗ್ಗೆ ಧ್ವಜಾರೋಹಣದ ಬಳಿಕ ಗ್ರಾಮ ಸ್ವರಾಜ್ಯಕ್ಕಾಗಿ ಪಂಜ ಗ್ರಾಪಂ ಮುಂದೆ ವಿವಿಧ ಬೇಡಿಕೆ ಮುಂದಿರಿಸಿ ಉಪವಾಸ ಸತ್ಯಾಗ್ರಹವನ್ನು ಪಂಜದ ಮಹಾತ್ಮಾಗಾಂಧಿ ವಿದ್ಯಾಪೀಠ ಹಾಗೂ ಪಂಜ ಗ್ರಾಮ ಸ್ವರಾಜ್ಯ ತಂಡದ ವತಿಯಿಂದ ನಡೆದಿದೆ. ಬೆಳಗ್ಗೆ 8.30 ರಿಂದ ಸಂಜೆ 4 ರ ತನಕ ಪಂಜದಲ್ಲಿರುವ ಗ್ರಾಮದ ವಿಧಾನಸೌಧ ಎದುರುಗಡೆ ನಡೆದ ಉಪವಾಸ ಸತ್ಯಾಗ್ರಹದಲ್ಲಿ ಪಂಜ ಹೋಬಳಿ ಕೇಂದ್ರದಲ್ಲಿ ಇರುವ ಇಲಾಖೆಗಳ ಬಗ್ಗೆ ಸರಕಾರಕ್ಕೆ ಹಕ್ಕೊತ್ತಾಯದ ಕುರಿತು ಹಾಗೂ ಕಾರ್ಯ ನಿರ್ವಹಿಸುವ ಇಲಾಖೆಗಳಲ್ಲಿ ಸಾರ್ವಜನಿಕರಿಗೆ ಉಪಯುಕ್ತವಾಗುವಂತೆ ಎಲ್ಲಾ ಸೌಲಭ್ಯಗಳು ಸಿಗಬೇಕು ಎಂದು ಗಾಂಧೀ ಮಾರ್ಗದಲ್ಲಿ ಗಮನ ಸೆಳೆಯುವುದು ಇದರ ಉದ್ದೇಶವಾಗಿತ್ತು ಎಂದು ಮಹಾತ್ಮಾಗಾಂಧಿ ವಿದ್ಯಾಪೀಠದ ಪುರುಷೋತ್ತಮ ಮುಡೂರು ತಿಳಿಸಿದ್ದಾರೆ.
ಸರಕಾರದಿಂದ ಸಿಗುವಂತಹ ಸೌಲಭ್ಯಗಳಲ್ಲಿ ಪಂಜದಲ್ಲಿ ಇದುವರೆಗೂ ವಂಚನೆಯೇ ನಡೆದಿದೆ. ಹೋಬಳಿ ಕೇಂದ್ರದಲ್ಲಿ ಇರುವಂತಹ ಸೇವೆಗಳಾದ ಅಂಚೆ ಇಲಾಖೆ, ಪೊಲೀಸ್ ಸ್ಟೇಷನ್ , ನೀರಿನ ಸೌಲಭ್ಯ , ಇಂಟರ್ನೆಟ್, ವಿದ್ಯುತ್ , ಆರೋಗ್ಯ ಕೇಂದ್ರ , ಶೈಕ್ಷಣಿಕ ಕೇಂದ್ರಗಳು, ಬ್ಯಾಂಕ್ ವ್ಯವಹಾರಗಳು, ರಸ್ತೆ ಸಾರಿಗೆ ವ್ಯವಸ್ಥೆಗಳು, ಸ್ವಚ್ಛತೆ, ಶೌಚಾಲಯ, ಪಶುಸಂಗೋಪನೆ, ಕಾಲುದಾರಿಗಳ ಸಮಸ್ಯೆಗಳು, ಕುಡಿಯುವ ನೀರಿನ ಸಮಸ್ಯೆಗಳು, ಇತರ ಸೌಲಭ್ಯಗಳ ಕೊರತೆ ಇದೆ ಎಂದು ಗ್ರಾಮಸ್ವರಾಜ್ ತಂಡ ಮುಖಂಡ, ಸಾಮಾಜಿಕ ಕಾರ್ಯಕರ್ತ ಜಿನ್ನಪ್ಪ ಅಳ್ಪೆ ಹೇಳುತ್ತಾರೆ. ವಿಡಿಯೋ ವರದಿ…….
ಉಪವಾಸ ಸತ್ಯಾಗ್ರಹದಲ್ಲಿ ಪುರುಷೋತ್ತಮ ಮುಡೂರು, ಧರ್ಮಪಾಲ ಗೌಡ , ಭುವನೆಂದ್ರ ಗೌಡ, ಲಕ್ಷ್ಮಣ ಗೌಡ, ಜಿನ್ನಪ್ಪ ಗೌಡ ಮತ್ತು ಸೈಲಿಸ್ ಭಾಗವಹಿಸಿದರು.
ಉಪವಾಸದ ಸ್ಥಳಕ್ಕೆ ಪಂಜ ವೈದ್ಯಾಧಿಕಾರಿ ಡಾ ಮಂಜುನಾಥ್ , ಗ್ರಾಮ ಪಂಚಾಯತ್ ಕಾರ್ಯದರ್ಶಿ ಕೆ ಪದ್ಮಯ್ಯ , ತಾಪಂ ಮಾಜಿ ಅಧ್ಯಕ್ಷೆ ಎನ್ ಎಸ್ ಸುವರ್ಣಿನಿ, ಪಂಜ ಗ್ರಾಪಂ ಮಾಜಿ ಅಧ್ಯಕ್ಷ ಕಾರ್ಯಪ್ಪ ಗೌಡ, ದೇವಿಪ್ರಸಾದ್ ಕಾನತ್ತೂರು, ಗಂಗಾಧರ ಶಾಸ್ತ್ರಿ ಪುತ್ಯ , ಸಂಗಾತಿ ಸ್ಟೋರ್ ಮಾಲಕ ವೆಂಕಟ್ರಮಣ ಭಟ್ , ಕುದ್ವ ಕೇಶವ, ತಿರುಮಲೇಶ್ ಭಟ್ ಗುಂಡಿಮಜಲು, ಗಂಗಾಧರ ಗುಂಡಕ್ಕ ಮೊದಲಾದವರು ಭೇಟಿ ನೀಡಿದರು.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…