ಗುಜರಾತ್‌ನ ಕುಂಡಲ್ಧಾಮ್‌ನ ಶ್ರೀ ಸ್ವಾಮೀ ನಾರಾಯಣ ಮಂದಿರಲ್ಲಿ ಪ್ರದರ್ಶಿಸಲಾದ ಭಗವಾನ್ ಸ್ವಾಮಿ ನಾರಾಯಣ ವಿಗ್ರಹಗಳ ಅದ್ಬುತ ಗುಂಪು ಗಿನ್ನೆಸ್ ವರ್ಲ್ಡ್ ರೆಕಾಡ್ಸ್ ಅನ್ನು ಪಡೆದುಕೊಂಡಿದೆ.
ಥಾಣೆ ಜಿಲ್ಲೆಯ ಭಾಯಂದರ್‌ನಲ್ಲಿರುವ ಸ್ವಾಮಿ ನಾರಾಯಣ ಮಂದಿರದ ಶಾಖೆಯಲ್ಲಿ ವಾರಾಂತ್ಯದಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಶ್ರೀ ಸ್ವಾಮಿನಾರಾಯಣ ಮಂದಿರದ ಮುಖ್ಯಸ್ಥ ಪಿಪಿ ಜ್ಞಾನಜೀವಂದಾ ಸ್ವಾಮಿ ಅವರಿಗೆ ವರ್ಚುವಲ್ ಈವೆಂಟ್‌ನಲ್ಲಿ ಭಾರತೀಯ ಫ್ಲೌಟಿಸ್ಟ ಪಂ.ರೋನು ಮಜುಂದಾರ್, ಮುಂಬೈ ಸಂಸದ ಗೋಪಾಲ್ ಶೆಟ್ಟಿ ಅವರಿಂದ ಗಿನ್ನಿಸ್ ವರ್ಲ್ಡ್ ರೆಕಾಡ್ಸ್ ಪ್ರಧಾನ ಮಾಡಲಾಯಿತು.
7,090 ವಿಗ್ರಹಗಳ ದಂಡು, 6 ಇಂಚುಗಳಿಂದ 6 ಅಡಿಗಳವರೆಗೆ, ಭವ್ಯವಾದ ಕುದುರೆ ಸವಾರಿ ಸೇರಿದಂತೆ, ವಿವಿಧ ರೂಪಗಳು ಮತ್ತು ವೇಷಭೂಷಣಗಳನ್ನು ಕುಂಡಲ್ಧಾಮ್‌ನಲ್ಲಿ ಕ್ರಿಕೆಟ್ ಮೈದಾನದಷ್ಟು ದೊಡ್ಡ ಆವರಣದಲ್ಲಿ ಪ್ರದರ್ಶಿಸಲಾಗಿದೆ ಎಂದು ದೇವಾಲಯದ ಹಿರಿಯರ ಸಹಾಯಕ ಅಲೌಲಿಕ್ ದಾಸ್ವಿ ಹೇಳಿದ್ದಾರೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel