Advertisement
MIRROR FOCUS

ಜಗತ್ತಿನಲ್ಲಿ ನೀರಿನ ಸಂಕಷ್ಟ ಯಾಕೆ ಮೌನದಲ್ಲಿದೆ?

Share

ನೀರು ಮತ್ತು ಪರಿಸರ ಸಮಸ್ಯೆಗಳು ನಾಳೆಯಲ್ಲ, ಮುಂದಿನ ಜಾಗತಿಕ ಸಂಕಷ್ಟಗಳಿಗೆ ಕಾರಣವಾಗಲಿವೆ ಎಂದು World Economic Forum ಬಿಡುಗಡೆ ಮಾಡಿದ Global Risks Report 2026 ಎಚ್ಚರಿಸಿದೆ.  ಜಗತ್ತಿನ ಮುಂದಿನ ದಶಕದ ಅಪಾಯಗಳ ಸ್ಪಷ್ಟ ಸೂಚನೆಯನ್ನು ಇದು ಒದಗಿಸುತ್ತದೆ. ಆದರೆ ಈ ವರದಿಯಲ್ಲಿ ಕಾಣಿಸುವ ಅತಿದೊಡ್ಡ ವೈರುಧ್ಯವೇನೆಂದರೆ, ಜಲ ಮತ್ತು ಪರಿಸರ ಸಂಕಷ್ಟಗಳು ಅತಿದೊಡ್ಡ ದೀರ್ಘಕಾಲೀನ ಅಪಾಯಗಳಾಗಿದ್ದರೂ, ತಕ್ಷಣದ ರಾಜಕೀಯ ಚರ್ಚೆಗಳಲ್ಲಿ ಅವು ಹಿನ್ನಲೆಯಾಗಿಯೇ  ಉಳಿದಿವೆ.

ವರದಿ ಪ್ರಕಾರ, ಜಗತ್ತು ಈಗ “Age of Competition” ಎಂಬ ಹೊಸ ಹಂತಕ್ಕೆ ಪ್ರವೇಶಿಸಿದೆ. ಭೌಗೋಳಿಕ ಸಂಘರ್ಷಗಳು, ವ್ಯಾಪಾರ ಯುದ್ಧಗಳು ಮತ್ತು ಆರ್ಥಿಕ ಅಸ್ಥಿರತೆಗಳು ರಾಷ್ಟ್ರಗಳ ತಕ್ಷಣದ ಆದ್ಯತೆಗಳಾಗಿವೆ. ಆದರೆ ಇದೇ ಸಂಘರ್ಷಗಳ ಹಿಂದೆ ನಿಂತಿರುವ ಮೂಲಭೂತ ಕಾರಣಗಳಲ್ಲಿ ಒಂದು — ಸಂಪನ್ಮೂಲಗಳ, ವಿಶೇಷವಾಗಿ ನೀರಿನ ಕೊರತೆ — ಇನ್ನೂ ಗಂಭೀರವಾಗಿ ಚರ್ಚೆಗೆ ಬಂದಿಲ್ಲ.

ನೀರಿನ ಲಭ್ಯತೆ ಕಡಿಮೆಯಾಗುತ್ತಿರುವ ಪ್ರದೇಶಗಳಲ್ಲಿ ಆಹಾರ ಭದ್ರತೆ ಕುಸಿಯುತ್ತಿದೆ, ಗ್ರಾಮೀಣ ಜೀವನ ಅಸ್ಥಿರಗೊಳ್ಳುತ್ತಿದೆ ಮತ್ತು ವಲಸೆ ಹೆಚ್ಚುತ್ತಿದೆ. ಇದು ಕೇವಲ ಪರಿಸರ ಸಮಸ್ಯೆಯಲ್ಲ; ಇದು ಆರ್ಥಿಕ ಮತ್ತು ರಾಜಕೀಯ ಅಸ್ಥಿರತೆಯ ಬೀಜ. Global Risks Report ಈ ಅಂಶವನ್ನು ಪರೋಕ್ಷವಾಗಿ ಒಪ್ಪಿಕೊಳ್ಳುತ್ತದೆ, ಆದರೆ ತಕ್ಷಣದ ಅಪಾಯಗಳ ಪಟ್ಟಿಯಲ್ಲಿ ನೀರು ಮತ್ತೆ ಹಿಂದಕ್ಕೆ ಸರಿದಿದೆ.

ಅತಿಯಾದ ಮಳೆ, ಬರ, ಭೂಗರ್ಭ ಜಲ ಕುಸಿತ, ಜೀವವೈವಿಧ್ಯ ನಾಶ — ಇವೆಲ್ಲವೂ 2036ರ ಅಪಾಯಗಳೆಂದು ವರದಿ ಹೇಳುತ್ತದೆ. ಆದರೆ ವಾಸ್ತವದಲ್ಲಿ, ಈ ಅಪಾಯಗಳು ಈಗಲೇ ಗ್ರಾಮೀಣ ಮತ್ತು ಕೃಷಿ ಆರ್ಥಿಕತೆಯ ಮೇಲೆ ಪರಿಣಾಮ ಬೀರಲು ಆರಂಭವಾಗಿದೆ. ಬೇರೆ ಬೇರೆ ಕಡೆ ಬೇರೆ ಬೇರೆ ಮಾದರಿಯಲ್ಲಿ ಕಂಡುಬರುತ್ತಿದೆ. ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ರೈತರ ಸಂಕಷ್ಟ, ಬೆಳೆ ನಷ್ಟ ಮತ್ತು ಆಹಾರ ಬೆಲೆ ಏರಿಕೆಇದೆಲ್ಲಾ ಪರಿಸರದ ಕಾರಣದಿಂದಲೇ ಆಗಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

Global Risks Report 2026 ನಮ್ಮ ಮುಂದೆ ಒಂದು ಪ್ರಶ್ನೆಯನ್ನು ಇಟ್ಟಿದೆ, ಆರ್ಥಿಕ ಬೆಳವಣಿಗೆ ಮತ್ತು ಭೌಗೋಳಿಕ ಶಕ್ತಿಯ ಪೈಪೋಟಿಯಲ್ಲಿ ನಾವು ನೀರು ಮತ್ತು ಪರಿಸರವನ್ನು ಕಡೆಗಣಿಸುತ್ತಿದ್ದೇವೇ?.  ನೀರಿನ ನಿರ್ವಹಣೆ, ಹವಾಮಾನ ಮತ್ತು ಪರಿಸರ ಪುನಶ್ಚೇತನಕ್ಕೆ ರಾಜಕೀಯ ಬದ್ಧತೆ ಇಲ್ಲದೆ ಹೋದರೆ, ಮುಂದಿನ ದಶಕದಲ್ಲಿ ಸಂಘರ್ಷಗಳು ಇನ್ನಷ್ಟು ಗಾಢವಾಗಲಿವೆ ಎಂಬ ಎಚ್ಚರಿಕೆಯನ್ನು ಈ ವರದಿ ನೀಡಿದೆ.

ಭಾರತದಂತಹ ಕೃಷಿ ಪ್ರಧಾನ ದೇಶಕ್ಕೆ ಈ ವರದಿ ಸ್ಪಷ್ಟ ಸಂದೇಶ ನೀಡುತ್ತದೆ. ನೀರು -ಆಹಾರ ಭದ್ರತೆ, ಆಹಾರ ಭದ್ರತೆ-ಸಾಮಾಜಿಕ ಸ್ಥಿರತೆ, ಸಾಮಾಜಿಕ ಸ್ಥಿರತೆ ಇಲ್ಲದೆ ಆರ್ಥಿಕ ಬೆಳವಣಿಗೆ ಅಸಾಧ್ಯ. ಹೀಗಾಗಿ ನೀತಿ ರೂಪಿಸುವವರು ಜಲ ಮತ್ತು ಪರಿಸರ ಸಮಸ್ಯೆಗಳನ್ನು ಪರಿಸರ ಸಚಿವಾಲಯದ ಕಡತಗಳಿಗೆ ಮಾತ್ರ ಸೀಮಿತಗೊಳಿಸದೇ, ರಾಷ್ಟ್ರೀಯ ಭದ್ರತೆ ಮತ್ತು ಆರ್ಥಿಕ ಯೋಜನೆಯ ಕೇಂದ್ರಬಿಂದುವಾಗಿಸಬೇಕಾಗಿದೆ.

ಇದನ್ನೂ ಓದಿ…

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಇನ್ಸ್ಪೈರ್ ಅವಾರ್ಡ್ ಗೆ ಅಜ್ಜಾವರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಆಯ್ಕೆ

ಅಜ್ಜಾವರ ಸರ್ಕಾರಿ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿಗಳು INSPIRE Award ಗೆ ಆಯ್ಕೆಯಾಗಿದ್ದಾರೆ. ವೈಜ್ಞಾನಿಕ…

7 hours ago

ನೆಮ್ಮದಿಗಾಗಿ ಬದುಕಿ; ಹಣ-ಅಧಿಕಾರಕ್ಕಾಗಿ ಅಲ್ಲ

ನೆಮ್ಮದಿಗಾಗಿ ಬದುಕಬೇಕು, ಹಣ-ಅಧಿಕಾರಕ್ಕಾಗಿ ಅಲ್ಲ ಎಂದು ರಾಮಚಂದ್ರಾಪುರ ಶ್ರೀಗಳು ಕರೆ ನೀಡಿದರು. ಸಂನ್ಯಾಸ…

8 hours ago

ಅಡಿಕೆ ಆಮದು ಎಂಬ ‘ಮಾಯಾಜಾಲ’: ನಡೆಯುತ್ತಿದೆಯೇ ಬೆಳೆಗಾರರ ಮೇಲೆ ಸೈಕಲಾಜಿಕಲ್ ಅಟ್ಯಾಕ್…!?

ಅಡಿಕೆ ದರ ಇಳಿಕೆಗೆ ಆಮದುಗಿಂತ ಅಡಿಕೆ ಕೊಯ್ಲು ಕಾಲದ ಸರಬರಾಜು ಒತ್ತಡ ಮತ್ತು…

8 hours ago

ಮಂಗಳೂರು ಅಡಿಕೆ ಮಾರುಕಟ್ಟೆ | ಐದು ವರ್ಷದ ಧಾರಣೆ ಹೇಳುವ ಏರುಪೇರುಗಳ ಕಥೆ..!

ಐದು ವರ್ಷದ ದತ್ತಾಂಶವು ಮಂಗಳೂರು ಅಡಿಕೆ ಮಾರುಕಟ್ಟೆ ಚಕ್ರಾಕಾರ ಸ್ವಭಾವ ಹೊಂದಿರುವುದನ್ನು ತೋರಿಸಿದೆ.…

22 hours ago

ಮಾರ್ಚ್‌ನಲ್ಲಿ‌ ಮಳೆ ಶಾಕ್….! ರೈತರಿಗೆ ನಷ್ಟದ ಭೀತಿ

ದೇಶದ ವಿವಿದೆಡೆ ಮಾರ್ಚ್‌ ತಿಂಗಳಲ್ಲಿ ಉತ್ತಮ ಮಳೆಯಾಗಿದೆ. ವಿಶೇಷವಾಗಿ ರಾಜ್ಕೋಟ್‌ನಲ್ಲಿ ಅಸಾಮಾನ್ಯ ಹವಾಮಾನದಿಂದ…

22 hours ago

ಕೃಷಿಕರಿಗೂ ಇದೆ ಹೋರ್ಮುಜ್‌ ಸಂಕಷ್ಟ…! ರಸಗೊಬ್ಬರ ಪೂರೈಕೆ ಆತಂಕ…? | ಪ್ರಧಾನಿ ನೇತೃತ್ವದಲ್ಲಿ ಸಭೆ

ಹೋರ್ಮುಜ್‌ ಜಲಸಂಧಿ ಸಂಕಷ್ಟದಿಂದ ಭಾರತಕ್ಕೆ ಗೊಬ್ಬರ ಮತ್ತು ಇಂಧನ ಪೂರೈಕೆ ಮೇಲೆ ಒತ್ತಡ…

1 day ago