ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ವಿಚಾರ ಗೋಷ್ಠಿ | ಚಪ್ಪಲಿ ಇಡುವುದರಿಂದ ಚಪ್ಪಾಳೆ ತಟ್ಟುವವರೆಗೂ ಮಹಿಳೆಯರು “ಸೈ” |

ಅಮ್ಮನಿಗೆ ಬಾಲ್ಯದಿಂದಲೇ ಓದುವ, ಬರೆಯುವ ಹವ್ಯಾಸವಿತ್ತು. ಸಭೆ-ಸಮಾರಂಭಗಳಿಗೆ ಹೋದಾಗ, ಪ್ರವಾಸಕ್ಕೆ ಹೋದಾಗ ಅವರು ನೋಡಿದ, ಕೇಳಿದ ವಿಚಾರಗಳನ್ನು ಕಲೆ ಹಾಕಿ ಸಾಕಷ್ಟು ಚಿಂತನ-ಮಥನ ಮಾಡುತ್ತಿದ್ದರು. ಧರ್ಮಸ್ಥಳದಲ್ಲಿ ಅವರ ಸೃಜನಶೀಲ ಚಿಂತನೆ ಹಾಗೂ ಕ್ರಿಯಾಶೀಲತೆಗೆ ಬೇಕಾದಷ್ಟು ವೇದಿಕೆ ಹಾಗೂ ಅವಕಾಶಗಳು ದೊರಕಿವೆ ಎಂದು ಶ್ರದ್ಧಾಅಮಿತ್ ಹೇಳಿದರು.

Advertisement
Advertisement

ಅವರು ಧರ್ಮಸ್ಥಳದಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಗ್ರಾಮಾಭಿವೃದ್ಧಿಯೋಜನೆಯ ಆಶ್ರಯದಲ್ಲಿ ಆಯೋಜಿಸಿದ ವಿಚಾರ ಗೋಷ್ಠಿಯನ್ನು ಉದ್ಘಾಟಿಸಿ  ಮಾತನಾಡಿದರು. ಧರ್ಮಸ್ಥಳದ ಸಿಬ್ಬಂದಿಗೆ ಅವರು ನಾಟಕ, ಯಕ್ಷಗಾನ, ಪುರಾಣವಾಚನ ಇತ್ಯಾದಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೊಸ ಪರಿಕಲ್ಪನೆಯಲ್ಲಿ ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡುತ್ತಿರುವುದರಿಂದ ಅನೇಕ ಉದಯೋನ್ಮುಖ ಕಲಾವಿದರು ಮೂಡಿ ಬಂದಿದ್ದಾರೆ ಎಂದರು. “ಗೆಳತಿ” ಮತ್ತು “ಮಗಳಿಗೊಂದು ಪತ್ರ” ಕೃತಿಗಳಲ್ಲಿ ಅವರ ಲೇಖನಗಳ ಸಂಗ್ರಹವಿದ್ದು ಸಾರ್ಥಕ ಬದುಕಿಗೆ ಮಾಹಿತಿ, ಮಾರ್ಗದರ್ಶನದ ಕಣಜವಾಗಿದೆಎಂದು ಹೇಳಿದರು.

Advertisement
ಶಿವಮೊಗ್ಗದ ಸಹ್ಯಾದ್ರಿಕಾಲೇಜಿನಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಶುಭದಾಸ್ ಮರವಂತೆ ಮಾತನಾಡಿ, ಹೇಮಾವತಿ ಹೆಗ್ಗಡೆಯವರ ಲೇಖನಗಳಲ್ಲಿ ಉತ್ಕೃಷ್ಟ ವಿಚಾರಗಳ ಧೀಮಂತಿಕೆ ಮತ್ತು ಶ್ರೀಮಂತಿಕೆ ಇದ್ದುಓದುಗರಲ್ಲಿಅರಿವಿನ ಬೆಳಕಿನೊಂದಿಗೆ ಆತ್ಮವಿಶ್ವಾಸ ಮತ್ತು ನವಚೈತನ್ಯವನ್ನು ಮೂಡಿಸುತ್ತವೆ ಎಂದು ಹೇಳಿದರು. ಹೆಗ್ಗಡೆಯವರ ಮಾತೃಶ್ರೀ ರತ್ನಮ್ಮನವರು, ಹೇಮಾವತಿ ಹೆಗ್ಗಡೆಯವರು ಹಾಗೂ ಮಗಳು, ಶ್ರದ್ಧಾಅಮಿತ್‍ ಅವರ ಸಾಹಿತ್ಯ, ಸೇವೆ, ಸಾಧನೆ ಬಗ್ಗೆ ಅವರು ಅಭಿನಂದಿಸಿದರು.

ಬೆಂಗಳೂರಿನ ಭಾರತೀಯ ಜೀವವಿಮಾ ನಿಗಮದ ಹಿರಿಯ ಅಧಿಕಾರಿ ರಾಜ್ಯಶ್ರೀ ಹಂಪನಾ ಮಾತನಾಡಿ, ಹೇಮಾವತಿ ಹೆಗ್ಗಡೆಯವರ ನೇತೃತ್ವದಲ್ಲಿ ಗ್ರಾಮೀಣ ಮಹಿಳೆಯರ ಬದುಕಿನಲ್ಲಿ ಕ್ರಾಂತಿಕಾರಿ ಪರಿವರ್ತನೆಯಾಗಿದೆ. ಸ್ವಚ್ಛತೆ, ಕುಟುಂಬ ನಿರ್ವಹಣೆ, ಮಕ್ಕಳ ಪಾಲನೆ-ಪೋಷಣೆ, ಉಳಿತಾಯ, ಸಭೆ-ಸಮಾರಂಭ ಆಯೋಜನೆ ಮೊದಲಾದ ಚಟುವಟಿಕೆಗಳಲ್ಲಿ ಮಹಿಳೆಯರು ಉನ್ನತ ಸಾಧನೆ ಮಾಡಿ ಎಲ್ಲಾ ರಂಗಗಳಲ್ಲಿಯೂ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ.ಚಪ್ಪಲಿ ಇಡುವುದರಿಂದ ಚಪ್ಪಾಳೆ ತಟ್ಟುವ ವರೆಗೂ ಮಹಿಳೆಯರು “ಸೈ” ಎನಿಸಿಕೊಂಡಿದ್ದಾರೆ ಎಂದು ಹೇಳಿ ಅಭಿನಂದಿಸಿದರು.

Advertisement

ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕಿ ಸಂಗೀತಾ ಸ್ವಾಗತಿಸಿದರು. ಯೋಜನಾಧಿಕಾರಿ ಚೇತನಾ ವಂದಿಸಿದರು. ಮಮತಾ ಹರೀಶ್‍ರಾವ್‍ ಕಾರ್ಯಕ್ರಮ ನಿರ್ವಹಿಸಿದರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ
Advertisement

Advertisement

Be the first to comment on "ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ವಿಚಾರ ಗೋಷ್ಠಿ | ಚಪ್ಪಲಿ ಇಡುವುದರಿಂದ ಚಪ್ಪಾಳೆ ತಟ್ಟುವವರೆಗೂ ಮಹಿಳೆಯರು “ಸೈ” |"

Leave a comment

Your email address will not be published.


*