Advertisement
ಅನುಕ್ರಮ

#ಕೃಷಿಮಾತು | ಕೃಷಿಕನ ಮನೆಯ ಅನಿಲ ಸ್ಥಾವರ | ಕೃಷಿಕ ಎ ಪಿ ಸದಾಶಿವ ಬರೆಯುತ್ತಾರೆ

Share

ಕೃಷಿಕ ಎ ಪಿ ಸದಾಶಿವ ಮರಿಕೆ ಅವರು ಅನಿಲ ಸ್ಥಾಪರದ ಬಗ್ಗೆ ಅನುಭವದ ಮಾತು ಹಂಚಿಕೊಂಡಿದ್ದಾರೆ. ಗೋ ಆಧಾರಿತ ಕೃಷಿಯಿಂದ ಕೃಷಿಕರಿಗೆ, ಭೂಮಿಗೆ ಪ್ರಯೋಜನ ಏನು ಎಂದು ಕೃಷಿ ಮಾತಿನಲ್ಲಿ  ತಿಳಿಸಿದ್ದಾರೆ.


ಗೋವುಗಳು ವಿಸರ್ಜಿಸುವ ಸೆಗಣಿ ಕೃಷಿಗೆ ಮೇಲುಗೊಬ್ಬರವಾದಂತೆ, ಗೊಬ್ಬರ ಕಳಿಯುವ ಸಂದರ್ಭದಲ್ಲಿ ಅದರಿಂದ ಹೊರಡುವ ಅನಿಲಗಳನ್ನು ಸಂಗ್ರಹಿಸಿದರೆ ಬೆಂಕಿಯ ಮೂಲವಾಗಬಹುದು ಎಂಬುದನ್ನು ಕಂಡುಹಿಡಿದ. ಅದರ ಫಲವೇ ಗೊಬ್ಬರದ ಅನಿಲ ಸ್ಥಾವರಗಳು.

ಪಂಚಭೂತಗಳಲ್ಲಿ ಒಂದಾದ ಬೆಂಕಿ ಇಲ್ಲದೆ ಮಾನವ ಜೀವಿಸಲು ಸಾಧ್ಯವಿಲ್ಲ. ಮೂರು ಹೊತ್ತಿನ ಉಣ್ಣುವಿಕಿಗೆ ಆಹಾರ ಎಷ್ಟು ಮುಖ್ಯವೋ ಬೆಂಕಿಯು ಅಷ್ಟೇ ಮುಖ್ಯ. ಬೆಂಕಿಯನ್ನು ಸೃಷ್ಟಿ ಮಾಡಿದ ಪ್ರಕೃತಿ ಉರಿಯಲು ಬೇಕಾದ ಮೂಲವಸ್ತು ಮರಗಳನ್ನು ಸೃಷ್ಟಿ ಮಾಡಿದೆ. ನಾಗರಿಕತೆ ಮುಂದುವರಿದಂತೆ ಮರಗಳ ಲಭ್ಯತೆ ಕಡಿಮೆಯಾದಾಗ,ಬೆಂಕಿ ಉರಿಸಲು ಸುಲಭ ಮೂಲಗಳು ಯಾವುದು ಇದೆ ಎಂದು ಹುಡುಕಾಟದಲ್ಲಿ ಮನುಷ್ಯ ತೊಡಗಿದ. ಪಂಚಭೂತಗಳನ್ನು ಸೃಷ್ಟಿಸಿದ ಪ್ರಕೃತಿ ಮಾನವನ ಬದುಕಿಗೋಸ್ಕರ ಗೋವುಗಳನ್ನು ಸೃಷ್ಟಿಸಿದ್ದ. ಗೋವುಗಳು ವಿಸರ್ಜಿಸುವ ಸೆಗಣಿ ಕೃಷಿಗೆ ಮೇಲುಗೊಬ್ಬರವಾದಂತೆ, ಗೊಬ್ಬರ ಕಳಿಯುವ ಸಂದರ್ಭದಲ್ಲಿ ಅದರಿಂದ ಹೊರಡುವ ಅನಿಲಗಳನ್ನು ಸಂಗ್ರಹಿಸಿದರೆ ಬೆಂಕಿಯ ಮೂಲವಾಗಬಹುದು ಎಂಬುದನ್ನು ಕಂಡುಹಿಡಿದ. ಅದರ ಫಲವೇ ಗೊಬ್ಬರದ ಅನಿಲ ಸ್ಥಾವರಗಳು.

1976 ನೇ ಇಸವಿಯಲ್ಲಿ ಈ ವಿಷಯವನ್ನು ನನ್ನ ಅಪ್ಪನಿಗೆ ಯಾರೋ ತಿಳಿಸಿದರು. ಹೊಸ ವಿಷಯಗಳನ್ನು ತಿಳಿಯುವುದರಲ್ಲಿ, ಅದರ ಸಾಧಕ ಬಾಧಕಗಳನ್ನು ವಿಶ್ಲೇಷಿಸಿ ಮುಂದುವರಿಯುವುದು ನನ್ನಪ್ಪನ ಅಭ್ಯಾಸ. ಅಂತೆಯೇ ವಿಷಯಗಳನ್ನು ಸಂಗ್ರಹಿಸಿ ಆಗಿನ ಕಾಲದಲ್ಲಿ ಬಲು ಅಪರೂಪವಾದ ಗೊಬ್ಬರದ ಅನಿಲ ಸ್ಥಾವರ ನಿರ್ಮಾಣಕ್ಕೆ ಧುಮುಕಿಯೇ ಬಿಟ್ಟರು. 16 ಅಡಿಯ ಬಾವಿ (ಸಂಪೂರ್ಣ ಮುರಕಲ್ಲು ಕಟ್ಟಿ ಸಿಮೆಂಟು ಲೇಪಿತ ), ಸೆಗಣಿಯ ಬಗ್ಗಡ ಒಳ ಹೋಗುವಂತೆ ಒಂದು ಕೊಳವೆ, ಹೊರಬರುವಂತೆ1 ಕೊಳವೆ, ಅನಿಲ ಸಂಗ್ರಹಕ್ಕೆ ಕಬ್ಬಿಣದ ಧಾರಕ( ಡ್ರಮ್). ಆ ಕಾಲದಲ್ಲಿ ಧಾರಕಗಳು ಸೆಗಣಿಯಲ್ಲಿ ಮುಳುಗಿ ಏಳುವಂತದ್ದು ಮತ್ತು ಎಣ್ಣೆಯಲ್ಲಿ ಮುಳುಗಿ ಏಳುವಂತಹ ಎರಡು ಮಾದರಿಯಲ್ಲಿ ರಚನೆ ಮಾಡುತ್ತಿದ್ದರು. ಕಬ್ಬಿಣದ ಧಾರಕಗಳ ದೀರ್ಘಾಯುಷ್ಯದ ದೃಷ್ಟಿಯಿಂದ ನಮ್ಮಲ್ಲಿ ಎರಡನೇ ಮಾದರಿಯನ್ನು ಆಯ್ಕೆ ಮಾಡಿಕೊಂಡು ಅನಿಲ ಸ್ಥಾವರ ಸ್ಥಾಪನೆಯಾಯಿತು. ನಿರಂತರ 45 ವರ್ಷಗಳಿಂದ ನಮ್ಮ ಮನೆಯ ಅಡುಗೆ,ಬಿಸಿನೀರು, ಸಣ್ಣಸಣ್ಣ ಕಾರ್ಯಕ್ರಮಗಳು ಎಲ್ಲವನ್ನೂ ಬಹು ಅಚ್ಚುಕಟ್ಟಾಗಿ ಪೂರೈಸುತ್ತಾ ಬಂದಿದೆ. ಚಳಿಗಾಲದ ಕೆಲ ಸಂದರ್ಭಗಳಲ್ಲಿ ಅನಿಲ ಉತ್ಪಾದನೆ ಕಡಿಮೆ ಆಗುವುದರಿಂದ ಸಮಸ್ಯೆ ಆಗಬಾರದೆಂದು ಈಗಿನ ಹದಿನೈದು ವರ್ಷಗಳ ಹಿಂದೆ ದೀನಬಂಧು ಮಾದರಿಯನ್ನು ಹೊಸದಾಗಿ ಸೇರಿಸಿದೆ. ಗೊಬ್ಬರದ ಅನಿಲ ಸ್ಥಾವರದ ಉಪಯೋಗದಿಂದ ನಮಗಾಗುವ ಲಾಭಗಳನ್ನು ಈ ಕೆಳಗಿನಂತೆ ಪಟ್ಟಿಮಾಡಬಹುದು.

1. ನಾವು ಚಿಕ್ಕವರಿದ್ದಾಗ ನಮ್ಮ ಅಮ್ಮನಿಗೆ ಕೆಮ್ಮು ದಮ್ಮಿನ ಸಮಸ್ಯೆ ಇತ್ತು. ಯಾವಾಗ ಅಡುಗೆಮನೆ ಹೊಗೆ ಮುಕ್ತವಾಯಿತೋ ಅಮ್ಮನ ಸಮಸ್ಯೆಗಳು ಪರಿಹಾರವಾಯಿತು.
2. ಪಾತ್ರೆಗಳನ್ನು ತೊಳೆಯುವ ಕೆಲಸ ಅರ್ಧಕ್ಕೆ ಅರ್ಧ ಕಡಿಮೆಯಾಯಿತು.
3. ಆಧುನಿಕ ಅನಿಲ ಜಾಡಿಗಳನ್ನು ಬಳಕೆ ಮಾಡುತ್ತಿದ್ದಲ್ಲಿ ತಿಂಗಳಿಗೆ ಎರಡು ಜಾಡಿಗಳು ನಮ್ಮ ಮನೆಗೆ ಅನಿವಾರ್ಯ. ಇಂದು ಅನಿಲ ಜಾಡಿಗಳಿಗೆ ರೂ ಒಂಬೈನೂರ ರಂತೆ 24 ಜಾಡಿಗಳ ದರ ಎಷ್ಟಾಗಬಹುದು ಎಂದು ಲೆಕ್ಕ ಹಾಕಿಕೊಳ್ಳಿ.
4.ಮಾರುಕಟ್ಟೆಯಲ್ಲಿ ಅನಿಲ ಜಾಡಿಗಳ ಸಹಾಯ ಸಹಾಯಧನ ಹೋಯಿತು ಕ್ರಯ ಏರಿತು ಎಂಬ ಯಾವ ಚಿಂತೆಯೂ ನನಗಿಲ್ಲ.
5. 45 ವರ್ಷಗಳಿಂದ ನಾನು ಸರಕಾರಕ್ಕೆ ಉಳಿಸಿಕೊಟ್ಟ ಸಹಾಯಧನದ ಮೊತ್ತ ಎಷ್ಟಾಗಬಹುದು. ನಾವು ದಾನಿಗಳು ಆಗಬೇಕೇ ವಿನಃ ದೇಹಿಗಳು ಆಗಬಾರದು.
6. ನಾವು ಕೃಷಿಕರಾಗಿದ್ದು, ದನ ಸಾಕುವ ಎಲ್ಲಾ ಸಾಮರ್ಥ್ಯಗಳು ಇದ್ದೂ ಸ್ವಾವಲಂಬನೆಯನ್ನು ಸಾಧಿಸದೆ ಪರಾವಲಂಬನೆಯ ಕಡೆಗಿನ ನಡುಗೆ ಆಶ್ಚರ್ಯವಾಗುತ್ತದೆ.( ಸಮಾಜದಲ್ಲಿ ಹಿಂದುಳಿವರಾಗಲು ಇರುವ ತುಡಿತ ಮುಂದುವರಿದವರಾಗಲು ಇರುವುದಿಲ್ಲ!)
7. ಅನಿಲ ಜಾಡಿ ಗಳಂತೆ ಬೆಂಕಿಯ ಯಾವುದೇ ಅಪಘಾತದ ಭಯವಿಲ್ಲ. ಕಷ್ಟಪಟ್ಟರೆ ಎಲ್ಲವನ್ನೂ ಕೊಡುವ,ಪಂಚ ಭೂತಗಳನ್ನು ಸುಸ್ಥಿತಿಯಲ್ಲಿಡುವ ಗೋವುಗಳನ್ನು ಸ್ಮರಿಸುತ್ತಾ ನೆಮ್ಮದಿಯಲ್ಲಿರೋಣ.

Advertisement

# ಎ.ಪಿ.ಸದಾಶಿವ ಮರಿಕೆ , ಕೃಷಿಕ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಎ ಪಿ ಸದಾಶಿವ ಮರಿಕೆ

ಸಾವಯವ ಕೃಷಿಕರು, ಪುತ್ತೂರು ಕಳೆದ ಹಲವಾರು ವರ್ಷಗಳಿಂದ ಸಾವಯವ ಕೃಷಿ, ಗೋಆಧಾರಿತ ಕೃಷಿಯ ಮೂಲಕ ಗಮನ ಸೆಳೆದ ಕೃಷಿಕ ಇವರು.

Published by
ಎ ಪಿ ಸದಾಶಿವ ಮರಿಕೆ

Recent Posts

2025-26 ರಲ್ಲಿ ಅಡಿಕೆ ಕೊಳೆರೋಗ ಮತ್ತು ಎಲೆಚುಕ್ಕಿ ರೋಗ ಪ್ರಕರಣ ವರದಿಯಾಗಿಲ್ಲ…!

ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಕೇಂದ್ರದ ಸಮಗ್ರ ಕೀಟ ನಿರ್ವಹಣಾ ಕೇಂದ್ರಗಳು…

3 hours ago

ಮನೆಯ ಮೇಲ್ಛಾವಣಿಯನ್ನು ಕೃಷಿ ಭೂಮಿಯನ್ನಾಗಿಸಿದ ಆಸಿಯಾ ಇತರ ಮಹಿಳೆಯರಿಗೂ ಇಂದು ಮಾದರಿ..

ಮನಸ್ಸಿದ್ದರೆ ಮಾರ್ಗ ಎಂಬ ಗಾದೆ ಮಾತು ನಾವು ಕೇಳಿದ್ದೇವೆ. ಆದರೆ, ಕೆಲವು ಜನರ…

4 hours ago

ನಮ್ಮ ಹೊಲ ನಮ್ಮ ದಾರಿ : ರಸ್ತೆಗೆ 12.5 ಲಕ್ಷ ಸಹಾಯಧನ

ಕೆಲವು ಕಡೆಗಳಲ್ಲಿ ರೈತರು ತಮ್ಮ ಜಮೀನಿಗೆ ಹೋಗಲು ಸರಿಯಾದ ದಾರಿಯಿಲ್ಲದೆ ಪರದಾಟ ನಡೆಸಬೇಕಾಗುತ್ತದೆ.…

4 hours ago

2025-26 ನೇ ಸಾಲಿನ ಕೃಷಿ ಇಲಾಖೆ ಸಹಾಯಧನ ಯೋಜನೆಗಳು

ಕೃಷಿ ಇಲಾಖೆಯು ರೈತರಿಗೆಂದು ವಿವಿಧ ಸಬ್ಸಿಡಿ ಯೋಜನೆಗಳನ್ನು ಜಾರಿಗೆ ತಂದಿದೆ. ಇದಕ್ಕೆ ಯಾವ…

4 hours ago

ಕುಕ್ಕುಟ ಸಂಜೀವಿನಿ ಯೋಜನೆ : ಉಚಿತ ಕೋಳಿ ಮರಿ ಶೇಡ್ ನಿರ್ಮಾಣಕ್ಕೆ ಆರ್ಥಿಕ ನೆರವು

ಮಹಿಳೆಯರ ಏಳಿಗೆಗೆ ಸರ್ಕಾರವೂ ಹಲವಾರು ರೀತಿಯ ಯೋಜನೆಯನ್ನು ಜಾರಿಗೊಳಿಸಿದೆ. ಇದೀಗ ಗ್ರಾಮೀಣ ಮಹಿಳೆಯರಿಗೆ…

4 hours ago

ಹವಾಮಾನ ವರದಿ | 16-12-2025 | ಮೋಡ ಮಾತ್ರವೇ ಮಳೆ ಇದೆಯೇ…? | ಮುಂದೆ ಚಳಿಯ ಪ್ರಭಾವ ಹೇಗಿರಬಹುದು..?

17.12.2025 ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ…

21 hours ago