Advertisement
MIRROR FOCUS

ಗೋವಿನ ಸಗಣಿಯಿಂದ ಗಣೇಶ ಮೂರ್ತಿ | ಪರಿಸರ ಸ್ನೇಹಿ ಗಣೇಶ ಚತುರ್ಥಿ ಆಚರಣೆಗೆ ಆದ್ಯತೆ ನೀಡಿದ ರೈತ|

Share

ಎಲ್ಲೆಡೆ ಗಣೇಶ ಹಬ್ಬ ಜೋರಾಗಿಯೇ ನಡೆಯುತ್ತದೆ. ಸರ್ಕಾರವೂ ಸೇರಿದಂತೆ ಪರಿಸರ ಪ್ರೇಮಿಗಳು ರಾಸಾಯನಿಕ ರಹಿತವಾದ ವಿಗ್ರಹ ತಯಾರಿ ಹಾಗೂ ಗಣೇಶ ಹಬ್ಬವನ್ನು ಆಚರಿಸಿ ಎಂದು ಮನವಿ ಮಾಡುತ್ತಾರೆ. ಈ ನಡುವೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಿದರಕುಂದಿ ಗ್ರಾಮದ ರೈತ ಮುತ್ತು ಕನ್ನೂರು, ಗೋವಿನ ಸಗಣಿಯಿಂದ ಗೋಮಯ ಗಣೇಶ ಮೂರ್ತಿ ತಯಾರಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.…..ಮುಂದೆ ಓದಿ….

ಪ್ರತಿ ವರ್ಷವೂ ಪರಿಸರ ಸ್ನೇಹಿ ಗೋವಿನ ಸಗಣಿಯಿಂದ ಗಣೇಶನ ಮೂರ್ತಿ ತಯಾರಿಸುತ್ತಿದ್ದು, ರಾಜ್ಯ ಮಾತ್ರವಲ್ಲದೆ ಮಹಾರಾಷ್ಟ್ರದಲ್ಲೂ ಈ ಮೂರ್ತಿಗಳಿಗೆ ಹೆಚ್ಚಿನ ಬೇಡಿಕೆಯಿದೆ.ಗೋಮಯ ಗಣೇಶ ಮೂರ್ತಿಯಿಂದ ಪರಿಸರಕ್ಕೆ ಯಾವುದೇ ಹಾನಿಯಿಲ್ಲ. ಈ ಮೂರ್ತಿಯನ್ನು ಒಂದು ಬಕೆಟ್ ನಲ್ಲಿ ವಿಸರ್ಜಿಸಿದರೆ ಆದು ಸಂಪೂರ್ಣ ಕರಗಿ ಗೊಬ್ಬರದ ರೂಪದಲ್ಲಿ ಮತ್ತೆ ಗಿಡ – ಸಸಿಗಳಿಗೆ ಒದಗಿ ಬರುತ್ತದೆ. ಹೀಗಾಗಿ ಈಚೆಗೆ ಗಣಪತಿ ವಿಗ್ರಹದ ಬೇಡಿಕೆಯೂ ಬರುತ್ತಿದೆ.…..ಮುಂದೆ ಓದಿ….

ಹಿಂದೆ ನಮ್ಮ ಪೂರ್ವಜರು ಸಗಣಿಯ ಉಂಡೆಯನ್ನು ಇಟ್ಟು ಅದರ ಮೇಲೆ ಗರಿಕೆಯನ್ನು ಇಟ್ಟು ಗಣಪ ಎಂದು ಪೂಜಿಸುತ್ತ ಇದ್ದರು. ಓಡಾಡುವ ಜಾಗದಲ್ಲೂ ಕೂಡ ಈ ರೀತಿ ಇಡುತ್ತಲಿದ್ದರು. ಈ ರೀತಿ ಇಡುವುದರಿಂದ ನೆಗೆಟಿವ್ ಎನರ್ಜಿ ಮನೆಯೊಳಗೆ ಪ್ರವೇಶಿಸದಂತೆ ತಡೆಯುತ್ತದೆ ಹಾಗೂ ರೇಡಿಯೇಶನ್ ಪ್ರಭಾವ ಕೂಡ ಬೀರುವುದಿಲ್ಲ ಎನ್ನುವುದು ಅನೇಕರ ನಂಬಿಕೆಯೂ ಹೌದು.

ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ನಿವೃತ್ತ ಶಿಕ್ಷಕ ಎಸ್. ಬಿ. ಹಂಡಗಲ್, ರಾಸಾಯನಿಕ ಹಾಗೂ ವಿಷಕಾರಿ ಬಣ್ಣಗಳನ್ನು ಬಳಸಿ ತಯಾರಿಸಿದ ಮೂರ್ತಿಗಳಿಂದ ಪರಿಸರಕ್ಕೆ ಹಾನಿಯಾಗುತ್ತಿತ್ತು, ಆದರೆ ರೈತ ಮುತ್ತು ಕನ್ನೂರು ತಯಾರಿಸಿದ ಗೋಮಯ ಗಣಪ ಸಂಪೂರ್ಣ ಪರಿಸರ ಪೂರಕ ಎಂದು ಹೇಳಿದರು.

Environmental enthusiasts, along with government officials, are advocating for the use of chemical-free materials in the preparation and celebration of the Ganesha festival. In a commendable effort, Muthu Kannur, a farmer from Bidarakundi village in Muddebihala taluk of Vijayapur district, has gained recognition for creating a Gomaya Ganesha idol using cow dung.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 05-03-2026 | ಕರ್ನಾಟಕದಲ್ಲಿ ಬಿಸಿಲಿನ ಅಬ್ಬರ ಶುರು..! ಇನ್ನು 10 ದಿನ ಮಳೆಯ ಲಕ್ಷಣ ಇಲ್ಲ

ಕರ್ನಾಟಕದಲ್ಲಿ ಮುಂದಿನ ಕೆಲವು ದಿನಗಳವರೆಗೆ ಒಣ ಹವಾಮಾನ ಮುಂದುವರಿಯುವ ಸಾಧ್ಯತೆ ಇದೆ. ಗುಜರಾತ್…

3 hours ago

ಅಡಿಕೆ ಮಾರುಕಟ್ಟೆ | ಕೆಲವು ಮಾರುಕಟ್ಟೆಗಳಲ್ಲಿ ಏರಿಕೆ, ಕೆಲವು ಸ್ಥಿರ – ಸಿಂಗಲ್‌ ಚೋಲ್‌ ಗೆ ಬೇಡಿಕೆ..! | ರಬ್ಬರ್ ದರದಲ್ಲಿ ಸ್ವಲ್ಪ ಕುಸಿತ

ಇಂದಿನ ಅಡಿಕೆ ಮಾರುಕಟ್ಟೆಯಲ್ಲಿ ಪಿಂಗಾರ, ಮಾಸ್‌, ಟಿಎಸ್‌ಎಸ್‌, ತುಮ್ಕೋಸ್‌, ಮ್ಯಾಮ್ಕೋಸ್ ಹಾಗೂ ಕ್ಯಾಂಪ್ಕೊ…

3 hours ago

ಕಾಡಾನೆ ನಿಯಂತ್ರಣಕ್ಕೆ ರಾಜ್ಯದ ಕ್ರಮ : ಎಲಿಫೆಂಟ್ ಟಾಸ್ಕ್ ಫೋರ್ಸ್ ರಚನೆ

ಕಾಡಾನೆ ಹಾವಳಿ ನಿಯಂತ್ರಣಕ್ಕಾಗಿ ಕರ್ನಾಟಕ ಸರ್ಕಾರ 28 ಸಿಬ್ಬಂದಿಯ ಎಲಿಫೆಂಟ್ ಟಾಸ್ಕ್ ಫೋರ್ಸ್…

5 hours ago

ಕಾಡಾನೆ ಹಾವಳಿ ತಡೆಗೆ ಸರ್ಕಾರದ ಕ್ರಮ : ಕೊಪ್ಪ ಅರಣ್ಯ ವಿಭಾಗಕ್ಕೆ ₹12.77 ಕೋಟಿ, ರೈಲ್ವೆ ಬ್ಯಾರಿಕೇಡ್ ಅಳವಡಿಕೆ

ಕೊಪ್ಪ ಅರಣ್ಯ ವಿಭಾಗದಲ್ಲಿ ಕಾಡಾನೆಗಳು ನಾಡಿಗೆ ಪ್ರವೇಶಿಸದಂತೆ ತಡೆಯಲು ರೈಲ್ವೆ ಬ್ಯಾರಿಕೇಡ್ ಅಳವಡಿಕೆಗೆ…

5 hours ago

ಭವಿಷ್ಯದ ಬಾಳೆ ಬೆಳೆ ಉಳಿಸುವ ಗುಟ್ಟು ಕಾಡು ಬಾಳೆ ಜಾತಿಯಲ್ಲಿ!

ಅರಣ್ಯದಲ್ಲಿ ಬೆಳೆಯುವ "ಸಿಕ್ಕಿಂ ಬಾಳೆ" ಜಾತಿಯಲ್ಲಿ ಹವಾಮಾನ ಬದಲಾವಣೆಯನ್ನು ತಾಳುವ ಜಿನೀಯ ಗುಣಗಳು…

17 hours ago

ಕೃಷಿ ಮಾರುಕಟ್ಟೆ ವರದಿ | ಅಡಿಕೆ ಮಾರುಕಟ್ಟೆಯಲ್ಲಿ ಮಿಶ್ರ ಫಲ…!

ಕರ್ನಾಟಕದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ ಏರಿಳಿತ ಕಂಡುಬಂದಿದೆ. ಮಲೆನಾಡು ಮಾರುಕಟ್ಟೆಗಳಲ್ಲಿ ಸ್ವಲ್ಪ ಏರಿಕೆ…

1 day ago