ಸೌತೆಗೆ(cucumber) 21ನೇ ದಿನದ ಬಳಿಕ ಏನೂ ಗೊಬ್ಬರ(Manure) ಕೊಡುವುದು ಬೇಕಿಲ್ಲ. ಆಮೇಲೆ ದಂಡೆಗೆ ನೀರು(Water) ಬಿಡುವುದು, ಕೊಯ್ಯುವುದು ಅಷ್ಟೇ ಕೆಲಸ, 50 ಚಿಲ್ಲರೆ ದಿನಗಳಲ್ಲಿ ಸೌತೆಯ ಜೀವನ ಚಕ್ರವೇ ಮುಗಿಯುತ್ತದೆ – ಎಂಬಿತ್ಯಾದಿ ಸಾಂಪ್ರದಾಯಿಕ ಸೌತೆ ಬೆಳೆಗಾರರ(Cucumber cultivators) ಮಾತುಗಳು.
ನಾನು ಈ ಬಾರಿ ಸುಮಾರು 25ನೆಯ ದಿನದ ಬಳಿಕ ಪ್ರತೀ 8 ದಿನಕ್ಕೊಮ್ಮೆ ಗೋಬರ್ ಸ್ಲರಿಯನ್ನು(Manure Slurry) ಸೌತೆಯ ದಂಡೆಗೆ ನೀರು ಬಿಡುವಂತೆ ಬಿಡಲು ಶುರುಮಾಡಿದೆ. ಸುಮಾರು ಒಂದು ಗೋಣಿಯಷ್ಟು ಒಲೆ ಬೂದಿಯನ್ನೂ(Ash) ಮರಳು ಶೋಧಕದಲ್ಲಿ ಸೋಸಿ ಸ್ಲರಿ ಗುಂಡಿಗೆ ಮಿಶ್ರ ಮಾಡಿ ನಂತರ ಸ್ಲರಿ ಬಿಟ್ಟೆ, ಪ್ರತೀ ಬಾರಿ. ಸುಮಾರು 2000 ಲೀಟರ್ ನಷ್ಟು ಸ್ಲರಿ ಒಮ್ಮೆ ಬಿಟ್ಟರೆ ನನ್ನ ಸೌತೆಯ 4 ದೊಡ್ಡ ಸಾಲುಗಳು ಭರ್ತಿ ಆಗುತ್ತಿದ್ದವು.
ಅಚ್ಚರಿಯಾಯ್ತು, ಅಲ್ಲಿ ಸಂಗ್ರಹವಾಗುವ ಕಪ್ಪನೆಯ ಬಗ್ಗಡಕ್ಕೆ ಬಿಳಿಬಣ್ಣದ ಹೊಸ ಸೌತೆಯ ಬೇರುಗಳು ಟಿಸಿಲೊಡೆದೊಡೆದು ಹಬ್ಬಿದವು. ತೇವಾಂಶ ಸಂಗ್ರಹಣ ಶಕ್ತಿ ಹೆಚ್ಚಿತು. ಸೌತೆಯ ಬಳ್ಳಿ ಹಣ್ಣಾಗಲೇ ಇಲ್ಲ. ಮತ್ತೆ ಮತ್ತೆ ಹೊಸ ಗೆಲ್ಲುಗಳು ಮೂಡಿ ರಾಶಿರಾಶಿ ಹೂಗಳು, ಹಣ್ಣುಗಳು ಮೂಡಿದವು. ಒಟ್ಟು 700ಕೇಜಿ ಯಷ್ಟು ಸೌತೆ ಕೊಯ್ದೆವು. ನಾಳೆ (ಜೂನ್ 4) ಗದ್ದೆ ಹೂಟೆ ಇರುವುದರಿಂದ ಸುಮಾರು ಕಳೆದ 15 ದಿನದಿಂದ ಸ್ಲರಿ ಊಡಿಕೆ ನಿಲ್ಲಿಸಿದೆ. ಈಗ ಸ್ವಲ್ಪ ಬಳ್ಳಿ ಹಣ್ಣಾಗಲು ಶುರುವಾಗಿದೆ. ಇರುವ ಮಿಡಿಯನ್ನೆಲ್ಲ (ಇಂದು 70ನೆಯ ದಿನ) ಕೊಯ್ದು ನಾಳೆ ಬಳ್ಳಿಯನ್ನು ಟ್ರಾಕ್ಟರ್ ನಲ್ಲಿ ಹೂಟೆ ಮಾಡಲು ಸಿದ್ಧಗೊಳಿಸಿದೆವು. ಒಂದುವೇಳೆ ಭತ್ತದ ಬೆಳೆಯನ್ನು ಮುಂದೆ ಹಾಕಿದರೆ, ಜೂನ್ ಇಡೀ ಇನ್ನಷ್ಟು ಸೌತೆ ಕೊಯ್ಯಬಹುದು ಎಂದು ನನಗೆ ವಿಶ್ವಾಸವಿದೆ.
ಮುರುಟು ಕಾಯಿಗಳೇ ಇಲ್ಲ! : ಗೋಮೂತ್ರ, ಗೋಮಯಗಳ ಫ್ಲಡಿಂಗ್ ನಿಂದ ಇರಬಹುದು ಎನಿಸುತ್ತದೆ; ಹಣ್ಣಿಗೆ ಕೀಟಬಾಧೆ ಇಲ್ಲವೇ ಇಲ್ಲ. ಮುರುಟುಕಾಯಿಗಳೇ ಇಲ್ಲ. ಇದು ನನಗೆ ಕಂಡ ಇನ್ನೊಂದು ಗುಣ. ಕೊನೆಯ ಕೊಯ್ಲಿನ ಚಿತ್ರ ನೋಡಿ. ಅದರಲ್ಲಿ ಮುರುಟಿ ದ ಕಾಯಿಗಳೇ ಇಲ್ಲ.
ನೀವೂ ಮಾಡಿ : ಮುಂದಿನ ಬೇಸಿಗೆಯಲ್ಲಿ ನೀವೆಲ್ಲ ಹೀಗೆ ಪ್ರಯತ್ನಿಸಿ, ನನಗೆ ನಿಮ್ಮ ಅನುಭವ ಹೇಳಿ. 21 ದಿನದಿಂದ ಪೋಷಣೆ ನಿಲ್ಲಿಸಿದರೆ, ಸೌತೆ ಬಳ್ಳಿಗಳು ಸೊರಗಿ, ಬೇಗ ಫಲಧಾರಣೆ ನಿಲ್ಲಿಸುತ್ತವೆ. ಸ್ಲರಿ ಬಳಕೆಯಿಂದ ಮೂರು ತಿಂಗಳ ವರೆಗೆ ಸೌತೆಬಳ್ಳಿಯಿಂದ ಸೌತೆಕಾಯಿ ಪಡೆಯಬಹುದು ಎಂಬುದು ನನ್ನ ಅಭಿಪ್ರಾಯ. ಮುಂದಿನ ಸೀಸನ್ ನಲ್ಲಿ ಇನ್ನೊಮ್ಮೆ ಪ್ರಯೋಗಿಸಿ ಖಚಿತ ಪಡಿಸಿಕೊಳ್ಳುವೆ.
ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಕೇಂದ್ರ ಸರ್ಕಾರದ ಎಲ್ಲಾ…
ರಾಜ್ಯದ 6 ಜಿಲ್ಲೆಗಳಲ್ಲಿ ತೋಟಗಾರಿಕಾ ಬೆಳೆಗಳಿಗೆ ಅನುಕೂಲವಾಗುವಂತೆ ಶೀಥಲೀಕರಣ ಘಟಕಗಳನ್ನು ನಿರ್ಮಿಸಲಾಗುತ್ತಿದೆ ಎಂದು…
ದೇಶದ ಸೈನಿಕರಿಗೆ ಗೌರವ ಸಲ್ಲಿಸಿ ಕೇಂದ್ರ ಸರ್ಕಾರಕ್ಕೆ ಬೆಂಬಲ ವ್ಯಕ್ತಪಡಿಸುವ ಸಲುವಾಗಿ ನಾಳೆ…
ಪಹಲ್ಗಾಮ್ ದಾಳಿಗೆ ಪ್ರತ್ಯುತ್ತರವಾಗಿ ಭಾರತವು ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ನಿನ್ನೆಯಷ್ಟೇ ನಡೆಸಿತು. ಇದಕ್ಕೆ…
ಕೃಷಿಯಲ್ಲಿ ಯಾವುದೇ ಬಲವಾದ ಸಂಘಟನೆ ಇಲ್ಲ. ನಮ್ಮ ಧ್ವನಿ ಎತ್ತಲು ಯಾರೂ ಇಲ್ಲ.ಇಂತಹ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದು ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490