ರಷ್ಯಾ ಮತ್ತು ಉಕ್ರೇನ್ ಯುದ್ಧದ ಪರಿಣಾಮಗಳು ಯೂರೋಪಿಯನ್ ದೇಶಗಳ ಬುಡ ಅಲುಗಾಡಿಸಬಹುದು ಎಂದು ಭಾವಿಸಲಾಗಿತ್ತು. ಆದರೆ ಅತಿಹೆಚ್ಚು ಬಾಧಿತವಾಗಿರುವುದು ಬ್ರಿಟನ್ ಮತ್ತು ಜರ್ಮನಿ ಮಾತ್ರವೇ. ಬೇರೆ ಯೂರೋಪಿಯನ್ ದೇಶಗಳು ಆರ್ಥಿಕ ಹಿಂಜರಿತಕ್ಕೆ ಸಿಲುಕುವುದರಿಂದ ಪಾರಾಗಬಹುದು ಎಂದು ತಜ್ಞರು ಹೇಳುತ್ತಾರೆ. ರಿಷಿ ಸುನಕ್ ಪ್ರಧಾನಿಯಾದ ಬಳಿಕ ಬ್ರಿಟನ್ ದೇಶದ ಆರ್ಥಿಕತೆಯೂ ಪ್ರಪಾತಕ್ಕೆ ಬೀಳುವುದರಿಂದ ಬಚಾವ್ ಆಗಿದೆ. ಜರ್ಮನಿ ವಿಚಾರಕ್ಕೆ ಬಂದರೆ, ರಷ್ಯಾ ಉಕ್ರೇನ್ ಯುದ್ಧದಿಂದ ಮುರಿದಿದ್ದ ಸರಬರಾಜು ಸರಪಳಿ ವ್ಯವಸ್ಥೆ ಮತ್ತೆ ಕ್ರೋಢೀಕರಣಗೊಂಡರೂ ಆರ್ಥಿಕತೆಯ ಕುಸಿತವನ್ನು ತಡೆಯಲು ಸಾಧ್ಯವಾಗಿಲ್ಲ. ಹಣದುಬ್ಬರವೇ ಜರ್ಮನಿ ಪಾಲಿಗೆ ಪ್ರಮುಖ ವಿಲನ್ ಆಗಿರುವುದು.
ಜರ್ಮನಿ ದೇಶದಲ್ಲಿ ಎಲ್ಲವೂ ತೀರಾ ಹಾಳಾಗಿಲ್ಲ. ಸತತ ಎರಡು ಕ್ವಾರ್ಟರ್ ಮಾತ್ರ ಜಿಡಿಪಿ ಬೆಳವಣಿಗೆ ಮೈನಸ್ನಲ್ಲಿದೆ. ಆದರೆ, ಹೆಚ್ಚು ಶೀತವಿಲ್ಲದ ಚಳಿಗಾಲ, ಕೈಗಾರಿಕೆಗಳ ಚಟುವಟಿಕೆ ಗರಿಗೆದರಿರುವುದು, ಹೂಡಿಕೆ ಹೆಚ್ಚಾಗಿರುವುದು, ರಫ್ತು ಹೆಚ್ಚಾಗಿರುವುದು, ಆಮದು ಕಡಿಮೆ ಆಗಿರುವುದು ಇವೆಲ್ಲವೂ ಜರ್ಮನಿಗೆ ಪಾಸಿಟಿವ್ ಸಂಕೇತಗಳಾದರೂ, ಸದ್ಯಕ್ಕೆ ಹಿಂಜರಿತ ತಡೆಯುವಷ್ಟು ಇವು ಪರಿಣಾಮಕಾರಿ ಎನಿಸಿಲ್ಲ. ಈ ಪಾಸಿಟಿವ್ ಸಿಗ್ನಲ್ಗಳು ಮುಂದಿನ ತಿಂಗಳಲ್ಲೂ ಮುಂದುವರಿದರೆ ಜರ್ಮನಿ ಆರ್ಥಿಕ ಹಿಂಜರಿತದ ಸುಳಿಯಿಂದ ಪಾರಾಗಲು ಸಾಧ್ಯವಾಗಬಹುದು.
ಜರ್ಮನಿ ಆರ್ಥಿಕ ಹಿಂಜರಿತಕ್ಕೆ ಸಿಲುಕಲು ಪ್ರಮುಖ ಕಾರಣವಾಗಿರುವುದು ಅದರ ಜಿಡಿಪಿ ಬೆಳವಣಿಗೆ ಕುಸಿತ ಹಾಗೂ ಪೆಟ್ರೋಲ್ ಅಭಾವ ಎಂಬೆರಡು ಅಂಶಗಳು. ಭಾರತ ಈ ವಿಚಾರದಲ್ಲಿ ಉತ್ತಮ ಸ್ಥಿತಿಯಲ್ಲಿದೆ. ರಷ್ಯಾ ಉಕ್ರೇನ್ ಯುದ್ಧದಿಂದಾಗಿ ಭಾರತಕ್ಕೆ ರಷ್ಯಾದಿಂದ ಅಗ್ಗದ ಬೆಲೆಗೆ ತೈಲಗಳು ಸಿಗುತ್ತಿವೆ. ಇದರಿಂದ ದೇಶದ ಬೊಕ್ಕಸಕ್ಕೆ ಒಳ್ಳೆಯ ಲಾಭವಾಗುತ್ತಿದೆ. ಭಾರತದ ಜಿಡಿಪಿ ಕೂಡ ಬೇರೆ ಉದಯೋನ್ಮುಖ ಆರ್ಥಿಕತೆಗಳಿಗೆ ಹೋಲಿಸಿದರೆ ವೇಗದಲ್ಲಿದೆ.
ಇನ್ನು, ಅಮೆರಿಕಕ್ಕೆ ತೊಂದರೆ ಆದರೆ ಭಾರತಕ್ಕೆ ಪರಿಣಾಮಗಳುಂಟು. ಯಾಕೆಂದರೆ ಭಾರತದ ಬಹುತೇಕ ಐಟಿ ಕಂಪನಿಗಳಿಗೆ ಆದಾಯ ಮೂಲವೇ ಅಮೆರಿಕಾ. ಆದರೆ, ಜರ್ಮನಿಯೊಂದಿಗೆ ಭಾರತದ ತೀರಾ ದೊಡ್ಡ ವ್ಯಾವಹಾರಿಕ ಸಂಬಂಧವಿಲ್ಲ. ಭಾರತದಲ್ಲಿ ಹೂಡಿಕೆ ಮಾಡಿರುವ ವಿದೇಶಗಳ ಪೈಕಿ ಜರ್ಮನಿ 9ನೇ ಸ್ಥಾನದಲ್ಲಿದೆ. 2021ರಲ್ಲಿ ಜರ್ಮನಿ ಭಾರತಕ್ಕೆ ರೂ 1 ಲಕ್ಷ ಕೋಟಿಯಷ್ಟು ರಫ್ತು ಮಾಡಿತ್ತು. ಆ ವರ್ಷ ಜರ್ಮನಿಗೆ ಭಾರತದಿಂದ ಹೋದ ರಫ್ತು 72,000 ಕೋಟಿ ರೂ. ಇವೇನೂ ಸಾಧಾರಣ ಮೊತ್ತವಲ್ಲವಾದರೂ ಭಾರತಕ್ಕೆ ಸದ್ಯಕ್ಕೆ ದೊಡ್ಡ ಪರಿಣಾಮವಾಗುವ ಸಾಧ್ಯತೆ ಕಡಿಮೆ.
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…