Advertisement
ಸುದ್ದಿಗಳು

#Culture | ಎತ್ತ ಸಾಗುತ್ತಿದೆ ನಮ್ಮ ಸಂಸ್ಕೃತಿ | ಬಿಂದಿ ಧರಿಸಿ ಶಾಲೆಗೆ ಹೋಗಿದ್ದೇ ತಪ್ಪಾಯ್ತು…! | ಮನನೊಂದು ಪ್ರಾಣನೇ ಕಳಕೊಂಡ್ಳು ವಿದ್ಯಾರ್ಥಿನಿ..! |

Share
ಭಾರತ ಸಂಸ್ಕೃತಿಯ ಸಂಪತ್ಭರಿತ ದೇಶ. ನಮ್ಮ ದೇಶದಲ್ಲಿ ಹಿಂದೂ ಹೆಣ್ಣು ಮಕ್ಕಳು ಹಣೆಗೆ ಕುಂಕುಮ, ಮುಡಿಗೆ ಹೂ, ಕೈಗೆ ಬಳೆ ಧರಿಸಿ ಓಡಾಡುತ್ತಿದ್ರೆ ಅದೇ ಭೂಷಣ. ದಿನಕಳೆದಂತೆ ಇದು ಪೆಟ್ಟಿಗೆ ಸೇರಿದವು. ಪಾಶ್ಚಿಮಾತ್ಯ ಸಂಸ್ಕೃತಿ ಭೂತ ಹೊಕ್ಕಿತು. ಈಗ ನಮ್ಮ ದೇಶದ ಕೆಲ ಸಂಸ್ಥೆಗಳು, ಶಾಲಾ, ಕಾಲೇಜುಗಳೇ ಇದಕ್ಕೆ ಮುಳುವಾಗಿವೆ. ಸಮವಸ್ತ್ರ ಅನ್ನೋ ಹೆಸರಿನಲ್ಲಿ ನಮ್ಮ ಸಂಸ್ಕೃತಿಗೆ ಕುತ್ತು ತರುತ್ತಿದ್ದಾರೆ. ಸಮವಸ್ತ್ರ ಧರಿಸಿದ್ರೆ ವಿದ್ಯಾರ್ಥಿನಿಯರು ಬಳೆ, ಬಿಂದಿ, ಹೂವು ಇಡುವಂತಿಲ್ಲ. ಇದು ನಮ್ಮ ಈಗಿನ ಶಾಲೆಗಳು ನಮ್ಮ ಮಕ್ಕಳಿಗೆ ನೀಡುವ ಸಂಸ್ಕೃತಿಯ ಪಾಠ.
ಎಂಥ ವಿಪರ್ಯಾಸ ನೋಡಿ, ಇಲ್ಲೊಬ್ಬ ಶಿಕ್ಷಕಿ ವಿದ್ಯಾರ್ಥಿನಿಯೊಬ್ಬಳು ಹಣೆಗೆ ಬಿಂದಿಧರಿಸಿ ಶಾಲೆಗೆ ಹೋಗಿದ್ದಕ್ಕೆ ವಿದ್ಯಾರ್ಥಿನಿಯನ್ನು ಥಳಿಸಿದ್ದ ಘಟನೆ ಜಾರ್ಖಂಡ್‌ನ ಧನ್‌ಬಾದ್‌ನಲ್ಲಿ ನಡೆದಿದೆ. ಇದರಿಂದ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಘಟನೆಯ ಕುರಿತು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ  ಅಧ್ಯಕ್ಷ ಪ್ರಿಯಾಂಕ್ ಕಾನೂಂಗೊ, ವಿದ್ಯಾರ್ಥಿನಿಯೊಬ್ಬಳು ಹಣೆಗೆ ಬಿಂದಿ ಧರಿಸಿ ಶಾಲೆಗೆ ಹೋಗಿದ್ದಕ್ಕೆ ಆಕೆಯನ್ನು ಥಳಿಸಿದ್ದು, ಇದರಿಂದ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ. ಅಲ್ಲದೇ ಘಟನೆಯ ಕುರಿತು ತನಿಖೆ ನಡೆಸಲು ಎನ್‌ಸಿಪಿಸಿಆರ್ ತಂಡವು ಧನ್‌ಬಾದ್‌ಗೆ ತೆರಳಲಿದೆ ಎಂದು ಮಾಹಿತಿ ನೀಡಿದ್ದಾರೆ.

ಧನ್‌ಬಾದ್‌ನ ಟೆತುಲ್ಮರಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಮೃತ ವಿದ್ಯಾರ್ಥಿನಿಯ ಪೋಷಕರು ಹಾಗೂ ಸ್ಥಳೀಯರು ಶಾಲಾ ಆಡಳಿತ ಮಂಡಳಿಯ ವಿರುದ್ಧ ಪ್ರತಿಭಟನೆ ನಡೆಸಿ, ಪೊಲೀಸರು ತನಿಖೆ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಘಟನೆ ಬೆಳಕಿಗೆ ಬಂದ ಬಳಿಕ ಆರೋಪಿ ಶಿಕ್ಷಕಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಜಾರ್ಖಂಡ್‌ನ ಧನ್‌ಬಾದ್ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಉತ್ತಮ್ ಮುಖರ್ಜಿ ತಿಳಿಸಿದ್ದಾರೆ.

ಈ ಕುರಿತು ಮುಖರ್ಜಿ ಟ್ವೀಟ್ ಮಾಡಿದ್ದು, ಇದು ಗಂಭೀರ ವಿಷಯವಾಗಿದ್ದು, ಶಾಲೆಯು ಸಿಬಿಎಸ್‌ಇ ಮಂಡಳಿಗೆ ಸಂಯೋಜಿತವಾಗಿಲ್ಲ. ನಾನು ಜಿಲ್ಲಾ ಶಿಕ್ಷಣ ಅಧಿಕಾರಿಗೆ ಈ ಬಗ್ಗೆ ತಿಳಿಸಿದ್ದು, ಮೃತ ವಿದ್ಯಾರ್ಥಿನಿಯ ಕುಟುಂಬವನ್ನು ಭೇಟಿ ಮಾಡಿದ್ದೇನೆ ಎಂದು ಹೇಳಿದ್ದಾರೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | 07.06.2026 | ಜೂನ್ 8ರಿಂದ ರಾಜ್ಯದಲ್ಲಿ ಮುಂಗಾರು ಚುರುಕು| ಕರಾವಳಿ-ಮಲೆನಾಡಿನಲ್ಲಿ ಉತ್ತಮ ಮಳೆ, ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ

ಕರ್ನಾಟಕದಲ್ಲಿ ಮುಂಗಾರು ಚಟುವಟಿಕೆಗಳು ಜೂ. 8ರಿಂದ ಮತ್ತಷ್ಟು ಚುರುಕುಗೊಳ್ಳುವ ಲಕ್ಷಣಗಳು ಕಂಡುಬಂದಿದ್ದು, ಕರಾವಳಿ…

25 minutes ago

“ಜಾಕ್‌ಫ್ರೂಟ್‌ ಹಬ್ಬ”ಕ್ಕೆ ಜನಸಾಗರ – 50 ಕ್ಕೂ ಹೆಚ್ಚು ಹಲಸಿನ ಮೌಲ್ಯವರ್ಧಿತ ಉತ್ಪನ್ನಗಳ ಪ್ರದರ್ಶನ

ಜೋಯಿಡಾದಲ್ಲಿ ನಡೆದ ಹಲಸು ಉತ್ಸವದಲ್ಲಿ 50ಕ್ಕೂ ಹೆಚ್ಚು ಮೌಲ್ಯವರ್ಧಿತ ಹಲಸಿನ ಉತ್ಪನ್ನಗಳು ಪ್ರದರ್ಶನಗೊಂಡು…

15 hours ago

ಕ್ಯಾಂಪ್ಕೋ ಬ್ರಹ್ಮ ವಾರಣಾಶಿ ಸುಬ್ರಾಯ ಭಟ್‌ ಜನ್ಮಶತಮಾನೋತ್ಸವ ವರ್ಷ – ಅಡಿಕೆ ಬೆಳೆಗಾರರ ಬದುಕು ಬದಲಿಸಿದ ಮಹಾನ್ ದಾರ್ಶನಿಕ

ಕ್ಯಾಂಪ್ಕೋ ಸಂಸ್ಥಾಪಕ ವಾರಣಾಶಿ ಸುಬ್ರಾಯ ಭಟ್‌ ಅವರ ಜನ್ಮಕ್ಕೆ 99 ವರ್ಷಗಳು ಪೂರ್ಣಗೊಂಡಿದ್ದು,…

16 hours ago

ಹವಾಮಾನ ವರದಿ | 06-06-2026 | ಮುಂಗಾರು ಬಂದರೂ ಮಳೆ ಇಲ್ಲ! – ಕರ್ನಾಟಕದಲ್ಲಿ ಮುಂದಿನ ವಾರದ ಹವಾಮಾನ ಹೇಗಿರಲಿದೆ?

ರಾಜ್ಯಕ್ಕೆ ಮುಂಗಾರು ಪ್ರವೇಶಿಸಿದರೂ ಅದರ ಬಲ ಇನ್ನೂ ದುರ್ಬಲವಾಗಿದೆ. ಕರಾವಳಿಯಲ್ಲಿ ಜೂನ್ 8ರಿಂದ…

1 day ago

ಭಾರತದ ಚೆಸ್ ಇತಿಹಾಸದಲ್ಲಿ ಹೊಸ ಅಧ್ಯಾಯ – ನಾರ್ವೆ ಚೆಸ್ ಕಿರೀಟ ಗೆದ್ದ ಮೊದಲ ಭಾರತೀಯ ಪ್ರಜ್ಞಾನಂದ

ನಾರ್ವೆ ಚೆಸ್ 2026 ಟೂರ್ನಿಯನ್ನು ಗೆದ್ದ ಮೊದಲ ಭಾರತೀಯ ಆಟಗಾರ ಎಂಬ ಇತಿಹಾಸವನ್ನು…

1 day ago

ಜೇನುಗೂಡುಗಳ ಕೊರತೆಯಿಂದ ಪರಾಗಸ್ಪರ್ಶ ವ್ಯವಸ್ಥೆ ಮೇಲೆ ಪರಿಣಾಮ ; ಕೃಷಿ ಕ್ಷೇತ್ರದಲ್ಲಿ ಆತಂಕ – ಆಹಾರ ಬೆಳೆ ಉತ್ಪಾದನೆಗೆ ಸಂಕಷ್ಟದ ಎಚ್ಚರಿಕೆ

ಆಸ್ಟ್ರೇಲಿಯಾದಲ್ಲಿ ವರೋವಾ ಮೈಟ್ ಹಾವಳಿಯಿಂದ ಜೇನುನೊಣಗಳ ಸಂಖ್ಯೆ ತೀವ್ರವಾಗಿ ಕುಸಿಯುತ್ತಿದ್ದು, ಆಹಾರ ಬೆಳೆಗಳ…

2 days ago