ಜಾಗತಿಕ ತಾಪಮಾನ ಏರಿಕೆ ಈಗ ಇಡೀ ಪ್ರಪಂಚದಲ್ಲಿ ಬಹುದೊಡ್ಡ ತಲೆನೋವಿನ ಸಂಗತಿ. ತಾಪಮಾನ ಏರಿಕೆ ನಿಯಂತ್ರಣಕ್ಕೆ ಹಲವು ಪ್ರಯತ್ನ ಮಾಡಲಾಗುತ್ತಿದೆ. ಈಚೆಗೆ ನಡೆದ ಜಾಗತಿಕ ಸಮಾವೇಶದಲ್ಲೂ ತಾಪಮಾನ ನಿಯಂತ್ರಣದ ಬಗ್ಗೆ ಗಂಭೀರ ಚರ್ಚೆಯಾಗಿದೆ. ಮುಂದಿನ 25 ವರ್ಷಗಳಲ್ಲಿ ಕನಿಷ್ಟ 2 ಡಿಗ್ರಿ ಜಾಗತಿಕ ತಾಪಮಾನ ಇಳಿಕೆಯ ಪ್ರಯತ್ನಗಳು ನಡೆಯುತ್ತಿದೆ. ತಾಪಮಾನ ಏರಿಕೆಯಿಂದ ವಿವಿಧ ಸಮಸ್ಯೆಗಳು ಕಂಡುಬರುತ್ತಿದೆ ಎಂದು ವರದಿ ಇದೆ. ಇದೀಗ ಎಲ್ಲಾ ಪ್ರಯತ್ನಗಳ ನಡುವೆ, ಎಸಿ ಬಳಕೆಯೂ ತಾಪಮಾನ ಏರಿಕೆಗೆ ಕಾರಣವಾಗಿದೆ ಎಂಬುದು ಇನ್ನೊಂದು ವರದಿ.
ಜಾಗತಿಕ ತಾಪಮಾನ ಏರಿಕೆಯು ಮಾನವನ ಸಂಕಟ ಮತ್ತು ಪರಿಸರ ವಿಪತ್ತುಗಳಿಗೆ ಕಾರಣವಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಬೇಸಿಗೆಯ ಬಿಸಿಲು ತಾರಕಕ್ಕೆ ಏರುತ್ತಿದ್ದು, ಏರ್‌ಕೂಲರ್‌ಗಳ ಅವಶ್ಯಕತೆ ಹೆಚ್ಚಾಗಿದೆ. ಈ ನಡುವೆ ಹಲವಾರು ಮಂದಿ ತಮ್ಮ ಮನೆ ಅಥವಾ ಕೋಣೆಗೆ ಹೊಂದಿಕೆಯಾಗುವ ಏರ್‌ಕೂಲರ್‌ಗಳನ್ನು ಖರೀದಿ ಮಾಡಲು ಮುಂದಾಗುತ್ತಿದ್ದಾರೆ.ಬೇಸಿಗೆಯಲ್ಲಿ ಹೆಚ್ಚಿನ ತಾಪಮಾನವು ಭಾರತದ ಹೆಚ್ಚಿನ ನಗರಗಳಲ್ಲಿ ಸಾಮಾನ್ಯವಾಗುತ್ತದೆ. ಈ ತಾಪದಿಂದ ಪಾರಾಗಲು ಜನರು ಎಸಿ ಅಥವಾ ಏರ್ ಕೂಲರ್‌ಗಳಂತಹ ಕೂಲಿಂಗ್ ಡಿವೈಸ್‌ಗಳನ್ನು ಖರೀದಿ ಮಾಡುವುದು ಅನಿವಾರ್ಯವಾಗಿದೆ.
ಜಗತ್ತಿನಲ್ಲಿ ಅಧಿಕವಾಗಿ ಏರುತ್ತಿರುವ ತಾಪಮಾನ, ಬಿಸಿಲಿನ ಗಾಳಿ ಸೂಸುವ ವೇವ್ಸ್‌ಗಳು, ಬರ ಮತ್ತು ಕಾಡ್ಗಿಚ್ಚು ಬೇಸಿಗೆಯಲ್ಲಿ ಸರ್ವೆ ಸಾಮಾನ್ಯವಾದ ಸಂಗತಿಗಳು ಆಗಿದ್ದರೂ, ಈ ಸಲ ಹೆಚ್ಚೇ ಎಂಬಂತೆ ಬಿಸಿಲಿನ ಧಗೆ ಹೆಚ್ಚಿದೆ. ಈ ಹವಾಮಾನ ಬದಲಾವಣೆಯು ಭೂಮಿಯ ತಾಪಮಾನದ ಮೇಲೆ ಅಗಾಧವಾಗಿ ಪರಿಣಾಮ ಬೀರಲಿದೆ. ಅದಕ್ಕೆ ತಕ್ಕಂತೆ ಪ್ರತಿಯೊಬ್ಬರು ತಂಪಾಗಿರಬೇಕಾದ ಅಗತ್ಯತೆ ಹೆಚ್ಚಾಗಿದೆ.
ಹವಾಮಾನದ ವರದಿಗಳು ಏನು ಹೇಳುತ್ತವೆ ? : ಇತ್ತೀಚಿನ ಹವಾಮಾನ ವರದಿಗಳ ಪ್ರಕಾರ, ಬಿಸಿಲಿನ ಧಗೆಯನ್ನು ಕಡಿಮೆ ಮಾಡಿಕೊಳ್ಳಲು, ಜನರು ಅಗ್ಗವಾಗಿರುವ ಮತ್ತು ಪಾಕೆಟ್ ಸ್ನೇಹಿ ಏರ್ ಕಂಡಿಷನರ್‌ಗಳನ್ನು ಖರೀದಿ ಮಾಡುತ್ತಿದ್ದಾರೆ. ಅಗ್ಗದ ಏರ್ ಕಂಡಿಷನ್‌ರ್‌ಗಳನ್ನು ಬಳಕೆ ಮಾಡುವುದರಿಂದ ಅವುಗಳು ಭೂಮಿಯ ತಾಪಮಾನವನ್ನು ಮತ್ತಷ್ಟು ಹೆಚ್ಚಿಸುತ್ತಿದೆ ಎಂದು ಹೇಳುತ್ತಿವೆ.ಇದು ಸಮಸ್ಯೆಯನ್ನು ತಂದೊಡ್ಡುತ್ತಿವೆ.
ಬಿಸಿಲಿನ ಧಗೆಯನ್ನು ಹೇಗೆ ಎದುರಿಸುತ್ತಿದ್ದಾರೆ ಜನರು.. ? : ತಾಪಮಾನವನ್ನು ಎದುರಿಸಲು, ಗ್ರಾಮೀಣ ಮತ್ತು ನಗರದ ಬಡ ಜನರು ಕೈಗೆಟಕುವ ದರದಲ್ಲಿ ಏರ್ ಕೂಲರ್‌ಗಳನ್ನು ಖರೀದಿ ಮಾಡುತ್ತಿದ್ದಾರೆ. ಅವುಗಳ ಕಾರ್ಯ ದಕ್ಷತೆ ಬಗ್ಗೆ ಗಮನವೇ ಹರಿಸುತ್ತಿಲ್ಲ. ಅಗ್ಗದ ಏರ್ ಕಂಡಿಷನ್‌ರ್‌ಗಳು ಜಾಗತಿಕ ತಾಪಮಾನವನ್ನು ಹೆಚ್ಚಿಸುತ್ತವೆ. ಆದ್ದರಿಂದ ಅಗ್ಗದ ಏರ್ ಕಂಡಿಷನ್‌ರ್‌ಗಳು ಉತ್ತಮ ಆಯ್ಕೆಯಲ್ಲ ಎಂದು ವರದಿ ಹೇಳುತ್ತದೆ.
2050 ರ ಹೊತ್ತಿಗೆ, ಏರ್ ಕಂಡಿಷನ್‌ರ್‌ಗಳ ಬಳಕೆಯು ಪ್ರಪಂಚದಾದ್ಯಂತದ ಎಲ್ಲ ಮನೆಗಳಲ್ಲಿ ವಿದ್ಯುತ್‌ನ ಅತಿದೊಡ್ಡ ಗ್ರಾಹಕನಾಗಿ ಇತರ ಉಪಕರಣಗಳನ್ನು ಹಿಂದಿಕ್ಕುವ ನಿರೀಕ್ಷೆಯಿದೆ. ಈ ಬೇಡಿಕೆಯನ್ನು ಪೂರೈಸಲು, 2,500 ಗಿಗಾವ್ಯಾಟ್‌ಗಳ ಹೆಚ್ಚುವರಿ ಸಾಮರ್ಥ್ಯದ ಅಗತ್ಯವಿದೆ. ಕೂಲಿಂಗ್ ಉಪಕರಣಗಳ ಬೇಡಿಕೆಯಲ್ಲಿ ನಿರೀಕ್ಷಿತ ಗಮನಾರ್ಹ ಬೆಳವಣಿಗೆಯನ್ನು ಹೊಂದಿರುವ ದೇಶಗಳು, ವಿಶೇಷವಾಗಿ ಭಾರತ, ಚೀನಾ ಮತ್ತು ಇಂಡೋನೇಷ್ಯಾ ಆಗಿವೆ. ಇವುಗಳು ಯೋಜಿತ ಕೂಲಿಂಗ್ ಅಗತ್ಯಗಳನ್ನು ಪೂರೈಸಲು ಗಣನೀಯ ಮತ್ತು ದುಬಾರಿ ಗರಿಷ್ಠ ಶಕ್ತಿ ಸಾಮರ್ಥ್ಯದಲ್ಲಿ ಹೂಡಿಕೆ ಮಾಡಬೇಕಾಗುತ್ತದೆ ಎಂದು ವರದಿಯು ತಿಳಿಸಿದೆ.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…
ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…